ಜ್ಞಾನವಾಪಿ ಮಸೀದಿ ಪ್ರಕರಣ: ಇಂದು ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆ

ವಾರಣಾಸಿಯ ಜ್ಞಾನವಾಪಿ ಮಸೀದಿ ಪ್ರಕರಣದ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಇಂದು ನಡೆಸಲಿದೆ. ಅಲಹಾಬಾದ್ ಹೈಕೋರ್ಟ್ ತೀರ್ಪಿನ ವಿರುದ್ಧ ಜ್ಞಾನವಾಪಿ ಮಸೀದಿ ಆಡಳಿತ ಸಮಿತಿ ಅರ್ಜಿ ಸಲ್ಲಿಸಿದ್ದು, ಸುಪ್ರೀಂ ಕೋರ್ಟ್ ಇಂದು ಆ ಅರ್ಜಿಯ ವಿಚಾರಣೆ ನಡೆಸಲಿದೆ.

ಅಲಹಾಬಾದ್ ಹೈಕೋರ್ಟ್ ಜ್ಞಾನವಾಪಿ ಮಸೀದಿಯಲ್ಲಿ ಕಂಡುಬಂದ ವಿಗ್ರಹ ಹಿಂದೂಗಳ ಶಿವಲಿಂಗವೇ ಎಂದು ನಿರ್ಧರಿಸಲು ವೈಜ್ಞಾನಿಕ ಸಮೀಕ್ಷೆಗೆ ಆದೇಶಿಸಿತ್ತು. ವೈಜ್ಞಾನಿಕ ಸಮೀಕ್ಷೆಯು ಮಸೀದಿಯೊಳಗೆ ಶಿವಲಿಂಗವಿದೆ ಎಂದು ಹೇಳಿತ್ತು. ಈ ಆದೇಶದ ವಿರುದ್ಧವಾಗಿ ಜ್ಞಾನವಾಪಿ ಮಸೀದಿ ಆಡಳಿತ ಸಮಿತಿ ಅರ್ಜಿ ಸಲ್ಲಿಸಿದೆ. ಈ ಅರ್ಜಿಯ ವಿಚಾರಣೆ ಇಂದು ಸುಪ್ರೀಂ ಕೋರ್ಟ್‌ನಲ್ಲಿ ನಡೆಯಲಿದೆ. ಮತ್ತೊಂದೆಡೆ ಇದು ಕಾರಂಜಿ ಎಂದು ಮುಸ್ಲಿಂ ಆಡಳಿತ ಸಮಿತಿ ಕಡೆಯವರು ಹೇಳಿಕೊಳ್ಳುತ್ತಾರೆ.

Gyanvapi Mosque Case: Hearing in Supreme Court today

ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಅವರ ಪೀಠವು ಈ ಅರ್ಜಿಯನ್ನು ತಕ್ಷಣವೇ ವಿಚಾರಣೆಗೆ ಒಪ್ಪಿದೆ. ಮುಸ್ಲಿಂ ಪರ ಹಿರಿಯ ವಕೀಲ ಹುಝೆಫಾ ಅಹ್ಮದಿ ನ್ಯಾಯಾಲಯಕ್ಕೆ ಹಾಜರಾಗಲಿದ್ದಾರೆ. ಅಂತಿಮ ತೀರ್ಪಿಗೂ ಮುನ್ನವೇ ಸರ್ವೆ ನಡೆಸುವಂತೆ ಹೈಕೋರ್ಟ್ ಆದೇಶಿಸಿದೆ.

ಏನಿದು ವಾರಣಾಸಿಯ ಜ್ಞಾನವ್ಯಾಪಿ ಮಸೀದಿ ಪ್ರಕರಣ

ಈ ಸ್ಥಳವು ಪ್ರಸ್ತುತ ವರ್ಷಕ್ಕೆ ಒಮ್ಮೆ ಮಾತ್ರ ಪ್ರಾರ್ಥನೆಗೆ ತೆರೆಯುತ್ತದೆ. ಅಲ್ಲಿ ಪ್ರತಿನಿತ್ಯವೂ ಪೂಜೆ ಸಲ್ಲಿಸಲು ಅವಕಾಶ ನೀಡಬೇಕು ಮತ್ತು ಹಳೆಯ ದೇವಸ್ಥಾನ ಸಂಕೀರ್ಣದೊಳಗೆ ಇರುವ ಕಾಣಿಸುವ ಹಾಗೂ ಕಾಣಿಸದ ದೇವತೆಗಳಿಗೆ ಕೂಡ ಪೂಜೆಗೆ ಅನುಮತಿ ಕೊಡಬೇಕು ಎಂದು ಮಹಿಳೆಯರು ಮನವಿ ಮಾಡಿದ್ದರು. ಆದರೆ ಇದು ದೇವಸ್ಥಾನವಲ್ಲಿ ಇದು ಮಸೀದಿ, ಜೊತೆಗೆ ಇಲ್ಲಿ ಯಾವುದೇ ವಿಗ್ರಹಗಳಿಲ್ಲ ಎಂದು ಮುಸ್ಲೀಂರ ವಾದವಾಗಿದೆ.

ಹೀಗಾಗಿ ಈ ವಿಚಾರ ಕೋರ್ಟ್ ಮೆಟ್ಟಿಲೇರಿತ್ತು. ಕೋರ್ಟ್ ಆದೇಶದಂತೆ ಮಸೀದಿ ಒಳಗೆ ಪರಿಶೀಲನೆ ನಡೆಸಲಾಯಿತು. ಜ್ಞಾನವ್ಯಾಪಿ ಮಸೀದಿ ಸಂಕೀರ್ಣದಲ್ಲಿನ ಪಶ್ಚಿಮ ಗೋಡೆಯ ಹಿಂದೆ ಇರುವ ಹಿಂದೂ ದೇಗುಲಕ್ಕೆ ವರ್ಷ ಪೂರ್ತಿ ದರ್ಶನ ಮತ್ತು ಪೂಜೆಯ ಅವಕಾಶ ಕಲ್ಪಿಸಬೇಕು ಎಂದು ಕೋರಿ ಐವರು ಹಿಂದೂ ಮಹಿಳೆಯರು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಪುರಸ್ಕರಿಸಿದ್ದ ಕೋರ್ಟ್, ಅಲ್ಲಿ ತಪಾಸಣೆ ನಡೆಸುವಂತೆ ಆದೇಶಿಸಿತ್ತು.

ತಪಾಸಣೆ ವೇಳೆ ಒಳಗಡೆ ಶಿವಲಿಂಗ ಆಕಾರದಂತಿರುವ ವಸ್ತು ಪತ್ತೆಯಾಗಿದೆ. ಇದನ್ನು ಹಿಂದೂಗಳು ಶಿವಲಿಂಗ ಎಂದು ಕರೆದರೆ ಮುಸ್ಲೀಂಮರು ಕಾರಂಜಿ ಎಂದು ಕರೆದಿದ್ದಾರೆ. ಹೀಗಾಗಿ ಈ ವಿಚಾರ ಇನ್ನೂ ಕೋರ್ಟ್ ಮೆಟ್ಟಿಲಿನಿಂದ ಕೆಳಗೆ ಇಳಿದಿಲ್ಲ.

ಈ ನಡುವೆ ಕಾಶಿ ವಿಶ್ವನಾಥ ದೇವಸ್ಥಾನದ ಪಕ್ಕದಲ್ಲಿರುವ ಜ್ಞಾನವಾಪಿ ಮಸೀದಿ ಒಳಗೆ ತಪಾಸಣೆಗೆ ಆದೇಶ ನೀಡಿರುವ ವಾರಾಣಸಿ ನ್ಯಾಯಾಲಯದ ನ್ಯಾಯಾಧೀಶ ತಮ್ಮ ಸುರಕ್ಷತೆ ಬಗ್ಗೆ ಕುಟುಂಬಕ್ಕೆ ಆತಂಕ ಉಂಟಾಗಿರುವುದಾಗಿ ತಿಳಿಸಿದ್ದಾರೆ. 'ತೀರಾ ಸಾಮಾನ್ಯ ಸಿವಿಲ್ ಪ್ರಕರಣವನ್ನು ಅಸಾಧಾರಣ ವಿಚಾರವನ್ನಾಗಿ ಪರಿವರ್ತಿಸಲಾಗಿದೆ'. ಇದರಿಂದ ತಮ್ಮ ಕುಟುಂಬ ತೀವ್ರ ಚಿಂತೆಗೊಳಗಾಗಿದೆ ಎಂದು ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+