ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

13,860 ಕೋಟಿ ಆದಾಯ ಘೋಷಿಸಿದ್ದ ಗುಜರಾತ್ ನ ಮಹೇಶ್ ನಾಪತ್ತೆ!

ಗುಜರಾತ್ ನ ಅಹ್ಮದಾಬಾದ್ ನಲ್ಲಿ ನಾಲ್ಕು ಬೆಡ್ ರೂಮ್ ನ ಫ್ಲ್ಯಾಟ್ ನಲ್ಲಿ ಮಹೇಶ್ ತನ್ನ ಬಳಿ 13,860 ಕೋಟಿ ಇದೆ ಎಂದು ಘೋಷಿಸಿದ್ದ. ಸರಿ, ಅದಕ್ಕೆ ನಲವತ್ತೈದು ಪರ್ಸೆಂಟ್ ತೆರಿಗೆ ಕಟ್ಟು ಎಂದು ನೋಟಿಸ್ ನೀಡಲಾಗಿತ್ತು. ಸದ್ಯಕ್ಕೆ ಆತ ನಾಪತ್ತೆ.

By ಒನ್ ಇಂಡಿಯಾ ಪ್ರತಿನಿಧಿ
|
Google Oneindia Kannada News

ಅಹ್ಮದಾಬಾದ್, ಡಿಸೆಂಬರ್ 3: ಗುಜರಾತ್ ನ ಮಹೇಶ್ ಷಾ ಎಂಬಾತ ಆದಾಯ ತೆರಿಗೆ ಘೋಷಣೆ ಯೋಜನೆ ಅಡಿ 13,860 ಕೋಟಿ ರುಪಾಯಿ ತನ್ನ ಬಳಿ ಇರುವುದಾಗಿ ಹೇಳಿಕೊಂಡಿದ್ದ. ಸದ್ಯಕ್ಕೆ ಅತ ನಾಪತ್ತೆಯಾಗಿದ್ದು, ಆತನಿಂದ ಉತ್ತರ ಪಡೆಯಲು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಶೋಧದಲ್ಲಿ ತೊಡಗಿದ್ದಾರೆ.

ಅಹ್ಮದಾಬಾದ್ ನ ನಾಲ್ಕು ಬೆಡ್ ರೂಮ್ ಗಳ ಫ್ಲ್ಯಾಟ್ ವೊಂದರಲ್ಲಿ ವಾಸಿಸುತ್ತಿದ್ದ ವ್ಯಕ್ತಿ ಮಹೇಶ್ ಷಾ. ನೆರೆಹೊರೆಯವರಿಂದ ಸಾಲ ಪಡೆದಿದ್ದನಂತೆ. ಕೆಲಸಕ್ಕಾಗಿ ಆಟೋ ತೆಗೆದುಕೊಂಡಿದ್ದ ಎಂದು ವರದಿಯಾಗಿದೆ. ಆದಾಯ ತೆರಿಗೆ ಇಲಾಖೆ ಮಾಹಿತಿ ಪ್ರಕಾರ, 40 ಲಕ್ಷ ನಗದು, 30 ಲಕ್ಷ ಬೆಲೆ ಬಾಳುವ ಆಭರಣ, ಆರು ಲಾಕರ್ ಗಳನ್ನು ಆತನಿಂದ ವಶಪಡಿಸಿಕೊಳ್ಳಲಾಗಿದೆ.[ಹತ್ತು ಲಕ್ಷ ಕೂಡ ಆದಾಯ ದಾಟದ ಇವರ ಬಳಿ ಇದ್ದ ಕಾರೇ ಕೋಟಿಗಟ್ಟಲೆ!]

Black money

ಈ ಶೋಧ ಕಾರ್ಯಾಚರಣೆ ನಡೆದದ್ದು ನವೆಂಬರ್ 30ಕ್ಕೆ ಎರಡು ದಿನ ಮೊದಲು. ಷಾ ತನ್ನ ತೆರಿಗೆ ಕಂತು ಕಟ್ಟಬೇಕಾದ ಮುಂಚೆ ಈ ದಾಳಿ ನಡೆದಿತ್ತು. ಐಡಿಎಸ್ ಯೋಜನೆ ಕೊನೆ ದಿನವಾದ ಸೆಪ್ಟೆಂಬರ್ 30ರಂದು ಅತ 13,860 ಕೋಟಿ ರುಪಾಯಿ ಇರುವುದಾಗಿ ಆತ ಘೋಷಿಸಿದ್ದ.[ಐಟಿ ದಾಳಿ: ಭ್ರಷ್ಟರ ಬಳಿ 152 ಕೋಟಿ ಅಕ್ರಮ ಆಸ್ತಿ]

ಅದರೆ, ಈಗ ತೆರಿಗೆ ಹಣ ಕಟ್ಟುವ ಮೊದಲೇ ನಾಪತ್ತೆಯಾಗಿದ್ದಾನೆ. ಆದಾಯ ತೆರಿಗೆ ಇಲಾಖೆಯು ಆತನು ಘೋಷಿಸಿರುವ ಒಟ್ಟು ಮೊತ್ತದ ಶೇ 45ರಷ್ಟು ತೆರಿಗೆ ಕಟ್ಟುವಂತೆ ಐಡಿಎಸ್ ಫಾರ್ಮ್ 2 ನೀಡಿದೆ. ಮೊದಲ ಕಂತಿನ ಹಣವಾದ 1,560 ಕೋಟಿ ರುಪಾಯಿ ನವೆಂಬರ್ 30ರಂದು ಷಾ ಕಟ್ಟಬೇಕಿತ್ತು.

English summary
There is a mystery that surrounds Mahesh Shah from Gujarat who had declared Rs 13, 860 crore in cash under the Income disclosure scheme. The businessman from Gujarat has gone missing and the Income Tax Department officials are trying to find answers.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X