Haryana Election 2024 Exit Polls Resuts: ಬಿಜೆಪಿಗೆ ಹಿನ್ನಡೆ, ಕಾಂಗ್ರೆಸ್‌ಗೆ ಭರ್ಜರಿ ಗೆಲುವಿಗೆ ಕಾರಣಗಳು, ವಿಶ್ಲೇಷಣೆ
ನವದೆಹಲಿ, ಅಕ್ಟೋಬರ್ 05: ಹರಿಯಾಣ ವಿಧಾನಸಭಾ ಚುಣಾವಣೆ 2024 ರಲ್ಲಿ ಒಟ್ಟು 90 ಸೀಟುಗಳಿಗೆ ಒಂದೇ ಹಂತದಲ್ಲಿ ಅಕ್ಟೋಬರ್ 5 ರಂದು ಮತದಾನ ಪೂರ್ಣಗೊಂಡಿದೆ. ಚುನಾವಣೆ ಆಯೋಗದ ಪ್ರಕಾರ, ಸಂಜೆ 6.30ರ ನಂತರ ಚುನಾವಣೋತ್ತರ ಫಲಿತಾಂಶ ಹೊರ ಬಿದ್ದಿದೆ. ಈ ಸಮೀಕ್ಷೆಗಳ ಪ್ರಕಾರ, ಹರಿಯಾಣದ ಜನರು ಒಲವು ಈ ಬಾರಿ ಕಾಂಗ್ರೆಸ್ ಪಕ್ಷದ ಮೇಲಿದೆ ಎಂಬುದು ಸ್ಪಷ್ಟವಾಗಿದೆ.
ಸದರಿ ಚುನಾವಣೆ ಮೂಲಕ ಗರಿಷ್ಠ ಸ್ಥಾನ ಪಡೆದು ಮೂರನೇ ಭಾರಿ ಗೆಲ್ಲುವ ಮೂಲಕ ಹ್ಯಾಟ್ರಿಕ್ ಹೊಡೆಯಲು ಬಿಜೆಪಿ ಆಸೆ ಹೊಂದಿತ್ತು. ಆದರೆ ಹರಿಯಾಣದಲ್ಲಿ ಎರಡು ಬಾರಿ ಆಡಳಿತ ನೀಡಿದ್ದ ಬಿಜೆಪಿಯು ಈ ಬಾರಿ ನೆಲಕಚ್ಚುವ ಸಾಧ್ಯತೆ ದಟ್ಟವಾಗಿದೆ. ಇದಕ್ಕೆ ವಿರುದ್ಧ ಎಂಬಂತೆ ಕಾಂಗ್ರೆಸ್ ಪರ ಜನರು ನಿಂತಿದ್ದಾರೆ. ಇದರ ಕಾರಣ, ವಿಶ್ಲೇಷಣೆ ಇಲ್ಲಿದೆ.

ವಿವಿಧ ಎಕ್ಸಿಟ್ ಪೋಲ್ ವರದಿಗಳ ಪ್ರಕಾರ ಹರಿಯಾಣದಲ್ಲಿ ಕಾಂಗ್ರೆಸ್ ಗೆ ಸರಾಸರಿ 40 ರಿಂದ 61 ಸೀಟು ಗೆಲ್ಲಲಿದೆ ಎಂದು ಹೇಳಿವೆ. ಬಿಜೆಪಿ ಸರಾಸರಿ 32 ಸ್ಥಾನ ಗೆಲ್ಲಬಹುದು ಎಂದು ತಿಳಿಸಿದೆ. ಈ ಮೂಲಕ ಅತೀವ ಉತ್ಸಾಸ ಹೊಂದಿದ್ದ ಬಿಜೆಪಿಗೆ ಜನ ಬುದ್ಧಿ ಕಲಿಸಿದ್ದಾರೆ ಎನ್ನಲಾಗಿದೆ.
ಹರಿಯಾಣದಲ್ಲಿ ಆಡಳಿತ ವಿರೋಧಿ ಅಲೆ
ಎರಡು ಭಾರಿ ಅಧಿಕಾರಕ್ಕೆ ಬಂದ ಬಿಜೆಪಿಯು ಈ ಬಾರಿ ಆಡಳಿತ ವಿರೋಧಿ ಅಲೆ ಎದುರಿಸಿತು. ಬಿಜೆಪಿ ಅಧಿಕಾರದಲ್ಲಿಯೇ ಈ ರಾಜ್ಯದಲ್ಲಿ ಅನೇಕ ರಸ್ತೆ ಸೇತುವೆಗಳು ಕುಸಿದು ಬಿದ್ದಿವೆ. ರಾಷ್ಟ್ರದ ಅಭಿವೃದ್ಧಿ ಬಗ್ಗೆ ಮಾತನಾಡುವ ಬಿಜೆಪಿಗೆ ಈ ಅಂಶಗಳು ಹೊಡೆತ ನೀಡಿದವು. ಈ ಕಾರಣದಿಂದಲೂ ಬಿಜೆಪಿ ಜನರ ನಂಬಿಕೆ ಉಳಿಸಿಕೊಳ್ಳುವಲ್ಲಿ ವಿಫಲವಾಯಿತು.
ಅತೀವ ವಿಶ್ವಾಸವೇ ಬಿಜೆಪಿ ಸೋಲಿಗೆ ಕಾರಣ
ಕೇಂದ್ರದ ನೀತಿ ವಿರುದ್ಧ ದೆಹಲಿ, ರಾಜ್ಯದ ಗಡಿಯಲ್ಲಿ ಮಾಡಿದ ಪ್ರತಿಭಟನೆಯಲ್ಲಿ ಪಾಲ್ಗೊಂಡವರ ಪೈಕಿ ಹರಿಯಾಣದವರು ಹೆಚ್ಚಿದ್ದಾರೆ. ಆಗ ಪ್ರಧಾನಿ ಮೋದಿ, ಬಿಜೆಪಿ ತಾಳಿದ ನೀತಿಗಳಿಂದ ರೈತರು ಬಿಜೆಪಿ ಆಡಳಿತ ವಿರೋಧಿಸುವಂತಾಯಿತು. ಅಲ್ಲದೇ ಬಿಜೆಪಿ ಕೆಲ ನಾಯಕರು ರೈತರ ವಿರುದ್ಧ ಅವಹೇಳನ ರೀತಿ ನೀಡಿದ ಹೇಳಿಕೆಗಳು ಕಾರಣವಾಗಿವೆ. ಇವೆಲ್ಲ ಅಂಶಗಳಿದ್ದರೂ ಸಹ ಈಗಾಗಲೇ ಎರಡು ಭಾರಿ ಗೆದ್ದಿದ್ದೇವೆ. ಮೂರನೇ ಬಾರಿಗೆ ಗೆಲ್ಲುವ ಅತೀವ ವಿಶ್ವಾಸ, ದುರಾಡಳಿತವೇ ಹಿನ್ನಡೆಗೆ ಕಾರಣವಾಗಿದೆ.

ಮಹಿಳಾ ಕುಸ್ತಿಪಟುಗಳ ಮೇಲಿನ ದೌರ್ಜನ್ಯ, ಪ್ರತಿಭಟನೆ
ಇನ್ನೂ ಬಿಜೆಪಿ ಸಂಸದ ಬ್ರಿಜ್ ಭೂಷಣ್ ಅವರು ಮಹಿಳಾ ಕುಸ್ತಿಪಟುಗಳ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದರು ಎಂಬ ಆರೋಪ ಕೇಳಿ ಬಂದಿತ್ತು. ಈ ವೇಳೆ ಪ್ರಧಾನಿ ಮೋದಿ ವಹಿಸಿದ ಮೌನ, ದೆಹಲಿಯಾದ್ಯಂತ ಮಹಿಳಾ ಕುಸ್ತಿಪಟುಗಳು ನಡೆಸಿದ ಪ್ರತಿಭಟನೆ, ಸರ್ಕಾರ ನಡೆಯು ದೇಶವ್ಯಾಪಿ ಸದ್ದು ಮಾಡಿತ್ತು. ಇದು ಕಾಂಗ್ರೆಸ್‌ಗೆ ಅಸ್ತ್ರವಾಯಿತು. ಅಲ್ಲದೇ ಆರೋಪಿ ಪುತ್ರನಿಗೆ ಬಿಜೆಪಿ ಟಿಕೆಟ್ ನೀಡಿದ್ದು, ಕಾಂಗ್ರೆಸ್ ಹಾಗೂ ಜನರನ್ನು ಕೆರಳಿಸಿತ್ತು. ಇದೆಲ್ಲವು ಈ ಬಾರಿ ಬಿಜೆಪಿ ಹಿನ್ನಡೆಗೆ ಕಾರಣವಾಗಿದೆ ಎಂದು ವಿಶ್ಲೇಷಿಸಲಾಗಿದೆ.
ಬಿಜೆಪಿ ವಿರುದ್ಧದ ಕುಸ್ತಿಪಟು ಪ್ರತಿಭಟನೆಯಲ್ಲಿ ವಿನೇಶ್ ಪೂಗಟ್ ಅವರು ಬೆಳಕಿಗೆ ಬಂದರು. ಅವರನ್ನು ಕಾಂಗ್ರೆಸ್ ಬೆಂಬಲಿಸಲು ಆರಂಭಿಸಿ, ಸದರಿ ಚುನಾವಣೆಯಲ್ಲಿ ಜಿಂದ್ ಜಿಲ್ಲೆಯ ಜುಲಾನಾ ಕ್ಷೇತ್ರದಿಂದ ಕಣಕ್ಕಿಳಿಸಿತು. ಅಲ್ಲದೇ ಪೋಗಟ್ ಕೊನೆ ಹಂತದಲ್ಲಿ ಅನರ್ಹಗೊಂಡಿದ್ದಕ್ಕೆ ಬಿಜೆಪಿ ವಿರುದ್ಧ ಬೇಸರ ಮೂಡುವಂತೆ ಮಾಡಿತ್ತು.
ಕಾಂಗ್ರೆಸ್ ನಿರುದ್ಯೋಗ ಸಾಂಕ್ರಾಮಿಕ ಪದ ಬಳಕೆ
ಅಧಿಕಾರಕ್ಕೆ ಬಂದರೆ ರಾಜ್ಯದಲ್ಲಿ ಅತ್ಯಧಿಕ ಉದ್ಯೋಗ ಸೃಷ್ಟಿ ಮಾಡುವುದಾಗಿ ಹೇಳಿದ್ದ ಬಿಜೆಪಿಯು ಈ ವಿಚಾರದಲ್ಲಿ ಹೆಚ್ಚು ಪ್ರಭಾವ ಬೀರಲು ಸಾಧ್ಯವಾಗಲಿಲ್ಲ. ಇದನ್ನೆ ಅಸ್ತ್ರವಾಗಿ ಬಳಸಿಕೊಂಡ ಕಾಂಗ್ರೆಸ್, ರಾಜ್ಯದಲ್ಲಿ ಆಡಳಿತ ಪಕ್ಷ ಬಿಜೆಪಿಯು ನಿರುದ್ಯೋಗ ಸಾಂಕ್ರಾಮಿಕ ಹರಡುತ್ತಿದೆ. ಸಮಗ್ರ ಅಭಿವೃದ್ಧಿ ಹೆಸರಿನಲ್ಲಿ ಜನರನ್ನು ದಾರಿ ತಪ್ಪಿಸುತ್ತಿದೆ ಎಂದು ಅಂಕಿ ಸಂಖ್ಯೆ ಸಹಿತ ಉಲ್ಲೇಖಿಸಿತ್ತು. ಚುನಾವಣೆ ವೇಳೆ ಬಿಜೆಪಿಯ ಕಾರ್ಯಗಳ ಬಗ್ಗೆ ವಿವರವಾಗಿ ಕಾಂಗ್ರೆಸ್ ವಿವರಿಸಿತ್ತು. ಅಲ್ಲದೇ ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಈ ಬಾರಿ ಬರಪೂರ ಭರವಸೆ ನೀಡಿತ್ತು. ಈಗಾಗಲೇ ಕೊಟ್ಟ ಭರವಸೆ ಯನ್ನು ಕಾಂಗ್ರೆಸ್ ಈಡೇರಿಸಿತ್ತು. ಇದು ಸಹ ಬಿಜೆಪಿಗೆ ಹಿನ್ನಡೆ ಉಂಟು ಮಾಡಿದೆ ಎನ್ನಲಾಗಿದೆ.
2019 ಹರಿಯಾಣ ಅಸೆಂಬ್ಲಿ ಎಕ್ಸಿಟ್ ಪೋಲ್ ಸಮೀಕ್ಷೆ ವಿವರ?
ಹರಿಯಾಣದಲ್ಲಿ ಕಳೆ ಬಾರಿ 2019 ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಒಟ್ಟು 90 ಸೀಟು ಪೈಕಿ ಮ್ಯಾಜಿಕ್ ನಂಬರ್ 46 ಆಗಿದೆ. ಇದರಲ್ಲಿ ಬಿಜೆಪಿಗೆ 60ಕ್ಕೂ ಹೆಚ್ಚು ಸ್ಥಾನ ಗೆಲ್ಲಲಿದೆ ಎಂದು ಊಹಿಸಲಾಗಿತ್ತು. ಈ ಮೂಲಕ ಬೃಹತ್ ಪಕ್ಷವಾಗಿ ಹೊರ ಹೊಮ್ಮಿ ಏಕಾಂಗಿಯಾಗಿ ಅಧಿಕಾರ ಹಿಡಿಯುತ್ತದೆ ಎಂದು ಕೆಲ ಸಮೀಕ್ಷೆ ಹೇಳಿದ್ದವು. ಕಾಂಗ್ರೆಸ್ ಗೆ ಸುಮಾರು 18 ಸ್ಥಾನಗಳು ಬರಬಹುದು ಎನ್ನಲಾಗಿದೆ.
ಎಲ್ಲವು ಬದಲಾಗಿದ್ದು, ಬಿಜೆಪಿ ಕೇವಲ 40ಸೀಟುಗಳನ್ನು ಗೆದ್ದುಕೊಂಡಿತು. ನಂತರ ಜೆಜೆಪಿ ಪಕ್ಷದ ಜೊತೆಗೆ ಮೈತ್ರಿ ಮಾಡಿಕೊಂಡು 31 ಸ್ಥಾನ ಗೆದ್ದಿದ್ದ ಕಾಂಗ್ರೆಸ್ ಅನ್ನು ಹರಿಯಾಣ ಅಧಿಕಾರದಿಂದ ದೂರ ಇಡುವಲ್ಲಿ ಯಶಸ್ವಿಯಾಗಿದೆ. ಸದ್ಯ ಈ ಬಾರಿಯು ಗೆಲ್ಲುವ ವಿಶ್ವಾಸ ದಲ್ಲಿರುವ ಬಿಜೆಪಿಯು ಹ್ಯಾಟ್ರಿಕ್ ಹೊಡೆಯುವ ಕನಸು ಕಂಡಿದೆ. ಕಾಂಗ್ರೆಸ್ ತೀವ್ರ ಪೈಪೋಟಿ ಒಡ್ಡಿದೆ.












Click it and Unblock the Notifications