• search

ಅತ್ಯಾಚಾರಿಗಳನ್ನು ಗಲ್ಲಿಗೇರಿಸಿ : ಭೋಪಾಲ್ ಅತ್ಯಾಚಾರ ಸಂತ್ರಸ್ತೆ

By Prasad
Subscribe to Oneindia Kannada
For Quick Alerts
ALLOW NOTIFICATIONS
For Daily Alerts

  ಭೋಪಾಲ್, ನವೆಂಬರ್ 05 : "ಅತ್ಯಾಚಾರಿಗಳನ್ನು ಯಾವುದೇ ಕಾರಣಕ್ಕೂ ಸುಮ್ಮನೆ ಬಿಡಬಾರದು. ಅವರನ್ನು ಬೀದಿಯಲ್ಲಿ ಸಾರ್ವಜನಿಕರೆದಿರುವ ಗಲ್ಲಿಗೇರಿಸಬೇಕು" ಎಂದು 19 ವರ್ಷದ ಅತ್ಯಾಚಾರ ಸಂತ್ರಸ್ತೆ ಆಕ್ರೋಶ ವ್ಯಕ್ತಪಡಿಸಿದ್ದಾಳೆ.

  ಭೋಪಾಲ್ ಅತ್ಯಾಚಾರ ಅಪರಾಧಿಗಳಿಗೆ ಅತ್ಯುಗ್ರ ಶಿಕ್ಷೆ: ಚೌಹಾಣ್ ಭರವಸೆ

  ಯುಪಿಎಸ್‌ಸಿ ಪರೀಕ್ಷೆಗೆ ತರಬೇತಿ ಪಡೆಯುತ್ತಿದ್ದ ಯುವತಿಯ ಕೈಕಾಲು ಕಟ್ಟಿಹಾಕಿ, ಆಕೆಯನ್ನು ವಿವಸ್ತ್ರಗೊಳಿಸಿ, ಸೇತುವೆಯ ಕೆಳಗಡೆಯಲ್ಲಿ ನಾಲ್ವರು ಕಾಮುಕರು ಸತತ ಮೂರು ಗಂಟೆಗಳ ಕಾಲ ಸಾಮೂಹಿಕ ಅತ್ಯಾಚಾರವೆಸಗಿದ್ದರು.

  ಮಧ್ಯಪ್ರದೇಶ ಅಮೆರಿಕ, ಯುನೈಟೆಡ್ ಕಿಂಗಡಂಗಿಂತ ಉತ್ತಮವಾಗಿದೆ ಎಂದು ಜಂಬ ಕೊಚ್ಚಿಕೊಳ್ಳುತ್ತಿರುವ ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರಿಗೆ ಈ ಪ್ರಕರಣ ಭಾರೀ ಸವಾಲಿನದಾಗಿ ಪರಿಣಮಿಸಿದೆ ಮತ್ತು ಸಾಕಷ್ಟು ಮುಖಭಂಗ ಉಂಟು ಮಾಡಿದೆ.

  Hang the rapists on street : Bhopal gang rape victim urges

  ಈ ಘಟನೆಯ ಬಗ್ಗೆ ಮತ್ತಷ್ಟು ವಿವರ ಕೊಟ್ಟಿರುವ ಯುವತಿ, ಪೊಲೀಸರ ವರ್ತನೆ ತುಂಬಾ ಕೆಟ್ಟದಾಗಿತ್ತು. ನಾವು ದೂರು ನೀಡಲು ಒಂದು ಪೊಲೀಸ್ ಠಾಣೆಯಿಂದ ಮತ್ತೊಂದಕ್ಕೆ ಅಲೆದೆವು. ಹಬೀಬ್‌ಗಂಜ್ ಸಬ್ ಇನ್‍ಸ್ಪೆಕ್ಟರ್ ಹೊರತಾಗಿ ಯಾರೂ ಸಹಕರಿಸಲಿಲ್ಲ ಎಂದು ಅಳಲು ತೋಡಿಕೊಂಡಿದ್ದಾರೆ.

  ಅಂದು ಆಗಿದ್ದೇನು? : ಭೋಪಾಲ್ ನಲ್ಲಿ ಯುಪಿಎಸ್ಸಿ ತರಬೇತಿ ಮುಗಿಸಿಕೊಂಡು ಸಂಜೆ 7 ಗಂಟೆಯ ಸಮಯದಲ್ಲಿ ಮನೆಗೆ ತೆರಳುತ್ತಿದ್ದಾಗ ನಾಲ್ವರು ಆಕೆಯನ್ನು ಎತ್ತಿಹಾಕಿಕೊಂಡು ಸೇತುವೆ ಕೆಳಗಡೆಯಲ್ಲಿ ಒಬ್ಬರಾದನಂತರ ಮತ್ತೊಬ್ಬರು ಆಕೆಯ ಮೇಲೆ ಎರಗಿದ್ದರು.

  ಯುಪಿಎಸ್ಸಿ ಪರೀಕ್ಷೆ ಬರೆಯಲು ಹೊರಟ ತರುಣಿ ಮೇಲೆ ಸಾಮೂಹಿಕ ಅತ್ಯಾಚಾರ

  ಯುವತಿಯ ಪೋಷಕರು ಪೊಲೀಸ್ ಇಲಾಖೆಯಲ್ಲಿದ್ದರೂ ಅತ್ಯಾಚಾರದ ಬಗ್ಗೆ ದೂರು ನೀಡಲು ಹೋದಾಗ, 'ನೀನು ಸಿನೆಮಾ ಕಥೆ ಹೇಳುತ್ತಿದ್ದೀಯಾ' ಎಂದು ಹೇಷವರದಿಂದ ನಕ್ಕಿದ್ದ ಪೊಲೀಸರು ಆಕೆ ಕೊಟ್ಟ ದೂರು ಸ್ವೀಕರಿಸಿರಲಿಲ್ಲ.

  ಕೊನೆಗೆ, ಆಕೆಯೇ ಧೈರ್ಯ ಮಾಡಿ ಇಬ್ಬರನ್ನು ಹಿಡಿದುಕೊಡುವಲ್ಲಿ ಯಶಸ್ವಿಯಾಗಿದ್ದಾಳೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೆ ಮೂವರನ್ನು ಬಂಧಿಸಲಾಗಿದ್ದು, ಮತ್ತೋರ್ವ ತಲೆಮರೆಸಿಕೊಂಡಿದ್ದಾನೆ.

  ಅತ್ಯಾಚಾರಿಗಳಿಗೆ ಅತ್ಯುಗ್ರ ಶಿಕ್ಷೆ ನೀಡುವುದಾಗಿ ಮುಖ್ಯಮಂತ್ರಿ ಚೌಹಾಣ್ ಅವರು ಕೂಡ ವಾಗ್ದಾನ ನೀಡಿದ್ದಾರೆ. ಯುವತಿ ದೂರು ನೀಡಲು ಹೋದರೂ ದೂರು ಸ್ವೀಕರಿಸಿದ ಸಬ್ ಇನ್‌ಸ್ಪೆಕ್ಟರ್ ಗಳನ್ನು ಅಮಾನತು ಮಾಡಲಾಗಿದೆ.

  ಆದರೆ, ಈ ಪ್ರಕರಣಕ್ಕೆ ಸಾರ್ವಜನಿಕರ ವಲಯದಲ್ಲಿ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ. ಅತ್ಯಾಚಾರಿಗಳು ಬಂಧಿತರಾದರೇನಂತೆ, ಅವರಿಗೆ ಬೇಗನೆ ಜಾಮೀನು ಸಿಗುತ್ತಿದೆ. ಮೊದಲಿಗೆ ನಮ್ಮ ಕಾನೂನು ಬದಲಾಗಬೇಕು, ಅತ್ಯಾಚಾರಿಗಳನ್ನು ಗಲ್ಲಿಯಲ್ಲಿ ನಿಲ್ಲಿಸಿ ಗಲ್ಲಿಗೆ ಹಾಕಬೇಕು ಎಂದು ಜನರು ಕಿಡಿ ಕಾರುತ್ತಿದ್ದಾರೆ.

  ಅತ್ಯಾಚಾರಿಗಳ ಮುಖವನ್ನೇಕೆ ಮುಚ್ಚುತ್ತೀರಿ? ಅವರ ಹೊಸಲು ಮುಖವನ್ನು ಬಹಿರಂಗಪಡಿಸಿ. ಅವರು ಯಾರೆಂದು ತಿಳಿಯಲು ನಮಗೆ ಸಂಪೂರ್ಣ ಅಧಿಕಾರವಿದೆ. ಅವರನ್ನು ಬಹಿರಂಗವಾಗಿ ನಿಲ್ಲಿಸಿ ಅವರನ್ನು ಅವಮಾನಿಸಿದರೆ ಇಂಥ ಹೀನ ಕೃತ್ಯಗಳು ನಿಲ್ಲುತ್ತವೆ ಎಂದು ಮತ್ತೊಬ್ಬರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

  ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

  English summary
  Such people (culprits) should not be left alive. They should be hanged on the streets: Bhopal gang-rape victim. Public is expressing anger of repeated incidents like gang rapes on women in India. A 19-year-old was gang raped by 4 people under the bridge.

  Oneindia ಬ್ರೇಕಿಂಗ್ ನ್ಯೂಸ್,
  ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more