ಮೋಹನ್ ಲಾಲ್ ಫ್ಯಾನ್ಸ್ ನಿಂದ ಕನ್ನಕ್ಕೆ ಪ್ರತಿ ಗುನ್ನ
ತಿರುವನಂತಪುರ, ಅ.9: ದಕ್ಷಿಣ ಭಾರತದ ಜನಪ್ರಿಯ ನಟ ಮೋಹನ್‌ಲಾಲ್ ಅವರ ಅಧಿಕೃತ ವೆಬ್‌ಸೈಟ್ ಮಂಗಳವಾರ ಹ್ಯಾಕ್ ಆಗಿದ್ದ ಸುದ್ದಿ ಗೊತ್ತೇ ಇದೆ. ಯಾರೋ ದುಷ್ಕರ್ಮಿಗಳು ವೆಬ್ ಸೈಟ್ ಹ್ಯಾಕ್ ಮಾಡಿ ಕಾಶ್ಮೀರ ಪ್ರತ್ಯೇಕಾವಾದಿಗಳ ಪರ ಹೇಳಿಕೆಗಳನ್ನು ಹಾಕಿದ್ದರು. ನಂತರ ವೆಬ್ ಸೈಟ್ ಸರಿ ಮಾಡಲಾಗಿತ್ತು. ಅದರೆ, ಇದರಿಂದ ಸಿಟ್ಟಿಗೆದ್ದ ಲಾಲೆಟ್ಟನ ಫ್ಯಾನ್ಸ್ ಲಾಹೋರ್ ವಿವಿಯ ವೆಬ್ ತಾಣಕ್ಕೆ ಕನ್ನ ಹಾಕಿದ ಘಟನೆ ನಡೆದಿದೆ.
ಕಾಶ್ಮೀರದ ಪ್ರತ್ಯೇಕತಾವಾದಿಗಳು ಮೋಹನ್ ಲಾಲ್ ಅವರ ವೆಬ್ ತಾಣಕ್ಕೆ ಅತಿಕ್ರಮ ಪ್ರವೇಶ ಮಾಡಿದ್ದರಿಂದ ಕೋಪಗೊಂಡ ಅವರ ಅಭಿಮಾನಿಗಳ ಗುಂಪೊಂದು ಪಾಕಿಸ್ತಾನದ ರಾಷ್ಟ್ರೀಯ ಅಧುನಿಕ ಭಾಷಾ ವಿಶ್ವ ವಿದ್ಯಾಲಯದ ಅಧಿಕೃತ ವೆಬ್ ತಾಣಕ್ಕೆ ಕನ್ನ ಹಾಕಿದ್ದಾರೆ.
ವೆಬ್ ತಾಣದ ಮುಖಪುಟದಲ್ಲಿ ಮೋಹನ್ ಲಾಲ್ ಭಾವಚಿತ್ರ ಹಾಗೂ ಅವರ ಚಿತ್ರಗಳ ಪೋಸ್ಟರ್ ಗಳನ್ನು ಹಾಕಲಾಗಿದೆ. ಜೊತೆಗೆ ಮಲೆಯಾಳಂ ಭಾಷೆಯಲ್ಲಿ ಏನೋ ಬರೆದಿದ್ದಾರೆ. ಈ ಬಗ್ಗೆ ಲಾಹೋರ್ ವಿವಿಯಿಂದ ಯಾವುದೇ ಪ್ರತಿಕ್ರಿಯೆ ಕಂಡು ಬಂದಿಲ್ಲ.[ಲಾಲ್ ವೆಬ್ ಸೈಟಿಗೆ ಪಾಕಿಗಳ ಕನ್ನ]

ಮಂಗಳವಾರ ತಮ್ಮ ವೆಬ್ ತಾಣವನ್ನು ದುಷ್ಕರ್ಮಿಗಳು ಪ್ರವೇಶಿಸಿದ ಕೂಡಲೇ ಎಚ್ಚೆತ್ತುಕೊಂಡ ಮೋಹನ್ ಲಾಲ್ ಅವರು ಮೊದಲಿಗೆ ವೆಬ್ ತಾಣವನ್ನು ದುರಸ್ಥಿಗೊಳಿಸಿದ್ದರು. ಬುಧವಾರ ಸಮೀಪದ ಪೊಲೀಸ್ ಠಾಣೆಗೆ ತೆರಳಿ ಈ ಬಗ್ಗೆ ದೂರು ದಾಖಲಿಸಿದ್ದರು.ಮೋಹನ್ ಲಾಲ್ ಅವರ ವೆಬ್ ಸೈಟ್ ಹ್ಯಾಕ್ ಆಗಿದ್ದ ಸಂದರ್ಭದಲ್ಲಿ ಹಾಕಲಾಗಿದ್ದ ಸಂದೇಶಗಳ ಆಧಾರದ ಮೇಲೆ ಇದು ಕಾಶ್ಮೀರ ಪ್ರತ್ಯೇಕತಾವಾದಿಗಳ ಕೃತ್ಯ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿತ್ತು. ಅದರೆ, ಈ ಬಗ್ಗೆ ಪೊಲೀಸರು ಸ್ಪಷ್ಟನೆ ನೀಡಿಲ್ಲ.
ಬ್ಲಾಗರ್ ಆಗಿ ಕೂಡಾ ಇತ್ತೀಚೆಗೆ ಗುರುತಿಸಿಕೊಂಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರ ಪರ ಇತ್ತೀಚೆಗೆ ಬ್ಲಾಗ್ ಪೋಸ್ಟ್ ವೊಂದರಲ್ಲಿ ಹೊಗಳಿಕೆ ಮಾತುಗಳನ್ನು ಬರೆದಿದ್ದರು.












Click it and Unblock the Notifications