Haryana Election: ಮತಗಟ್ಟೆಗಳಲ್ಲಿ ಮಹಿಳೆ, ವಿಶೇಷಚೇತನ ಸಿಬ್ಬಂದಿ ಪಾಲ್ಗೊಳ್ಳುವಿಕೆಗೆ ಉತ್ತೇಜನ
ಕೇಂದ್ರ ಚುನಾವಣೆ ಆಯೋಗವು ವಿಧಾನಸಭಾ ಚುನಾವಣೆಗೆ ದಿನಾಂಕ ಘೋಷಣೆ ಆದ ಬಳಿಕ ಹರಿಯಾಣದಲ್ಲಿ ರಾಜಕೀಯ ಪಕ್ಷಗಳು ಸಖತ್ ಆಕ್ಟಿವ್ ಆದವು. ಟಿಕೆಟ್ ಹಂಚಿಕೆ, ಪ್ರಚಾರ, ಆರೋಪ ಪ್ರತ್ಯಾರೋಪಗಳು ಜೋರಾಗಿವೆ. ಈ ಮಧ್ಯೆ ಚುನಾವಣೆ ಆಯೋಗವು ಲಿಂಗ ಸಮಾನತೆಗಾಗಿ ಮಹತ್ವ ಹೆಜ್ಜೆ ಇಟ್ಟಿದೆ. ಮಹಿಳೆಯರು, ವಿಶೇಷ ಚೇತನ (PwD) ಸಿಬ್ಬಂಧಿ ಚುನಾವಣಾ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವಂತೆ ಮಾದರಿ ಕಾರ್ಯ ಕೈಗೊಂಡಿದೆ.
ಹೌದು, ಇದೇ ಅಕ್ಟೋಬರ್ 5 ರಂದು ಹರಿಯಾಣದ ಎಲ್ಲ 90 ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದೆ. ಈ ಚುನಾವಣೆಯ ಪ್ರಕ್ರಿಯೆಯಲ್ಲಿ ಲಿಂಗ ಸಮಾನತೆ ಹಾಗೂ ಒಳಗೊಳ್ಳುವಿಕೆಗೆ ಚುನಾವಣಾಧಿಕಾರಿಗಳು ಉತ್ತೇಜನ ನೀಡುತ್ತಿದ್ದಾರೆ. ಚಂಡೀಗಢದಲ್ಲಿ ಕನಿಷ್ಠ ಒಂದು ಮತಗಟ್ಟೆಯಲ್ಲಿ ಮಹಿಳೆಯರು ಮತ್ತು ಅಂಗವಿಕಲ ವ್ಯಕ್ತಿಗಳು (PwD) ಸಂಪೂರ್ಣವಾಗಿ ತೊಡಗಿಕೊಳ್ಳಬೇಕಿದೆ.

ಈ ಉಪ್ರಕಮದಿಂದ ಪ್ರಜಾಸತ್ತಾತ್ಮಕ ಪ್ರಕ್ರಿಯೆಯಲ್ಲಿ ಮಹಿಳೆಯರು ಮತ್ತು ವಿಶೇಷ ಚೇತನರ ಪಾಲ್ಗೊಳ್ಳುವಿಕೆ, ಲಿಂಗ ಸಮಾನತೆ ಹಾಗೂ ಬದ್ಧತೆಯನ್ನು ಹರಿಯಾಣದ ಮುಖ್ಯ ಚುನಾವಣಾ ಅಧಿಕಾರಿ ಪಂಕಜ್ ಅಗರ್ವಾಲ್ ಅವರು ಪ್ರದರ್ಶಿಸಲಿದ್ದಾರೆ.
ಚುನಾವಣಾ ಮಾಹಿತಿ ಸ್ಲಿಪ್ ವಿತರಣೆ
ಹರಿಯಾಣದಲ್ಲಿ ಮತದಾನ ಹೆಚ್ಚಿಸಲು ಚುನಾವಣಾಧಿಕಾರಿಗಳು ಹೆಚ್ಚು ಶ್ರಮಿಸುತ್ತಿದ್ದಾರೆ. ಹೊಸ ಹೊಸ ರೀತಿಯಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ. ಅಲ್ಲದೇ ಜನರಿಗೆ ಮತದಾನದ ಮಹತ್ವವನ್ನು ತಿಳಿಸುತ್ತಿದ್ದಾರೆ. ರಾಜ್ಯ ಚುನಾವಣಾ ಇಲಾಖೆ ವತಿಯಿಂದ ಮತದಾನ ದಿನ ಅಕ್ಟೋಬರ್ 5ರ ಮೊದಲೇ 'ಮತದಾರರಿಗೆ ಚುನಾವಣಾ ಮಾಹಿತಿ ಸ್ಲಿಪ್ ನೀಡಲಿದ್ದಾರೆ.
ಈ ಸ್ಪಿಪ್‌ನಲ್ಲಿ ನೀವು ನಿಮ್ಮ ಹೆಸರು, ಕ್ರಮಸಂಖ್ಯೆ, ಮತಗಟ್ಟೆ ಹಾಗೂ ಮತದಾನದ ದಿನಾಂಕ ಮತ್ತು ಸಮಯದ ಅಗತ್ಯ ವಿವರಗಳನ್ನು ಪರಿಶೀಲಿಸಬಹುದಾಗಿದೆ. ಆದರೆ ಈ ಸ್ಲಿಪ್ ಒಂದೇ ಇದ್ದರೆ ಸಾಲದು ನೀವು ಮತಗಟ್ಟೆಗೆ ತೆರಳಿ ಮತದಾನ ಮಾಡಲು ನಿಮ್ಮ ಗುರುತಿನ ಚೀಟಿಯೊಂದನ್ನು ಒಯ್ಯವುದು ಕಡ್ಡಾಯವಾಗಿರುತ್ತದೆ.
ಸ್ಲಿಪ್‌ನಲ್ಲಿ ಮತದಾರರ ಭಾವಚಿತ್ರ, ಕ್ಯೂಆರ್ ಕೋಡ್ ಸಹ ಇರಲಿದೆ. ಈ ಸ್ಲಿಪ್‌ಗಳನ್ನು ಎಲ್ಲ ನೋಂದಾಯಿತ ಮತದಾರರಿಗೆ ಚುನಾವಣೆಗೆ ಕನಿಷ್ಠ ಐದು ದಿನಗಳ ಮೊದಲು ನೀಡುವಂತೆ ಚಂಡಿಗಢ ಸೇರಿದಂತೆ ರಾಜ್ಯಾದ್ಯಂತ ಚುನಾವಣಾಧಿಕಾರಿ ಪಂಕಜ್ ಅಗರ್ವಾಲ್ ಸೂಚಿಸಿದ್ದಾರೆ. ಎಲ್ಲಾ ಜಿಲ್ಲಾ ಚುನಾವಣಾಧಿಕಾರಿಗಳು ಮತ್ತು ಚುನಾವಣಾಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಮಾದರಿ ಮತಗಟ್ಟೆ ಸ್ಥಾಪಿಸಿ, ಸ್ಥಳೀಯ ಸಂಸ್ಕೃತಿ ಪಸರಿಸಿ
ಎಲ್ಲ ವಿಧಾನಸಭಾ ಕ್ಷೇತ್ರಗಳಲ್ಲಿ ಮಾದರಿ ಮತಗಟ್ಟೆ ಸ್ಥಾಪಿಸಲಾಗುತ್ತದೆ. ಈ ಮತಗಟ್ಟೆ ಕೇಂದ್ರಗಳು ಸ್ಥಳೀಯ ಸಾಂಸ್ಕೃತಿಕ ಗುರುತು ಪ್ರತಿಬಿಂಬಿಸಬೇಕು. ಸ್ಥಳೀಯ ವಸ್ತುಗಳ ಸಹಾಯದಿಂದ ಇಲ್ಲಿನ ಕಲಾ ಸಂಸ್ಕೃತಿ ಪ್ರದರ್ಶಿಸುವಂತೆ ಸ್ಥಾಪಿಸಬೇಕು. ಪ್ರತಿ ಜಿಲ್ಲೆಯಲ್ಲಿ ಕನಿಷ್ಠ ಒಂದು ಮತಗಟ್ಟೆ ಮಾದರಿ ಮತಗಟ್ಟೆ ಆಗಿರಲಿ ಎಂದು ಅವರು ತಿಳಿಸಿದ್ದಾರೆ. ಈ ನಿಟ್ಟಿನಲ್ಲಿ ಕ್ರಮಕ್ಕೆ ಅವರು ಸೂಚಿಸಿದ್ದಾರೆ.
ಹರಿಯಾಣದ ಎಲ್ಲ ಮತಗಟ್ಟೆಗಳಲ್ಲಿ ಬೂತ್, ಸ್ಪಷ್ಟ ಸೂಚನಾ ಫಲಕ, ಎಲ್ಲಾ ಮತದಾರರಿಗೆ ಸುಲಭವಾಗಿ ತಿಳಿಯುವಂತೆ ಸೂಚನೆಗಳು, ಸ್ಥಳೀಯ ಭಾಷೆಯಲ್ಲಿ ಕಾಣಿಸುವಂತೆ ಹಾಕಲಾಗಿರುತ್ತದೆ. ಯುವಜನರು ಮತದಾನದಲ್ಲಿ ಹೆಚ್ಚು ಪಾಲ್ಗೊಳ್ಳುವಂತೆ, ದಾಖಲೆಯ ಮತದಾನ ಆಗಲು ಕರೆ ನೀಡಲಾಗಿದೆ. ಮತಗಟ್ಟೆಗಳಲ್ಲಿ ಎಲ್ಲ ಅಗತ್ಯ ಮೂಲಸೌಕರ್ಯ ನಿರ್ವಹಿಸಾಗುತ್ತದೆ ಎಂದು ಚುನಾವಣಾಧಿಖಾರಿಗಳು ಖಚಿತಪಡಿಸಿದ್ದಾರೆ.
-
Gold Price: ಏಪ್ರಿಲ್ನಲ್ಲಿ ಚಿನ್ನದ ದರ ಭವಿಷ್ಯ: ಹೇಗಿರುತ್ತದೆ ಮುಂದಿನ ತಿಂಗಳು ಚಿನ್ನದ ಬೆಲೆ? ವಿಶ್ಲೇಷಣೆ -
ಅಡುಗೆ ಮನೆಗಳಿಗೆ ಇನ್ನು ನೇರ ಗ್ಯಾಸ್ ಸಂಪರ್ಕ: ಪೈಪ್ಲೈನ್ ವಿಸ್ತರಣೆಗೆ ಕೇಂದ್ರದಿಂದ ಹೊಸ ಆದೇಶ ಜಾರಿ -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
ಕಾಂತಾರ ವಿವಾದ: ಮೈಸೂರು ಚಾಮುಂಡಿ ಬೆಟ್ಟಕ್ಕೆ ಬರ್ತೀನಿ, ಕ್ಷಮೆಯೂ ಕೇಳ್ತೀನಿ ಎಂದ ನಟ ರಣವೀರ್ ಸಿಂಗ್












Click it and Unblock the Notifications