ನೆರೆ ರಾಜ್ಯದಲ್ಲಿ ಬಿಜೆಪಿ ಕಾರ್ಯಕರ್ತರ ಮೇಲೆ ದೌರ್ಜನ್ಯ: ಡಿವಿಎಸ್ ನೇತೃತ್ವದಲ್ಲಿ ಸಮಿತಿ ರಚನೆ
ಬೆಂಗಳೂರು, ಅಕ್ಟೋಬರ್ 22: ನೆರೆಯ ತಮಿಳುನಾಡು ರಾಜ್ಯದಲ್ಲಿ ಬಿಜೆಪಿ ಪಕ್ಷದ ಕಾರ್ಯಕರ್ತರಿಗೆ ಕಿರುಕುಳ ನೀಡಲಾಗುತ್ತಿದೆ ಎಂಬ ಮಾತುಗಳು ಕೇಳಿ ಬಂದಿವೆ. ಈ ಸಂಬಂಧ ಹೈಕಮಾಂಡ್ ನಾಯಕರು ಕರ್ನಾಟಕ ಮಾಜಿ ಸಿಎಂ ಡಿವಿ ಸದಾನಂದಗೌಡ ನೇತೃತ್ವದಲ್ಲಿ ಪ್ರತ್ಯೇಕ ಸಮಿತಿಯೊಂದನ್ನು ರಚನೆ ಮಾಡಿದೆ.
ಹೌದು, ತಮಿಳುನಾಡಿನಲ್ಲಿ ಬಿಜೆಪಿ ಕಾರ್ಯಕರ್ತರ ಮೆಲೆ ಕಿರುಕುಳ ಆರೋಪಳು ಕೇಳಿ ಬಂದಿವೆ. ಈ ಸಂಬಂಧ ವಿಚಾರವನ್ನು ಗಂಭೀರವಾಗಿ ಪರಿಗಣಿಸಿರುವ ಬಿಜೆಪಿ ರಾಷ್ಟ್ರಾಧ್ಯಕ್ಷ ಜೆಪಿ ನಡ್ಡಾ ಅವರು ಮಾಜಿ ಮುಖ್ಯಂತ್ರಿ ಡಿವಿ ಸಂದಾನಂದಗೌಡರ ನೇತೃತ್ವದಲ್ಲಿ ಸಮಿತಿ ರಚಿಸಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅರುಣ್ ಸಿಂಗ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಡಿವಿ ಸದಾನಂದಗೌಡರು ಸೇರಿದಂತೆ ನಾಲ್ಕು ಜನರ ನಿಯೋಗವನ್ನು ತಮಿಳುನಾಡಿಗೆ ಭೇಟಿ ನೀಡಿ ಪರಿಶೀಲಿಸಿ, ತನಿಖೆ ನಡೆಸಿ ಆದಷ್ಟು ಶೀಘ್ರವೇ ವರದಿ ಸಲ್ಲಿಸುವಂತೆ ಜೆಪಿ ನಡ್ಡಾ ಅವರು ಸೂಚಿಸಿದ್ದಾರೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಇನ್ನೂ ಈ ಸಮಿತಿಯಲ್ಲಿ ನಾಲ್ಕು ಮಂದಿಗಳ ವಿವರ ನೋಡುವುದಾದರೆ, ಮುಂಬೈ ಮಹಾನಗರದ ಮಾಜಿ ಪೊಲೀಸ್ ಆಯುಕ್ತ, ಸಂಸದ ಡಾ.ಸತ್ಯಾಪಾಲ್ ಸಿಂಗ್, ಆಂಧ್ರಪ್ರದೇಶದ ಬಿಜೆಪಿ ಅಧ್ಯಕ್ಷೆ ಡಿ. ಪುರಂದರೇಶ್ವರಿ, ಕರ್ನಾಟಕದಿಂದ ಸಂಸದ ಪಿಸಿ ಮೋಹನ್ ಅವರು ಸಮಿತಿಯ ಸದಸ್ಯರಾಗಿದ್ದು, ಡಿವಿ ಸದಾನಂದಗೌಡ ಜತೆಗೆ ತಮಿಳುನಾಡಿಗೆ ತೆರಳು ಮಾಹಿತಿ ಕಲೆ ಹಾಕಿ ವರದಿ ಸಿದ್ಧಪಡಿಸಿ ಕೇಂದ್ರ ಸರ್ಕಾರಕ್ಕೆ ಸಲ್ಲಿಸಲಿದ್ದಾರೆ ಎಂದು ಟಿವಿ ನೈನ್ ವರದಿ ಮಾಡಿದೆ.
ಮುಂಬರಲಿರುವ ಲೋಕಸಭಾ ಚುನಾವಣೆ 2024 ಸಂಬಂಧ ಬಿಜೆಪಿಕಯು ಕರ್ನಾಟಕ ಸ್ಥಳಿಯ ಪಕ್ಷ ಜೆಡಿಎಸ್ ಜೊತೆಗೆ ಮೈತ್ರಿಗೆ ಮುಂದಾಗಿದೆ. ಇದರ ವಿರುದ್ಧ ಬಹಿರಂಗವಾಗಿಯೇ ಮಾಜಿ ಸಿಎಂ ಡಿವಿ ಸದಾನಂದಗೌಡರು ಅಸಮಾಧಾನ ಹೊರ ಹಾಕಿದ್ದರು. ಇದೀಗ ಅವರಿಗೆ ದೆಹಲಿ ಹೈಕಮಾಂಡ್ ಬುಲಾವ್ ನೀಡಿದೆ. ಅಕ್ಟೋಬರ್ 25ರಂದು ದೆಹಲಿ ಬರುವಂತೆ ಆಹ್ವಾನಿಸಿದೆ. ಈ ಮಧ್ಯೆ ಪ್ರತ್ಯೇಕ ಸಮಿತಿ ರಚನೆ ಮಾಡಿ ಅವರನ್ನು ತಮಿಳುನಾಡಿಗೆ ತೆರಳಲು ಸೂಚಿಸಲಾಗಿದೆ.












Click it and Unblock the Notifications