ನಾನು ನಿರಪರಾಧಿ ಎಂದು ಸಾಬೀತುಪಡಿಸಲು ಸಾಕ್ಷ್ಯಾಧಾರವಿದೆ: ಮಲ್ಯ

Posted By:
Subscribe to Oneindia Kannada

ಲಂಡನ್, ಜೂನ್ 13: ''ನನ್ನ ಮೇಲಿನ ಆರೋಪಗಳೆಲ್ಲವೂ ನಿರಾಧಾರ. ನಾನು ನಿರಪರಾಧಿ ಎಂದು ಸಾಬೀತುಪಡಿಸಲು ನನ್ನಲ್ಲಿ ಸಾಕಷ್ಟು ಸಾಕ್ಷ್ಯಾಧಾರಗಳಿವೆ. ಹಾಗಾಗಿ, ನಾನು ಈ ಪ್ರಕರಣದಲ್ಲಿ ಗೆಲ್ಲುವೆನೆಂಬ ವಿಶ್ವಾಸವಿದೆ'' ಎಂದು ಭಾರತೀಯ ಉದ್ಯಮಿ ವಿಜಯ್ ಮಲ್ಯ ಹೇಳಿದ್ದಾರೆ.

ಉದ್ದೇಶಪೂರ್ವಕ ಸುಸ್ತಿದಾರನೆಂಬ ಹಣೆಪಟ್ಟಿ ಹಾಕಿಕೊಂಡಿರುವ ವಿಜಯ್ ಮಲ್ಯ ಅವರನ್ನು ವಿಚಾರಣೆಗಾಗಿ ತನಗೆ ಒಪ್ಪಿಸಬೇಕೆಂದು ಭಾರತ ಸರ್ಕಾರ ಸಲ್ಲಿಸಿರುವ ಮನವಿಯ ವಿಚಾರಣೆಯು ಲಂಡನ್ ನಲ್ಲಿರುವ ವೆಸ್ಟ್ ಮಿನಿಸ್ಟರ್ ನ್ಯಾಯಾಲಯದಲ್ಲಿ ಮಂಗಳವಾರ ಆರಂಭವಾಯಿತು.

ಈ ಮೊದಲ ವಿಚಾರಣೆಗೆ ಹಾಜರಾಗಿದ್ದ ಮಲ್ಯ, ನ್ಯಾಯಾಲಯ ಪ್ರವೇಶಕ್ಕೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದರು. ಆಗ, ''ನಾನು ನಿರಪರಾಧಿ. ನನ್ನ ಮೇಲಿನ ಆರೋಪಗಳೆಲ್ಲವೂ ಸುಳ್ಳು. ನಾನು ನಿರಪರಾಧಿ ಎಂಬುದನ್ನು ಸಾಬೀತುಪಡಿಸಲು ನನ್ನಲ್ಲಿ ಸಾಕ್ಷ್ಯಾಧಾರಗಳಿವೆ'' ಎಂದು ಹೇಳಿದರು.

ಅರೆಸ್ಟ್ ಆದ 3 ಗಂಟೆಯೊಳಗೆ ಮಲ್ಯಗೆ ಜಾಮೀನು!!!

Have enough documents to prove my innoscence: Vijay Mallya

ನ್ಯಾಯಾಲಯದ ಕಲಾಪ ಆರಂಭವಾದ ನಂತರ, ಕೆಲ ಗಂಟೆಗಳ ಕಾಲ ವಾದ, ವಿವಾದಗಳನ್ನು ಆಲಿಸಿದ ನ್ಯಾಯಾಧೀಶರು, ಮಲ್ಯ ಅವರಿಗೆ ಈ ಪ್ರಕರಣದಲ್ಲಿ ನೀಡಲಾಗಿರುವ ಜಾಮೀನನ್ನು ಡಿಸೆಂಬರ್ 4ರವರೆಗೆ ವಿಸ್ತರಿಸಿ ಆದೇಶ ನೀಡಿದರು.

ಕಿಂಗ್ ಫಿಷರ್ To ಲಂಡನ್: ಮಲ್ಯ ಪ್ರಕರಣ ನಡೆದು ಬಂದ ಹಾದಿ

ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ, ಇದೇ ವರ್ಷ ಏಪ್ರಿಲ್ 18ರಂದು ಲಂಡನ್ ನಲ್ಲಿ ಅವರ ಬಂಧನವಾಗಿತ್ತು. ಅದಾಗಿ, ಮೂರು ಗಂಟೆಯೊಳಗೆ ಅವರಿಗೆ ಜಾಮೀನು ಸಿಕ್ಕಿತ್ತು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Liquor Baron Vijay Mallya said in London that, He had done no offece. The allegations against him are false. He has evidences to prove his innoscence.
Please Wait while comments are loading...