LIVE
Gujarat, HP Election Results 2022 Live: ಬಿಜೆಪಿಗೆ ಬಹುಮತ: ಕಾರ್ಯಕರ್ತರು, ಜನರನ್ನು ಧನ್ಯವಾದ ತಿಳಿಸಿ ಪ್ರಧಾನಿ ಭಾಷಣ

Gujarat, HP Election Results 2022 Live: ಬಿಜೆಪಿಗೆ ಬಹುಮತ: ಕಾರ್ಯಕರ್ತರು, ಜನರನ್ನು ಧನ್ಯವಾದ ತಿಳಿಸಿ ಪ್ರಧಾನಿ ಭಾಷಣ

ಭಾರೀ ಕುತೂಹಲವನ್ನು ಮೂಡಿಸಿರುವ ಗುಜರಾತ್ ಹಾಗೂ ಹಿಮಾಚಲ ಪ್ರದೇಶ ವಿಧಾನಸಭೆ ಚುನಾವಣೆಯ ಫಲಿತಾಂಶ ಇಂದು (ಡಿಸೆಂಬರ್ 8) ಪ್ರಕಟಗೊಳ್ಳಲಿದೆ. ತನ್ನ ಭದ್ರಕೋಟೆಯಾಗಿರುವ ಗುಜರಾತ್‌ನಲ್ಲಿ ಮತ್ತೆ ಅಧಿಕಾರದ ಗದ್ದುಗೆಯನ್ನು ಹಿಡಿಯುವುದು ಬಿಜೆಪಿಯ ಪ್ರತಿಷ್ಠೆಯ ಪ್ರಶ್ನೆಯಾಗಿದೆ. ಹೀಗಾಗಿ ಗುಜರಾತ್ ವಿಧಾನಸಭೆ ಚುನಾವಣೆಯ ಫಲಿತಾಂಶಗಳ ಮೇಲೆ ಎಲ್ಲರ ದೃಷ್ಟಿ ನೆಟ್ಟಿದೆ. 182 ಸ್ಥಾನಗಳನ್ನು ಹೊಂದಿರುವ ಗುಜರಾತ್‌ನಲ್ಲಿ ಡಿಸೆಂಬರ್ 1 ಮತ್ತು 5ರಂದು ಎರಡು ಹಂತಗಳಲ್ಲಿ ಚುನಾವಣೆ ನಡೆಯಿತು. ರಾಜ್ಯದಲ್ಲಿ ಸರ್ಕಾರ ರಚಿಸಲು ಕನಿಷ್ಠ 92 ಸ್ಥಾನಗಳನ್ನು ಗೆಲ್ಲಬೇಕಾಗಿದೆ. ಚುನಾವಣಾ ಆಯೋಗ (ಇಸಿ) ಗುರುವಾರ (ಡಿಸೆಂಬರ್ 8) ಬೆಳಿಗ್ಗೆ 8 ಗಂಟೆಗೆ ಮತಗಳ ಎಣಿಕೆಯನ್ನು ಕೈಗೆತ್ತಿಕೊಳ್ಳಲಿದ್ದು, ಇಂದು ಪಕ್ಷಗಳ ಭವಿಷ್ಯ ನಿರ್ಧಾರವಾಗಲಿದೆ. ರಾಜ್ಯದ 37 ಸ್ಥಳಗಳಲ್ಲಿ ಮತ ಎಣಿಕೆ ನಡೆಯಲಿದೆ.

ಎಕ್ಸಿಟ್ ಪೋಲ್‌ಗಳು ಆಡಳಿತಾರೂಢ ಭಾರತೀಯ ಜನತಾ ಪಕ್ಷವೇ (ಬಿಜೆಪಿ) ಪ್ರಚಂಡ ಗೆಲುವು ಸಾಧಿಸಲಿದೆ ಎಂದು ಭವಿಷ್ಯ ನುಡಿದಿವೆ. 2017ರಲ್ಲಿ ಬಿಜೆಪಿ 99 ಸ್ಥಾನಗಳನ್ನು ಪಡೆದಿದ್ದರೆ, ಕಾಂಗ್ರೆಸ್ 77 ಸ್ಥಾನಗಳನ್ನು ಪಡೆದಿತ್ತು. ಒಂದು ವೇಳೆ ಎಕ್ಸಿಟ್‌ ಪೋಲ್‌ ಪ್ರಕಾರ ಬಿಜೆಪಿ ಗೆಲುವು ಸಾಧಿಸಿದರೆ ಆಡಳಿತಾರೂಢ ಬಿಜೆಪಿ ಗುಜರಾತ್‌ನಲ್ಲಿ ಸತತ 7 ನೇ ಬಾರಿಗೆ ಅಧಿಕಾರ ವಹಿಸಿಕೊಳ್ಳಲಿದೆ. ಈ ಬಾರಿ ಗುಜರಾತ್‌ನಲ್ಲಿ ಅಧಿಕಾರ ಹಿಡಿದು ಹೊಸ ದಾಖಲೆ ಬರೆಯುವ ಉತ್ಸಾಹದಲ್ಲಿ ಬಿಜೆಪಿ ಇದೆ. ಕಳೆದ ಚುನಾವಣೆಗಳಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್‌ ನಡುವೆ ನೇರ ಸ್ಪರ್ಧೆ ಇರುತ್ತಿತ್ತು. ಆದರೆ, ಈ ಬಾರಿ ಆಮ್‌ ಆದ್ಮಿ ಪಕ್ಷವು ಗುಜರಾತ್‌ ಅಖಾಡಕ್ಕೆ ದುಮುಕಿದೆ. ದೆಹಲಿ ಹಾಗೂ ಪಂಜಾಬ್‌ನಲ್ಲಿ ಸ್ಪಷ್ಟ ಬಹುಮತದಿಂದ ಅಧಿಕಾರ ಗದ್ದುಗೆ ಏರಿರುವ ಎಎಪಿ ಗುಜರಾತ್‌ನಲ್ಲಿ ನೆಲೆ ಕಂಡುಕೊಳ್ಳಲು ಹರಸಾಹಸ ನಡೆಸಿದೆ.

ಗುಜರಾತ್ ಸಮೀಕ್ಷೆಗಳಿಗೆ ದೆಹಲಿ ಸಿಎಂ ಕೇಜ್ರಿವಾಲ್ ಕೊಟ್ಟ ಉತ್ತರವೇನು? ಗುಜರಾತ್ ಸಮೀಕ್ಷೆಗಳಿಗೆ ದೆಹಲಿ ಸಿಎಂ ಕೇಜ್ರಿವಾಲ್ ಕೊಟ್ಟ ಉತ್ತರವೇನು?

ಹಿಮಾಚಲ ವಿಧಾನಸಭೆ ಚುನಾವಣೆ ಫಲಿತಾಂಶ

ಹಿಮಾಚಲ ಪ್ರದೇಶ ವಿಧಾನಸಭೆ ಚುನಾವಣೆ 2022ರ ಮತ ಎಣಿಕೆ ಡಿಸೆಂಬರ್ 8 ರಂದು (ಗುರುವಾರ) ನಡೆಯಲಿದೆ. ರಾಜ್ಯದ ಎಲ್ಲಾ 68 ಸ್ಥಾನಗಳಿಗೆ ನವೆಂಬರ್ 12ರಂದು ಒಂದೇ ಹಂತದಲ್ಲಿ ಮತದಾನ ನಡೆದಿತ್ತು. ಹಿಮಾಚಲ ಪ್ರದೇಶದಲ್ಲಿ ಭಾರತೀಯ ಜನತಾ ಪಕ್ಷವು ಸತತ ಎರಡನೇ ಅವಧಿಗೆ ಅಧಿಕಾರಕ್ಕೆ ಹಿಡಿಯಲು ಪ್ರಯತ್ನಿಸುವುದರೊಂದಿಗೆ ತೀವ್ರವಾದ ಪ್ರಚಾರಕ್ಕೆ ನಡೆಸಿತ್ತು. ಆದರೆ ರಾಜ್ಯದಲ್ಲಿ ಆಡಳಿತ ವಿರೋಧಿ ಅಲೆ ಇರುವುದರಿಂದ ಕಾಂಗ್ರೆಸ್ ಆಡಳಿತ ಪಕ್ಷವಾದ ಬಿಜೆಪಿಯಿಂದ ಅಧಿಕಾರವನ್ನು ಕಿತ್ತುಕೊಳ್ಳಲು ಪ್ರಯತ್ನಗಳನ್ನು ಮಾಡುತ್ತಿದೆ.

Gujarat, Himachal Assembly Election Results 2022 Live Updates in Kannada, Counting News & Highlights

ಹಿಮಾಚಲದಲ್ಲಿ ಎಎಪಿ ಪ್ರವೇಶದೊಂದಿಗೆ ಕೆಲವು ವಿಧಾನಸಭಾ ಕ್ಷೇತ್ರಗಳಲ್ಲಿ ತ್ರಿಕೋನ ಸ್ಪರ್ಧೆಗೆ ಸಾಕ್ಷಿಯಾಗುವ ಸಾಧ್ಯತೆಯಿದೆ. 2017ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ 44 ಸ್ಥಾನಗಳನ್ನು ಗೆದ್ದು ಸರ್ಕಾರ ರಚಿಸಿದರೆ, ಕಾಂಗ್ರೆಸ್ ಕೇವಲ 21 ಸ್ಥಾನಗಳನ್ನು ಪಡೆದುಕೊಂಡಿತ್ತು. ಎಕ್ಸಿಟ್ ಪೋಲ್‌ಗಳು ಮಿಶ್ರ ಭವಿಷ್ಯವನ್ನು ನೀಡಿದ್ದು, ಕೆಲವು ಬಿಜೆಪಿ ಜಯ ಸಾಧಿಸಲಿದೆ ಎಂದರೆ, ಕೆಲವು ಕಾಂಗ್ರೆಸ್‌ ಗೆಲುವು ಸಾಧಿಸುವುದಾಗಿ ಭವಿಷ್ಯ ನುಡಿದಿವೆ.

ಬಿಜೆಪಿ ಮತ್ತು ಕಾಂಗ್ರೆಸ್ ಎಲ್ಲಾ 68 ಸ್ಥಾನಗಳಲ್ಲಿ ತಮ್ಮ ಅಭ್ಯರ್ಥಿಗಳನ್ನು ಕಣಕ್ಕಿಳಿಸಿವೆ. ಎಎಪಿ 67 ಸ್ಥಾನಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಕಣದಲ್ಲಿರುವ ಇತರ ಪಕ್ಷಗಳೆಂದರೆ ಬಹುಜನ ಸಮಾಜ ಪಕ್ಷ 53 ಸ್ಥಾನಗಳಲ್ಲಿ ಸ್ಪರ್ಧಿಸಿದರೆ, ಕಮ್ಯುನಿಸ್ಟ್ ಪಕ್ಷ ಆಫ್ ಇಂಡಿಯಾ 11 ಸ್ಥಾನಗಳಲ್ಲಿ ಮತ್ತು ಹಿಮಾಚಲ ಜನ ಕ್ರಾಂತಿ ಪಕ್ಷವು 6 ಸ್ಥಾನಗಳಲ್ಲಿ ಸ್ಪರ್ಧಿಸುತ್ತಿದೆ.

7:55 PM
Dec 8, 2022
ಕಾಂಗ್ರೆಸ್‌ ವಿರುದ್ಧ ನಡ್ಡಾ ವಾಗ್ದಾಳಿ

ಪ್ರಧಾನಿ ಭಾಷಣಕ್ಕೂ ಮುನ್ನ ಮಾತನಾಡಿದ ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ. ನಡ್ಡಾ ಮಾತನಾಡಿ, ಅಭಿವೃದ್ಧಿ ರಾಜಕಾರಣವನ್ನು ಗುಜರಾತ್ ಜನರ ಬೆಂಬಲಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಗುಜರಾತ್‌ನಲ್ಲಿ ಸತತ ಏಳನೇ ಬಾರಿ ಐತಿಹಾಸಿಕ ಗೆಲುವು ಲಭಿಸಿದೆ. ಕಾಂಗ್ರೆಸ್‌ ಆಡಳಿತದಿಂದ ಜನರು ಬೇಸತ್ತಿದ್ದಾರೆ. ಕಾಂಗ್ರೆಸ್‌ ದೇಶದಲ್ಲಿ ನೆಲಕಚ್ಚಿದೆ ಎಂದು ಕಾಂಗ್ರೆಸ್‌ ವಿರುದ್ಧ ವಾಗ್ದಾಳಿ ನಡೆಸಿದರು. ಸಬ್‌ಕಾ ಸಾಥ್, ಸಬ್‌ಕಾ ವಿಕಾಸ್‌ಗೆ ವಾದಕ್ಕೆ ಮತ್ತೊಮ್ಮೆ ಬಲ ದೊರೆತಿದೆ ಎಂದು ಹೇಳಿದರು.

7:50 PM
Dec 8, 2022
ಬಿಜೆಪಿಯಿಂದಲೇ ಆದಿವಾಸಿ ರಾಷ್ಟ್ರಪತಿ

ಗುಜರಾತಿನಲ್ಲಿ ಆದಿವಾಸಿಗಳ ಕ್ಷೇತ್ರದಲ್ಲೂ ಬಿಜೆಪಿ ಜಯ ಗಳಿಸಿದೆ. ಆಧಿವಾಸಿಗಳ ಅಭಿವೃದ್ಧಿಗೆ ಕೇಂದ್ರ ಹಾಗೂ ಗುಜರಾತ್ ಸರ್ಕಾರ ಸದಾ ಬದ್ಧ. ಬಿಜೆಪಿಯಿಂದಲೇ ದೇಶಕ್ಕೆ ಮೊದಲ ಆದಿವಾಸಿ ರಾಷ್ಟ್ರಪತಿ ಸಿಕ್ಕಿದ್ದಾರೆ. ಜನರ ಆಶೀರ್ವಾದ ಹೀಗೆ ಮುಂದುವರಿಯುತ್ತದೆ ಎಂಬ ವಿಶ್ವಾಸ ಇದೆ ಎಂದು ಪ್ರಧಾನಿ ಹೇಳಿಕೆ.

7:47 PM
Dec 8, 2022

ಬಿಜೆಪಿ ಸರ್ಕಾರದಿಂದ ದೇಶದಲ್ಲಿ ಅಭಿವೃದ್ಧಿಯ ವೇಗ ಹೆಚ್ಚಾಗಿದೆ. ಕಳೆದ ಎಂಟು ವರ್ಷಗಳಲ್ಲಿ ಬಡತನ ನಿವಾರಣೆಗೆ ಬಿಜೆಪಿ ಶ್ರಮಿಸುತ್ತಿದೆ. ಕಾಂಗ್ರೆಸ್‌ನ ಕುಶಾಸನ ನೋಡದವರು ಬಿಜೆಪಿಯನ್ನು ಆಯ್ಕೆ ಮಾಡಿದ್ದಾರೆ. ಸ್ವಾಭಿಮಾನಿ ಜೀವನಕ್ಕಾಗಿ ಆದಿವಾಸಿಗಳಿಂದ ಬಿಜೆಪಿಗೆ ಬೆಂಬಲ ದೊರೆತಿದೆ. ಮಹಿಳಾ ಸಶಕ್ತಿಕರಣಕ್ಕಾಗಿ ಬಿಜೆಪಿ ಹಲವು ಕ್ರಮ ಕೈಗೊಂಡಿದೆ. ಅಭಿವೃದ್ಧಿ ಭಾರತಕ್ಕಾಗಿ ನಾವು ಜೊತೆಯಾಗೋಣ ಬನ್ನಿ ಎಂದು ಕರೆ ನೀಡಿದ ಪ್ರಧಾನಿ ಮೋದಿ.

7:42 PM
Dec 8, 2022
ಎಲ್ಲ ವರ್ಗದವರು ಆಯ್ಕೆ ಬಿಜೆಪಿ: ಪ್ರಧಾನಿ

ಭಾಷೆ, ವರ್ಗ ಎಂದು ಹಲವು ವಿಚಾರಗಳಲ್ಲಿ ಕಿಚ್ಚು ಹಚ್ಚುತ್ತಿದ್ದಾರೆ. ತಾತ್ಕಾಲಿಕ ಲಾಭ ಪಡೆಯಲು ಹವಣಿಸುತ್ತಿದ್ದಾರೆ. ಜಗಳವಾಡಲು ದೇಶದಲ್ಲಿ ಸಾಕಷ್ಟು ವಿಚಾರಗಳು ಇವೆ. ಆದರೆ ದೇಶ ನಮ್ಮದು, ಇಂಡಿಯಾ ಫಸ್ಟ ಎಂಬ ಭಾವನೆ ಬರಬೇಕು. ಗುಜರಾತ್‌ನಲ್ಲಿ 40 ಎಸ್‌ಸಿ, ಎಸ್‌ಟಿ ಮೀಸಲು ಕ್ಷೇತ್ರಗಳಿವೆ. ಅದರಲ್ಲಿ 34 ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ಸಾಧಿಸಿದೆ. ನಮ್ಮ ಸರ್ಕಾರ ಆದಿವಾಸಿ ಸಮುದಾಯಗಳ ಅಭಿವೃದ್ಧಿಗೆ ಹಲವು ಕ್ರಮ ಕೈಗೊಂಡಿದೆ. ಎಲ್ಲ ವರ್ಗದ ಜನರ ಆಯ್ಕೆ ಈಗ ಬಿಜೆಪಿಯೇ ಆಗಿದೆ. ಬಿಜೆಪಿ ನೇತೃತ್ವದ ಸರ್ಕಾರದಿಂದ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ ಎಂದು ಪ್ರಧಾನಿ ಗೆಲುವಿನ ಕುರಿತು ವಿವರಿಸಿದರು.

7:36 PM
Dec 8, 2022

ಯುವಜನರಿಗೆ ಬಿಜೆಪಿ ಮೇಲೆ ಅಪಾರ ನಂಬಿಕೆ ಇದೆ. ಹೀಗಾಗಿಯೇ ಗುಜರಾತ್‌ನಲ್ಲಿ ಜಾತಿವಾದ ರಾಜಕಾರಣಕ್ಕೆ ಯುವಕರು ತಕ್ಕ ಪಾಠ ಕಲಿಸಿದ್ದಾರೆ. ಸರ್ಕಾರದ ಅಭಿವೃದ್ಧಿ ಕಾರ್ಯಗಳನ್ನು ಜನರು ಬೆಂಬಲಿಸಿದ್ದಾರೆ. ಜಾತಿ, ವರ್ಗ, ಮತಗಳನ್ನು ಮೀರಿ ಜನರು ಬಿಜೆಪಿಗೆ ಮತ ನೀಡಿದ್ದಾರೆ. ಕಳೆದ ಕೆಲವು ವರ್ಷಗಳಿಂದ ದೇಶದಲ್ಲಿ ಅನೇಕ ಬದಲಾವಣೆಗಳು ಆಗಿವೆ ಎಂದು ಪ್ರಧಾನಿ ತಿಳಿಸಿದರು.

7:31 PM
Dec 8, 2022

ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ ನೇತೃತ್ವದಲ್ಲಿ ಗುಜರಾತಿನಲ್ಲಿ ಬಿಜೆಪಿ ಗೆಲುವು ಸಾಧಿಸಿದೆ. ಹಿಮಾಚಲಯ ಪ್ರದೇಶಗಳಲ್ಲಿ ಬಿಜೆಪಿಯು ಜನಪರ ಕೆಲಸಗಳನ್ನು ಮುಂದುವರಿಸಲಿದೆ. ಎರಡು ರಾಜ್ಯಗಳಲ್ಲಿ ಒಂದು ಬೂತ್‌ನಲ್ಲೂ ಮರು ಮತದಾನ ನಡೆದಿಲ್ಲ. ಹಿಮಾಚಲ ಪ್ರದೇಶದಲ್ಲಿ ಬಿಜೆಪಿ ಕಡಿಮೆ ಅಂತರದಲ್ಲಿ ಸೋಲು ಕಂಡಿದೆ. ಬಿಜೆಪಿಗೆ ಬೆಂಬಲ ಹೆಚ್ಚುತ್ತಿರುವುದು ಕುಟುಂಬ ರಾಜಕಾರಣ ಮತ್ತು ಭ್ರಷ್ಟಾಚಾರದ ವಿರುದ್ಧ ಹೆಚ್ಚುತ್ತಿರುವ ವಿರೋಧವನ್ನು ಸೂಚಿಸುತ್ತದೆ. ಗುಜರಾತಿನಲ್ಲಿ ಸಸತ ಏಳನೇ ಬಾರಿ ಐತಿಹಾಸಿಕ ಗೆಲುವಿಗೆ ಸಾಕ್ಷಿಯಾದ ಗುಜರಾತಿಗಳಿಗೆ ಮತ್ತೊಮ್ಮೆ ವಂದನೆ ಎಂದರು.

7:19 PM
Dec 8, 2022
ಬಿಜೆಪಿಗೆ ಬಹುಮತ: ಪ್ರಧಾನಿ ನರೇಂದ್ರ ಮೋದಿ ಭಾಷಣ

ಮತದಾರರ ಆಶೀರ್ವಾದಿಂದ ಬಿಜೆಪಿಗೆ ಅಭೂತಪೂರ್ವ ಗೆಲುವು ಸಿಕ್ಕಿದೆ. ಉತ್ತರ ಪ್ರದೇಶ, ಬಿಹಾರ ಉಪಚುನಾವಣೆಯಲ್ಲೂ ಬಿಜೆಪಿಗೆ ಜಯ ಸಿಕ್ಕಿದೆ. ಇದೀಗ ಎರಡು ರಾಜ್ಯಗಳಲ್ಲೂ ಶಾಂತಿಯುತವಾಗಿ ಮತದಾನ ನಡೆದಿದೆ. ಗುಜರಾತ್‌ನಲ್ಲಿ ಬಿಜೆಪಿಗೆ ಐತಿಹಾಸಿಕ ಗೆಲುವು ಲಭಿಸಿದೆ ಎಂದು ಪ್ರಧಾನಿ ಹೇಳಿದರು. ಇದಕ್ಕೂ ಮುನ್ನ ದೆಹಲಿ ಬಿಜೆಪಿ ಕೇಂದ್ರ ಕಚೇರಿಯಲ್ಲಿನ ಸಂಭ್ರಮಾಚರಣೆ ಯಲ್ಲಿ ಪ್ರಧಾನಮಂತ್ರಿಗಳು ಅಭಿನಂದನೆ ಸ್ವೀಕರಿಸಿದರು.

6:45 PM
Dec 8, 2022
ದೆಹಲಿ

10 ವರ್ಷಗಳ ಹಿಂದೆ ಆಮ್ ಆದ್ಮಿ ಪಕ್ಷ ಸಣ್ಣ ಪಕ್ಷವಾಗಿದ್ದು ಈಗ ರಾಷ್ಟ್ರೀಯ ಪಕ್ಷವಾಗಿ ಹೊರಹೊಮ್ಮಿದೆ. ಈಗ 2 ರಾಜ್ಯಗಳಲ್ಲಿ ಆಡಳಿತ ನಡೆಸುತ್ತಿದೆ ಎಂದು ಆಮ್ ಆದ್ಮಿ ಪಕ್ಷದ ರಾಷ್ಟ್ರೀಯ ಸಂಯೋಜಕ ಅರವಿಂದ್ ಕೇಜ್ರಿವಾಲ್ ಹೆಮ್ಮೆಪಟ್ಟಿದ್ದಾರೆ.

6:25 PM
Dec 8, 2022
ನೀನಾ - ನಾನಾ
ಬಿಲಾಸ್ಪುರ್
ತ್ರಿಲೋಕ್ ಜಾಮ್ವಾಲ್
ಬಿಜೆಪಿ
ಬಂಬರ್ ಠಾಕೂರ್
ಕಾಂಗ್ರೆಸ್
Vs
ಹಿಮಾಚಲ ಪ್ರದೇಶ : ಬಿಜೆಪಿಯ ತ್ರಿಲೋಕ್ ಜಮ್ವಾಲ್ ಅವರು ಕಾಂಗ್ರೆಸ್ ಅಭ್ಯರ್ಥಿ ಬಂಬರ್ ಠಾಕೂರ್ ವಿರುದ್ಧ ಮುನ್ನಡೆ ಸಾಧಿಸಿದ್ದಾರೆ.
6:15 PM
Dec 8, 2022
ಗುಜರಾತ್

2022ರ ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ ಜಯಭೇರಿ ಬಾರಿಸಿದೆ. ದಾಖಲೆಯ ಸ್ಥಾನಗಳನ್ನು ಗೆಲ್ಲುವ ಮೂಲಕ 7ನೇ ಬಾರಿ ರಾಜ್ಯದಲ್ಲಿ ಸರ್ಕಾರ ರಚನೆ ಮಾಡಲು ಮುಂದಾಗಿದೆ. ಬಿಜೆಪಿ ಭರ್ಜರಿ ವಿಜಯದ ಹಿನ್ನೆಲೆಯಲ್ಲಿ ಟ್ವೀಟ್ ಮಾಡಿರುವ ಕೇಂದ್ರ ಗೃಹ ಸಚಿವ ಅಮಿತ್ "ಹುಸಿ ಭರವಸೆ ನೀಡುವವರನನ್ನು ಗುಜರಾತ್ ಮತದಾರ ತಿರಸ್ಕರಿಸಿದ್ದಾರೆ" ಎಂದು ಹೇಳಿದ್ದಾರೆ.

6:15 PM
Dec 8, 2022
ಹಿಮಾಚಲದಲ್ಲಿ ಕಾಂಗ್ರೆಸ್ ಗೆಲುವಿಗೆ ಕಾರಣಕರ್ತರು

ಹಿಮಾಚಲ ಪ್ರದೇಶದಲ್ಲಿ ಕಾಂಗ್ರೆಸ್ ಗೆಲುವಿಗೆ ಕಾರಣಕರ್ತರಲ್ಲಿ ಪ್ರಮುಖರೆಂದರೆ, ಚುನಾವಣಾ ಉಸ್ತುವಾರಿಯನ್ನು ವಹಿಸಿಕೊಂಡಿದ್ದ ಪ್ರಿಯಾಂಕ ಗಾಂಧಿ ವಾಧ್ರಾ. ಪಕ್ಷದ ಪರವಾಗಿ ವ್ಯವಸ್ಥಿತ ಪ್ರಚಾರವನ್ನು ನಡೆಸಿದ್ದ ಪ್ರಿಯಾಂಕ, ಪಕ್ಷವನ್ನು ದಡ ಸೇರಿಸುವಲ್ಲಿ ಯಶಸ್ವಿಯಾಗಿದ್ದಾರೆ. ರಾಜಧಾನಿ ಶಿಮ್ಲಾದ ಫಾರಂ ಹೌಸಿನಲ್ಲೇ ಮೊಕ್ಕಾಂ ಹೂಡಿ, ಅಭ್ಯರ್ಥಿಗಳ ಆಯ್ಕೆಯಿಂದ ಹಿಡಿದು ಎಲ್ಲದರ ಉಸ್ತುವಾರಿಯನ್ನು ಇವರು ವಹಿಸಿಕೊಂಡಿದ್ದರು. ಸಹೋದರ ರಾಹುಲ್ ಗಾಂಧಿ ಭಾರತ್ ಜೋಡೋ ಯಾತ್ರೆಯಲ್ಲಿ ಬ್ಯೂಸಿಯಾಗಿದ್ದರೆ, ಪ್ರಿಯಾಂಕ ಅವರು ಹಿಮಾಚಲದ ಜವಾಬ್ದಾರಿಯನ್ನು ನೋಡಿಕೊಂಡಿದ್ದರು.

6:09 PM
Dec 8, 2022
ಗುಜರಾತ್

ಗುಜರಾತ್ ಚುನಾವಣೆಯಲ್ಲಿ ಅತಿಹೆಚ್ಚು ಗಮನ ಸೆಳೆದಿದ್ದ ಕ್ಷೇತ್ರಗಳಲ್ಲಿ ಗೋದ್ರಾ ಸಹ ಒಂದು. ಗೋದ್ರಾ ಹತ್ಯಾಕಾಂಡ ನಡೆದ ನಂತರ ಗೋದ್ರಾ ಕ್ಷೇತ್ರವು ದೇಶದಾದ್ಯಂತ ಕುಖ್ಯಾತಿ ಗಳಿಸಿತು. ಗೋದ್ರಾ ಹತ್ಯಾಕಾಂಡದ ನಂತರ ಗುಜರಾತ್‌ನಲ್ಲಿ ವ್ಯಾಪಕ ಹಿಂಸಾಚಾರ ನಡೆದಿತ್ತು. ಎರಡು ಕೋಮುಗಳ ನಡುವೆ ನಡೆದಿದ್ದ ಗಲಭೆಗಳಲ್ಲಿ ಸಾವಿರಾರು ಜನರು ಪ್ರಾಣ ಕಳೆದುಕೊಂಡಿದ್ದರು. ಇಂತಹ ಕ್ಷೇತ್ರವು ಕೋಮು ಸೂಕ್ಷ್ಮ ಪ್ರದೇಶವಾಗಿ ಗುರುತಿಸಿಕೊಂಡಿದೆ. ಈಗ ಚುನಾವಣಾ ಆಯೋಗ ನೀಡಿರುವ ಫಲಿತಾಂಶದ ಪ್ರಕಾರ ಗೋದ್ರದಾಲ್ಲಿ ಬಿಜೆಪಿ ಅಭ್ಯರ್ಥಿ ಚಂದ್ರಸಿಂಹ ರೌಲ್ಜಿ ಭಾರೀ ಮತಗಳ ಅಂತರದಲ್ಲಿ ಜಯ ಗಳಿಸಿದ್ದಾರೆ. ಸುಮಾರು 20, 000 ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ್ದಾರೆ.

6:05 PM
Dec 8, 2022
ಕರ್ನಾಟಕ

ಗುಜರಾತ್ ಚುನಾವಣಾ ಫಲಿತಾಂಶ ಕರ್ನಾಟಕ ರಾಜ್ಯದ ಮೇಲೆ ಪ್ರಭಾವ ಬೀರುವುದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ. ಈ ಕುರಿತು ಗುರುವಾರ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಗುಜರಾತ್​ನಲ್ಲಿ ವಿರೋಧ ಪಕ್ಷಗಳು ಎನ್ನುವಂಥದ್ದು ಕಳೆದ ಐದು ವರ್ಷಗಳಿಂದ ಇರಲಿಲ್ಲ. ಆದ್ದರಿಂದ ಗುಜರಾತ್ ಫಲಿತಾಂಶ ಏನಾಗಲಿದೆ ಎಂಬುದು ಮೊದಲೇ ಎಲ್ಲರಿಗೊ ಗೊತ್ತಿರುವ ವಿಷಯವಾಗಿತ್ತು. ರಾಜ್ಯದ ಮುಖ್ಯಮಂತ್ರಿಗಳು ಗುಜರಾತ್ ಫಲಿತಾಂಶ ಕರ್ನಾಟಕಕ್ಕೂ ತಟ್ಟುತ್ತದೆ ಅಂದಿದ್ದಾರೆ. ಆದರೆ ಗುಜರಾತ್​ನಲ್ಲಿರುವ ವಾತವಾರಣವೇ ಬೇರೆ, ರಾಜ್ಯದ ವಾತಾವರಣವೇ ಬೇರೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಹೇಳಿದ್ದಾರೆ.

6:01 PM
Dec 8, 2022
ಕರ್ನಾಟಕ

ಹಿಮಾಚಲ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಹಿಮಾಚಲ ಪ್ರದೇಶ ವಿಧಾನಸಭಾ ಚುನಾವಣೆ ಮತ ಎಣಿಕೆಯಲ್ಲಿ ಗುರುವಾರ ಸಂಜೆ 5:00ರ ಹೊತ್ತಿಗೆ ಕಾಂಗ್ರೆಸ್‌ ಪಕ್ಷ 39 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ. ಹಿಮಾಚಲ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವಿನ ಬಗ್ಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್‌ ಪ್ರತಿಕ್ರಿಯಿಸಿದ್ದಾರೆ. ಈ ಬಗ್ಗೆ ಟ್ವೀಟ್‌ ಮಾಡಿರುವ ಅವರು, ಕಾಂಗ್ರೆಸ್‌ ಪಕ್ಷ ಹಿಮಾಚಲ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಗೆಲುವು ಸಾಧಿಸಿದೆ. ಜನಸಾಮಾನ್ಯರು ಅಭಿವೃದ್ಧಿ ಮತ್ತು ಶಾಂತಿಯನ್ನು ಭಯಸುತ್ತಾರೆ ಎಂದಿದ್ದಾರೆ.

6:00 PM
Dec 8, 2022
ನೀನಾ - ನಾನಾ
ದರಂಗ್
ಪೂರನ್ ಚಂದ್ ಠಾಕೂರ್
ಬಿಜೆಪಿ
ಕೌಲ್ ಸಿಂಗ್ ಠಾಕೂರ್
ಕಾಂಗ್ರೆಸ್
Vs
ಹಿಮಾಚಲ ಪ್ರದೇಶ : ಕಾಂಗ್ರೆಸ್ ನಾಯಕ ಕೌಲ್ ಸಿಂಗ್ ಠಾಕೂರ್ ವಿರುದ್ಧ ಬಿಜೆಪಿ ಅಭ್ಯರ್ಥಿ ಪೂರಣ್ ಚಂದ್ ಠಾಕೂರ್ ಗೆಲುವು ಸಾಧಿಸಿದ್ದಾರೆ.
5:53 PM
Dec 8, 2022
ನೀನಾ - ನಾನಾ
ಶಿಮ್ಲಾ
ಹರೀಶ್ ಜನಾರ್ಥ
ಕಾಂಗ್ರೆಸ್
ಸಂಜಯ್ ಸೂದ್
ಬಿಜೆಪಿ
Vs
ಹಿಮಾಚಲ ಪ್ರದೇಶ : ಕಾಂಗ್ರೆಸ್‌ನ ಹರೀಶ್ ಜನಾರ್ಥ ಅವರು ಶಿಮ್ಲಾ (ನಗರ) ವಿಧಾನಸಭಾ ಕ್ಷೇತ್ರದಲ್ಲಿ ತಮ್ಮ ಸಮೀಪದ ಪ್ರತಿಸ್ಪರ್ಧಿ ಬಿಜೆಪಿಯ ಸಂಜಯ್ ಸೂದ್ ಅವರನ್ನು 3,037 ಮತಗಳ ಅಂತರದಿಂದ ಸೋಲಿಸಿದ್ದಾರೆ.
5:47 PM
Dec 8, 2022
ಹಿಮಾಚಲ ಪ್ರದೇಶ

ಹಿಮಾಚಲದಲ್ಲಿ ಕಾಂಗ್ರೆಸ್ 36 ಸ್ಥಾನಗಳನ್ನು ಗೆದ್ದು 3 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ಬಿಜೆಪಿ 22ರಲ್ಲಿ ಗೆದ್ದು 4ರಲ್ಲಿ ಮುನ್ನಡೆ ಸಾಧಿಸಿದೆ.

5:44 PM
Dec 8, 2022
ಉತ್ತರ ಪ್ರದೇಶ
ವಿಧಾನಸಭೆ ಕ್ಷೇತ್ರಗಳ ಉಪ ಚುನಾವಣೆ ಫಲಿತಾಂಶ 2022

ಅಖಿಲೇಶ್ ಯಾದವ್‌ಗೆ ಮೈನ್‌ಪುರಿ ಗೆಲುವು ಭಾರೀ ಮಹತ್ವದ್ದಾಗಿದೆ. ಏಕೆಂದರೆ ಇದು ಕುಟುಂಬದ ಸ್ಥಾನವನ್ನು ಉಳಿಸಿಕೊಳ್ಳುವುದು ಮಾತ್ರವಲ್ಲದೆ ಅವರ ಮತ್ತು ಅವರ ಚಿಕ್ಕಪ್ಪ ಶಿವಪಾಲ್ ಯಾದವ್ ನಡುವೆ ಹೊಂದಾಣಿಕೆಯನ್ನು ಉಂಟುಮಾಡಿದೆ. ಮೈನ್‌ಪುರಿ ಉಪಚುನಾವಣೆಯಲ್ಲಿ ಎಸ್‌ಪಿ ಅಭ್ಯರ್ಥಿ ಡಿಂಪಲ್ ಯಾದವ್ ಗೆಲುವು ಸಾಧಿಸಿದ್ದಾರೆ. ಅವರು ತಮ್ಮ ಪ್ರತಿಸ್ಪರ್ಧಿ ಬಿಜೆಪಿ ಅಭ್ಯರ್ಥಿ ರಘುರಾಜ್ ಸಿಂಗ್ ಶಾಕ್ಯಾ ಅವರನ್ನು 2,88,461 ಮತಗಳಿಂದ ಸೋಲಿಸಿದರು.

5:40 PM
Dec 8, 2022
ನೀನಾ - ನಾನಾ
ಜಸ್ವಾನ್ ಪ್ರಗ್ಪುರ್
ಬೈಕ್ರಾಮ್ ಠಾಕೂರ್
ಬಿಜೆಪಿ
ಸುರೀಂದರ್ ಸಿಂಗ್ ಮಂಕೋಟಿಯಾ
ಕಾಂಗ್ರೆಸ್
Vs
ಹಿಮಾಚಲ ಪ್ರದೇಶ : ಬಿಜೆಪಿಯ ಬಿಕ್ರಮ್ ಠಾಕೂರ್ ತಮ್ಮ ಪ್ರತಿಸ್ಪರ್ಧಿ ಕಾಂಗ್ರೆಸ್ ನಾಯಕ ಸುರೀಂದರ್ ಸಿಂಗ್ ಮಂಕೋಟಿಯಾ ವಿರುದ್ಧ ಗೆಲುವು ಸಾಧಿಸಿದ್ದಾರೆ.
5:39 PM
Dec 8, 2022
ಹಿಮಾಚಲ ಪ್ರದೇಶ

ಜೈರಾಮ್ ಠಾಕೂರ್ ಅವರು ರಾಜಭವನಕ್ಕೆ ಆಗಮಿಸಿ ಹಿಮಾಚಲ ಪ್ರದೇಶ ಸಿಎಂ ಸ್ಥಾನಕ್ಕೆ ರಾಜ್ಯಪಾಲರಿಗೆ ರಾಜೀನಾಮೆ ಸಲ್ಲಿಸಿದರು. “ನಾನು ನನ್ನ ರಾಜೀನಾಮೆಯನ್ನು ರಾಜ್ಯಪಾಲರಿಗೆ ನೀಡಿದ್ದೇನೆ. ಜನರ ಅಭಿವೃದ್ಧಿಗಾಗಿ ಕೆಲಸ ಮಾಡುವುದನ್ನು ಎಂದಿಗೂ ನಿಲ್ಲಿಸುವುದಿಲ್ಲ. ನಾವು ವಿಷಯಗಳನ್ನು ವಿಶ್ಲೇಷಿಸಬೇಕಾಗಿದೆ. ಫಲಿತಾಂಶಗಳ ದಿಕ್ಕನ್ನು ಬದಲಿಸಿದ ಕೆಲವು ಸಮಸ್ಯೆಗಳಿವೆ. ಹೈಕಮಾಂಡ್ ಕರೆದರೆ ನಾನು ದೆಹಲಿಗೆ ಹೋಗುತ್ತೇನೆ'' ಎಂದು ನಿರ್ಗಮಿತ ಸಿಎಂ ಹೇಳಿದರು.

5:37 PM
Dec 8, 2022
ಗುಜರಾತ್

ಹಿಮಾಚಲ ಪ್ರದೇಶ ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್‌ನಿಂದ ಹಿರಿಯ ವೀಕ್ಷಕರಾಗಿ ನೇಮಕಗೊಂಡಿರುವ ಛತ್ತೀಸ್‌ಗಢ ಸಿಎಂ ಭೂಪೇಶ್ ಬಾಘೇಲ್, ಹಿಮಾಚಲ ಪ್ರದೇಶದ ಮುಂದಿನ ಸಿಎಂ ಅನ್ನು ಹೈಕಮಾಂಡ್ ನಿರ್ಧರಿಸುತ್ತದೆ ಎಂದು ಹೇಳಿದ್ದಾರೆ. “ಪ್ರಿಯಾಂಕಾ ಗಾಂಧಿಯವರ 10 ಅಂಶಗಳ ಪ್ರಣಾಳಿಕೆ ಹಿಮಾಚಲದಲ್ಲಿ ಕೆಲಸ ಮಾಡಿದೆ. ಗುಜರಾತ್‌ನ ಫಲಿತಾಂಶಗಳು ಆಘಾತಕಾರಿಯಾಗಿದೆ. ಏಕೆಂದರೆ ಪ್ರಚಾರದ ಸಮಯದಲ್ಲಿ ಪರಿಸ್ಥಿತಿ ವಿಭಿನ್ನವಾಗಿತ್ತು. ಬಿಜೆಪಿಗೆ ಗುಜರಾತ್‌ ಆಶ್ಚರ್ಯಕರ ಗೆಲುವು” ಎಂದು HP ಮತ್ತು ಗುಜರಾತ್ ಚುನಾವಣಾ ಫಲಿತಾಂಶಗಳ ಕುರಿತು ಬಾಘೆಲ್ ಹೇಳಿದರು.

5:37 PM
Dec 8, 2022
ನೀನಾ - ನಾನಾ
ಫತೇಪುರ್
ಭವಾನಿ ಸಿಂಗ್ ಪಥಾನಿಯಾ
ಕಾಂಗ್ರೆಸ್
ಕೃಪಾಲ್ ಸಿಂಗ್ ಪರ್ಮಾರ್
ಐಎನ್ ಡಿ
Vs
ಹಿಮಾಚಲ ಪ್ರದೇಶ : ಹಿಮಾಚಲ ಪ್ರದೇಶದ ಬಿಜೆಪಿ ಬಂಡಾಯಗಾರ ಕೃಪಾಲ್ ಪರ್ಮಾರ್, ಪ್ರಧಾನಿ ಮೋದಿಯವರಿಂದ ವರದಿಯಾದ ಫೋನ್ ಕರೆ ನಂತರವೂ ಸ್ಪರ್ಧೆಯಿಂದ ಹೊರಬರಲಿಲ್ಲ, ಅವರು ಕಾಂಗ್ರೆಸ್ ಅಭ್ಯರ್ಥಿ ವಿರುದ್ಧ ಸೋತಿದ್ದಾರೆ.
5:34 PM
Dec 8, 2022
ಹಿಮಾಚಲ ಪ್ರದೇಶ

'ಇದು ರಾಜ್ಯದ ಜನರ ಗೆಲುವು. ಜನರು ಬದಲಾವಣೆಗಾಗಿ ಮತ್ತು ನಿರುದ್ಯೋಗ ಮತ್ತು ಹಣದುಬ್ಬರದ ವಿರುದ್ಧ ಮತ ಚಲಾಯಿಸಿದ್ದಾರೆ. ನಾವು ಒಗ್ಗಟ್ಟಾಗಿರುತ್ತೇವೆ. ನಮ್ಮ ಪಕ್ಷದಲ್ಲಿ ಯಾವುದೇ ಗುಂಪುಗಾರಿಕೆ ಇರುವುದಿಲ್ಲ. ನಾವು ಪಕ್ಷದ ಮುಖ್ಯಸ್ಥ ಎಂ ಖರ್ಗೆ ಅವರನ್ನು ಭೇಟಿ ಮಾಡಿದ್ದೇವೆ. ನಮ್ಮ ಮುಂದಿನ ಕ್ರಮದ ಬಗ್ಗೆ ಚರ್ಚೆ ನಡೆಸಿದ್ದೇವೆ' ಎಂದು ಹಿಮಾಚಲ ಪ್ರದೇಶ ಕಾಂಗ್ರೆಸ್ ಉಸ್ತುವಾರಿ ರಾಜೀವ್ ಶುಕ್ಲಾ ಹೇಳಿದ್ದಾರೆ.

5:31 PM
Dec 8, 2022
ನೀನಾ - ನಾನಾ
ಡಾಲ್‌ಹೌಸಿ
ಡಿಎಸ್ ಠಾಕೂರ್
ಬಿಜೆಪಿ
ಆಶಾ ಕುಮಾರಿ
ಕಾಂಗ್ರೆಸ್
Vs
ಹಿಮಾಚಲ ಪ್ರದೇಶ : ಆರು ಬಾರಿ ಕಾಂಗ್ರೆಸ್ ಶಾಸಕಿಯಾಗಿದ್ದ ಆಶಾ ಕುಮಾರಿ ಅವರು ಬಿಜೆಪಿ ಅಭ್ಯರ್ಥಿ ಡಿಎಸ್ ಠಾಕೂರ್ ವಿರುದ್ಧ ಭಾರೀ ಸೋಲು ಕಂಡಿದ್ದಾರೆ.
5:30 PM
Dec 8, 2022
ಹಿಮಾಚಲ ಪ್ರದೇಶ

ಈ ನಿರ್ಣಾಯಕ ವಿಜಯಕ್ಕಾಗಿ ಹಿಮಾಚಲ ಪ್ರದೇಶದ ಜನತೆಗೆ ಹೃತ್ಪೂರ್ವಕ ಧನ್ಯವಾದಗಳು. ಎಲ್ಲಾ ಕಾಂಗ್ರೆಸ್ ಕಾರ್ಯಕರ್ತರು ಮತ್ತು ಮುಖಂಡರಿಗೆ ಹೃತ್ಪೂರ್ವಕ ಅಭಿನಂದನೆಗಳು. ನಿಮ್ಮ ಕಠಿಣ ಪರಿಶ್ರಮ ಮತ್ತು ಸಮರ್ಪಣೆ ನಿಜವಾಗಿಯೂ ಈ ವಿಜಯದ ಶುಭಾಶಯಗಳಿಗೆ ಅರ್ಹವಾಗಿದೆ. ನಾನು ಮತ್ತೊಮ್ಮೆ ಭರವಸೆ ನೀಡುತ್ತೇನೆ, ಸಾರ್ವಜನಿಕರಿಗೆ ನೀಡಿದ ಪ್ರತಿಯೊಂದು ಭರವಸೆಯನ್ನು ಶೀಘ್ರವಾಗಿ ಈಡೇರಿಸಲಾಗುವುದು' ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹಿಮಾಚಲದಲ್ಲಿ ಕಾಂಗ್ರೆಸ್ ಗೆಲುವಿನ ಕುರಿತು ಟ್ವೀಟ್ ಮಾಡಿದ್ದಾರೆ.

5:29 PM
Dec 8, 2022
ನೀನಾ - ನಾನಾ
ಮೆಹಮೆದಾಬಾದ್
ಅರ್ಜುನ್‌ಸಿನ್ ಚೌವ್ಹಾಣ್
ಬಿಜೆಪಿ
ಜುವಾನ್‌ಸಿನ್ ಗಡಬಾಯಿ
ಕಾಂಗ್ರೆಸ್
Vs
ಗುಜರಾತ್ : ಬಿಜೆಪಿಯ ಅರ್ಜುನ್‌ಸಿಂಗ್ ಚೌಹಾಣ್ ಕಾಂಗ್ರೆಸ್ ನಾಯಕ ಜುವಾನ್‌ಸಿನ್ಹ್ ಗದಾಭಾಯಿ ವಿರುದ್ಧ ಜಯಗಳಿಸಿದ್ದಾರೆ.
5:28 PM
Dec 8, 2022
ನೀನಾ - ನಾನಾ
ವಾವ್
ಜೆನಿಬೆನ್ ಠಾಕೂರ್
ಕಾಂಗ್ರೆಸ್
ಸ್ವರೂಪ್‌ಜಿ ಠಾಕೂರ್‌
ಬಿಜೆಪಿ
Vs
ಗುಜರಾತ್ : ಕಾಂಗ್ರೆಸ್ ನಾಯಕಿ ಗೆನಿಬೆನ್ ಠಾಕೂರ್ ಅವರು ಬಿಜೆಪಿಯ ಸ್ವರೂಪ್ಜಿ ಠಾಕೋರ್ ಅವರನ್ನು ಸೋಲಿಸಿದರು.
5:26 PM
Dec 8, 2022
ಹಿಮಾಚಲ ಪ್ರದೇಶ

"ಇದು ನನಗೆ ತುಂಬಾ ಭಾವನಾತ್ಮಕ ಕ್ಷಣವಾಗಿದೆ. ಏಕೆಂದರೆ ದಿವಂಗತ ವೀರಭದ್ರ ಸಿಂಗ್ ಅವರಿಗೆ ಜನರಿಂದ ಬೆಂಬಲ ಪ್ರೀತಿಯನ್ನು ತೋರಿಸಿರುವುದನ್ನು ನಾನು ನೋಡಿದೆ. ಚಂಡೀಗಢವು ಶಾಸಕರಿಗೆ ಸುಲಭವಾಗಿ ಪ್ರವೇಶಿಸಬಹುದಾದ ಸಭೆಯ ಸ್ಥಳವಾಗಿದೆ. ಆದರೆ ನಾವು ಕಳ್ಳಬೇಟೆಯ ಬಗ್ಗೆ ಚಿಂತಿಸುವುದಿಲ್ಲ'' ಎಂದು HP ಚುನಾವಣಾ ಫಲಿತಾಂಶಗಳ ಕುರಿತು HP ಕಾಂಗ್ರೆಸ್ ಅಧ್ಯಕ್ಷೆ ಪ್ರತಿಭಾ ವಿ ಸಿಂಗ್ ಹೇಳಿದ್ದಾರೆ.

5:24 PM
Dec 8, 2022
ನೀನಾ - ನಾನಾ
ಭಾವ್‌ನಗರ ಪಶ್ಚಿಮ
ಜಿತೇಂದ್ರ ವಾಘಾಣಿ
ಬಿಜೆಪಿ
ಕಿಶೋರ್‌ಸಿನ್ ಕುಮ್ಬಾಜಿ ಗೋಯಿಲ್
ಕಾಂಗ್ರೆಸ್
Vs
ಗುಜರಾತ್ : ಬಿಜೆಪಿಯ ಜಿತೇಂದ್ರ ವಘಾನಿ ತಮ್ಮ ಪ್ರತಿಸ್ಪರ್ಧಿ ಕಾಂಗ್ರೆಸ್‌ನ ಕಿಶೋರಸಿಂಹ ಕುಂಭಾಜಿ ಗೋಹಿಲ್ ವಿರುದ್ಧ ಜಯಗಳಿಸಿದ್ದಾರೆ.
5:23 PM
Dec 8, 2022
ಹಿಮಾಚಲ ಪ್ರದೇಶ

ಚುನಾವಣೋತ್ತರ ಸಮೀಕ್ಷೆಯ ಪ್ರಕಾರ ಹಿಮಾಚಲದಲ್ಲಿ 68 ಸ್ಥಾನಗಳ ಪೈಕಿ ಬಿಜೆಪಿ 33-38 ಸ್ಥಾನಗಳಲ್ಲಿ ಗೆಲುವು ಸಾಧಿಸಬೇಕಾಗಿತ್ತು. ಆದರೆ ಈವರೆಗಿನ ಫಲಿತಾಂಶದಲ್ಲಿ ಬಿಜೆಪಿ 25 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ಸಮೀಕ್ಷೆಯ ಪ್ರಕಾರ ಹಿಮಾಚಲದಲ್ಲಿ ಕಾಂಗ್ರೆಸ್ 27-32 ಸ್ಥಾನಗಳಲ್ಲಿ ಗೆಲುವು ಸಾಧಿಸಬೇಕಾಗಿತ್ತು. ಆದರೆ ಈವರೆಗಿನ ಫಲಿತಾಂಶದಲ್ಲಿ ಕಾಂಗ್ರೆಸ್ 40 ಸ್ಥಾನಗಳಲ್ಲಿ ಬಹುಮತದೊಂದಿಗೆ ಮುನ್ನಡೆ ಸಾಧಿಸಿದೆ. ಜೊತೆಗೆ ಸಮೀಕ್ಷೆಯ ಪ್ರಕಾರ ಎಎಪಿ 0-2 ಸ್ಥಾನಗಳಲ್ಲಿ ಗೆಲುವು ಸಾಧಿಸಬೇಕಾಗಿತ್ತು. ಆದರೆ ಈವರೆಗಿನ ಫಲಿತಾಂಶದಲ್ಲಿ ಎಎಪಿ ಯಾವುದೇ ಸ್ಥಾನಗಳಲ್ಲಿ ಗೆಲುವು ಸಾಧಿಸಿಲ್ಲ. ಇತರೆ ಪಕ್ಷಗಳು 2-4 ಸ್ಥಾನ ಪಡೆಯುವ ನಿರೀಕ್ಷೆ ಇತ್ತು. ಸಮೀಕ್ಷೆಯಂತೆ ಇತರೆ ಪಕ್ಷಗಳು ಮೂರು ಸ್ಥಾನ ಪಡೆದುಕೊಂಡಿವೆ.

READ MORE