ಗುಜರಾತ್ ನಲ್ಲಿ ಬಿರುಗಾಳಿ ಎಬ್ಬಿಸಿದ ಅಡ್ಡ ಮತದಾನ, ಕಾಂಗ್ರೆಸ್ ಕಂಗಾಲು

Subscribe to Oneindia Kannada

ಅಹಮದಾಬಾದ್, ಆಗಸ್ಟ್ 8: ಗುಜರಾತ್ ರಾಜ್ಯಸಭಾ ಚುನಾವಣೆ ಕ್ಷಣಕ್ಷಣಕ್ಕೂ ಕುತೂಹಲ ಹುಟ್ಟಿಸುತ್ತಿದೆ. ಇಬ್ಬರು ಕಾಂಗ್ರೆಸ್ ಶಾಸಕರು ಬಿಜೆಪಿಗೆ ಮತ ಚಲಾಯಿಸಿದ್ದಾರೆ ಇವರ ಮತಗಳನ್ನು ರದ್ದುಪಡಿಸಬೇಕು ಎಂದು ಕಾಂಗ್ರೆಸ್ ಬಿಗಿ ಪಟ್ಟು ಹಿಡಿದಿದೆ. ಇದರಿಂದ ಮತ ಎಣಿಕೆ ವೇಳೆ ಗುಜರಾತ್ ನಲ್ಲಿ ಬೃಹನ್ನಾಟಕವೇ ಆರಂಭವಾಗಿದೆ.

ಗುಜರಾತ್ ರಾಜ್ಯಸಭಾ ಚುನಾವಣೆಯಲ್ಲಿ ಹೈಡ್ರಾಮ, ಮತ ಎಣಿಕೆ ವಿಳಂಬ

ಅಡ್ಡ ಮತದಾನ ಮಾಡಿದ ಶಾಸಕರ ಮತಗಳನ್ನು ರದ್ದುಗೊಳಿಸುವಂತೆ ಕಾಂಗ್ರೆಸ್ ನ ರಣದೀಪ್ ಸುರ್ಜೇವಾಲಾ ಮತ್ತು ಆರ್.ಪಿ.ಎಸ್ ಸಿಂಗ್ ಚುನಾವಣಾ ಆಯೋಗಕ್ಕೆ ಮೊರೆ ಹೋಗಿದ್ದಾರೆ. ಕಾಂಗ್ರೆಸ್ ಮನವಿಯನ್ನು ದೆಹಲಿಗೆ ರವಾನಿಸಲಾಗಿದ್ದು ಚುನಾವಣಾ ಆಯೋಗದಿಂದ ಪ್ರತಿಕ್ರಿಯೆ ಬಂದ ನಂತರ ಮತಎಣಿಕೆ ಆರಂಭವಾಗಲಿದೆ. ಸದ್ಯಕ್ಕೆ ಮತ ಎಣಿಕೆ ಕಾರ್ಯ ವಿಳಂವಾಗಿದೆ.

Gujarat Rajya Sabha Election Results: Last minute high-drama from Congress

"ಪಕ್ಷದ ಏಜೆಂಟ್ ಅಲ್ಲದವರಿಗೆ ಮತ ಪತ್ರ ತೋರಿಸಿದರೆ ಆ ಮತಗಳು ಅಸಿಂಧುವಾಗುತ್ತವೆ. ಇಬ್ಬರು ಕಾಂಗ್ರೆಸ್ ಶಾಸಕರು ಬಿಜೆಪಿಗೆ ಮತ ಹಾಕಿದ್ದು ಮತ ಪತ್ರಗಳನ್ನು ಅಮಿತ್ ಶಾಗೆ ತೋರಿಸಿದ್ದಾರೆ. ಇದು ದೃಶ್ಯಾವಳಿಗಳಲ್ಲಿ ಸೆರೆಯಾಗಿದೆ," ಎಂದು ಕಾಂಗ್ರೆಸ್ ನಾಯಕ ಶಕ್ತಿ ಸಿನ್ಹಾ ಗೋಹಿಲ್ ಹೇಳಿದ್ದಾರೆ.

"ಅಧಿಕೃತ ದೃಶ್ಯಾವಳಿಗೆ ನಾವು ಮನವಿ ಸಲ್ಲಿಸಲಿದ್ದೇವೆ. ಒಂದೊಮ್ಮೆ ದೃಶ್ಯಾವಳಿ ತಿರುಚಿದರೆ ಸುಪ್ರಿಂ ಕೋರ್ಟ್ ಮೊರೆ ಹೋಗಲಿದ್ದೇವೆ," ಎಂದು ಅವರು ಗುಡುಗಿದ್ದಾರೆ.

ಗುಜರಾತ್ ರಾಜ್ಯಸಭೆ ಚುನಾವಣೆ : ಯಾರು, ಏನು ಹೇಳಿದರು?

ಭೋಲಾ ಭಾಯಿ ಮತ್ತು ರಾಘವ್ ಜೀ ಬಾಯಿ ಬಿಜೆಪಿಗೆ ಮತ ಚಲಾಯಿಸಿದ್ದಾರೆ ಎಂದು ಶಕ್ತಿ ಸಿನ್ಹಾ ಗೋಹಿಲ್ ಹೇಳಿದ್ದಾರೆ. ಇನ್ನು ಎನ್.ಸಿ.ಪಿಯ ಓರ್ವ ಶಾಸಕ ಕೂಡ ಬಿಜೆಪಿ ಪರವಾಗಿ ಮತದಾನ ಮಾಡಿರುವುದು ಬೆಳಕಿಗೆ ಬಂದದೆ. ಈ ಸಂಬಂಧ ಎನ್.ಸಿ.ಪಿ ನಾಯಕ ಶರದ್ ಪವಾರ್ ಮೇಲೆ ಸೋನಿಯಾ ಗಾಂಧಿ ಅಸಮಧಾನಗೊಂಡಿದ್ದಾರೆ ಎಂದೂ ವರದಿಯಾಗಿದೆ.

Gujarat Rajya Sabha Election Results: Last minute high-drama from Congress

ಅಡ್ಡ ಮತದಾನ ಮಾಡಿದ ಶಾಸಕ ಖಂಢಲಾ ಜಡೇಜಾ ವಜಾ ಮಾಡುವುದಾಗಿ ಎನ್.ಸಿ.ಪಿಯ ಶರದ್ ಪವಾರ್ ಹೇಳಿದ್ದಾರೆ. ಆದರೆ ಸದ್ಯಕ್ಕೆ ಅವರು ಹಾಕಿರುವ ಮತವನ್ನು ಏನೂ ಮಾಡಲು ಬರುವುದಿಲ್ಲ.

ಇವೆಲ್ಲದರ ಜತೆಗೆ "ನಮ್ಮ ಗುಜರಾತ್ ಶಾಸಕರಿಗೆ ಛೋಟುಬಾಯಿ ವಾಸವಾರಿಗೆ ಬಿಜೆಪಿಗೆ ಮತದಾನ ಮಾಡುವಂತೆ ನಿತೀಶ್ ಕುಮಾರ್ ಹೇಳಿದ್ದರು. ಅದರಂತೆ ಅವರು ಬಿಜೆಪಿ ಮತ ಹಾಕಿದ್ದಾರೆ," ಎಂದು ಜೆಡಿಯು ನಾಯಕ ಕೆಸಿ ತ್ಯಾಗಿ ಹೇಳಿದ್ದು ಅಹ್ಮದ್ ಪಟೇಲ್ ಗೆಲುವಿನ ಮೇಲೆ ಕಾರ್ಮೋಡ ಆವರಿಸಿದೆ.

IPL 2017:Kolkata vs Gujarat : Rain Stops Play, Gujarat Need 126 off 90 | Oneindia Kannada

ಯಾರು ಯಾರಿಗೆ ಮತದಾನ ಮಾಡಿದ್ದಾರೆ ಎಂಬ ದೊಡ್ಡ ಮಟ್ಟದ ಗೊಂದಲಗಳು ಕೊನೆಯ ಕ್ಷಣದಲ್ಲಿ ಹುಟ್ಟಿಕೊಂಡಿವೆ. ಈ ಎಲ್ಲಾ ಅನುಮಾನಗಳಿಗೆ ಇನ್ನು ಕೆಲವೇ ಕ್ಷಣಗಳಲ್ಲಿ ಹೊರ ಬೀಳಲಿರುವ ಅಂತಿಮ ಫಲಿತಾಂಶ ಉತ್ತರ ನೀಡಲಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Gujarat Rajya Sabha election results: Heavy cross voting from Congress and NCP. Congress's Randeep Surjewala and RPN Singh approach Election Commision to demand quashing of votes of 2 Congress MLAs, say that they voted BJP and publicly showed votes.
Please Wait while comments are loading...