Haryana: ಬಿಜೆಪಿಯಿಂದ 8 ಬಂಡಾಯ ನಾಯಕರ ಉಚ್ಚಾಟನೆ: ಪಕ್ಷೇತರ ಸ್ಪರ್ಧೆ
ಹರಿಯಾಣ ವಿಧಾನಸಭಾ ಚುನಾವಣೆಗೆ ಟಿಕೆಟ್ ನೀಡಲಿಲ್ಲ ಎಂಬ ಕಾರಣಕ್ಕೆ ಬಿಜೆಪಿ ತೊರೆದು ಬಂಡಾಯ ಸಾರಿದ್ದ ಹಾಗೂ ಪಕ್ಷೇತರವಾಗಿ ಪಕ್ಷದ ವಿರುದ್ಧ ಕಣಕ್ಕಿಳಿದಿರುವ 08 ಅಭ್ಯರ್ಥಿಗಳನ್ನು ಬಿಜೆಪಿಯು 06 ವರ್ಷಗಳ ಕಾಲ ಉಚ್ಛಾಟಿಸಿದೆ. ಕಾಂಗ್ರೆಸ್ ನಂತರ ಬಿಜೆಪಿಯಲ್ಲಿ ನಾಯಕ ಉಚ್ಚಾಟನೆ ಮಾಡಿ ಆದೇಶಿಸಲಾಗಿದೆ. ಸದ್ಯ ಅವರು ಬಿಜೆಪಿ ಅಭ್ಯರ್ಥಿ ವಿರುದ್ಧ ಸ್ಪರ್ಧೆ ಮಾಡಿ ಪ್ರಚಾರದಲ್ಲಿ ತೊಡಗಿದ್ದಾರೆ.
ಬಂಡಾಯವೆದ್ದ ಎಂಟು ನಾಯಕರನ್ನು ಪಕ್ಷದಿಂದ ಉಚ್ಛಾಟಿಸಿ ಬಿಜೆಪಿ ಪಕ್ಷದ ರಾಜ್ಯ ಮುಖ್ಯಸ್ಥ ಮೋಹನ್ ಲಾಲ್ ಬಡೋಲಿ ಅವರು ನೆನ್ನೆ ಭಾನುವಾರ ಘೋಷಿಸಿದರು. ಟಿಕೆಟ್ ಸಿಗುವುದಿಲ್ಲ ಎಂದು ಗೊತ್ತಾಗುತ್ತಿದ್ದಂತೆ ರಾಜೀನಾಮೆ ನೀಡಿದ ಮಾಜಿ ಸಚಿವ ರಂಜಿತ್ ಚೌಟಾಲಾ ಹಾಗೂ ಮುಖ್ಯಮಂತ್ರಿ ನಯಾಬ್ ಸಿಂಗ್ ಸೈನಿ, ಸಂದೀಪ್ ಗಾರ್ಗ್ ಸೇರಿದಂತೆ ಎಂಟು ಮಂದಿ ವಿರುದ್ಧ ಪಕ್ಷ ನಿರ್ಧಾರ ಕೈಗೊಂಡಿದೆ.

ಸ್ವತಂತ್ರರಾಗಿ ಯಾವ ಕ್ಷೇತ್ರಗಳಿಂದ ಸ್ಪರ್ಧೆ?
ಬಿಜೆಪಿಯಿಂದ ಆರು ವರ್ಷ ಉಚ್ಛಾಟನೆಗೊಂಡ 06 ನಾಯಕರು ಅಸ್ಸಾಂದ್ ಕ್ಷೇತ್ರದಿಂದ ಜಿಲೆ ರಾಮ್ ಶರ್ಮಾ, ಹಾಥಿನ್ ಕ್ಷೇತ್ರದಿಂದ ಕೇಹರ್ ಸಿಂಗ್ ರಾವತ್, ಗನೌರ್‌ನಿಂದ ದೇವೆಂದರ್ ಕಡ್ಯಾನ್, ಗುರ್ಗಾಂವ್‌ನಿಂದ ನವೀನ್ ಗೋಯಲ್, ಸಫಿಡೋ ಕ್ಷೇತ್ರದಿಂದ ಮಾಜಿ ಸಚಿವ ಬಚನ್ ಸಿಂಗ್ ಆರ್ಯ, ಮೆಹಮ್ ಕ್ಷೇತ್ರದಿಂದ ರಾಧಾ ಅಹ್ಲಾವತ್ ಅವರು ಪಕ್ಷೇತರವಾಗಿ ಸ್ಪರ್ಧಿಸಿದ್ದಾರೆ.
ಬಂಡಾವೆದ್ದ 8 ನಾಯಕ ಪೈಕಿ ರಂಜಿತ್ ಚೌತಾಲಾ ಅವರು ಸ್ವತಂತ್ರ ಶಾಸಕರಾಗಿದ್ದವರು. ತಮ್ಮ ರಾನಿಯಾ ಕ್ಷೇತ್ರದಿಂದ ಚುನಾವಣಾ ಟಿಕೆಟ್ ನಿರಾಕರಿಸಿದ ಹಿನ್ನೆಲೆಯಲ್ಲಿ ಬಿಜೆಪಿ ತೊರೆಯಲು ನಿರ್ಧರಿಸಿದರು. ಈ ವರ್ಷ ನಡೆದ ಲೋಕಸಭೆ ಚುನಾವಣೆಗೂ ಮುನ್ನವೇ ಅವರು ಬಿಜೆಪಿ ಸೇರಿದ್ದರು. ನಂತರ ಅವರು ವಿಧಾನಸಭೆಯ ಟಿಕೆಟ್ ಆಕಾಂಕ್ಷಿಯಾಗಿದ್ದರು. ಆದರೆ ಅವರಿಗೆ ಟಿಕೆಟ್ ನಿರಾಕರಿಸಿದ ಹಿನ್ನೆಲೆಯಲ್ಲಿ ಅವರು ಸೇರಿದಂತೆ ಎಂಟು ಮಂದಿ ಬಂಡಾಯವೆದ್ದರು.
ಕಾಂಗ್ರೆಸ್ 13 ನಾಯಕರ ಉಚ್ಚಾಟನೆ
ಹರಿಯಾಣ ವಿಪಕ್ಷ ಕಾಂಗ್ರೆಸ್ ವಿರುದ್ಧ ಬಂಡಾಯವೆದ್ದು, ಪಕ್ಷದ ಅಭ್ಯರ್ಥಿಗಳ ವಿರುದ್ಧ ಸ್ಪರ್ಧೆಗೆ ನಿಂತ ಒಟ್ಟು 13 ಮಂದಿ ನಾಯಕರನ್ನು ಕಳೆದ ಶುಕ್ರವಾರ ಪಕ್ಷದಿಂದ ಉಚ್ಚಾಟನೆ ಮಾಡಲಾಯಿತು. ಇವರೆಲ್ಲ ಅಸೆಂಬ್ಲಿ ಚುನಾವಣೆಯ ಟಿಕೆಟ್ ಆಕಾಂಕ್ಷಿಗಳು ಆಗಿದ್ದರು. ಆದರೆ ಅವರಿಗೆ ಟಿಕೆಟ್ ನೀಡದ ಕಾರಣ, ಅಸಮಾಧಾನಗೊಂಡ ಅವರು ಸ್ವತಂತ್ರವಾಗಿ ವಿವಿಧ ಕ್ಷೇತ್ರಗಳಿಂದ ಕಣಕ್ಕೆ ಇಳಿದಿದ್ದಾರೆ.
ಹರಿಯಾಣದಲ್ಲಿ ಒಟ್ಟು 90 ಸ್ಥಾನಗಳಿಗೆ ಒಂದೇ ಬಾರಿಗೆ ಮತದಾನ ನಡೆಯಲಿದೆ, ಅಕ್ಟೋಬರ್ 8 ರಂದು ಚುನಾವಣಾ ಪಲಿತಾಂಶವನ್ನು ರಾಜ್ಯ ಚುನಾವಣೆ ಆಯೋಗ ಪ್ರಕಟಿಸಲಿದೆ.












Click it and Unblock the Notifications