ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಂಗೀತ ಕಾರ್ಯಕ್ರಮದಲ್ಲಿ ನಲವತ್ತು ಲಕ್ಷ ರುಪಾಯಿ ಸುರಿದರು

|
Google Oneindia Kannada News

ಗುಜರಾತ್, ಡಿಸೆಂಬರ್ 26: ನಗದು ಹಣಕ್ಕೆ ಕೊರತೆಯಾಗಿ ದೇಶದ ಜನರು ಪರದಾಡುತ್ತಿದ್ದರೆ, ಗುಜರಾತ್ ನ ನವ್ಸಾರಿ ಜಿಲ್ಲೆಯಲ್ಲಿ ನಡೆಯುತ್ತಿದ್ದ ಸಂಗೀತ ಕಾರ್ಯಕ್ರಮದ ವೇಳೆ ಜನಪದ ಗಾಯಕರ ಮೇಲೆ 40 ಲಕ್ಷ ರುಪಾಯಿ ಹಣದ ಹೊಳೆ ಹರಿಸಿದ್ದಾರೆ. ಶ್ರೀ ಗುಜ್ಜರ್ ಕ್ಷತ್ರಿಯ ಖದಿಯಾ ಸಮಾಜ ಭಾನುವಾರ ರಾತ್ರಿ ಕಾರ್ಯಕ್ರಮ ಆಯೋಜಿಸಿತ್ತು.

ನೆರೆದಿದ್ದ ಪ್ರೇಕ್ಷಕರು ಜನಪದ ಗಾಯಕರಾದ ಫರೀದಾ ಮಿರ್ ಮತ್ತು ಮಾಯಾಬಾಯಿ ಅಹಿರ್ ಮೇಲೆ 10 ಹಾಗೂ 20 ರುಪಾಯಿ ನೋಟುಗಳ ಮಳೆ ಸುರಿದಿದ್ದಾರೆ. ಆಯೋಜಕರು ಈ ಬಗ್ಗೆ ಸ್ಪಷ್ಟನೆ ನೀಡಿದ್ದು, ಕಾರ್ಯಕ್ರಮದಲ್ಲಿ ಸಂಗ್ರಹವಾದ ಹಣವನ್ನು ಸಾಮಾಜಿಕ ಸೇವಾ ಕಾರ್ಯಗಳಿಗೆ ಬಳಸಲಾಗುವುದು ಎಂದು ಹೇಳಿದ್ದಾರೆ.[ಬಾಗಲಕೋಟೆ ಡಿಸಿಸಿ ಬ್ಯಾಂಕಿನಲ್ಲಿ 5ದಿನದಲ್ಲಿ 162 ಕೋಟಿ ಜಮೆ, ತನಿಖೆ]

Gujarat

ಈ ಹಿಂದೆ ಹೊಸ ಎರಡು ಸಾವಿರ ರುಪಾಯಿಗಳ ನೋಟುಗಳನ್ನು ಜನಪದ ಗಾಯಕ ಕೀರ್ತಿದಾನ್ ಗಧ್ವಿ ಅವರ ಮೇಲೆ ಸುರಿದಿತ್ತು. ಆ ಕಾರ್ಯಕ್ರಮವು ಗುಜರಾತ್ ಬನಸ್ಕಾಂತ ಜಿಲ್ಲೆಯ ಪಲಾನ್ ಪುರ್ ಪ್ರದೇಶದಲ್ಲಿ ನಡೆದಿತ್ತು. ಆ ಕಾರ್ಯಕ್ರಮವನ್ನು ಮುಕ್ತೇಶ್ವರ್ ಮಹಾದೇವ್ ದೇವಸ್ಥಾನದಿಂದ ಆಯೋಜಿಸಲಾಗಿತ್ತು.

English summary
At a time when people are facing cash crunch all over the country, residents in Gujarat's Navsari district, showered ₹40 lakh on folk singers during a musical event.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X