ಮೋದಿ ರ‍್ಯಾಲಿ ಪಕ್ಕದಲ್ಲೇ ಹಾರ್ದಿಕ್ ಪಟೇಲ್ ಶಕ್ತಿ ಪ್ರದರ್ಶನ

Subscribe to Oneindia Kannada

ಅಹಮದಾಬಾದ್, ನವೆಂಬರ್ 29: ಗುಜರಾತ್ ಚುನಾವಣಾ ಅಖಾಡದಲ್ಲಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ತೊಡೆ ತಟ್ಟಿರುವ ಪಾಟೀದಾರ್ ನಾಯಕ ಹಾರ್ದಿಕ್ ಪಟೇಲ್ ಇಂದು ತಮ್ಮ ಶಕ್ತಿ ಪ್ರದರ್ಶನ ನಡೆಸಿದರು.

ಹಾರ್ದಿಕ್ ವಿರುದ್ಧ ತೊಡೆ ತಟ್ಟಿದ ಎನ್‌ಆರ್‌ಐ ಪಟೇಲರಿಂದ ಬಿಜೆಪಿಗೆ ಬೆಂಬಲ

ಮೊರ್ಬಿಯಲ್ಲ ಮೋದಿ ರ‍್ಯಾಲಿ ಪಕ್ಕದಲ್ಲೇ ಸಾವಿರಾರು ಜನರನ್ನುದ್ದೇಶಿಸಿ ಹಾರ್ದಿಕ್ ಪಟೇಲ್ ಮಾತನಾಡಿದರು. ಈ ಮೂಲಕ ನಿಮ್ಮ ರ‍್ಯಾಲಿ ಮಧ್ಯೆಯೂ ನಾನು ಜನ ಸೇರಿಸಬಲ್ಲೆ. ನನಗೂ ತಾಕತ್ತಿದೆ ಎಂಬ ಸಂದೇಶ ರವಾನಿಸಿದ್ದಾರೆ ಹಾರ್ದಿಕ್ ಪಟೇಲ್.

ಹಾರ್ದಿಕ್ ಪಟೇಲ್‌ಗೆ 'ವೈ' ಶ್ರೇಣಿಯ ಭದ್ರತೆ!

ಮೋದಿ ಚುನಾವಣಾ ಪ್ರಚಾರ ರ‍್ಯಾಲಿಯಿಂದ ಕೇವಲ 30 ಕಿಲೋಮೀಟರ್ ದೂರದಲ್ಲಿ ಹಾರ್ದಿಕ್ ಪಟೇಲ್ ಸಮಾವೇಶ ನಡೆಯಿತು.

Hardik Patel's Show of Strength against PM Modi Rally In Gujarat

ಈ ಸಂಬಂಧ ಫೇಸ್ಬುಕ್ ನಲ್ಲಿ ಪೋಸ್ಟ್ ಹಾಕಿರುವ ಹಾರ್ದಿಕ್, "ರೈತರ ಸಮಸ್ಯೆ ಮತ್ತು ಮೀಸಲಾತಿಯ ಬಗ್ಗೆ ಚರ್ಚಿಸಲು ಸಾವಿರಾರು ಜನರು ಮೊರ್ಬಿಯ ಖರಕರೆಚಿ ಗ್ರಾಮದಲ್ಲಿಸೇರಿದ್ದಾರೆ. ರೈತರಿಗಾಗಿ ಸರ್ದಾರ್ (ಸರ್ದಾರ್ ವಲ್ಲಭಭಾಯಿ ಪಟೇಲ್) ಸಾಹೇಬರು ಸಾಕಷ್ಟು ಕೆಲಸ ಮಾಡಿದ್ದಾರೆ. ಆದರೆ, ಈ ಬಿಜೆಪಿ ರಾಜ್ಯದ ರೈತರ ಭೂಮಿಯನ್ನು ಅಳತೆ ಮಾಡಿತು ಅಷ್ಟೇ. ಇಂದು ಮೊರ್ಬಿಯಲ್ಲಿ ಮತ್ತೊಬ್ಬರು ಸಾಹೇಬರ ಸಭೆ ನಡೆಯಿತು. 12 ಸಾವಿರ ಜನರು ಬಂದಿದ್ದರು. ಆದರೆ ಅವರು ಯಾರೂ ಮತದಾರರಲ್ಲ, ಕಾರ್ಮಿಕರನ್ನು ಕರೆತರಲಾಗಿತ್ತು," ಎಂದು ಮೋದಿಯನ್ನು ಟೀಕಿಸಿದ್ದಾರೆ.

ಬೇಕೆಂದೇ ಪ್ರಧಾನಿ ನರೇಂದ್ರ ಮೋದಿ ಮೊರ್ಬಿ ಪ್ರವಾಸದಂದೇ ಹಾರ್ದಿಕ್ ರ‍್ಯಾಲಿ ಆಯೋಜಿಸಿ, ಅವರ ವಿರುದ್ಧವೇ ತೊಡೆತಟ್ಟಿದ್ದಾರೆ.

ಸೆರಾಮಿಕ್ ಟೈಲ್ಸ್ ಗಳಿಗೆ ಪ್ರಸಿದ್ಧವಾಗಿರುವ ಮೊರ್ಬಿ ಕಳೆದೆರಡು ಚುನಾವಣೆಗಳಲ್ಲಿ ಬಿಜೆಪಿ ಪರ ಗಟ್ಟಿಯಾಗಿ ನಿಂತುಕೊಂಡಿದೆ. ಆದರೆ ಇಲ್ಲಿ ಪಟೇಲರ ಜನಸಂಖ್ಯೆ ಹೆಚ್ಚಾಗಿದ್ದು ಹಾರ್ದಿಕ್ ರ‍್ಯಾಲಿಗೂ ಹೆಚ್ಚಿನ ಜನ ಹರಿದು ಬರುತ್ತಿದ್ದಾರೆ. ಇದು ಬಿಜೆಪಿಯನ್ನು ಚಿಂತೆಗೀಡು ಮಾಡಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Hardik Patel shows of his strength against prime minister Narendra Modi’s rally in Gujarat. He addressed huge public gathering just 30 km away from Modi’s rally in Morbi.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ