ಕಾಲೇಜಿನ ವಿರುದ್ಧ ಕೋರ್ಟ್ ಮೊರೆ ಹೋಗಲಿದ್ದಾರೆ ಹಾದಿಯಾ ತಂದೆ

ಬೆಂಗಳೂರು, ನವೆಂಬರ್ 30 : ಲವ್ ಜಿಹಾದ್ ಪ್ರಕರಣದಲ್ಲಿ ಕಾನೂನು ಹೋರಾಟ ನಡೆಸುತ್ತಿರುವ ಹಾದಿಯಾ ತಂದೆ ಅಶೋಕನ್ ಕಾಲೇಜಿನ ವಿರುದ್ಧ ಸುಪ್ರೀಂಕೋರ್ಟ್ ಮೆಟ್ಟಿಲೇರಲಿದ್ದಾರೆ.

24 ವರ್ಷದ ಹಾದಿಯಾ (ಅಖಿಲಾ) ಸೇಲಂನ ಶಿವರಾಜ್ ಹೋಮಿಯೊಪಥಿ ಮೆಡಿಕಲ್ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದಳು. ಕಾಲೇಜು ನ್ಯಾಯಾಲಯದ ಆದೇಶವನ್ನು ಉಲ್ಲಂಘನೆ ಮಾಡಿದೆ ಎಂದು ಆರೋಪಿಸಿ ಅಶೋಕನ್ ಕೋರ್ಟ್‌ ಮೊರೆ ಹೋಗಲಿದ್ದಾರೆ.

ಮೆಡಿಕಲ್ ಕಾಲೇಜು ಹಾದಿಯಾಗೆ ಪತಿ ಸಫಿನ್ ಜಹಾನ್ ಭೇಟಿ ಮಾಡಲು ಅವಕಾಶ ಮಾಡಿಕೊಟ್ಟು, ನ್ಯಾಯಾಲಯದ ಆದೇಶವನ್ನು ಉಲ್ಲಂಘನೆ ಮಾಡಿದೆ ಎಂದು ಅಶೋಕನ್ ಅರ್ಜಿ ಸಲ್ಲಿಸಲಿದ್ದಾರೆ.

Hadiya’s father to move SC against college

ಕಾಲೇಜಿಗೆ ಅವಳ ಶಿಕ್ಷಣವನ್ನ ಪೂರ್ಣಗೊಳಿಸಲು ಕಳುಹಿಸಿಕೊಡಲಾಗಿತ್ತು. ಅಲ್ಲಿ ಜಹಾನ್ ಭೇಟಿಯಾಗಿದ್ದಾಳೆ. ಕಾಲೇಜಿಗೆ ಮಾಧ್ಯಮದ ವರದಿಗಾರರೂ ಭೇಟಿ ನೀಡಲು ಅವಕಾಶ ನೀಡಿದ್ದು ಸರಿಯಲ್ಲ ಎಂದು ಅರ್ಜಿಯಲ್ಲಿ ತಿಳಿಸಲಿದ್ದಾರೆ.

ಮಾಧ್ಯಮಗಳ ಮುಂದೆ ಹಾದಿಯಾ ನಾನು 8 ತಿಂಗಳ ನಂತರ ಸಫಿನ್ ಜಹಾನ್ ಜೊತೆ ಮಾತುಕತೆ ನಡೆಸಿದ್ದೇನೆ ಎಂದು ಹೇಳಿದ್ದಾಳೆ. ಕಾಲೇಜಿನ ಆಡಳಿತ ಮಂಡಳಿ ಇಬ್ಬರು ಭೇಟಿಯಾಗಲು ಅವಕಾಶ ನೀಡಿತ್ತು ಎಂದು ಹೇಳಿದ್ದಾಳೆ ಇದು ನ್ಯಾಯಾಂಗ ನಿಂದನೆ ಎಂದು ಅರ್ಜಿ ಹಾಕಲಿದ್ದಾರೆ.

ಸಫಿನ್ ಜಹಾನ್ ಕಾಲೇಜಿನ ಆಡಳಿತ ಮಂಡಳಿಗೆ ಮನವಿ ಮಾಡಿದರೆ ಹಾದಿಯಾ ಭೇಟಿಯಾಗಲು ಅವಕಾಶ ನೀಡುವುದಾಗ ಕಾಲೇಜಿನ ಡೀನ್ ಜಿ.ಕಣ್ಣನ್ ಹೇಳಿಕೆ ನೀಡಿದ್ದರು.

ಬಲವಂತದ ಮತಾಂತರ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ಹಾದಿಯಾ ಹೇಳಿಕೆ ದಾಖಲು ಮಾಡಿಕೊಂಡಿದೆ ಮತ್ತು ಆಕೆ ವಿದ್ಯಾಭ್ಯಾಸ ಮುಂದುವರೆಸಲು ಅವಕಾಶ ಮಾಡಿಕೊಟ್ಟಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+