Gujarat Election Results 2022: ಗುಜರಾತ್‌ ಮೂಲಕ ರಾಷ್ಟ್ರೀಯ ಪಕ್ಷವಾಗಲಿದೆ ಎಎಪಿ- ಸಿಸೋಡಿಯಾ

ಗಾಂಧಿನಗರ, ಡಿಸೆಂಬರ್‌ 08: ಗುಜರಾತ್‌ ವಿಧಾನಸಭೆ ಚುನಾವಣಾ ಫಲಿತಾಂಶ(Gujarat Election Results 2022) ಇಂದು ಪ್ರಕಟಗೊಳ್ಳುತ್ತಿದೆ. ಬಿಜೆಪಿ ಸ್ಪಷ್ಟ ಬಹುಮತದತ್ತ ಹೆಜ್ಜೆ ಇಟ್ಟಿದೆ. ಕಳೆದ ಬಾರಿ ಎರಡನೇ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದ ಕಾಂಗ್ರೆಸ್‌ಗೆ ಮುಖಭಂಗವಾಗಿದೆ. ಆದರೆ, ಇದೇ ಮೊದಲ ಬಾರಿ ಗುಜರಾತ್‌ನಲ್ಲಿ ನೆಲೆ ಕಂಡುಕೊಳ್ಳಲು ಯತ್ನಿಸುತ್ತಿರುವ ಆಮ್‌ ಆದ್ಮಿ ಪಕ್ಷಕ್ಕೆ ಒಂದಂಕಿಯ ಸ್ಥಾನಗಳು ಸಿಗುವುದು ನಿಶ್ಚಿತವಾಗಿದೆ.

Recommended Video

      Gujarat Election Results: 150ಕ್ಕೂ ಸೀಟ್ ಗೆಲ್ಲುವತ್ತ ಬಿಜೆಪಿ, 7 ನೇ ಬಾರಿ ಸರ್ಕಾರ ರಚನೆ ಖಚಿತ | Oneindia

      ಈಗಾಗಲೇ ದೆಹಲಿ ಹಾಗೂ ಪಂಜಾಬ್‌ನಲ್ಲಿ ಸ್ಪಷ್ಟ ಬಹುಮತದಿಂದ ಅಧಿಕಾರ ಗದ್ದುಗೆ ಏರಿರುವ ಎಎಪಿ ರಾಷ್ಟ್ರೀಯ ಪಕ್ಷದ ಕನಸು ಕಾಣುತ್ತಿದೆ. ಈ ಕನಸು ಗುಜರಾತ್‌ ಫಲಿತಾಂಶದ ಮೂಲಕ ನನಸಾಗುತ್ತದೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ಈ ಹಿಂದೆ ಹೇಳಿದ್ದರು.

      ಗುಜರಾತ್‌ನಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್‌ಗೆ ಎಎಪಿ ಸವಾಲೊಡ್ಡಿದೆ ಎಂಬ ಅಭಿಪ್ರಾಯಗಳೂ ಕೇಳಿಬಂದಿದ್ದವು. ದೆಹಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌, ಉಪ ಮುಖ್ಯಮಂತ್ರಿ ಮನೀಶ್‌ ಸಿಸೋಡಿಯಾ ಹಾಗೂ ಪಂಜಾಬ್‌ ಸಿಎಂ ಭಗವಂತ್‌ ಮಾನ್‌ ಅವರು ಗುಜರಾತ್‌ನಲ್ಲಿ ಪ್ರಚಾರ ನಡೆಸಿದ್ದರು. ಪ್ರಧಾನಿ ಮೋದಿ ವರ್ಚಸ್ಸು ಹಾಗೂ ಹಿಂದುತ್ವದ ಆಸರೆಯನ್ನು ಬಿಜೆಪಿ ತೆಗೆದುಕೊಂಡಿತ್ತು. ಆದರೆ, ಎಎಪಿ ನಾಯಕರು ಮಾತ್ರ ಶಿಕ್ಷಣ, ಆರೋಗ್ಯ, ಕುಡಿಯುವ ನೀರು ಸೇರಿದಂತೆ ಮೂಲಭೂತ ಸೌಕರ್ಯಗಳ ಬಗ್ಗೆ ಮಾತನಾಡಿದ್ದರು. ಈ ಬಾರಿ ಗುಜರಾತ್‌ನಲ್ಲಿ 40 ರಿಂದ 50 ಸ್ಥಾನಗಳನ್ನು ಗೆಲ್ಲುವುದಾಗಿಯೂ ಎಎಪಿ ತಿಳಿಸಿತ್ತು. ಮಾಜಿ ಪತ್ರಕರ್ತ ಇಸುದಾನ್‌ ಗಧ್ವಿ (Isudan Gadhvi) ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿ ಎಂದೂ ಎಎಪಿ ಘೋಷಿಸಿತ್ತು.

      Gujarat Poll Results 2022: AAP becoming national party with Gujarat vote

      ರಾಷ್ಟ್ರೀಯ ಪಕ್ಷವಾಗಲಿದೆ ಎಂದ ಸಿಸೋಡಿಯಾ

      ಗುಜರಾತ್‌ನ ಮತಗಳು ಆಮ್ ಆದ್ಮಿ ಪಕ್ಷವನ್ನು ರಾಷ್ಟ್ರೀಯ ಪಕ್ಷವನ್ನಾಗಿ ಮಾಡಲಿದೆ ಎಂದು ದೆಹಲಿ ಉಪಮುಖ್ಯಮಂತ್ರಿ ಹಾಗೂ ಎಎಪಿ ನಾಯಕ ಮನೀಶ್ ಸಿಸೋಡಿಯಾ ಹೇಳಿದ್ದಾರೆ.

      Gujarat Poll Results 2022: AAP becoming national party with Gujarat vote

      'ಮೊದಲ ಬಾರಿಗೆ, ಶಿಕ್ಷಣ ಮತ್ತು ಆರೋಗ್ಯವನ್ನು ಆಧರಿಸಿದ ರಾಜಕೀಯವು ದೇಶದಲ್ಲಿ ಮನ್ನಣೆ ಪಡೆಯುತ್ತಿದೆ. ಭಾರತದ ಜನರಿಗೆ ಅಭಿನಂದನೆಗಳು' ಎಂದು ಸಿಸೋಡಿಯಾ ಟ್ವೀಟ್ ಮಾಡಿದ್ದಾರೆ.

      10 ಗಂಟೆ ಕೊನೆಗೊಂಡಂತೆ ಎಎಪಿ ಎಂಟು ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ರಾಷ್ಟ್ರೀಯ ಪಕ್ಷವಾಗಲು, ಎಎಪಿ ಎರಡು ಸ್ಥಾನಗಳನ್ನು ಮತ್ತು ಶೇ 6 ಮತಗಳ ಪ್ರಮಾಣವನ್ನು ಹೊಂದಬೇಕು.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+