ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗುಜರಾತ್: ಮತ್ತೋರ್ವ ಪಾಟೀದಾರ್ ಹೋರಾಟಗಾರ ಬಿಜೆಪಿ ಬಲೆಗೆ

By Sachhidananda Acharya
|
Google Oneindia Kannada News

ಅಹಮದಾಬಾದ್, ನವೆಂಬರ್ 16: ಪಾಟಿದಾರ್ ಅನಾಮತ್ ಆಂದೋಲನ ಸಮಿತಿಯ ಮಾಜಿ ಮುಖಂಡ ಚಿರಾಗ್ ಪಟೇಲ್ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ.

ಅಹಮದಾಬಾದ್ ನಲ್ಲಿ ಉಪಮುಖ್ಯಮಂತ್ರಿ ನಿತಿನ್ ಪಟೇಲ್ ಸಮ್ಮುಖದಲ್ಲಿ ಅವರು ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ.

Hardik Patel's former aide joins BJP

ಹಾಗೆ ನೋಡಿದರೆ ಚಿರಾಗ್ ಪಟೇಲ್ ಪಾಟೀದಾರ್ ಮೀಸಲಾತಿ ಹೋರಾಟದ ಸಂದರ್ಭದಲ್ಲಿ ಹಾರ್ದಿಕ್ ಪಟೇಲ್ ಆಪ್ತರಾಗಿದ್ದರು. ಹಾರ್ದಿಕ್ ಜತೆ ರಾಷ್ಟ್ರದ್ರೋಹದ ಪ್ರಕರಣವನ್ನೂ ಎದುರಿಸುತ್ತಿದ್ದರು. ಆದರೆ ಅವರೀಗ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ.

ಬಿಜೆಪಿ ಸೇರುತ್ತಿದ್ದಂತೆ ಚಿರಾಗ್ ಹಾರ್ದಿಕ್ ವಿರುದ್ಧ ಕಿಡಿಕಾರಿದ್ದಾರೆ, ತಮ್ಮ ವೈಯಕ್ತಿಕ ಹಿತಾಸಕ್ತಿಗಳಿಗೋಸ್ಕರ ಪಾಟೀದಾರ್ ಮೀಸಲಾತಿ ಹೋರಾಟವನ್ನು ಬಲಿಕೊಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಮಾತ್ರವಲ್ಲ ಈ ಹೋರಾಟ ತಪ್ಪು ಹಾದಿಯಲ್ಲಿ ನಡೆಯುತ್ತಿದೆ ಎಂದೂ ಹೇಳಿದ್ದಾರೆ.

"ಹಾರ್ದಿಕ್ ಪಟೇಲ್ ಸೆಕ್ಸ್ ಸಿಡಿ ಬಿಡುಗಡೆಯಾದ ನಂತರ ನನಗೆ ಮೌನವಾಗಿರಲು ಸಾಧ್ಯವಾಗಲಿಲ್ಲ. ಈ ಇಡೀ ಘಟನಾವಳಿ ಸಮುದಾಯಕ್ಕೆ ಮಾಡಿದ ಅವಮಾನ," ಎಂದು ಚಿರಾಗ್ ವಿಶ್ಲೇಷಿಸಿದ್ದಾರೆ.

ಚಿರಾಗ್ ಪಟೇಲ್ ರನ್ನು ಕಳೆದ ವರ್ಷ ಪಾಟೀದಾರ್ ಅನಾಮತ್ ಆಂದೋಲನ್ ಸಮಿತಿಯಿಂದ ಉಚ್ಛಾಟನೆ ಮಾಡಲಾಗಿತ್ತು. ಈ ಹಿಂದೆ ವರುಣ್ ಪಟೇಲ್ ಮತ್ತು ರೇಷ್ಮಾ ಪಟೇಲ್ ಬಿಜೆಪಿ ಸೇರಿದ್ದನ್ನು ಇಲ್ಲಿ ಸ್ಮರಿಸಬಹುದು.

English summary
Patidar quota stir spearhead Hardik Patel's former close aide Chirag Patel, who is facing sedition charges along with Hardik, today joined the ruling BJP in the presence of Gujarat Deputy Chief Minister Nitin Patel.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X