ಅಂದು ಯುಪಿ ಪೊಲೀಸ್, ಇಂದು ಬಾಬಾ: 100ಕ್ಕೂ ಹೆಚ್ಚು ಜನರ ಸಾವಿಗೆ ಕಾರಣರಾದ ಇವರ ಕಂಪ್ಲೀಟ್ ಪರಿಚರ ಇಲ್ಲಿದೆ
ಯಾವಾಗಲೂ ನೀಟಾಗಿ ತಲೆಕೂದಲನ್ನು ಬಾಚಿಕೊಂಡು, ವೈಟ್ ಶರ್ಟ್ ಹಾಗೂ ವೈಟ್ ಪ್ಯಾಂಟ್ ಹಾಕಿಕೊಂಡು ಕೈಯಲ್ಲಿ ಒಂದು ಮೈಕ್ ಹಿಡಿದರೆ ತನ್ನ ಮಾತು ಕೇಳಲು ಸಾವಿರಾರು ಜನರಿದ್ದಾರೆ ಎಂಬ ನಂಬಿಕೆ.. ಇವರೇ ಯುಪಿಯ ಹತ್ರಾಸ್‌ನಲ್ಲಿ ಭೋಲೆ ಬಾಬ.
ಇವರ ನಡೆಸುವ ಸತ್ಸಂಗದಲ್ಲಿ ಕಾಲ್ತುಳಿತ ಸಂಭವಿಸಿದೆ. ಇದರಿಂದ ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ಒಟ್ಟು 122 ಜನರು ಸಾವನ್ನಪ್ಪಿದ್ದಾರೆ. ಮೃತರಲ್ಲಿ ಹೆಚ್ಚಿನವರು ಮಕ್ಕಳು, ವೃದ್ಧರು ಸೇರಿದ್ದಾರೆ. ಮೃತರ ಕುಟುಂಬಸ್ಥರ ಆಕ್ರಂಧನ ಮುಗಿಲು ಮುಟ್ಟಿದೆ. ಈಗ ಸಾಮಾಜಿಕ ತಾಣದಲ್ಲಿ ಈ ಘಟನೆ ನಡೆಯಲು ಏನು ಕಾರಣ ಆ ಬಾಬಾ ಯಾರು ಎಂಬ ಬಗ್ಗೆ ಜನ ಹುಡುಕಲು ಆರಂಭಿಸಿದ್ದಾರೆ.

ಯಾರು ಈ ಸನ್ಯಾಸಿ
ಭೋಲೆ ಬಾಬಾ ನಿಜವಾದ ಹೆಸರು ನಾರಾಯಣ ಹರಿ ಇಟಾಹ್ ನಿವಾಸಿ. ಅವರಿಗೂ ರಾಜಕೀಯದ ಸಂಪರ್ಕವಿದೆ. ಕೆಲವು ಸಂದರ್ಭಗಳಲ್ಲಿ ಯುಪಿಯ ಅನೇಕ ದೊಡ್ಡ ನಾಯಕರು ಅವರ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದರು. ಸಮಾಜವಾದಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಖಿಲೇಶ್ ಯಾದವ್ ಅವರ ಇವರ ಪಕ್ಕದಲ್ಲಿ ಕುಳಿತಿದ್ದರು.
ಭೋಲೆ ಬಾಬಾ ಬಹದ್ದೂರ್ ನಗರಿ ಗ್ರಾಮದ ನಿವಾಸಿ. ಆರಂಭಿಕ ಶಿಕ್ಷಣವನ್ನು ಗ್ರಾಮದಲ್ಲಿ ಮುಗಿಸಿದರು. ಬಿಡುವಿನ ಸಮಯದಲ್ಲಿ ತಂದೆಯೊಂದಿಗೆ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದರು. ಚಿಕ್ಕ ವಯಸ್ಸಿನಲ್ಲೇ ಪೊಲೀಸ್ ಇಲಾಖೆ ಸೇರಿದರು. 12 ಪೊಲೀಸ್ ಠಾಣೆ, ಗುಪ್ತಚರ ಇಲಾಖೆಯಲ್ಲಿ ಸೇವೆ ಸಲ್ಲಿಸಿದ ಬಳಿಕ ವಿಆರ್‌ಎಸ್ ಪಡೆದರು. ಈಗ ಅವರು ತಮ್ಮ ಹಳ್ಳಿಯಲ್ಲಿ ಗುಡಿಸಲಿನಲ್ಲಿ ವಾಸಿಸುತ್ತಿದ್ದಾರೆ.
ಆಧ್ಯಾತ್ಮಿಕ ಲೋಕದ ಪಯಣ ಹೇಗೆ?
ಆಧ್ಯಾತ್ಮದ ಪಡಸಾಲೆಗೆ ಎಂಟ್ರಿ ನೀಡುತ್ತಿದ್ದಂತೆ ಇವರು ತಮ್ಮ ಹೆಸರನ್ನು ಸಹ ಬದಲಿಸಿಕೊಂಡರು. ಇವರು ನಾರಾಯಣ ಹರಿ ಬದಲಿಗೆ ಸಕರ್ ವಿಶ್ವಹರಿ ಎಂದು ಬದಲಾಯಿಸಿಕೊಂಡರು. ಇವರ ಆಧ್ಯಾತ್ಮ ಸ್ಥಳದಲ್ಲಿ ಇವರಿಗೆ ಪತ್ನಿಯ ಸಾಥ್ ಸಹ ಇತ್ತು. ಇವರ ಒಂದು ವಿಶೇಷತೆ ಅಂದರೆ, ಇವರು ಕೇಸರಿ ಧಾರಿ ಬಾಬಾಗಳಲ್ಲ. ಅವರು ತಮ್ಮ ಸತ್ಸಂಗದಲ್ಲಿ ಬಿಳಿ ಸೂಟ್, ಟೈ ಮತ್ತು ಬೂಟುಗಳಲ್ಲಿ ಇನ್ನು ಹಲವು ಬಾರಿ ಕುರ್ತಾ-ಪೈಜಾಮ ಮತ್ತು ತಲೆಯ ಮೇಲೆ ಬಿಳಿ ಟೋಪಿ ಧರಿಸಿ ಸತ್ಸಂಗಕ್ಕೆ ಬರುತ್ತಾರೆ. ಇವರ ಸತ್ಸಂಗವನ್ನು ಕೇಳಲು ಪ್ರತಿದಿನ ಸಾವಿರಾರು ಜನರು ಬರುತ್ತಾರೆ.

ಭೋಲೆ ಬಾಬಾ ಅವರ ಚಮತ್ಕಾರ ಬರೀ ಇಲ್ಲಿಗೆ ಸೀಮಿತವಾಗಿಲ್ಲ. ಇವರು ತಮ್ಮ ಪ್ರಭಾವವನ್ನು ಸುತ್ತು ಮುತ್ತಲಿನ ಪ್ರದೇಶಗಳಲ್ಲೂ ವ್ಯಾಪಿಸಿದ್ದಾರೆ. ಸರ್ಕಾರಿ ನೌಕರಿಯಿಂದ ಅವರನ್ನು ಅಧ್ಯಾತ್ಮದೆಡೆಗೆ ಎಳೆದು ತಂದವರು ಯಾರು ಎಂಬುದು ಬಹಿರಂಗವಾಗಬೇಕಿದೆ. ಇವರೇ ಹೇಳುವಂತೆ ವಿಆರ್‌ಎಸ್ ಪಡೆದ ಬಳಿಕ ದೇವರ ದರ್ಶನವಾಯಿತು. ಈ ದೇಹವು ಅದೇ ಭಗವಂತನ ಅಂಗವಾಗಿದೆ ಎಂದು ದೇವರ ಪ್ರೇರಣೆಯಿಂದ ತಿಳಿದುಬಂದಿದೆ.
ದೇವರ ಸಾಕ್ಷ್ಯಾತ್ಕಾರದ ಬಳಿಕ ಅವರು ತಮ್ಮ ಜೀವನವನ್ನು ಮಾನವ ಕಲ್ಯಾಣಕ್ಕಾಗಿ ಮೀಸಲಿಡಲು ನಿರ್ಧರಿಸಿದರು. ನಾನೇ ಎಲ್ಲಿಗೂ ಹೋಗುವುದಿಲ್ಲ, ಬದಲಿಗೆ ಭಕ್ತರು ನನ್ನನ್ನು ಕರೆಯುತ್ತಾರೆ. ಭಕ್ತರ ಕೋರಿಕೆಯ ಮೇರೆಗೆ ವಿವಿಧೆಡೆ ಸಂಚರಿಸಿ ಸಭೆ ನಡೆಸುತ್ತೇನೆ ಎಂದು ಹೇಳುತ್ತಾರೆ.
ಇವರ ಸುತ್ತ ವಿವಾದ
ಅದೆಲ್ಲಾ ಏನೆ ಇರಲಿ ಮಂಗಳವಾರ ನಡೆದ ಘಟನೆಗೆ ಹೊಣೆಗಾರರು ಯಾರು? ಈ ರೀತಿ ಭೋಲೆ ಬಾಬಾ ವಿವಾದದ ಸುಳಿಗೆ ಸಿಲುಕಿಕೊಳ್ಳುತ್ತಿರುವುದು ಇದೇ ಮೊದಲಲ್ಲ. 2022ರಲ್ಲಿ ದೇಶದಲ್ಲಿ ಕೊರೊನಾ ಅಲೆ ಎದ್ದಿದ್ದಾಗ ಫರೂಕಾಬಾದ್‌ನಲ್ಲಿ ಭೋಲೆ ಬಾಬಾ ಸತ್ಸಂಗ ಆಯೋಜಿಸಿದ್ದರು. ಜಿಲ್ಲಾಡಳಿತ ಕೇವಲ 50 ಮಂದಿಗೆ ಮಾತ್ರ ಸತ್ಸಂಗಕ್ಕೆ ಅವಕಾಶ ಕಲ್ಪಿಸಿತ್ತು. ಆದರೆ, ಕಾನೂನು ಉಲ್ಲಂಘಿಸಿ 50 ಸಾವಿರಕ್ಕೂ ಹೆಚ್ಚು ಜನರು ಸತ್ಸಂಗದಲ್ಲಿ ಪಾಲ್ಗೊಂಡಿದ್ದರು ಈ ಘಟನೆಯಿಂದಲೂ ಸಹ ಅವರು ವಿವಾದಕ್ಕೆ ಆಹಾರವಾಗಿದ್ದರು.
-
SSLC ಹಿಂದಿ ಪರೀಕ್ಷೆ ಮುಕ್ತಾಯ: ಪ್ರಶ್ನೆಪತ್ರಿಕೆ ಹೇಗಿತ್ತು? ಹೊಸ ನಿಯಮಗಳೇನು? ಇಲ್ಲಿದೆ ಸಂಪೂರ್ಣ ವಿಶ್ಲೇಷಣೆ -
ಕರ್ನಾಟಕ ಪ್ರಥಮ PUC ಫಲಿತಾಂಶ 2026 ಪ್ರಕಟ: ಫಲಿತಾಂಶ ವೀಕ್ಷಿಸುವುದು ಹೇಗೆ? ಇಲ್ಲಿದೆ ಮಾಹಿತಿ -
Bengaluru Kannada: ಉತ್ತರ ಕರ್ನಾಟಕ, ಕರಾವಳಿಯಲ್ಲಿ ಇಲ್ಲದ "ಕನ್ನಡ" ಸಮಸ್ಯೆ ಬೆಂಗಳೂರಲ್ಲೇಕೆ: ಅಶ್ವಿನಿ ಬರಹ -
April 1 Horoscope: ಈ ರಾಶಿಯವರಿಗೆ ಹೊಸ ಕೆಲಸಗಳು ಸುಗಮ, ವೃತ್ತಿಯಲ್ಲಿ ಮೆಚ್ಚುಗೆ; ದಿನ ಭವಿಷ್ಯ -
Bengaluru-Mysuru expressway: ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇ ಪ್ರಯಾಣ ಮತ್ತೆ ದುಬಾರಿ: ಏಪ್ರಿಲ್ 1ರಿಂದ ಹೊಸ ಟೋಲ್ ದರ -
March 31 Horoscope: ಲಾಭ, ನಷ್ಟ, ಆರೋಗ್ಯದ ಸಂಪೂರ್ಣ ಮಾಹಿತಿ -
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
ತ್ರಿಭಾಷಾ ಸೂತ್ರ vs ದ್ವಿಭಾಷಾ ಮಾದರಿ: ಹಿಂದಿ ಕಲಿಕೆಯ ಲಾಭ-ನಷ್ಟಗಳ ವಿಶ್ಲೇಷಣೆ: ಡಾ. ಪುರುಷೋತ್ತಮ ಬಿಳಿಮಲೆ ಬರಹ -
Summer Drinks: ಬಿಸಿಲಿನಲ್ಲಿ ದೇಹಕ್ಕೆ ಬೆಸ್ಟ್ ಡ್ರಿಂಕ್ ಯಾವುದು? ಎಳನೀರು ಅಥವಾ ಮಜ್ಜಿಗೆ -
ಬೆಂಗಳೂರು-ವಿಜಯಪುರ ಎಕ್ಸ್ಪ್ರೆಸ್ ರೈಲು ಸೇವೆ: ಸಂಚಾರ ಸಮಯ 10ಗಂಟೆ ಇಳಿಕೆಗೆ ಎಂಬಿ ಪಾಟೀಲ ಆಗ್ರಹ -
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
Viral Video: ಹುಡುಗಿ ಪ್ರೀತಿಗೆ ಒಪ್ಪಿಕೊಂಡಳು ಆದ್ರೆ ರಿಂಗೇ ಮಿಸ್ ಆಯ್ತು: MI ಮ್ಯಾಚ್ನಲ್ಲೊಂದು ಸ್ವಾರಸ್ಯಕರ ಘಟನೆ












Click it and Unblock the Notifications