ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಂಧನ ಭೀತಿಯಿಂದ ಪಾರಾದ ಹಾರ್ದಿಕ್ ಪಟೇಲ್

By Sachhidananda Acharya
|
Google Oneindia Kannada News

ಅಹಮದಾಬಾದ್, ಅಕ್ಟೋಬರ್ 26: ಪಾಟಿದಾರ್ ಮೀಸಲಾತಿ ಹೋರಾಟದ ಮುಂದಾಳು ಹಾರ್ದಿಕ್ ಪಟೇಲ್ ಗೆ ಜಾಮೀನು ಮಂಜೂರಾಗಿದೆ. ಈ ಮೂಲಕ ಹಾರ್ದಿಕ್ ಬಂಧನ ಭೀತಿಯಿಂದ ಪಾರಾಗಿದ್ದಾರೆ.

ಚುನಾವಣೆಯಲ್ಲಿ ಸ್ಪರ್ಧಿಸುವುದು ನನ್ನ ಗುರಿಯಲ್ಲ : ಹಾರ್ದಿಕ್ ಪಟೇಲ್ಚುನಾವಣೆಯಲ್ಲಿ ಸ್ಪರ್ಧಿಸುವುದು ನನ್ನ ಗುರಿಯಲ್ಲ : ಹಾರ್ದಿಕ್ ಪಟೇಲ್

ಗುಜರಾತ್ ನ ವಿಸ್ನಾಗರ್ ಸೆಷನ್ಸ್ ನ್ಯಾಯಾಲಯ ಹಾರ್ದಿಕ್ ಪಟೇಲ್ ಹಾಗೂ ಲಾಲ್ಜಿ ಪಟೇಲ್ ಸೇರಿ 7 ಜನರ ವಿರುದ್ಧ ಬುಧವಾರ ಜಾಮೀನು ರಹಿತ ಬಂಧನದ ವಾರೆಂಟ್ ಜಾರಿಗೊಳಿಸಿತ್ತು. ಇದೀಗ ಹಾರ್ದಿಕ್ ಪಟೇಲ್ ಗೆ ವಿಸ್ನಾಗರ್ ನ್ಯಾಯಾಲಯವೇ ಜಾಮೀನು ಮಂಜೂರು ಮಾಡಿದೆ.

Gujarat: Hardik Patel granted bail by Visnagar court

2015ರಲ್ಲಿ ಪಾಟಿದಾರ್ ಮೀಸಲಾತಿ ಹೋರಾಟದ ವೇಳೆ ಬಿಜೆಪಿ ಶಾಸಕ ರಿಶಿಕೇಶ್ ಪಟೇಲ್ ಕಚೇರಿಯಲ್ಲಿ ದಾಂಧಲೆ ನಡೆಸಿದ ಪ್ರಕರಣದಲ್ಲಿ ಹಾರ್ದಿಕ್ ಪಟೇಲ್ ಹಾಗೂ ಲಾಲ್ಜಿ ಪಟೇಲ್ ಸೇರಿ 7 ಜನರ ವಿರುದ್ಧ ದೂರು ದಾಖಲಾಗಿತ್ತು. ಇದರ ವಿಚಾರಣೆಗೆ ವಿಸ್ನಾಗರ್ ನ್ಯಾಯಾಲಯದಲ್ಲಿ ನಡೆಯುತ್ತಿತ್ತು.

ವಿಚಾರಣೆಗೆ ಹಾರ್ದಿಕ್ ಪಟೇಲ್ ಮತ್ತು ಇತರರು ಸತತ ಮೂರು ಬಾರಿ ಗೈರು ಹಾಜರಾದ ಹಿನ್ನಲೆಯಲ್ಲಿ ಅವರ ವಿರುದ್ಧ ಜಾಮೀನು ರಹಿತ ಬಂಧನದ ವಾರಂಟ್ ಜಾರಿಗೊಳಿಸಲಾಗಿತ್ತು.

ಒಂದಷ್ಟು ಷರತ್ತುಗಳನ್ನು ಮುಂದಿಟ್ಟು ಕಾಂಗ್ರೆಸ್ ಪಕ್ಷ ಸೇರಲು ಹೊರಟಿರುವ ಹಾರ್ದಿಕ್ ಪಟೇಲ್ ಗೆ ಜಾಮೀನು ರಹಿತ ಬಂಧನದ ವಾರಂಟ್ ಸಂಕಷ್ಟ ತಂದೊಡ್ಡಿತ್ತು. ಇದೀಗ ಜಾಮೀನು ಸಿಕ್ಕಿರುವುದರಿಂದ ಅವರನ್ನು ನಿರಾಳರನ್ನಾಗಿಸಿದೆ.

English summary
Gujarat: Visnagar Session Court granted bail to Hardik Patel over vandalism in BJP MLA Rishikesh Patel's Office in 2015.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X