ಇಂಡಿಯಾ ಟಿವಿ ಎಕ್ಸಿಟ್ ಪೋಲ್: ಬಿಜೆಪಿಗೆ 104 ರಿಂದ 114 ಸ್ಥಾನ!
ನವದೆಹಲಿ, ಡಿಸೆಂಬರ್ 14: ಹಿಮಾಚಲ ಪ್ರದೇಶ ಮತ್ತು ಗುಜರಾತಿನಲ್ಲಿ ನಡೆದ ವಿಧಾನಸಭೆ ಚುನಾವಣೆಯ ಚುನಾವಣೋತ್ತರ ಸಮೀಕ್ಷೆ ಈಗಾಗಲೇ ಆರಂಭವಾಗಿದೆ.
ಬಹು ಕುತೂಹಲ ಕೆರಳಿಸಿದ್ದ ಗುಜರಾತ್ ವಿಧಾನಸಭೆ ಚುನಾವಣೆಯ ಎರಡನೇ ಹಂತದ ಮತದಾನ ಇಂದು ಮುಕ್ತಾಯಗೊಂಡಿರುವ ಕಾರಣ ವಿವಿಧ ವಾಹಿನಿಗಳು ಚುನಾವಣೋತ್ತರ ಸಮೀಕ್ಷೆಯನ್ನು ಇಂದು ಬಯಲಿಗೆಳೆಯುತ್ತಿವೆ.

ಇಂಡಿಯಾ ಟಿವಿ ಚುನಾವಣೋತ್ತರ ಸಮೀಕ್ಷೆ
* ಬಿಜೆಪಿ- 104- 114
* ಕಾಂಗ್ರೆಸ್- 65-75
* ಇತರರು- 2-4
ಇಂಡಿಯಾ ಟಿವಿ ಚುನಾವಣೋತ್ತರ ಸಮೀಕ್ಷೆ ಫಲಿತಾಂಶ ಹೊರಬಿದ್ದಿದ್ದು, ಬಿಜೆಪಿ ಬಹುಮತ ಗಳಿಸುವುದಾಗಿ ಹೇಳಿದೆ.
ಬಿಜೆಪಿ 104 ರಿಂದ 114 ಸ್ಥಾನ ಗಳಿಸಿ ಸ್ಪಷ್ಟ ಬಹುಮತ ಪಡೆಯಲಿದೆ ಎಂದು ಅದು ಹೇಳಿದೆ. ಕಾಂಗ್ರೆಸ್ 65 ರಿಂದ 75 ಸ್ಥಾನ ಗಳಿಸಿದರೆ, ಇತರರು 2 ರಿಂದ 4 ಸ್ಥಾನ ಗಳಿಸಲಿದ್ದಾರೆ.
* ಉತ್ತರ ಗುಜರಾತಿನಲ್ಲಿ ಬಿಜೆಪಿ 28-34, ಕಾಂಗ್ರೆಸ್ 18-24, ಇತರರು 0-2 ಸ್ಥಾನ ಗಳಿಸಲಿದ್ದಾರೆ.
* ಸಮೀಕ್ಷೆ ಪ್ರಕಾರ ಸೌರಾಷ್ಟ್ರ ಮತ್ತು ಕಛ್ ನಲ್ಲಿ ಬಿಜೆಪಿ ಶೇ. 46 ಮತಗಳನ್ನು ಪಡೆದರೆ, ಕಾಂಗ್ರೆಸ್ ಶೇ.45 ಮತ್ತು ಇತರರು ಶೇ.9 ತಗಳನ್ನು ಪಡೆಯಲಿದ್ದಾರೆ.
* ದಕ್ಷಿಣ ಗುಜರಾತಿನಲ್ಲಿರುವ 35 ಸ್ಥಾನಗಳ ಪೈಕಿ ಬಿಜೆಪಿ, 24 ರಿಂದ 30 ಸ್ಥಾನ ಪಡೆಯಲಿದ್ದು, ಕಾಂಗ್ರೆಸ್ 6 ರಿಂದ 8 ಸ್ಥಾನವನ್ನಷ್ಟೇ ಪಡೆಯಲಿದೆ. ಇತರರು 2 ಸ್ಥಾನ ಪಡೆಯಬಹುದು.
* ಮಧ್ಯ ಗುಜರಾತ್ ನಲ್ಲಿ 129 ಸ್ಥಾನದ ಚುನಾವಣೋತ್ತರ ಸಮೀಕ್ಷೆಯ ಫಲಿತಾಂಶ ಹೊರಬಿದ್ದಿದ್ದು, ಅದರಲ್ಲಿ 70-86 ಸ್ಥಾನ ಬಿಜೆಪಿ, 43-55 ಸ್ಥಾನ ಕಾಂಗ್ರೆಸ್ಸಿಗೆ ಮತ್ತಿ 0-4 ಸ್ಥಾನ ಇತರರಿಗೆ ಸಿಗಬಹುದೆಂದು ಅಂದಾಜಿಸಲಾಗಿದೆ.
* ಮಧ್ಯ ಗುಜರಾತ್ ನಲ್ಲಿ ಬಿಜೆಪಿ - 47% ಮತ, ಕಾಂಗ್ರೆಸ್ - 41% ಮತ ಮತ್ತು ಇತರರು - 12% ಮತಪಡೆಯಲಿದ್ದಾರೆ ಎಂದು ಸಮೀಕ್ಷೆ ತಿಳಿಸಿದೆ.
* ಬಿಜೆಪಿ ಸೌರಾಷ್ಟ್ರ ಮತ್ತು ಕಚ್ ನಲ್ಲಿ ಬಿಜೆಪಿ ಜಯಭೇರಿ ಬಾರಿಸಲಿದ್ದು ಇಲ್ಲಿ 54 ಸ್ಥಾನಗಳಲ್ಲಿ ಬಿಜೆಪಿ 31 ಸ್ಥಾನಗಳಿಸಲಿದೆ ಎಂದು ಇಂಡಿಯಾ ಟಿವಿ ಸಮೀಕ್ಷೆ ಹೇಳಿದೆ.
* 182 ಸ್ಥಾನಗಳಲ್ಲಿ ಈಗಾಗಲೇ 89 ಸ್ಥಾನಗಳ ಚುನಾವಣೋತ್ತರ ಸಮೀಕ್ಷೆಯ ಫಲಿತಾಂಶವನ್ನು ಇಂಡಿಯಾ ಟಿವಿ ಹೊರಹಾಕಿದ್ದು, ಬಿಜೆಪಿ 49-69, ಕಾಂಗ್ರೆಸ್ 29-37, ಇತರರು 0-2 ಸ್ಥಾನ ಗೆಲ್ಲಬಹುದು ಎಂದು ಸಮೀಕ್ಷೆ ಹೇಳಿದೆ.
ನವೆಂಬರ್ 9 ರಂದು ಹಿಮಾಚಲ ಪ್ರದೇಶ ವಿಧಾನಸಭೆಯ 68 ಕ್ಷೇತ್ರಗಳಿಗೆ ಮತದಾನ ನಡೆದಿತ್ತು. ಶೇ.74 ಪ್ರತಿಶತ ಮತದಾನವಾಗಿದ್ದರಿಂದ ಇದು ಬಿಜೆಪಿಗೆ ಲಾಭವಾಗಲಿದೆ ಎಂದು ವಿಶ್ಲೇಷಿಸಲಾಗಿತ್ತು.
ಗುಜರಾತಿನಲ್ಲಿ ಡಿ.9 ಮತ್ತು ಡಿ.14 ರಂದು ಎರಡು ಹಂತದಲ್ಲಿ ಮತದಾನ ನಡೆದಿದ್ದು, ಎರಡೂ ರಾಜ್ಯಗಳ ಫಲಿತಾಂಶ ಡಿ.18 ರಂದು ಹೊರಬೀಳಲಿದೆ.












Click it and Unblock the Notifications