ಶಿಕ್ಷಕರ ಕಿರುಕುಳ ತಾಳಲಾರದೆ ಕೇರಳದಲ್ಲಿ ವಿದ್ಯಾರ್ಥಿ ಆತ್ಮಹತ್ಯೆ
ಶಿಕ್ಷಕರ ನಿರಂತರ ಕಿರುಕುಳ ತಾಳಲಾರದೆ 15 ವರ್ಷದ ವಿದ್ಯಾರ್ಥಿನಿಯೋರ್ವಳು ಆತ್ಮಹತ್ಯೆ ಮಾಡಿಕೊಂಡ ಘಟನೆ ಕೇರಳದ ಕೊಲ್ಲಂ ಜಿಲ್ಲೆಯಲ್ಲಿ ನಡೆದಿದೆ. ಇಲ್ಲಿನ ಟ್ರಿನಿಟಿ ಲೈಸಿಯಂ ಶಾಲೆಯಲ್ಲಿ 10ನೇ ತರಗತಿ ಓದುತ್ತಿದ್ದ ಯುವತಿಗೆ ಇತ್ತೀಚೆಗೆ ಶಿಕ್ಷಕರು
ಕೊಲ್ಲಂ, ಅಕ್ಟೋಬರ್ 23: ಶಿಕ್ಷಕರ ನಿರಂತರ ಕಿರುಕುಳ ತಾಳಲಾರದೆ 15 ವರ್ಷದ ವಿದ್ಯಾರ್ಥಿನಿಯೋರ್ವಳು ಆತ್ಮಹತ್ಯೆ ಮಾಡಿಕೊಂಡ ಘಟನೆ ಕೇರಳದ ಕೊಲ್ಲಂ ಜಿಲ್ಲೆಯಲ್ಲಿ ನಡೆದಿದೆ.
ಇಲ್ಲಿನ ಟ್ರಿನಿಟಿ ಲೈಸಿಯಂ ಶಾಲೆಯಲ್ಲಿ 10ನೇ ತರಗತಿ ಓದುತ್ತಿದ್ದ ಯುವತಿಗೆ ಇತ್ತೀಚೆಗೆ ಶಿಕ್ಷಕರು ನಿಂದಿಸಿದ್ದರು. ಆ ಸಂದರ್ಭದಲ್ಲಿ ಆಕೆಯ ಕ್ಲಾಸಿನಲ್ಲೇ ಓದುತ್ತಿದ್ದ ಆಕೆಯ ಸಹೋದರಿ ಶಿಕ್ಷಕರ ಜೊತೆ ಜಗಳವಾಡಿದ್ದಳು. ತದನಂತರ ಹುಡುಗರೊಂದಿಗೆ ಕೂರುವಂತೆ ಆಕೆಗೆ ಶಿಕ್ಷೆ ನೀಡಲಾಗಿತ್ತು. ಇದರಿಂದ ಕ್ಲಾಸಿನ ಇತರ ಸಹಪಾಠಿಗಳು ಈ ಸಹೋದರಿಯರನ್ನು ಅಣುಕಿಸುತ್ತಿದ್ದರು. ಇದರಿಂದ ನೊಂದ ಸಹೋದರಿಯರು ತಂದೆ-ತಾಯಿಯರಿಗೆ ವಿಷಯ ತಿಳಿಸಿದ್ದರು.

ನಂತರ ಪಾಲಕರೇ ಶಾಲೆಗೆ ಬಂದು ಈ ಕುರಿತು ಮಾತನಾಡಿದ್ದಲ್ಲದೆ, ಶಿಕ್ಷಕಿಯರು ಯಾವುದೇ ಕಾರಣಕ್ಕೂ ಮಕ್ಕಳಿಗೆ ಕಿರುಕುಳ ನೀಡುವಂತಿಲ್ಲ ಎಂದು ಶಾಲೆಯ ಆಡಳಿತ ಮಂಡಳಿ ತಾಕೀತು ಮಾಡಿತ್ತು. ಆದರೂ ಸುಮ್ಮನಾಗದ ಶಿಕ್ಷಕಿ ಸಹೋದರಿಯರಿಗೆ ನಿರಂತರವಾಗಿ ಕಿರುಕುಳ ನೀಡುತ್ತಿದ್ದರು.
Kerala: A 15-yr-old girl succumbed to her injuries after jumping off 3rd floor of her school in Kollam
— ANI (@ANI) October 23, 2017
ಇದರಿಂದ ನೊಂದ ಓರ್ವ ಹುಡುಗಿ ಶಾಲೆಯ ಮೂರನೇ ಮಹಡಿಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ರೊಚ್ಚಿಗೆದ್ದ ಪಾಲಕರು ಪೊಲೀಸರಿಗೆ ದೂರು ನೀಡಿದ್ದು, ಮಗಳ ಸಾವಿಗೆ ಶಿಕ್ಷಕಿಯೇ ಕಾರಣ ಎಂದು ದೂರಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.












Click it and Unblock the Notifications