ಹರ್ಯಾಣ: ಎಕ್ಸ್ ಪ್ರೆಸ್ ರೈಲಿಗೆ ಎಮು ಟ್ರೈನ್ ಡಿಕ್ಕಿ 1 ಸಾವು
ಹರ್ಯಾಣ, ಡಿ. 08: ಲೋಕಮಾನ್ಯ ತಿಲಕ್ ಎಕ್ಸ್ ಪ್ರೆಸ್ ಹಾಗೂ ಇಎಂಯು ರೈಲಿನ ನಡುವೆ ಪಲ್ವಾಲ್ ಜಿಲ್ಲೆಯಲ್ಲಿ ಮಂಗಳವಾರ ಬೆಳಗ್ಗೆ ಭೀಕರ ಅಪಘಾತ ಸಂಭವಿಸಿದೆ. ಈ ದುರ್ಘಟನೆಯಲ್ಲಿ ಓರ್ವ ಮೃತಪಟ್ಟಿದ್ದು, 100ಕ್ಕೂ ಅಧಿಕ ಜನರಿಗೆ ಗಾಯಗಳಾಗಿವೆ.
ಪ್ರಾಥಮಿಕ ವರದಿಗಳ ಪ್ರಕಾರ ಇಎಂಯು ರೈಲಿನ ಚಾಲಕ ಮೃತಪಟ್ಟಿರುವ ಮಾಹಿತಿ ಸಿಕ್ಕಿದೆ. ಪಲ್ವಾಲ್ ಹಾಗೂ ಅಸೌತಿ ರೈಲಿ ನಿಲ್ದಾಣಕ್ಕೂ ನಡುವೆ ಇರುವ ಬಘೋಲಾ ಗ್ರಾಮದ ಬಳಿ ಬೆಳಗ್ಗೆ 8.25ಕ್ಕೆ ಈ ಅಪಘಾತ ಸಂಭವಿಸಿದೆ.

ಈ ದುರ್ಘಟನೆ ಹವಾಮಾನ ವೈಪರೀತ್ಯ, ಮಂಜು ಮುಸುಕಿದ ವಾತಾವರಣವೇ ಕಾರಣ ಎಂದು ಉತ್ತರ ರೈಲ್ವೆ ವಿಭಾಗ ವಕ್ತಾರ ನೀರಜ್ ಶರ್ಮ ಹೇಳಿದ್ದಾರೆ.
@NBTDilli palwal me train accident photo kailash gathwal pic.twitter.com/94smN64YFZ
— kailash gathwal (@KGathwal) December 8, 2015 ಘಟನಾ ಸ್ಥಳಕ್ಕೆ ಹರ್ಯಾಣ ರಾಜ್ಯದ ತುರ್ತು ಪರಿಸ್ಥಿತಿ ನಿರ್ವಹಣಾ ದಳ, ವೈದ್ಯರ ತಂಡ ತೆರಳಿದೆ. ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆಕೊಡಿಸಲಾಗುತ್ತಿದೆ.
Palwal train mishap: A team of doctors rushed to the spot, driver of the EMU train feared dead, several injured.
— ANI (@ANI_news) December 8, 2015 











Click it and Unblock the Notifications