ರಾಮ್ ರಹೀಂ ಬಾಬಾ ಆಶ್ರಮದಿಂದ ಶಸ್ತ್ರಾಸ್ತ್ರ ವಶ

ರಾಮ್ ರಹೀಂ ಸಿಂಗ್ ಬಾಬಾ ಆಶ್ರಮದಲ್ಲಿ ಪರವಾನಗಿ ಇರುವ ಶಸ್ತ್ರಾಸ್ತ್ರಗಳ ವಶ. ಆಶ್ರಮ ಜಾಲಾಡಿದ ವೇಳೆಯಲ್ಲಿ ಹರ್ಯಾಣ ಪೊಲೀಸರಿಂದ ವಶ.

ಹರ್ಯಾಣ, ಸೆಪ್ಟಂಬರ್ 4: ಇಲ್ಲಿನ ಸಿರ್ಸಾದಲ್ಲಿರುವ ಡೇರಾ ಸಚ್ಚಾ ಸೌದಾ ಮುಖ್ಯಸ್ಥ ರಾಮ್ ರಾಹೀಂ ಬಾಬಾನ ಆಶ್ರಮವನ್ನು ಜಾಲಾಡಿರುವ ಪೊಲೀಸರಿಗೆ ಶಸ್ತ್ರಾಸ್ತ್ರಗಳು ಪತ್ತೆಯಾಗಿವೆ.

ಅತ್ಯಾಚಾರ ಪ್ರಕರಣದಲ್ಲಿ 20 ವರ್ಷಗಳ ಜೈಲು ಶಿಕ್ಷೆಗೆ ಗುರಿಯಾಗಿರುವ ಬಾಬಾನ ಆಶ್ರಮದಲ್ಲಿ ಅನೇಕ ಅನೈತಿಕ, ಸಮಾಜ ವಿರೋಧಿ ಕೃತ್ಯಗಳು ನಡೆಯುತ್ತಿವೆಂಬ ಆಪಾದನೆಗಳು ಕೇಳಿಬಂದ ಹಿನ್ನೆಲೆಯಲ್ಲಿ, ಪೊಲೀಸರು ನ್ಯಾಯಾಲಯದ ಅನುಮತಿ ಮೇರಿಗೆ ಆಶ್ರಮದಲ್ಲಿ ಹುಡುಕಾಟ ನಡೆಸಿದ್ದರು.

Haryana Police recovers huge cache of arms, ammunition from Dera HQ

ಈ ಸಂದರ್ಭದಲ್ಲಿ, 33 ಪರವಾನಗಿ ಸಹಿತ ಪಿಸ್ತೂಲುಗಳು, ಸಿಂಗಲ್ ಹಾಗೂ ಡಬಲ್ ಬ್ಯಾರೆಲ್ ಬಂದೂಕುಗಳು ಹಾಗೂ ಆಧುನೀಕರಿಸಲ್ಪಟ್ಟ ಮೆಷಿನ್ ಗನ್ ಮಾದರಿಯ ಶಸ್ತ್ರವೊಂದು ಸಿಕ್ಕಿದೆ.

ಸಿರ್ಸಾ ಆಶ್ರಮದಲ್ಲಿ ಬಾಬಾಗೆ ಸೇರಿದ, ಪರವಾನಗಿ ಸಹಿತ ಇರುವ ಶಸ್ತ್ರಾಸ್ತ್ರಗಳನ್ನು ಪತ್ತೆ ಹಚ್ಚಿ ತರಬೇಕೆಂದು ಬಾಬಾ ಬಂಧನವಾದಾಗಲೇ ಹರ್ಯಾಣ ಪೊಲೀಸ್ ಇಲಾಖೆ ನಿರ್ಧರಿಸಿತ್ತು. ಅದರಂತೆ, ಆಶ್ರಮದ ತಪಾಸಣೆ ಕಾರ್ಯಾಚರಣೆ ನಡೆಸಲಾಗಿದೆ ಎಂದು ಹರ್ಯಾಣ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+