ಚುನಾವಣೆಯಲ್ಲಿ ರಾಜಕೀಯ ಪಕ್ಷ ಹಣ ಸ್ವೀಕರಿಸುವುದು ಹೇಗೆ ಗೊತ್ತಾ?
ಚುನಾವಣೆ ನಡೆಯುತ್ತಿದೆ ಎಂದರೆ ಹವಾಲಾ ಜಾಲ ಸಕ್ರಿಯವಾಗಿದೆ ಎಂದರ್ಥ. ದೆಹಲಿ ಚುನಾವಣೆಯಲ್ಲೀಗ ಕೇಳಿಬಂದಿರು ಈ ಆರೋಪದಲ್ಲಿ ಆಶ್ಚರ್ಯವೇನೂ ಇಲ್ಲ.
ಯಾವುದೇ ವಿಳಾಸ ಹೊಂದಿರದ ಹಾಗೂ ಅನಧಿಕೃತ ಕಂಪನಿಯೊಂದು ಆಮ್ ಆದ್ಮಿ ಪಕ್ಷಕ್ಕೆ ಹವಾಲಾ ಮೂಲಕ ಹಣ ವರ್ಗಾಯಿಸಿದೆ ಎಂಬುದು ಆರೋಪದ ಮೂಲ.
ಮುಖ್ಯವಾಗಿ ಚುನಾವಣಾ ಆಯೋಗವು ರಾಜಕೀಯ ಪಕ್ಷಗಳಿಗೆ ನೀಡಲಾಗುವ ನಿಧಿಯ ಮೇಲೆ ಕಣ್ಣಿಡಲು ಆರಂಭಿಸಿದ ಮೇಲೆ ಹವಾಲಾ ಜಾಲದ ಕಾರ್ಯ ಬೆಳಕಿಗೆ ಬರುತ್ತಿದೆ. ಅಲ್ಲದೆ, ಅನಧಿಕೃತ ಕಂಪನಿಗಳ ಮೂಲಕ ರಾಜಕೀಯ ಪಕ್ಷಗಳಿಗೆ ಹಣ ವರ್ಗಾಯಿಸುವುದು ಕೂಡ ಹವಾಲಾ ಜಾಲದ ಕಾರ್ಯಗಳಲ್ಲೊಂದು. [ಬುಕ್ಕಿಗಳಿಗೆ ಬಿಜೆಪಿ ನೆಚ್ಚಿನ ಕುದುರೆ]
ಹವಾಲಾ ಎಂದರೇನು? : ಹವಾಲಾ ಜಾಲಕ್ಕೆ ಹುಂಡಿ ಎಂಬ ಹೆಸರೂ ಇದೆ. ಇದೊಂದು ಪರ್ಯಾಯ ಹಣ ರವಾನೆ ಅಥವಾ ಅನೌಪಚಾರಿಕ ಹಣ ವರ್ಗಾವಣೆ ವ್ಯವಸ್ಥೆಯಾಗಿದೆ. ರಾಜಕೀಯ ಪಕ್ಷಗಳು, ಉಗ್ರವಾದಿ ಸಂಘಟನೆಗಳೂ ಹಾಗೂ ಉದ್ಯಮಿಗಳು ಈ ಮಾರ್ಗವನ್ನು ಹೆಚ್ಚು ಆಯ್ದುಕೊಳ್ಳುತ್ತಾರೆ.

ರಾಜಕೀಯ ಪಕ್ಷಗಳು ಮಾಡುವ ಖರ್ಚುಗಳ ಕುರಿತು ಚುನಾವಣಾ ಆಯೋಗ ಲೆಕ್ಕ ಕೇಳುತ್ತದೆ. ಆದರೆ, ನಿಗದಿ ಮೀರಿ ಹಣ ವ್ಯಯಿಸುವಂತಿಲ್ಲ. ಆದ್ದರಿಂದ ಪರೋಕ್ಷ ದಾರಿಯ ಮೂಲಕ ಹಣ ಸಾಗಿಸಿ ಖರ್ಚು ಮಾಡುವುದು ಅನಿವಾರ್ಯವಾಗುತ್ತದೆ. ಬ್ಯಾಂಕ್‌ಗಳ ಮೂಲಕವೂ ರವಾನೆಯಾಗುವ ಕೆಲವೊಮ್ಮೆ ಹಣ ರವಾನೆಯಾಗುತ್ತದೆ. [ದೆಹಲಿಯಲ್ಲಿ ನರೇಂದ್ರ ಮೋದಿ ವಾಗ್ಝರಿ]
ವಿದೇಶದಲ್ಲಿಟ್ಟ ಹಣ ಭಾರತಕ್ಕೆ ಬರುವುದು ಇದೇ ಸಂದರ್ಭದಲ್ಲಿ. ಇತ್ತೀಚೆಗೆ ಹಲವು ಬ್ಯಾಂಕ್‌ಗಳು ಕಪ್ಪು ಹಣ ವ್ಯವಹಾರಕ್ಕೆ ಸಹಕರಿಸಿದ್ದಾರೆ ಎನ್ನಲಾಗಿದೆ. ಸುಳ್ಳು ಕಂಪನಿಗಳನ್ನು ತೆರೆದು ಈ ಮೂಲಕ ಕಪ್ಪು ಹಣ ವರ್ಗಾವಣೆ ಮಾಡುವಂತೆ ಬ್ಯಾಂಕ್‌ಗಳೇ ಸಲಹೆ ನೀಡಿರುವುದು ಬೆಳಕಿಗೆ ಬಂದಿದೆ. ಏಕೆಂದರೆ ಕಪ್ಪು ಹಣ ಬ್ಯಾಂಕ್ ಮೂಲಕ ವರ್ಗಾವಣೆಯಾದಾಗ ಬಿಳಿಯಾಗುತ್ತದೆ.
ಸಾಮಾನ್ಯವಾಗಿ ಚುನಾವಣೆ ಘೋಷಣೆಯಾಗುವ ಒಂದು ತಿಂಗಳ ಮೊದಲೇ ಈ ಹವಾಲಾ ಹಣದ ಹರಿದಾಟ ಆರಂಭವಾಗಿರುತ್ತದೆ.
ಹವಾಲಾ ಹಗರಣಗಳು : 18 ಮಿಲಿಯನ್ ಡಾಲರ್ ಮೊತ್ತದ ಹಣವನ್ನು ಹವಾಲಾ ಜಾಲದ ಮೂಲಕ ಸಾಗಿಸಿದ್ದು ಜೈನ ಹವಾಲಾ ಹಗರಣ ಎಂದೇ ಕುಖ್ಯಾತಿ ಪಡೆದಿದೆ. [ಬಿಜೆಪಿ ದೂರದೃಷ್ಟಿ ದಾಖಲೆಯಲ್ಲಿ 270 ಅಂಶ]
ಹಿಜ್ಬುಲ್ ಮುಜಾಹಿದೀನ್ ಸಂಘಟನೆ ಕೂಡ ರಾಜಕೀಯ ಪಕ್ಷಗಳಿಗೆ ಹವಾಲಾ ಜಾಲದ ಮೂಲಕವೇ ಹಣ ರವಾನಿಸುತ್ತದೆ ಎನ್ನಲಾಗಿದೆ. ಈ ಹಗರಣದಲ್ಲಿ 115 ರಾಜಕಾರಣಿಗಳು, ಅಧಿಕಾರಿಗಳ ಹೆಸರು ಹೊರಬಂದಿತ್ತು.
ಇದು ದೇಶದ ಅತಿದೊಡ್ಡ ಹವಾಲಾ ಹಗರಣ ಎನ್ನಲಾಗಿದೆ. ಆದರೆ, ಇವರಲ್ಲಿ ಹೆಚ್ಚಿನವರು 1997-98ರಲ್ಲಿ ಸಾಕ್ಷ್ಯಾಧಾರಗಳ ಕೊರತೆಯ ಕಾರಣ ಬಿಡುಗಡೆಯಾದರು. ಇವೆಲ್ಲವೂ ಹವಾಲಾ ಜಾಲ ಇಂದಿಗೂ ಸಕ್ರಿಯವಾಗಿದೆ ಎಂಬುದಕ್ಕೆ ಸಾಕ್ಷಿ.
-
Sayali Surve: ಇಸ್ಲಾಂನಿಂದ ಹಿಂದೂ ಧರ್ಮಕ್ಕೆ ಮತಾಂತರಗೊಂಡ ಮಿಸ್ ಇಂಡಿಯಾ ಅರ್ಥ್ ವಿಜೇತೆ ಸಯಾಲಿ ಸುರ್ವೆ, ಕಾರಣವೇನು -
Bengaluru Property: ಬೆಂಗಳೂರಿನಲ್ಲಿ ಕಟ್ಟಡ ನಿಯಮ ಉಲ್ಲಂಘಿಸಿದ ಆಸ್ತಿದಾರರಿಗೆ ಜಿಬಿಎ - ಬಿಡಿಎ ಜಂಟಿ ಶಾಕ್ -
LPG Alternatives: ಎಲ್ಪಿಜಿ ಬೆಲೆ ಏರಿಕೆಗೆ ಹೆದರಬೇಡಿ: ನಮ್ಮಲ್ಲೇ ಇರುವ ಈ ಪರ್ಯಾಯ ಮಾರ್ಗಗಳನ್ನು ಅಳವಡಿಸಿಕೊಂಡು ಜಾಣರಾಗಿ -
Gold: ಗದಗ ಲಕ್ಕುಂಡಿಯಲ್ಲಿ ಪತ್ತೆಯಾದ ಚಿನ್ನದ ನಿಧಿ ಪ್ರಕರಣಕ್ಕೆ ಟ್ವಿಸ್ಟ್: ಮೌಲ್ಯ 10 ಪಟ್ಟು ಹೆಚ್ಚು, ವಿಜಯನಗರ ಕಾಲದ ಆಭರಣ -
ಜಿಮ್ನಲ್ಲಿ ಭೇಟಿ, ಸಾಫ್ಟ್ವೇರ್ ಕಂಪನಿ ಕೆಲಸ: 7,500 ರೂ. ಸಂಬಳ ಪಡೆಯುತ್ತಿದ್ದ ಅಶ್ವಿನಿ ಅಪ್ಪು ಮನಗೆದ್ದಿದ್ದು ಹೇಗೆ? -
Vehicle Loan: ವಾಹನ ಮಾಲೀಕರಿಗೆ ಗುಡ್ನ್ಯೂಸ್: ಸಾಲ ಪ್ರಕ್ರಿಯೆ, ಆರ್ಸಿ ಅಪ್ಡೇಟ್ಗೆ ಇನ್ಮುಂದೆ ಆನ್ಲೈನ್ ವ್ಯವಸ್ಥೆ -
Horoscope March 11: ಈ ರಾಶಿಯವರಿಗೆ ಸಿಗಲಿವೆ ಹೊಸ ಅವಕಾಶಗಳು, ಬುದಕಿನಲ್ಲಿ ಯಶಸ್ಸು; ಇಂದಿನ ದಿನ ಭವಿಷ್ಯ -
KEA PGNEET: ಕೆಇಎಯಿಂದ ಮತ್ತೊಂದು ಸುತ್ತಿನ ಸೀಟು ಹಂಚಿಕೆ; 783 ವೈದ್ಯಕೀಯ ಸೀಟುಗಳು ಬಾಕಿ -
ವಾಸ್ತು: ದಕ್ಷಿಣ ಗೇಟು ಶುಭವೋ ಅಥವಾ ಅಶುಭವೋ, ಉತ್ತರ ದ್ವಾರದ ವಾಸ್ತು ರಹಸ್ಯಗಳೇನು ಇಲ್ಲಿದೆ ಸಂಪೂರ್ಣ ಮಾಹಿತಿ -
ದಯಾಮರಣಕ್ಕೆ ಸುಪ್ರೀಂ ಕೋರ್ಟ್ ಅಸ್ತು: 13 ವರ್ಷಗಳಿಂದ ಹಾಸಿಗೆ ಹಿಡಿದಿದ್ದ ಮಗನಿಗೆ ಮುಕ್ತಿ ನೀಡಲು ಕೋರಿದ್ದ ಪೋಷಕರು -
ಮತ್ತೆ ಶುರುವಾಗುತ್ತಾ ವರ್ಕ್ ಫ್ರಂ ಹೋಮ್? ಇಂಧನ ಕೊರತೆ ಬೆನ್ನಲ್ಲೇ ಹಲವು ದೇಶಗಳಲ್ಲಿ ಕಚೇರಿಗಳಿಗೆ ನಿರ್ಬಂಧ -
ಬೇಸಿಗೆಯಲ್ಲಿ ನೀವು ಚಿಲ್ಡ್ ಬಿಯರ್ ಕುಡಿಯುತ್ತೀರಾ, ಬಾಟಲ್ ಕೆಳಗಿಟ್ಟು ಇದನ್ನು ಓದಿ












Click it and Unblock the Notifications