ಗುಜರಾತ್ ಬಿಜೆಪಿಯಲ್ಲಿ ಭಿನ್ನಮತ ಸ್ಪೋಟ, ಪಕ್ಷ ತೊರೆದ ತಂದೆ-ಮಗ
ಅಹಮದಾಬಾದ್, ನವೆಂಬರ್ 22: ಬಿಜೆಪಿ ಹಿರಿಯ ನಾಯಕ, ಮಾಜಿ ಸಂಸತ್ ಸದಸ್ಯ ಕಾಂಜಿ ಭಾಯ್ ಪಟೇಲ್ ಮತ್ತು ಅವರ ಪುತ್ರ ಸುನಿಲ್ ಕೇಸರಿ ಪಕ್ಷಕ್ಕೆ ಮಂಗಳವಾರ ತಡ ರಾತ್ರಿ ರಾಜೀನಾಮೆ ನೀಡಿದ್ದಾರೆ.
ಟಿಕೆಟ್ ಹಂಚಿಕೆಯಲ್ಲಾದ ಅನ್ಯಾಯ ಪ್ರತಿಭಟಿಸಿ ಇಬ್ಬರೂ ಪಕ್ಷ ತೊರೆದಿದ್ದಾರೆ. ಬಿಜೆಪಿ ಟಿಕೆಟ್ ಸಿಗದ ಹಿನ್ನಲೆಯಲ್ಲಿ ಆಕ್ರೋಶಿತರಾಗಿರುವ ಸುನಿಲ್ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ತೀರ್ಮಾನಿಸಿದ್ದಾರೆ.

ಸುನಿಲ್ ಗಂದೇವಿಯಿಂದ ನಾಮಪತ್ರ ಸಲ್ಲಿಸಿದ್ದು ಪಕ್ಷೇತರ ಅಭ್ಯರ್ಥಿಯಾಗಿ ಬಿಜೆಪಿ ವಿರುದ್ಧ ಸ್ಪರ್ಧಿಸಲಿದ್ದಾರೆ.
ಹಿರಿಯ ನಾಯಕ ಕಾಂಜಿ ಭಾಯ್ ಪಟೇಲ್ ರಾಜೀನಾಮೆ ಬಿಜೆಪಿಗೆ ಮತ್ತಷ್ಟು ತಲೆನೋವು ತಂದಿದೆ. ಮೊದಲೇ ಪಟೇಲರ ವಿರೋಧ ಎದುರಿಸುತ್ತಿರುವ ಬಿಜೆಪಿ, ಅದೇ ಸಮುದಾಯದ ನಾಯಕನನ್ನು ಇದೀಗ ಕಳೆದುಕೊಂಡು ಮತ್ತಷ್ಟು ವಿರೋಧಕ್ಕೆ ಗುರಿಯಾಗಿದೆ.
ಒಟ್ಟು 106 ಕ್ಷೇತ್ರಗಳಿಗೆ ತನ್ನ ಅಭ್ಯರ್ಥಿಗಳ ಪಟ್ಟಿಯನ್ನು ಬಿಜೆಪಿ ಇಲ್ಲಿಯವರೆಗೆ ಬಿಡುಗಡೆ ಮಾಡಿದೆ. ಡಿಸೆಂಬರ್ 9 ಮತ್ತು 14ರಂದು ಕ್ರಮವಾಗಿ 89 ಮತ್ತು 93 ಕ್ಷೇತ್ರಗಳಿಗೆ ಮತದಾನ ನಡೆಯಲಿದೆ. ಡಿಸೆಂಬರ್ 18ರಂದು ಫಲಿತಾಂಶ ಹೊರ ಬೀಳಲಿದೆ.












Click it and Unblock the Notifications