ಹಾರ್ದಿಕ್ ಪಟೇಲ್‌ಗೆ 'ವೈ' ಶ್ರೇಣಿಯ ಭದ್ರತೆ!

Posted By: ವಿಕಾಸ್ ನಂಜಪ್ಪ
Subscribe to Oneindia Kannada

ಅಹಮದಾಬಾದ್, ನವೆಂಬರ್ 24 : ಪಾಟೀದಾರ್ ಅನಾಮತ್ ಆಂದೋಲನ್ ಸಮಿತಿ (ಪಾಸ್) ಸಂಚಾಲಕ ಹಾರ್ದಿಕ್ ಪಟೇಲ್‌ಗೆ ಕೇಂದ್ರ ಸರ್ಕಾರ 'ವೈ' ಶ್ರೇಣಿಯ ಭದ್ರತೆ ನೀಡಿದೆ. ಸಿಐಎಸ್‌ಎಫ್ ಕಮಾಂಡೋಗಳು ಭದ್ರತೆಯ ಉಸ್ತುವಾರಿ ನೋಡಿಕೊಳ್ಳಲಿದ್ದಾರೆ.

ನಮ್ಮ ಬೆಂಬಲವೇನಿದ್ದರೂ ಕಾಂಗ್ರೆಸಿಗೆ: ಹಾರ್ದಿಕ್ ಪಟೇಲ್ ಸ್ಪಷ್ಟನೆ

ಕೇಂದ್ರ ಗುಪ್ತಚರ ಇಲಾಖೆ ಮತ್ತು ಭದ್ರತಾ ಪಡೆಗಳು ಸಿದ್ಧಪಡಿಸಿದ ವರದಿಯಲ್ಲಿ ಹಾರ್ದಿಕ್ ಪಟೇಲ್‌ಗೆ ಭದ್ರತೆ ಒದಗಿಸಬಹುದು ಎಂದು ಶಿಫಾರಸು ಮಾಡಲಾಗಿತ್ತು. ಈ ವರದಿಯ ಅನ್ವಯ ಸರ್ಕಾರ 'ವೈ' ಶ್ರೇಣಿಯ ಭದ್ರತೆ ನೀಡಿದೆ.

Gujarat : Hardik Patel given ‘Y’ category security

ಕೇಂದ್ರಿಯ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್‌ಎಫ್)ಯ 8 ಕಮಾಂಡೋಗಳು ಹಾರ್ದಿಕ್ ಪಟೇಲ್‌ಗೆ ಭದ್ರತೆ ನೀಡಲಿದ್ದಾರೆ. ಗುಜರಾತ್‌ನಲ್ಲಿ ಡಿಸೆಂಬರ್ 9 ಮತ್ತು 14ರಂದು ವಿಧಾನಸಭೆ ಚುನಾವಣೆ ನಡೆಯಲಿದ್ದು, ಹಾರ್ದಿಕ್ ಪ್ರಚಾರದಲ್ಲಿ ತೊಡಗಿಕೊಂಡಿದ್ದಾರೆ.

ಗುಜರಾತ್ ಚುನಾವಣೆಗೆ ಹೊಸ ಹವಾ ನೀಡಲಿದೆಯಾ ಮೋದಿ rally?!

ಸಿಐಎಸ್‌ಎಫ್‌ ಗಣ್ಯರಿಗೆ ಭದ್ರತೆ ನೀಡುವ ವಿಶೇಷ ವಿಭಾಗವನ್ನು ಹೊಂದಿದೆ. ದೇಶದ ಸುಮಾರು 60 ಗಣ್ಯರಿಗೆ ಈ ವಿಭಾಗದ ಯೋಧರು ಭದ್ರತೆ ನೀಡುತ್ತಿದ್ದಾರೆ.

ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ಧೋವಲ್, ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಭದ್ರತೆಯನ್ನು ಇದೇ ವಿಭಾಗ ನೋಡಿಕೊಳ್ಳುತ್ತಿದೆ. ಈ ವಿಭಾಗದ ಯೋಧರೇ ಹಾರ್ದಿಕ್‌ ಪಟೇಲ್‌ಗೆ ಭದ್ರತೆ ನೀಡಲಿದ್ದಾರೆ.

ಗುಜರಾತ್ :13 ಅಭ್ಯರ್ಥಿಗಳ ಐದನೇ ಪಟ್ಟಿ ಪ್ರಕಟಿಸಿದ ಬಿಜೆಪಿ

24 ವರ್ಷದ ಹಾರ್ದಿಕ್ ಪಟೇಲ್ ಬುಧವಾರ ಗುಜರಾತ್ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿಸುತ್ತೇನೆ ಎಂದು ಘೋಷಣೆ ಮಾಡಿದ್ದಾರೆ. ಪ್ರಚಾರ ಕಾರ್ಯದಲ್ಲಿ ಬ್ಯುಸಿಯಾಗಿದ್ದಾರೆ. ಡಿ.18ರಂದು ಚುನಾವಣಾ ಫಲಿತಾಂಶ ಪ್ರಕಟಗೊಳ್ಳಲಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Gujarat’s Patidar leader, Hardik Patel has been accorded ‘Y’ category security by the Centre. Threat analysis report, prepared by central intelligence and security agencies, favoured granting of such a cover to Patel.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ