ರಾಮ್ ರಹೀಮ್ ಸಿಂಗ್ ತೀರ್ಪು: ಪಂಜಾಬ್, ಹರ್ಯಾಣದಲ್ಲಿ ಹಿಂಸಾಚಾರಕ್ಕೆ ಹಲವು ಬಲಿ

Subscribe to Oneindia Kannada

ಚಂಡೀಗಢ, ಆಗಸ್ಟ್ 25: ಭಾರೀ ಕುತೂಹಲ ಸೃಷ್ಟಿಸಿರುವ ಲೈಂಗಿಕ ಕಿರುಕುಳ ಪ್ರಕರಣದಲ್ಲಿದೇರಾ ಸಚ್ಚಾ ಸೌದಾದ ಮುಖ್ಯಸ್ಥ ಗುರ್ಮೀತ್ ರಾಮ್ ರಹೀಂ ಸಿಂಗ್ ದೋಷಿ ಎಂದು ಸಿಬಿಐ ವಿಶೇಷ ನ್ಯಾಯಾಲಯ ತೀರ್ಪು ನೀಡಿದೆ

ಆದರೆ ಶಿಕ್ಷೆಯ ಪ್ರಮಾಣವನ್ನು ಪ್ರಕಟಿಸಿಲ್ಲ. ಆಗಸ್ಟ್ 28ರಂದು ಸಿಬಿಐ ವಿಶೇಷ ನ್ಯಾಯಾಲಯದಲ್ಲಿ ರಾಮ್ ರಹೀಮ್ ಸಿಂಗ್ ರಿಗೆ ಶಿಕ್ಷೆಯ ಪ್ರಮಾಣವನ್ನು ಘೋಷಿಸಲಿದೆ.

ರಾಮ್ ರಹೀಮ್ ಸಿಂಗ್ ತೀರ್ಪು ಹಿನ್ನಲೆ, ಚಂಡೀಗಢದಲ್ಲಿ ಭಿಗಿ ಭದ್ರತೆ

ಈ ಹಿನ್ನಲೆಯಲ್ಲಿ ಹರ್ಯಾಣ ಮತ್ತು ಪಂಜಾಬ್ ರಾಜ್ಯಗಳಲ್ಲಿ ಬಿಗಿ ಭದ್ರತೆ ಕೈಗೊಳ್ಳಲಾಗಿದೆ. ಎರಡೂ ರಾಜ್ಯಗಳಲ್ಲಿ ಅಕ್ಷರಶಃ ಬಂದ್ ವಾತಾವರಣ ನಿರ್ಮಾಣವಾಗಿದೆ. ಈ ಪ್ರಕರಣದ ತೀರ್ಪಿನ ಕ್ಷಣ ಕ್ಷಣದ ಮಾಹಿತಿಗಳು ಇಲ್ಲಿವೆ.

ಯುವರಾಜ್ ಸಿಂಗ್ ಆಡಿದ್ದ ಮೈದಾನ ತಾತ್ಕಾಲಿಕ ಜೈಲಾಗುತ್ತಿದೆ

Gurmeet Ram Rahim Singh Verdict Live: Goodman leaves for court

5.10: ಗುರ್ಮಿತ್ ರಾಮ್ ರಹೀಮ್ ಸಿಂಗ್ ಅಭಿಮಾನಿಗಳ ಹಿಂಸಾಚಾರಕ್ಕೆ 70ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ, 5ಕ್ಕೂ ಹೆಚ್ಚು ಜನ ಸಾವನ್ನಪ್ಪಿದ್ದಾರೆ.

5.00: ಹಿಂಸಾಚಾರ ಭುಗಿಲೆದ್ದ ಬೆನ್ನಲ್ಲೇ ಪಂಚಕುಲಾದತ್ತ 6 ಕಾಲಂ ಸೈನಿಕರ ಪಡೆಗಳನ್ನು ರವಾನಿಸಲಾಗಿದೆ. ಪರಿಸ್ಥಿತಿಯ ಬಗ್ಗೆ ಕೇಂದ್ರ ಗೃಹ ಸಚಿವರಿಗೆ ಹರ್ಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಕಟ್ಟರ್ ಎಲ್ಲಾ ವಿವರಗಳನ್ನು ನೀಡಿದ್ದಾರೆ.

4.40: ಭಾರೀ ಹಿಂಸಾಚಾರದ ಹಿನ್ನಲೆಯಲ್ಲಿ ಮುಕ್ತ್ ಸಾರ್, ಬಥಿಂಡ ಮತ್ತು ಮನ್ಸಾದಲ್ಲಿ ಕರ್ಫ್ಯೂ ಹೇರಲಾಗಿದೆ.

4.30: ಅನುಯಾಯಿಗಳ ಹಿಂಸಾಚಾರ ಮೇರೆ ಮೀರಿದೆ. ಹಲವು ಕಡೆಗಳ ಸಂಘರ್ಷ ಆರಂಭವಾಗಿದ್ದು, ಗಾಳಿಯಲ್ಲಿ ಗುಂಡು, ಅಶ್ರುವಾಯು ಪ್ರಯೋಗ, ಜಲ ಫಿರಂಗಿ, ಲಾಠಿ ಚಾರ್ಚ್ ಮಾಡಲಾಗಿದೆ. ಸಂಘರ್ಷಕ್ಕೆ 10ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ, ಮೂರು ಚಾನಲ್ ಗಳ ಒಬಿ ವಾಹನಗಳು ಜಖಂಗೊಂಡಿವೆ. ಮಲೌಟ್ ರೈಲ್ವೇ ನಿಲ್ದಾಣ, ಪೆಟ್ರೋಲ್ ಪಂಪ್ ಹಾಗೂ ವಾಹನಗಳಿಗೆ ಬೆಂಕಿ ಹಚ್ಚಲಾಗಿದೆ.

3.52: ರಾಮ್ ರಹೀಮ್ ಸಿಂಗ್ ದೋಷಿ ಎಂದು ತೀರ್ಪು ನೀಡುತ್ತಿದ್ದಂತೆ ಹರ್ಯಾಣ ಮತ್ತು ಪಂಜಾಬ್ ನಲ್ಲಿ ಹಿಂಸಾಚಾರ ಆರಂಭವಾಗಿದೆ. ಅನುಯಾಯಿಗಳು ಕಲ್ಲು ತೂರಾಟ ಆರಂಭಿಸಿದ್ದಾರೆ. ಕಲ್ಲು ತೂರಾಟಕ್ಕೆ ಟೈಮ್ಸ್ ನೌ ಚಾನಲ್ 'ಒಬಿ' ವಾಹನ ಜಖಂಗೊಂಡಿದ್ದು, ಪತ್ರಕರ್ತರೊಬ್ಬರು ಗಾಯಗೊಂಡಿದ್ದರು.

3.06: ಗುರ್ಮಿತ್ ರಾಮ್ ರಹೀಮ್ ಸಿಂಗ್ ದೋಷಿ ಎಂದು ಪಂಚಕುಲದಲ್ಲಿರುವ ಸಿಬಿಐ ವಿಶೇಷ ನ್ಯಾಯಾಲಯ ತೀರ್ಪು ನೀಡಿದೆ. ಆದರೆ ಶಿಕ್ಷೆಯ ಪ್ರಮಾಣವನ್ನು ಪ್ರಕಟಿಸಲು. ಆಗಸ್ಟ್ 28ರಂದು ಕೋರ್ಟ್ ಶಿಕ್ಷೆಯ ಪ್ರಮಾಣವನ್ನು ಪ್ರಕಟಿಸಲಿದೆ.

2.50: ತೀರ್ಪಿಗೆ ಕ್ಷಣಗಣನೆ ಆರಂಭವಾಗಿದೆ. ಕೆಲವೇ ಕ್ಷಣದಲ್ಲಿ ತೀರ್ಪು ಹೊರ ಬೀಳಲಿದೆ.

1.50: ಗುರ್ಮಿತ್ ರಾಮ್ ರಹೀಮ್ ಸಿಂಗ್ ಪಂಚಕುಲದಲ್ಲಿರುವ ಸಿಬಿಐ ವಿಶೇಷ ನ್ಯಾಯಾಲಯಕ್ಕೆ ಹಾಜರಾಗಿದ್ದಾರೆ. ಇನ್ನೇನು ಕೆಲವೇ ಕ್ಷಣಗಳಲ್ಲಿ ತೀರ್ಪು ಹೊರ ಬೀಳಲಿದೆ.

1.20: ರಾಮ್ ರಹೀಮ್ ಸಿಂಗ್ ಅತ್ಯಾಚಾರ ಪ್ರಕರಣದ ತೀರ್ಪಿನ ಪ್ರಭಾವ ರಾಜಸ್ಥಾನಕ್ಕೂ ವ್ಯಾಪಿಸಿದೆ. ರಾಜಸ್ಥಾನದಲ್ಲಿಯೂ 48 ಗಂಟೆಗಳ ಕಾಲ ಅಂತರ್ಜಾಲ ಸೇವೆ ಸ್ಥಗಿತಗೊಳಿಸಲಾಗಿದೆ. ಇಡೀ ರಾಜಸ್ಥಾನದಾದ್ಯಂತ ಸಿಆರ್'ಪಿಸಿ ಸೆಕ್ಷನ್ 144 ಹೇರಲಾಗಿದೆ.

12.45: ಅಗತ್ಯ ಬಿದ್ದರೆ ಶಸ್ತ್ರಾಸ್ತ್ರ ಬಳಸುವಂತೆ ಪಂಜಾಬ್ ಮತ್ತು ಹರ್ಯಾಣ ಹೈಕೋರ್ಟ್ ಹರ್ಯಾಣ ಸರಕಾರಕ್ಕೆ ಸೂಚನೆ ನೀಡಿದೆ. ಪ್ರಚೋದನಕಾರಿ ಹೇಳಿಕೆ ನೀಡುವವರ ವಿರುದ್ಧ ಎಫ್ಐಆರ್ ದಾಖಲಿಸುವಂತೆಯೂ ಕೋರ್ಟ್ ಹೇಳಿದೆ.

12.00 : ಪಂಚಕುಲದಲ್ಲಿ ಭದ್ರತಾ ಮೇಲೆ ಮಿಲಿಟರಿ ಹೆಲಿಕಾಪ್ಟರ್ ಗಳು ನಿಗಾ ಇಟ್ಟಿವೆ. ಇದರ ಜತೆಗೆ ಡ್ರೋನ್ ಗಳ ಮೂಲಕವೂ ಪರಿಸ್ಥಿತಿ ಮೇಲೆ ನಿಗಾ ಇಡಲಾಗಿದೆ.

11.00 : ರಾಮ್ ರಹೀಮ್ ಸಿಂಗ್ ವಾಹನಕ್ಕೆ ಅಭಿಮಾನಿಗಳು ಅಡ್ಡಿಪಡಿಸಿದ ಘಟನೆಯೂ ನಡೆಯಿತು. ನಂತರ ಪೊಲೀಸರು ರಸ್ತೆಯಿಂದ ದೇವಮಾನವನ ಅನುಯಾಯಿಗಳನ್ನು ತೆರವುಗೊಳಿಸಿದರು.

10.13 : 200 ಬೆಂಗಾವಲು ವಾಹನಗಳಲ್ಲಿ ರಾಮ್ ರಹೀಮ್ ಸಿಂಗ್ ಪಂಚಕುಲಾದಲ್ಲಿರುವ ಸಿಬಿಐ ವಿಶೇಷ ನ್ಯಾಯಾಲಯದತ್ತ ಧಾವಿಸಿದ್ದಾರೆ. ಮಧ್ಯಾಹ್ನ 2.30ಕ್ಕೆ ನ್ಯಾಯಾಲಯ ತೀರ್ಪು ನೀಡಲಿದೆ.

9.30: ಸಿರ್ಸಾದಿಂದ ಗುರ್ಮೀತ್ ರಾಮ್ ರಹೀಮ್ ಸಿಂಗ್ ಪಂಚಕುಲದತ್ತ ಹೊರಟಿದ್ದಾರೆ.

8.30: ತೀರ್ಪು ಹಿನ್ನಲೆಯಲ್ಲಿ ಪಂಚಕುಲ ಕೋರ್ಟ್ ಸುತ್ತ ಭಾರೀ ಭದ್ರತೆ ಕೈಗೊಳ್ಳಲಾಗಿದೆ. ಗನ್ ಮ್ಯಾನ್ ಗಳು ಕೋರ್ಟ್ ಗೆ ಸರ್ಪಗಾವಲು ಹಾಕಿದ್ದಾರೆ. ಕೋರ್ಟ್ ಆವರಣದ ಹೊರಗೆ ಭಾರೀ ಸಂಖ್ಯೆಯಲ್ಲಿ ರಾಮ್ ರಹೀಮ್ ಸಿಂಗ್ ಅನುಯಾಯಿಗಳು ಜಮಾಯಿಸಿದ್ದಾರೆ.

7.30 : ಭದ್ರತೆ ದೃಷ್ಟಿಯಿಂದ ಪಂಜಾಬ್ ಮತ್ತು ಹರ್ಯಾಣ ವ್ಯಾಪ್ತಿಯಲ್ಲಿ 74 ರೈಲುಗಳ ಪ್ರಯಾಣವನ್ನು ರದ್ದುಗೊಳಿಸಲಾಗಿದೆ. ಎರಡೂ ರಾಜ್ಯಗಳಲ್ಲಿ ಮೂರು ದಿನಗಳ ಕಾಲ ಮೊಬೈಲ್ ಇಂಟರ್ನೆಟ್ ಸೇವೆ ಸ್ಥಗಿತಗೊಳಿಸಲಾಗಿದೆ. ಭದ್ರತೆಗಾಗಿ 150 ಅರೆಸೇನಾ ಪಡೆ ತುಕಡಿ, 15 ಸಾವಿರ ಪೊಲೀಸರನ್ನು ಎರಡೂ ರಾಜ್ಯಗಳಿಗೆ ಕರೆಸಿಕೊಳ್ಳಲಾಗಿದೆ.

ಏನಿದು ಪ್ರಕರಣ?

ಚಂಡೀಗಢದಿಂದ ಸುಮಾರು 260 ಕಿಲೋಮೀಟರ್ ದೂರದಲ್ಲಿರುವ ಸಿರ್ಸಾದ ದೇರಾದಲ್ಲಿ ಗುರ್ಮಿತ್ ರಾಮ್ ರಹೀಂ ಸಿಂಗ್ ಇಬ್ಬರು ಮಹಿಳೆಯರ ಮೇಲೆ ಅತ್ಯಾಚಾರ ಎಸಗಿದ್ದಾರೆ ಎಂಬ ಪ್ರಕರಣ ಇದಾಗಿದೆ. ಈ ಸಂಬಂಧ ಸಿಬಿಐ 2002ರಲ್ಲಿ ಪ್ರಕರಣ ದಾಖಲಿಸಿಕೊಂಡಿತ್ತು. 2008ರ ಸುಮಾರಿಗೆ ಇದರ ವಿಚಾರಣೆ ಆರಂಭವಾಗಿತ್ತು. ಇದೀಗ ವಿಚಾರಣೆ ಮುಗಿದಿದ್ದು ತೀರ್ಪನ್ನು ಶುಕ್ರವಾರಕ್ಕೆ ಕಾಯ್ದಿರಿಸಲಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Gurmeet Ram Rahim Singh Verdict Live : In the alleged rape case against Dera Sacha Sauda chief Gurmeet Ram Rahim Singh, a special CBI court in Panchkula will pronounce its verdict on August 25.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ