Haryana Assembley Election: ಮಂಗಳವಾರ ಮತ ಎಣಿಕೆ ಆರಂಭ, ಫಲಿತಾಂಶ ತಿಳಿಯಲು ಏನು ಮಾಡಬೇಕು?
ಹರಿಯಾಣ ವಿಧಾನಸಭಾ ಚುನಾವಣೆ 2024ಗೆ ಕಳೆದ ಅಕ್ಟಬರ್ 5ರಂದು ಫಲಿತಾಂಶ ಜರುಗಿತ್ತು. ಒಂದೇ ಹಂತದಲ್ಲಿ ರಾಜ್ಯದ 90 ಸ್ಥಾನಗಳ ಚುನಾವಣೆ ನಡೆದಿತ್ತು. ಮತದಾನ ಪೂರ್ಣಗೊಳ್ಳುತ್ತಿದ್ದಂತೆ ಸಂಜೆ 6.30ಕ್ಕೆ ಚುನಾವಣೋತ್ತರ ಸಮೀಕ್ಷೆಗಳು ಪ್ರಕಟವಾದವು. ಇದೀಗ ನಾಳೆ ಮಂಗಳವಾರ ಅಕ್ಟೋಬರ್ 8ರಂದು ಚುನಾವಣೆ ಆಯೊಗದಿಂದ ಅಧಿಕೃತ ಫಲಿತಾಂಶ ಪ್ರಕಟಗೊಳ್ಳಲಿದೆ. ಈ ಮೂಲಕ ಪ್ರಮುಖ ರಾಜಕೀಯ ಪಕ್ಷಗಳ ರಾಜ್ಯ ರಾಜಕೀಯದ ಹಣೆ ಬರಹ ಗೊತ್ತಾಗಲಿದೆ.
ಈಗಾಗಲೇ ತಿಳಿಸಿದಂತೆ ಹರಿಯಾಣದಲ್ಲಿ ಮೂರನೇ ಬಾರಿಗೆ ಹ್ಯಾಟ್ರಿಕ್ ಭಾರಿಸಿ ಅಧಿಕಾರ ಹಿಡಿದುಕೊಳ್ಳಲು ಮುಂದಾಗಿದ್ದ ಬಿಜೆಪಿಗೆ ನಿರಾಸೆ ಎದರಾಗುವ ಸಾಧ್ಯತೆ ಇದೆ ಎಂದು ಎಕ್ಸಿಟ್ ಪೋಲ್ ಫಲಿತಾಂಶಗಳು ತಿಳಿಸಿವೆ. ಇದರ ಬೆನ್ನಲ್ಲೆ ಚುನಾವಣೆ ಆಯೋಗವು ಪ್ರಕಟಿಸಲಿರುವ ಫಲಿತಾಂಶದ ಮೇಲೆ ಕುತೂಹಲ ಹೆಚ್ಚಾಗಿದೆ.

ಅಕ್ಟೋಬರ್ 8 ರಂದು ಕೇವಲ ಹರಿಯಾಣದಲ್ಲಿ ಮಾತ್ರವಲ್ಲದೇ, ಮೂರು ಹಂತಗಳಲ್ಲಿ ಚುನಾವಣೆ ಎದುರಿಸಿದೆ ಜಮ್ಮು ಮತ್ತು ಕಾಶ್ಮೀರ ವಿಧಾನಸಭಾ ಚುನಾವಣೆಯ ಫಲಿತಾಂಶವು ಅಂದೇ ಒಟ್ಟೊಟ್ಟಿಗೆ ಪ್ರಕಟಗೊಳ್ಳಲಿದೆ. ದೇಶದ ರಾಜಕೀಯ ಪಂಡಿತರ ಚಿತ್ತ ಅತ್ತ ನೆಟ್ಟಿದೆ. ಲಭ್ಯ ಅಧಿಕೃತ ಮಾಹಿತಿ ಪ್ರಕಾರ, ಈ ಬಾರಿಯ ಜಮ್ಮು ಕಾಶ್ಮೀರದಲ್ಲಿ ಬರೋಬ್ಬರಿ 67.90% ರಷ್ಟು ಮತದಾನ ಆಗಿದೆ. ಇಲ್ಲಿನ ಸಿರ್ಸಾ ಜಿಲ್ಲೆ ಎಲೆನಾಬಾದ್ ವಿಧಾನಸಭಾ ಕ್ಷೇತ್ರದಲ್ಲಿ ಶೇಕಡಾ 80ಕ್ಕೂ ಅಧಿಕ ಮತದಾನವಾಗಲಿದೆ.
ಅಕ್ಟೋಬರ್ 8ರಂದು ಮತ ಎಣಿಕೆ
ನಾಳೆ ಬೆಳಗ್ಗೆ ಅಕ್ಟೋಬರ್ 8ರಂದು ಮಂಗಳವಾರ ಬೆಳಗ್ಗೆ 8 ಗಂಟೆಗೆ ಮತ ಎಣಿಕೆ ಆರಂಭವಾಗಲಿದೆ. ಎರಡು ರಾಜ್ಯಗಳಲ್ಲಿ ತಲಾ 90 ಕ್ಷೇತ್ರಗಳಿವೆ. ಹೀಗಾಗಿ ಮಧ್ಯಾಹ್ನ ಹೊತ್ತಿಗೆ ಎರಡು ರಾಜ್ಯಗಳ ಮತದಾರರು ಈ ಬಾರಿ ಯಾವ ಪಕ್ಷದ ಕೈಗೆ ಅಧಿಕಾರ ನೀಡಿದ್ದಾರೆ ಎಂಬ ಸ್ಪಷ್ಟ ಚಿತ್ರ ಸಿಗಲಿದೆ. ಹಾಗಾದರೆ ಸಾರ್ವಜನಿಕರು, ಮತದಾರರು ಈ ಫಲಿತಾಂಶವನ್ನು ವೀಕ್ಷಿಸಲು ಹೀಗೆ ಮಾಡಬೇಕು.
ಮತದಾರರ ನಿಮ್ಮ ಮೊಬೈಲ್ ಫೋನ್ ಅಥವಾ ಡೆಸ್ಕ್ಟಾಪ್ ನಲ್ಲಿ ಕೇಂದ್ರ ಚುನಾವಣೆ ಆಯೋಗದ ಅಧಿಕೃತ ವೆಬ್‌ಸೈಟ್ results.eci.gov.in ಮೂಲಕ ಎರಡು ರಾಜ್ಯಗಳ ಮಾಹಿತಿ ತಿಳಿದು ಕೊಳ್ಳಬಹುದು. ಕ್ಷಣ ಕ್ಷಣದ ಅಪ್ಡೇಟ್, ಯಾವ ಪಕ್ಷ ಮುನ್ನಡೆ, ಗೆಲುವು, ಸೋಲಿನ ಕುರಿತು ತಿಳಿದು ಕೊಳ್ಳಬಹುದಾಗಿದೆ.
ಮುಂದಿರುವ, ಹಿನ್ನಡೆ ಅನುಭವಿಸುತ್ತಿರುವ ಅಭ್ಯರ್ಥಿಗಳು, ಜೊತೆಗೆ ಕ್ಷೇತ್ರವಾರು ಅಥವಾ ರಾಜ್ಯವಾರು ಫಲಿತಾಂಶಗಳನ್ನು ನಿವು ಇಲ್ಲಿ ಪರಿಶೀಲಿಸಬಹುದು.
ಹರಿಯಾಣದ ಎಕ್ಸಿಟ್ ಪೋಲ್ ಭವಿಷ್ಯ ಏನಾಯಿತು
ಹರಿಯಾಣ ರಾಜ್ಯದಲ್ಲಿ ಈ ಬಾರಿ ಬಿಜೆಪಿಗೆ ಹಿನ್ನಡೆ ಆಗುವ ಎಲ್ಲ ಲಕ್ಷಣಗಳು ಎದ್ದು ಕಾಣುತ್ತಿವೆ. ಒಟ್ಟು 90 ವಿಧಾನಸಭಾ ಕ್ಷೇತ್ರಗಳಲ್ಲಿ ವಿಪಕ್ಷ ಕಾಂಗ್ರೆಸ್ ಗೆ 44 ರಿಂದ 61 ಸ್ಥಾನ ಗೆಲ್ಲಬಹುದೆಂದು ವಿವಿಧ ಸುದ್ದಿ ಮಾಧ್ಯಮ ಸಂಸ್ಥೆಗಳ ಸಮೀಕ್ಷೆಗಳು ಭವಿಷ್ಯ ನುಡಿದಿವೆ. ಈ ಮೂಲಕ ಬಿಜೆಪಿಗೆ ಎಕ್ಸಿಟ್ ಪೋಲ್ ಆತಂಕ ನೀಡಿವೆ. ಇನ್ನು ಹರಿಯಾಣದಲ್ಲಿ ಬಿಜೆಪಿಗೆ ಕೇವಲ 18 ರಿಂದ 32 ಸ್ಥಾನಗಳು ಲಭಿಸಬಹುದೆಂದು ಹೇಳಲಾಗುತ್ತಿದೆ.
ಸದ್ಯ ಹರಿಯಾಣದಲ್ಲಿ ಮತ ಎಣಿಕೆಗೆ ಸುತ್ತಮುತ್ತ ಬಿಗಿ ಭದ್ರತೆ ಒದಗಿಸಲಾಗಿದೆ. ಬೆಳಗ್ಗೆ ಚುನಾವಣಾಧಿಕಾರಿಗಳು ಹಾಗೂ ರಾಜಕೀಯ ಪ್ರತಿನಿಧಿಗಳ ಎದುರೇ ಮತ ಯಂತ್ರಗಳನ್ನು ಸ್ಟ್ರಾಂಗ್ ರೂಮಿನಿಂದ ಹೊರತೆಗೆಯಲಾಗುತ್ತದೆ. ಅಂಚೆ ಮತಗಳನ್ನು ಮೊದಲ ಎಣಿಕೆ ಮಾಡಿ ನಂತರ ಇವಿಎಂ ನ ಮತಗಳನ್ನು ಎಣಿಕೆ ಹಾಕಲಾಗುತ್ತದೆ. ಸದ್ಯ ಹರಿಯಾಣ ಹಾಗೂ ಜಮ್ಮು ಕಾಶ್ಮೀರದ ರಾಜಕೀಯದ ಮೇಲೆ ಎಲ್ಲ ಗಮನ ನೆಟ್ಟಿದೆ.












Click it and Unblock the Notifications