ಬೆಂಗಳೂರಾಯ್ತು, ಇಂದು ಅಹ್ಮದಾಬಾದಿನಲ್ಲಿ ಅಗ್ನಿ ದುರಂತ: 4 ಸಾವು
ಅಹ್ಮದಾಬಾದ್, ಜನವರಿ 09: ಬೆಂಗಳೂರಿನ ಕೆ.ಆರ್.ಮಾರ್ಕೇಟ್ ಸೀಪದ ಕೈಲಾಶ್ ಬಾರ್ ನಲ್ಲಿ ನಿನ್ನೆ(ಜ.08) ಸಂಭವಿಸಿದ ಅಗ್ನಿ ಆಕಸ್ಮಿಕಕ್ಕೆ 5 ಜನ ಮೃತರಾದ ಸುದ್ದಿ ಮಾಸುವ ಮುನ್ನವೇ ಗುಜರಾತಿನ ಅಹ್ಮದಾಬಾದಿನ ಅಂಗಡಿಯೊಂದರಲ್ಲಿ ಸಂಭವಿಸಿದ ಅಗ್ನಿ ದುರಂತಕ್ಕೆ 4 ಜನ ಸಾವಿಗೀಡಾಗಿದ್ದಾರೆ.
ಅಹ್ಮದಾಬಾದಿನ ನರಾನ್ಪುರ ಎಂಬಲ್ಲಿ ದಿನಸಿ ಅಂಗಡಿಯೊಂದಕ್ಕೆ ಬೆಂಕಿ ತಗುಲಿದ ಪರಿಣಾಮ ಈ ದುರ್ಘಟನೆ ಸಂಭವಿಸಿದೆ. ಘಟನೆ ಕುರಿತು ಹೆಚ್ಚಿನ ಮಾಹಿತಿ ಲಭ್ಯವಾಗಬೇಕಿದೆ.

ಇತ್ತೀಚೆಗೆ ಬೆಂಕಿ ಅವಘಡಗಳು ಪದೇ ಪದೇ ಸಂಭವಿಸುತ್ತಿದ್ದು, 2017 ರ ವರ್ಷಾಂತ್ಯದಲ್ಲಿ ಮುಂಬೈಯ ಕಮಲಾ ಮಿಲ್ ನಲ್ಲಿ ಸಂಭವಿಸಿದ ಭೀಕರ ಬೆಂಕಿ ದುರಂತದಲ್ಲಿ 14 ಜನ ಮೃತರಾಗಿದ್ದನ್ನು ಇಲ್ಲಿ ಸ್ಮರಿಸಬಹುದು.

ನಿನ್ನೆ ರಾತ್ರಿ (ಜ.08) ಮುಂಬೈಯಲ್ಲಿ ಮತ್ತೆ ಅಗ್ನಿ ದುರಂತ ಸಂಭವಿಸಿದ ಪರಿಣಾಮ ಏಳಕ್ಕೂ ಹೆಚ್ಚು ಅಂಗಡಿಗಳು ಸುಟ್ಟು ಕರಕಲಾಗಿದ್ದು, ಯಾವುದೇ ಸಾವು ನೋವಿನ ವರದಿಯಾಗಿಲ್ಲ.












Click it and Unblock the Notifications