ಕ್ರೀಡಾಪಟುಗಳ ಆದಾಯಕ್ಕೆ ಕೈ ಹಾಕಿದ ಹರಿಯಾಣ ಸರ್ಕಾರ!

ನವ ದೆಹಲಿ, ಜೂನ್ 09: ಹರಿಯಾಣ ರಾಜ್ಯ ತಮ್ಮ ಕ್ರೀಡಾಪಟುಗಳ ಆದಾಯಕ್ಕೆ ಕೈ ಹಾಕಲು ಮುಂದಾಗಿದೆ. ಕ್ರೀಡಾಪಟುಗಳು ತಮ್ಮ ಆದಾಯದ 1/3 ಭಾಗವನ್ನು ಕ್ರೀಡಾ ಇಲಾಖೆಗೆ ನೀಡಬೇಕು ಎಂದು ಆದೇಶ ಹೊರಡಿಸಿತ್ತು. ಆದರೆ ನಂತರ ಅದನ್ನು ತಡೆ ಹಿಡಿಯಲಾಗಿದೆ.

ಹರಿಯಾಣ ರಾಜ್ಯದ ಕ್ರೀಡಾಪಟುಗಳು, ಕ್ರೀಡೆಯಿಂದ ಗಳಿಸಿದ ಆದಾಯ ಹಾಗೂ ಜಾಹೀರಾತುಗಳಿಂದ ಗಳಿಸಿದ ಆದಾಯದ ಒಟ್ಟು ಭಾಗದಲ್ಲಿ ಮೂರನೇ ಒಂದು ಭಾಗವನ್ನು ರಾಜ್ಯ ಕ್ರೀಡಾ ಇಲಾಖೆಗೆ ನೀಡಬೇಕು ಇದನ್ನು ಕ್ರೀಡೆ ಅಭಿವೃದ್ಧಿಗೆ ಬಳಸಲಾಗುತ್ತದೆ ಎಂದು ರಾಜ್ಯ ಸರ್ಕಾರವು ಏಪ್ರಿಲ್ 30ರಂದು ಆದೇಶ ಹೊರಡಿಸಿತ್ತು.

ಆದರೆ ಈ ಆದೇಶಕ್ಕೆ ಕ್ರೀಡಾಪಟುಗಳು ಹಾಗೂ ಸಾರ್ವಜನಿಕ ವಲಯದಲ್ಲಿ ವಿರೋಧ ವ್ಯಕ್ತವಾದ ಕಾರಣ ಪ್ರಸ್ತುತ ಆದೇಶವನ್ನು ತಡೆ ಹಿಡಿಯಲಾಗಿದ್ದು. ಮುಂದಿನ ಪರಿಷ್ಕೃತ ಆದೇಶದ ವರೆಗೆ ಇದನ್ನು ತಡೆಹಿಡಯಲಾಗಿದೆ.

Haryana government new order will reduce Athletes income

ಸರ್ಕಾರದ ಈ ಆದೇಶಕ್ಕೆ ಕ್ರೀಡಾಪಟುಗಳು ಭಾರಿ ವಿರೋಧ ವ್ಯಕ್ತಪಡಿಸಿದ್ದರು. ಒಲಿಂಪಿಕ್ ಪದಕ ವಿಜೇತ ಕುಸ್ತಿಪಟು ಸುಶೀಲ್ ಕುಮಾರ್ ಅವರು, ಅಥ್ಲೀಟ್‌ಗಳು ಸಾಕಷ್ಟು ಬಡ ಕುಟುಂಬದವರಾಗಿದ್ದಾರೆ. ಸರ್ಕಾರದ ಈ ಆದೇಶ ಅವರ ಮೇಲೆ ಭಾರಿ ಹೊರೆ ಬೀಳಲಿದೆ ಎಂದಿದ್ದರು. ಅಲ್ಲದೆ ಫೋಗಟ್‌ ಸೋದರಿಯರು, ಯೋಗೇಂದ್ರ ದತ್ತ ಮುಂತಾದ ಖ್ಯಾತನಾಮ ಕ್ರೀಡಾಪಟುಗಳು ಸರ್ಕಾರದ ಆದೇಶದ ವಿರುದ್ಧ ಮಾತನಾಡಿದ್ದರು.

ಈ ಬಗ್ಗೆ ಟ್ವೀಟ್ ಮಾಡಿರುವ ಹರಿಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್‌, ಕ್ರೀಡಾಪಟುಗಳ ಹಿತವನ್ನು ಗಮನದಲ್ಲಿಟ್ಟುಕೊಂಡೇ ಮುಂದಿನ ನಿರ್ಣಯಗಳನ್ನು ಕೈಗೊಳ್ಳಲಾಗುವುದು ಎಂದು ಅಭಯ ನೀಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+