ಕಾಂಗ್ರೆಸ್ ವಿರುದ್ಧ ಭಿನ್ನಮತ ಸ್ಫೋಟ, ಬೀದಿ ಕಾಳಗಕ್ಕಿಳಿದ ಪಾಟೀದಾರರು

By: ವಿಕಾಸ್ ನಂಜಪ್ಪ
Subscribe to Oneindia Kannada

ಅಹಮದಾಬಾದ್, ನವೆಂಬರ್ 20: ಕಾಂಗ್ರೆಸ್ ಮತ್ತು ಪಾಟೀದಾರ್ ಅನಾಮತ್ ಆಂದೋಲನ ಸಮಿತಿ ಮಧ್ಯೆ ಒಪ್ಪಂದ ಏರ್ಪಟ್ಟಿದೆ ಎಂದು ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಭರತ್ ಸಿನ್ಹಾ ಸೋಲಂಕಿ ಹೇಳಿಕೆ ನೀಡಿದ ಬೆನ್ನಲ್ಲೇ ಎರಡೂ ಗುಂಪುಗಳ ನಡುವೆ ಭಿನ್ನಮತ ಸ್ಪೋಟಗೊಂಡಿದೆ.

ಕಾಂಗ್ರೆಸ್-ಹಾರ್ದಿಕ್ ಮಧ್ಯೆ ಕುದುರಿದ ಒಪ್ಪಂದ, ಇಂದು ಬಹಿರಂಗ ಘೋಷಣೆ

ಸೀಟು ಹಂಚಿಕೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ಮತ್ತು ಪಾಸ್ ಒಪ್ಪಂದಕ್ಕೆ ಬಂದಿವೆ ಎಂದು ಸೋಲಂಕಿ ಹೇಳಿದ್ದರು. ಆದರೆ ಮಧ್ಯರಾತ್ರಿ ಹತ್ತಿರ ಬರುತ್ತಿದ್ದಂತೆ ಕಾಂಗ್ರೆಸ್ ತನ್ನ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದ್ದು ಪಾಸ್ ಕೆಂಗಣ್ಣಿಗೆ ಗುರಿಯಾಗಿದೆ.

ಕಾಂಗ್ರೆಸ್ ಕೊಡಲ್ಲ, ಹಾರ್ದಿಕ್ ಬಿಡಲ್ಲ; ಸೀಟಿಗಾಗಿ ಗುಜರಾತಿನಲ್ಲಿ ಕಚ್ಚಾಟ

Gujarat polls: Hardik-Congress deal on seat sharing hits road bump

ಕಾಂಗ್ರೆಸ್ ಬಿಡುಗಡೆ ಮಾಡಿದ 77 ಅಭ್ಯರ್ಥಿಗಳ ಪಟ್ಟಿಯಲ್ಲಿ ಕೇವಲ ಇಬ್ಬರು ಪಾಸ್ ನಾಯಕರು ಸ್ಥಾನ ಪಡೆದಿದ್ದಾರೆ. ಪಟ್ಟಿಯಲ್ಲಿ ಹೆಚ್ಚಿನ ಟಿಕೆಟ್ ನಿರೀಕ್ಷಿಸಿದ್ದ ಪಾಸ್ ಮುಖಂಡರು ಇದರಿಂದ ಆಕ್ರೋಶಿತರಾಗಿದ್ದಾರೆ.

ನಮಗೆ ಟಿಕೆಟ್ ಹಂಚಿಕೆಯಲ್ಲಿ ಅನ್ಯಾಯವಾಗಿದೆ ಎಂದು ದೂರಿರುವ ಪಾಸ್ ನಾಯಕರು ಕಾಂಗ್ರೆಸ್ ನಾಯಕರ ಜತೆ ಪ್ರಫುಲ್ ತೊಗಾಡಿಯಾ ಕಚೇರಿ ಸಮೀಪ ಬೀದಿ ಕಾಳಗಕ್ಕೆ ಇಳಿದಿದ್ದಾರೆ. ಸರಿಯಾದ ಒಪ್ಪಂದ ಜಾರಿಗೊಳಿಸುವವರೆಗೆ ಇಲ್ಲಿನ ಕಚೇರಿಯನ್ನು ಕಾರ್ಯ ನಿರ್ವಹಿಸಲು ಬಿಡುವುದಿಲ್ಲ ಎಂದು ಪಾಸ್ ಗುಡುಗಿದೆ.

"ನಮ್ಮ ಕೇಂದ್ರ ಸಮಿತಿಯನ್ನು ಸಂಪರ್ಕಿಸದೇ ಪಾಸ್ ನಾಯಕರಿಗೆ ಕಾಂಗ್ರೆಸ್ ಟಿಕೆಟ್ ಘೋಷಣೆ ಮಾಡಿದೆ. ಕಾಂಗ್ರೆಸ್ ಕಚೇರಿಗಳಿಗೆ ದಾಳಿ ಮಾಡುವ ಮೂಲಕ ನಾವು ತೀವ್ರ ಪ್ರತಿರೋಧ ವ್ಯಕ್ತಪಡಿಸಲಿದ್ದೇವೆ," ಎಂದು ಪಾಸ್ ಸಹ ಸಂಚಾಲಕ ದಿನೇಶ್ ಬಂಭಾನಿಯಾ ಹೇಳಿದ್ದಾರೆ.

ಒಟ್ಟು ಐದು ಕ್ಷೇತ್ರಗಳಲ್ಲಿ ಟಿಕೆಟ್ ಗಾಗಿ ಪಾಸ್ ಬೇಡಿಕೆ ಇಟ್ಟಿತ್ತು. ಆದರೆ ಭಾನುವಾರ ಬಿಡುಗಡೆಯಾದ ಪಟ್ಟಿಯಲ್ಲಿ ಕೇವಲ ಇಬ್ಬರು ಪಾಸ್ ನಾಯಕರು ಟಿಕೆಟ್ ಪಡೆದಿದ್ದಾರೆ. ಧೊರಾಜಿಯಿಂದ ಲಲಿತ್ ವಾಸೋಯಾ, ಜುನಾಗಡ್ ನಿಂದ ಅಮಿತ್ ತುಮ್ಮರ್ ಗೆ ಮಾತ್ರ ಕಾಂಗ್ರೆಸ್ ಟಿಕೆಟ್ ನೀಡಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
The entry of the famous Kollur Mookambika Temple in Kundapura taluk to the public has been blocked for some time on November 20 and 21.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ