ಪೈಲಟ್‌ಗಳ ತರಬೇತಿ, ಆಗಸಗಳ ರಕ್ಷಣೆ, ಸಿಬ್ಬಂದಿ ಸಾಗಾಟಗಳಿಗೆ ಎಚ್ಎಎಲ್ ಪರಿಹಾರ!

ಪೈಲಟ್ ಗಳ ತರಬೇತಿ, ಆಗಸಗಳ ರಕ್ಷಣೆ, ಸಿಬ್ಬಂದಿ ಸಾಗಾಟಗಳಿಗೆ ಎಚ್ಎಎಲ್ ಪರಿಹಾರ ಈ ಬಗ್ಗೆ ಲೇಖಕರು ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕರಾದ ಗಿರೀಶ್ ಲಿಂಗಣ್ಣ ಅವರ ಬರಹ ಇಲ್ಲಿದೆ.

ಪ್ರತಿಯೊಬ್ಬ ಯುದ್ಧ ವಿಮಾನದ ಪೈಲಟ್‌ನ ಪ್ರಯಾಣವೂ ಯುದ್ಧ ವಿಮಾನದ ಗರ್ಜನೆಯಿಂದ ಬಲು ದೂರದಲ್ಲೇ ಆರಂಭಗೊಳ್ಳುತ್ತದೆ. ಅದು ಒಂದು ಕಠಿಣವಲ್ಲದ ಪ್ರೊಪೆಲ್ಲರ್ ವಿಮಾನದಿಂದ ಆರಂಭಗೊಳ್ಳುತ್ತದೆ. ಅಲ್ಲಿ ಅತ್ಯಂತ ಆತಂಕದ ಭಾವವನ್ನು ಹೊಂದಿರುವ ಅಭ್ಯರ್ಥಿಗೆ ಆತನ ತರಬೇತುದಾರ ಆರಂಭಿಕ ಟೇಕಾಫ್ ಮತ್ತು ಲ್ಯಾಂಡಿಂಗ್‌ಗಳನ್ನು, ಇನ್ಸ್ಟ್ರುಮೆಂಟ್ ಹಾರಾಟ, ಮತ್ತು ವಿಮಾನ ಅನಿರೀಕ್ಷಿತವಾಗಿ ಗಾಳಿಯಲ್ಲಿ ಉರುಳಿದಾಗ ಅದನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳುವುದನ್ನು ಕಲಿಸುತ್ತಾನೆ. ಹಲವಾರು ವರ್ಷಗಳ ಕಾಲ, ಭಾರತ ತನ್ನ ವಾಯುಸೇನಾ ಕೆಡೆಟ್‍ಗಳಿಗೆ ಈ ಪಾಠವನ್ನು ಅಗ್ಗದ ಸ್ವಿಸ್ ಪೈಲೇಟಸ್ ಪಿಸಿ-7 ಎಂಕೆ 2 ವಿಮಾನದ ಮೂಲಕ ಕಲಿಸುತ್ತಿತ್ತು. ಆದರೆ, ಈಗ ಅದು ಬದಲಾವಣೆ ಹೊಂದುತ್ತಿದೆ.

HAL Big Push HTT-40 Tejas Trainer and Dhruv NG to Strengthen Pilot Training and Civil Aviation

ಸೆಪ್ಟೆಂಬರ್ 18, 2026ರಂದು, ಸಂಜೆ 5ರಿಂದ 6 ಗಂಟೆಯ ನಡುವೆ, ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (ಎಚ್ಎಎಲ್) ಮೂರು ದೇಶೀಯ ನಿರ್ಮಾಣದ ವಿಮಾನಗಳನ್ನು ಬೆಂಗಳೂರಿನ ವಿಮಾನಪುರದಲ್ಲಿರುವ ತನ್ನ ಏರ್‌ಕ್ರಾಫ್ಟ್ ವಿಭಾಗದಲ್ಲಿ (ಎಚ್ಎಎಲ್ ವಿಮಾನ ನಿಲ್ದಾಣ ಆವರಣದ 20ನೇ ಗೇಟ್ ಒಳಗೆ) ಹಸ್ತಾಂತರಿಸಲಿದೆ. ರಕ್ಷಣಾ ಸಚಿವ ರಾಜನಾಥ್ ಸಿಂಗ್, ನಾಗರಿಕ ವಿಮಾನಯಾನ ಸಚಿವ ಕೆ ರಾಮ ಮೋಹನ್ ನಾಯ್ಡು ಅವರು ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ.

ಈ ವಿಮಾನಗಳು ಪೈಲಟ್‌ನ ಪ್ರಾಥಮಿಕ ಪಾಠಗಳು, ಯುದ್ಧ ವಿಮಾನ ಚಾಲನೆಗೆ ಬೇಕಾದ ಸಿದ್ಧತೆಗಳು, ತೈಲ ಬಾವಿಗಳಿಗೆ ಬೇಕಾದ ನಾಗರಿಕ ಹೆಲಿಕಾಪ್ಟರ್‌ಗಳು, ವಾಯು ಆಂಬ್ಯುಲೆನ್ಸ್ ಮತ್ತು ಪ್ರಯಾಣಿಕ ಸೇವೆಗಳನ್ನು ಒದಗಿಸಲಿವೆ. ಭಾರತ ಯುದ್ಧ ವಿಮಾನಗಳು ಮತ್ತು ಹೆಲಿಕಾಪ್ಟರ್‌ಗಳನ್ನು ವಿನ್ಯಾಸಗೊಳಿಸುವ ಸಾಮರ್ಥ್ಯ ಹೊಂದಿತ್ತಾದರೂ, ತರಬೇತಿ ವಿಮಾನಗಳು ಮತ್ತು ನಾಗರಿಕ ಬಳಕೆಯ ಹೆಲಿಕಾಪ್ಟರ್‌ಗಳನ್ನು ಆಮದು ಮಾಡಿಕೊಳ್ಳುತ್ತಿತ್ತು. ಆದರೆ, ಈಗ ಆ ಅಂತರ ಕಡಿಮೆಯಾಗುತ್ತಿದೆ.

ಹಿಂದೂಸ್ತಾನ್ ಟರ್ಬೋ ಟ್ರೈನರ್ - 40 (ಎಚ್‌ಟಿಟಿ-40) ವಿಮಾನ ಈ ಆರಂಭಿಕ ಹಾರಾಟ ತರಬೇತಿಯ ಕೊರತೆಗೆ ಭಾರತದ ಸ್ವಂತ ಉತ್ತರವಾಗಿದೆ. ಮೊದಲ ಮೂರು ವಿಮಾನಗಳ ಪೈಕಿ, ಎರಡು ವಿಮಾನಗಳು ಬೆಂಗಳೂರಿನಿಂದ ಬಂದಿದ್ದು, ಇನ್ನೊಂದು ವಿಮಾನ ನಾಶಿಕ್‌ನಿಂದ ಬಂದಿದೆ. ಈ ಮೂರು ವಿಮಾನಗಳು ಮಾರ್ಚ್ 2023ರಲ್ಲಿ 6,838 ಕೋಟಿ ರೂಪಾಯಿ ಮೌಲ್ಯದಲ್ಲಿ ನೀಡಿರುವ 70 ವಿಮಾನಗಳ ಒಪ್ಪಂದದ ಭಾಗವಾಗಿವೆ. ಇದರ ಎರಡು ಆಸನಗಳು ಒಂದರ ಹಿಂದೆ ಒಂದರಂತೆ (ಟಾಂಡಮ್ ಸೀಟಿಂಗ್) ಅಳವಡಿಕೆಯಾಗಿದ್ದು, ಇದು ಸಂಪೂರ್ಣವಾಗಿ ಏರೋಬ್ಯಾಟಿಕ್ ಆಗಿದೆ.

ಅದರ ಹವಾನಿಯಂತ್ರಿತ ಗಾಜಿನ ಕಾಕ್‌ಪಿಟ್ ಹಳೆಯ ಡಯಲ್ ರೀತಿಯ ವ್ಯವಸ್ಥೆಗಳ ಬದಲು ಸಂಪೂರ್ಣ ಡಿಜಿಟಲ್ ಪರದೆಗಳನ್ನು ಹೊಂದಿದ್ದು, ಬಹುತೇಕ ಆಧುನಿಕ ಕಾರಿನ ಡ್ಯಾಶ್‌ಬೋರ್ಡ್ ರೀತಿಯಲ್ಲಿವೆ. ಇದು ಮಾರ್ಟಿನ್ - ಬೇಕರ್ 'ಜೀರೋ - ಜೀರೋ' ಇಜೆಕ್ಷನ್ ಸೀಟುಗಳನ್ನು ಹೊಂದಿದ್ದು, ಶೂನ್ಯ ಎತ್ತರ ಮತ್ತು ಶೂನ್ಯ ವೇಗದಲ್ಲಿ ಇಬ್ಬರು ಪ್ರಯಾಣಿಕರನ್ನು ರಕ್ಷಿಸಬಲ್ಲದು. ಇದು ಹೊಂದಿರುವ ಹನಿವೆಲ್ ಟಿಪಿಇ331-12ಬಿ ಟರ್ಬೋಪ್ರಾಪ್ ಎನ್ನುವುದು ಟರ್ಬೈನ್ ಇಂಜಿನ್ ಆಗಿದ್ದು, ಇದು ಪ್ರೊಪೆಲ್ಲರ್ ತಿರುಗಿಸಿ, ವಿಮಾನಕ್ಕೆ ಪ್ರತಿ ಗಂಟೆಗೆ 450 ಕಿಲೋಮೀಟರ್‌ಗಳ ಗರಿಷ್ಠ ವೇಗ ಮತ್ತು ಬಹುತೇಕ 1,000 ಕಿಲೋಮೀಟರ್ ವ್ಯಾಪ್ತಿಯನ್ನು ಒದಗಿಸುತ್ತದೆ. ವಿಮಾನ ಬಹುತೇಕ 6,000 ಮೀಟರ್‌ಗಳಷ್ಟು ಎತ್ತರಕ್ಕೆ ಹಾರಾಟ ನಡೆಸಬಲ್ಲದು.

ಹಾಗೆಂದು ವಿಮಾನ ನಿರ್ಮಾಣದ ಹಾದಿಯೇನೂ ಸುಗಮವಾಗಿರಲಿಲ್ಲ. ಇಂಜಿನ್ ಕೊರತೆಗಳ ಕಾರಣದಿಂದ ವಿಮಾನದ ಪೂರೈಕೆ ಉದ್ದೇಶಿತ 2025-26ರ ಗುರಿಯನ್ನು ಮೀರುವಂತಾಯಿತು. ಹನಿವೆಲ್ ಇಂಜಿನ್ ಪೂರೈಕೆಯನ್ನು 2026ರಲ್ಲಿ ಆರಂಭಿಸಿತು. ಎಚ್ಎಎಲ್ ಹೊಂದಿರುವ ಎರಡು ಉತ್ಪಾದನಾ ಕೇಂದ್ರಗಳು ಈಗ ಜಂಟಿಯಾಗಿ ವರ್ಷಕ್ಕೆ ಅಂದಾಜು 20 ವಿಮಾನಗಳನ್ನು ಉತ್ಪಾದಿಸಬಲ್ಲವು. ವಿಮಾನ ಇಂದು ಬಹುತೇಕ 56% ಭಾರತೀಯ ಬಿಡಿಭಾಗಗಳನ್ನು ಹೊಂದಿದ್ದು, ಇದು 60% ಗುರಿ ದಾಟಿಸುವ ಉದ್ದೇಶವಿದೆ. ತನ್ನ ಪೈಲಟ್‌ಗಳಿಗೆ ತರಬೇತಿ ನೀಡಲಾಗದ ಒಂದು ದೇಶ ತನ್ನ ವಾಯುಪಡೆಯನ್ನು ಅಭಿವೃದ್ಧಿ ಪಡಿಸಲು ಸಾಧ್ಯವಿಲ್ಲ.‌

ಇದಾದ ಬಳಿಕ, ಎಲ್‌ಸಿಎ ಎಫ್ಒಸಿ ತರಬೇತಿ ವಿಮಾನವಿದ್ದು, ಇದು ಎರಡು ಆಸನಗಳ ತೇಜಸ್ ಎಂಕೆ-1 ಆಗಿದೆ. ಇದು ಫೈನಲ್ ಆಪರೇಷನಲ್ ಕ್ಲಿಯರೆನ್ಸ್, ಅಂದರೆ ಯುದ್ಧ ಗುಣಮಟ್ಟಕ್ಕೆ ಎಲ್ಲ ಅನುಮೋದನೆಗಳನ್ನು ಹೊಂದಿದೆ. ಈ ವಿಮಾನದಲ್ಲಿ ಕೆಡೆಟ್ ಮುಂಭಾಗದಲ್ಲಿ ಕುಳಿತರೆ, ತರಬೇತುದಾರ ಹಿಂದಿನ ಆಸನದಲ್ಲಿ, ಒಂದು ಉದ್ದನೆಯ ಕ್ಯಾನಪಿಯ ಕೆಳಗೆ ಕುಳಿತಿರುತ್ತಾನೆ. ಅವರು ಇದರಲ್ಲಿ ಒಂಟಿ ಆಸನದ ಯುದ್ಧ ವಿಮಾನದಲ್ಲಿ ನಡೆಸುವ ರೀತಿಯಲ್ಲೇ ಯುದ್ಧ ಹಾರಾಟಗಳನ್ನು ನಡೆಸುತ್ತಾರೆ.

ಈ ಅವಳಿ ಆಸನಗಳ ಯುದ್ಧ ವಿಮಾನಗಳು ಮೊದಲ 40 ತೇಜಸ್ ವಿಮಾನಗಳ ಆದೇಶವನ್ನು ಪೂರ್ಣಗೊಳಿಸಲಿವೆ. ಒಂಟಿ ಆಸನಗಳ ಯುದ್ಧ ವಿಮಾನಗಳನ್ನು ಮೊದಲು ನಿರ್ಮಿಸಿದ್ದರಿಂದ, ತರಬೇತಿ ವಿಮಾನಗಳ ನಿರ್ಮಾಣಕ್ಕೆ ಹೆಚ್ಚು ಸಮಯ ಕಾಯಬೇಕಾಯಿತು. ಭಾರತೀಯ ವಾಯುಸೇನೆ ತನ್ನ ತೇಜಸ್ ಯುದ್ಧ ವಿಮಾನಗಳ ಬಳಗವನ್ನು ವಿಸ್ತರಿಸುವುದರ ಭಾಗವಾಗಿ ಅವು ಆಗಮಿಸಲಿವೆ. ವಾಯು ಸೇನೆ 83 ಎಂಕೆ-1ಎ ಯುದ್ಧ ವಿಮಾನಗಳನ್ನು ಹೊಂದಿದ್ದು, ಬಳಿಕ ಇನ್ನೂ 97 ವಿಮಾನಗಳನ್ನು ಹೊಂದಲಿದೆ. ಇವುಗಳಲ್ಲಿ ಬಹಳಷ್ಟು ಅವಳಿ ಆಸನಗಳ ವಿಮಾನಗಳಾಗಿವೆ. ಇನ್ನು ನಾಶಿಕ್‌ನಲ್ಲಿನ ಮೂರನೇ ಉತ್ಪಾದನಾ ಕೇಂದ್ರ ವಾರ್ಷಿಕ ತೇಜಸ್ ಉತ್ಪಾದನೆಯನ್ನು ಇನ್ನಷ್ಟು ಹೆಚ್ಚಿಸಲಿದೆ.

ಎಚ್ಎಎಲ್‌ನ ಅಡ್ವಾನ್ಸ್ಡ್ ಲೈಟ್ ಹೆಲಿಕಾಪ್ಟರ್‌ನ ಮುಂದಿನ ತಲೆಮಾರಿನ ನಾಗರಿಕ ಬಳಕೆಯ ಆವೃತ್ತಿಯಾದ ಧ್ರುವ್ ಎನ್‌ಜಿ ಅದೇ ಕಾರ್ಖಾನೆಯ ಸಾಮರ್ಥ್ಯವನ್ನು ದೈನಂದಿನ ಜೀವನದಲ್ಲಿ ಬಳಕೆಗೆ ತರಲಿದೆ. ಸಚಿವ ರಾಮ ಮೋಹನ್ ನಾಯ್ಡು ಅವರು ಹೆಲಿಕಾಪ್ಟರ್‌ನ ಮೊದಲ ಹಾರಾಟಕ್ಕೆ ಡಿಸೆಂಬರ್ 30, 2025ರಂದು ಬೆಂಗಳೂರಿನಲ್ಲಿ ಚಾಲನೆ ನೀಡಿದ್ದರು.

ಈ ವಾರ ಹೆಲಿಕಾಪ್ಟರ್ ಪ್ರದರ್ಶನದಿಂದ ಕೆಲಸದತ್ತ ಸಾಗಲಿದೆ. ಪವನ್ ಹನ್ಸ್ ಸಂಸ್ಥೆಯೂ 1,800 ಕೋಟಿ ರೂಪಾಯಿಗೂ ಹೆಚ್ಚಿನ ಮೊತ್ತದಲ್ಲಿ ಹತ್ತು ಹೆಲಿಕಾಪ್ಟರ್‌ಗಳಿಗೆ ಆದೇಶ ಸಲ್ಲಿಸಿದೆ. ನಾಲ್ಕು ಹೆಲಿಕಾಪ್ಟರ್‌ಗಳು ಈ ವರ್ಷವೇ ಲಭಿಸಲಿದ್ದು, ಇನ್ನುಳಿದ ಹೆಲಿಕಾಪ್ಟರ್‌ಗಳು ಮುಂದಿನ ಹಣಕಾಸು ವರ್ಷದಲ್ಲಿ ಲಭಿಸಲಿವೆ. ಮೊದಲ ಹೆಲಿಕಾಪ್ಟರ್ ಒಎನ್‌ಜಿಸಿ ಸಿಬ್ಬಂದಿಗಳನ್ನು ಸಮುದ್ರದಲ್ಲಿರುವ ತೈಲ ವ್ಯವಸ್ಥೆಗಳಿಗೆ ಕರೆದೊಯ್ಯಲು ಮತ್ತು ಮರಳಿ ಕರೆತರಲು ಬಳಕೆಯಾಗುವ ಸಾಧ್ಯತೆಗಳಿವೆ.

5.5 ಟನ್ ತೂಕದ ಈ ಹೆಲಿಕಾಪ್ಟರ್, ಎರಡು ಭಾರತೀಯ ನಿರ್ಮಾಣದ ಶಕ್ತಿ ಇಂಜಿನ್‌ಗಳನ್ನು ಬಳಸುತ್ತಿದೆ. ಆದ್ದರಿಂದ, ಒಂದು ಇಂಜಿನ್ ವಿಫಲವಾದರೂ, ಹೆಲಿಕಾಪ್ಟರ್ ಹಾರಾಟ ಮುಂದುವರಿಸಬಲ್ಲದು. ಇದು ನಾಗರಿಕ ಬಳಕೆಗೆ ಅನುಮತಿಸಿರುವ ಡಿಜಿಟಲ್ ಕಾಕ್‌ಪಿಟ್ ಹೊಂದಿದ್ದು, ಪತನವನ್ನೂ ತಡೆದುಕೊಳ್ಳಬಲ್ಲ ಆಸನಗಳು ಮತ್ತು ಸಣ್ಣ ಇಂಧನ ಸೋರಿಕೆಗಳನ್ನು ಮುಚ್ಚಬಲ್ಲ ಇಂಧನ ಟ್ಯಾಂಕ್‌ಗಳನ್ನು ಹೊಂದಿದೆ. ಇದು ಪ್ರತಿ ಗಂಟೆಗೆ ಗರಿಷ್ಠ 285 ಕಿಲೋಮೀಟರ್ ವೇಗದಲ್ಲಿ ಸಾಗಬಲ್ಲದಾಗಿದ್ದು, 630 ಕಿಲೋಮೀಟರ್ ಹಾರಾಟ ನಡೆಸಿಯೂ, ಇಂಧನ ಉಳಿಸಿಕೊಳ್ಳಬಲ್ಲದು.

ಇದು ಮೂರು ಗಂಟೆ 40 ನಿಮಿಷಗಳ ಕಾಲ ಸತತವಾಗಿ ಗಾಳಿಯಲ್ಲಿ ಹಾರಾಡಬಲ್ಲದು. ಹೆಲಿಕಾಪ್ಟರ್ ಗರಿಷ್ಠ 6,000 ಮೀಟರ್‌ಗಳಷ್ಟು ಎತ್ತರಕ್ಕೆ ಏರುವ ಸಾಮರ್ಥ್ಯ ಹೊಂದಿದ್ದು, ಇದು ಬಹುತೇಕ ಹಿಮಾಲಯ ಮತ್ತು ಪ್ರಸ್ತಭೂಮಿಯ ಮಾರ್ಗಗಳಿಗೆ ಸಮರ್ಥವಾಗಿದೆ. ಇದರ ಕ್ಯಾಬಿನ್ 4 - 6 ವಿಐಪಿ ಆಸನಗಳು, ಗರಿಷ್ಠ 14 ಪ್ರಯಾಣಿಕ ಆಸನಗಳು, ಅಥವಾ ವೈದ್ಯಕೀಯ ಸಿಬ್ಬಂದಿಯೊಡನೆ 4 ಸ್ಟ್ರೆಚರ್‌ಗಳನ್ನು ಹೊಂದಬಲ್ಲದು. ಈ ಹೆಲಿಕಾಪ್ಟರ್ ಬಹುತೇಕ ಭಾರತೀಯ ಬಿಡಿಭಾಗಗಳಿಂದ ನಿರ್ಮಾಣಗೊಂಡಿದೆ. ಎಚ್ಎಎಲ್ ಈಗ ನಾಗರಿಕ ಬಳಕೆಯಿಂದ ಸಣ್ಣ ಪ್ರಮಾಣದ ಲಾಭಾಂಶ ಹೊಂದಿದ್ದು, ಮುಂದಿನ ಹತ್ತು ವರ್ಷಗಳಲ್ಲಿ ಇದನ್ನು 25% ವಹಿವಾಟಿನ ಪ್ರಮಾಣಕ್ಕೆ ಏರಿಸುವ ಗುರಿಯನ್ನು ಸಂಸ್ಥೆ ಹೊಂದಿದೆ. ಆದ್ದರಿಂದ, ಭಾರತ ಪ್ರತಿಯೊಂದು ವಾಯು ಆಂಬ್ಯುಲೆನ್ಸ್ ಮತ್ತು ಸಮುದ್ರ ಸಂಚಾರದ ಹೆಲಿಕಾಪ್ಟರ್‌ಗಳನ್ನು ಆಮದು ಮಾಡಿಕೊಳ್ಳುವ ಅನಿವಾರ್ಯತೆ ದೂರಾಗಲಿದೆ.

ಈ ಪ್ರಯತ್ನದ ನೇತೃತ್ವವನ್ನು ಎಚ್ಎಎಲ್‌ನ 22ನೇ ಮುಖ್ಯಸ್ಥರು ಮತ್ತು ವ್ಯವಸ್ಥಾಪಕ ನಿರ್ದೇಶಕರಾದ ರವಿ ಕೋಟ ವಹಿಸಿದ್ದಾರೆ. ರವಿ ಮೇ 1, 2026ರಂದು ಡಿ. ಕೆ. ಸುನಿಲ್ ಅವರ ನಿವೃತ್ತಿಯ ಬಳಿಕ ಎಚ್ಎಎಲ್ ಜವಾಬ್ದಾರಿ ಹೊತ್ತುಕೊಂಡಿದ್ದಾರೆ. ರಕ್ಷಣಾ ವಲಯಗಳು ರವಿ ಅವರನ್ನು 'ಎಲ್‌ಸಿಎ ಮ್ಯಾನ್' ಎಂದೇ ಕರೆಯುತ್ತವೆ. ಮಲ್ನಾಡ್ ಕಾಲೇಜ್ ಆಫ್ ಇಂಜಿನಿಯರಿಂಗ್‌ನಿಂದ ಮೆಕಾನಿಕಲ್ ಇಂಜಿನಿಯರಿಂಗ್ ಪದವಿ ಹೊಂದಿರುವ, ಐಐಎಂ ಅಹಮದಾಬಾದ್ ಮತ್ತು ಟೌಲೋಸ್ ಸಂಸ್ಥೆಗಳ ಹಳೆ ವಿದ್ಯಾರ್ಥಿಯೂ ಆದ ರವಿ, ತೇಜಸ್ ವಿಭಾಗದ ನೇತೃತ್ವ ವಹಿಸಿ, ತೇಜಸ್ ಬಳಗ ಸೇನೆಗೆ ಸೇವೆ ಸಲ್ಲಿಸುವಂತೆ ಮಾಡುವಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ.

ರವಿ 180 ತೇಜಸ್ ಯುದ್ಧ ವಿಮಾನಗಳು ಮತ್ತು 156 ಪ್ರಚಂಡ್ ಲಘು ಯುದ್ಧ ವಿಮಾನಗಳ ಗುತ್ತಿಗೆಯಲ್ಲೂ ಕಾರ್ಯಾಚರಿಸಿದ್ದಾರೆ. ನಾವೀನ್ಯತೆ, ಕೃತಕ ಬುದ್ಧಿಮತ್ತೆ (ಎಐ), ಕಾರ್ಯಾಚರಣಾ ಪ್ರಾವೀಣ್ಯತೆ ಮತ್ತು ತನ್ನ ಸಿಬ್ಬಂದಿಗಳ ಮೂಲಕ ಎಚ್ಎಎಲ್ ಅನ್ನು ಜಾಗತಿಕವಾಗಿ ಸ್ಪರ್ಧಿಸಬಲ್ಲ ಸಂಸ್ಥೆಯನ್ನಾಗಿ ರೂಪಿಸುವುದು ರವಿ ಅವರ ಗುರಿ. ಇದು ಆ ಭರವಸೆಯ ಪರೀಕ್ಷೆಯೂ ಆಗಿರಲಿದ್ದು, ಹಳೆಯ ಆದೇಶಗಳನ್ನು ಪೂರ್ಣಗೊಳಿಸಿ, ನಾಗರಿಕ ವ್ಯಾಪಾರಗಳನ್ನು ಆರಂಭಿಸಿ, ಬೆಂಗಳೂರು ಮತ್ತು ನಾಶಿಕ್ ಘಟಕಗಳು ಜೊತೆಯಾಗಿ ಕಾರ್ಯಾಚರಿಸುವಂತೆ ಮಾಡಬೇಕಿದೆ.

ಇಂಜಿನ್ ವಿಳಂಬಗಳು ಮತ್ತು ಸುದೀರ್ಘ ಕಾಯುವಿಕೆಗಳು ಈ ಮಹತ್ವದ ದಿನವನ್ನು ಮಂಕಾಗಿಸಬಾರದು. ಸೆಪ್ಟೆಂಬರ್ 18ರಂದು, ಭಾರತ ತನ್ನ ಪೈಲಟ್‌ಗಳಿಗೆ ತರಬೇತಿ ನೀಡುವ, ಆಗಸಗಳನ್ನು ರಕ್ಷಿಸುವ, ಮತ್ತು ನಾಗರಿಕ ಮಾರ್ಗಗಳಲ್ಲಿ ಸಂಚರಿಸುವ ಯಂತ್ರಗಳನ್ನು ಹಸ್ತಾಂತರಿಸಲಿದೆ.

ಗಿರೀಶ್ ಲಿಂಗಣ್ಣ ಪರಿಚಯ

ಗಿರೀಶ್ ಲಿಂಗಣ್ಣ ಅವರು ವಿಜ್ಞಾನ ಬರಹಗಾರ, ರಕ್ಷಣೆ, ಏರೋಸ್ಪೇಸ್, ಮತ್ತು ರಾಜಕೀಯ ವಿಶ್ಲೇಷಕರಾಗಿದ್ದು, ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಅವರು ಜರ್ಮನಿಯ ಎಡಿಡಿ ಇಂಜಿನಿಯರಿಂಗ್ ಜಿಎಂಬಿಎಚ್ ಸಂಸ್ಥೆಯ ಅಂಗಸಂಸ್ಥೆಯಾದ ಎಡಿಡಿ ಇಂಜಿನಿಯರಿಂಗ್ ಕಾಂಪೊನೆಂಟ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ನಿರ್ದೇಶಕರಾಗಿದ್ದಾರೆ. ಗಿರೀಶ್ ಲಿಂಗಣ್ಣ ಅವರನ್ನು ಸಂಪರ್ಕಿಸಲು ಇಮೇಲ್ ವಿಳಾಸ: [email protected]

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+