ರಾಹುಲ್ ಗಾಂಧಿ ಟ್ವಿಟ್ಟರ್ ನಲ್ಲಿ ಕಾಂಗ್ರೆಸ್ಸಿಗರ ಗುಣಗಾನ!
ನವದೆಹಲಿ, ಡಿಸೆಂಬರ್ 18: ಗುಜರಾತ್ ನಲ್ಲಿ ಕಾಂಗ್ರೆಸ್ ಪಕ್ಷ ತೋರಿದ ಗಮನಾರ್ಹ ಸಾಧನೆಗೆ, ಕಾಂಗ್ರೆಸ್ ಕಾರ್ಯಕರ್ತರು ಮತ್ತು ನಾಯಕರಿಗೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅಭಿನಂದನೆ ಸಲ್ಲಿಸಿದ್ದಾರೆ. ಕಾಂಗ್ರೆಸ್ ನ ಸಭ್ಯತೆ ಮತ್ತು ಧೈರ್ಯವನ್ನು ಪ್ರತಿಬಿಂಬಿಸಲು ನೀವು ಪಟ್ಟ ಶ್ರಮಕ್ಕೆ ನನ್ನ ಅನಂತ ಧನ್ಯವಾದಗಳು ಎಂದು ಅವರು ಕೃತಜ್ಞತೆ ಅರ್ಪಿಸಿದ್ದಾರೆ.
ನ. 9 ರಂದು ಹಿಮಾಚಲ ಪ್ರದೇಶ ಮತ್ತು ಡಿ.9 ಮತ್ತು ಡಿ.14ರಂದು ಗುಜರಾತಿನಲ್ಲಿ ನಡೆದ ಚುನಾವಣೆಗಳ ಫಲಿತಾಂಶ ಇಂದು(ಡಿ.18) ಹೊರಬಿದ್ದಿದ್ದು ಬಿಜೆಪಿ ಎರಡೂ ರಾಜ್ಯಗಳಲ್ಲಿ ಬಹುಮತ ಪಡೆದಿದೆ. ಆದರೂ ಕಾಂಗ್ರೆಸ್ ಪಕ್ಷ ಗುಜರಾತಿನಲ್ಲಿ ತೋರಿದ ಸಾಧನೆಯನ್ನು ಅತ್ಯುತ್ತಮ ಎಂದೇ ವರ್ಣಿಸಲಾಗುತ್ತಿದೆ. ಅದರಲ್ಲೂ ರಾಹುಲ್ ಗಾಂಧಿಯವರು ಎಡಬಿಡದೆ ನಡೆಸಿದ ಪ್ರಚಾರ ಕಾರ್ಯಗಳು ಫಲಕೊಟ್ಟಿವೆ ಎಂಬುದು ಈ ಮೂಲಕ ಸಾಬೀತಾಗಿದೆ.
Recommended Video

ಒಟ್ಟಿನಲ್ಲಿ ಕಾಂಗ್ರೆಸ್ ಸೋತು ಗೆದ್ದಿದೆ! ಈ ಕುರಿತು ಅಧ್ಯಕ್ಷ ರಾಹುಲ್ ಗಾಂಧಿಯವರ ಟ್ವೀಟ್ ಹೇಳಿಕೆ ಇಲ್ಲಿದೆ.
|
ನಿಮ್ಮ ಬಗ್ಗೆ ನನಗೆ ಹೆಮ್ಮೆಯಾಗುತ್ತಿದೆ!
ಕಾಂಗ್ರೆಸ್ ನ ನನ್ನ ಸಹೋದರ, ಸಹೋದರಿಯರೇ, ನೀವು ನನ್ನನ್ನು ಹೆಮ್ಮೆಪಡುವಂತೆ ಮಾಡಿದ್ದೀರಿ. ನೀವು ಯಾರೊಂದಿಗೆ ಸೆಣೆಸಿದ್ದೀರೋ ಅವರಿಗಿಂತ ಭಿನ್ನವಾಗಿ ವರ್ತಿಸಿದ್ದೀರಿ. ಏಕೆಂದರೆ ನೀವು ಸಿಟ್ಟನ್ನು ಘನತೆಯಿಂದ ಎದುರಿಸಿದ್ದೀರಿ. ಕಾಂಗ್ರೆಸ್ಸಿನ ಬಹುದೊಡ್ಡ ಬಲವೇ ಅದರ ಸಭ್ಯತೆ ಮತ್ತು ಧೈರ್ಯ ಎಂಬುದನ್ನು ನೀವು ಈ ಮೂಲಕ ತೋರಿಸಿಕೊಟ್ಟಿದ್ದೀರಿ ಎಂದು ರಾಹುಲ್ ಗಾಂಧಿಯವರು ಟ್ವೀಟ್ ಮಾಡಿದ್ದಾರೆ.
|
ಜನರ ತೀರ್ಪನ್ನು ಸ್ವಾಗತಿಸುತ್ತೇವೆ
ಕಾಂಗ್ರೆಸ್ ಪಕ್ಷವು ಜನರ ತೀರ್ಪನ್ನು ಒಪ್ಪಿಕೊಳ್ಳುತ್ತದೆ. ಹಾಗೆಯೇ ಈ ಎರಡೂ ರಾಜ್ಯಗಳ ಹೊಸ ಸರ್ಕಾರವನ್ನು ನಾನು ಅಭಿನಂದಿಸುತ್ತೇನೆ. ಮತ್ತು ನನ್ನ ಮೇಲೆ ಅತೀವ ಪ್ರೀತಿ ತೋರಿದ ಗುಜರಾತ್ ಮತ್ತು ಹಿಮಾಚಲ ಪ್ರದೇಶದ ಜನರಿಗೆ ನನ್ನ ಹೃದಯಪೂರ್ವಕ ಧನ್ಯವಾದ ಅರ್ಪಿಸುತ್ತೇನೆ ಎಂದೂ ಅವರು ಟ್ವೀಟ್ ಮಾಡಿದ್ದಾರೆ.
|
ರಾಹುಲ್ ರನ್ನು ನೋಡಿ ಇಂದಿರಾ ಗಾಂಧಿ ನೆನಪಾದರು
ಗುಜರಾತಿನಲ್ಲಿ ಕಾಂಗ್ರೆಸ್ ಅತ್ಯುತ್ತಮ ಪ್ರಚಾರ ನಡೆಸಿತ್ತು. ರಾಹುಲ್ ಗಾಂಧಿ ಅವರ ಪ್ರಚಾರವನ್ನು ಕಂಡು ನನಗೆ ಇಂದಿರಾ ಗಾಂಧಿಯವರು ನೆನೆಪಾದರು ಎಂದು ಗುಜರಾತ್ ನ ಕಾಂಗ್ರೆಸ್ ಉಸ್ತುವಾರಿ ಅಶೋಕ್ ಗೆಹ್ಲೋಟ್ ಹೇಳುವ ಮೂಲಕ ರಾಹುಲ್ ಗಾಂಧಿಯವರನ್ನು ಶ್ಲಾಘಿಸಿದರು.
|
ವಿಧಾನಸಭೆಯಲ್ಲಿ ಧ್ವನಿ ಎತ್ತುತ್ತೇನೆ
ನನ್ನನ್ನು ಗೆಲ್ಲಿಸಿದ ವಡ್ಗಾಮ್ ಜನರಿಗೆ ನಾನು ಕೃತಜ್ಞತೆ ಅರ್ಪಿಸುತ್ತೇನೆ. ತಾರತಮ್ಯ ಅನುಭವಿಸುತ್ತಿರುವ ವರ್ಗದ ಕುರಿತು ನಾನೀಗ ಗುಜರಾತಿನ ವಿಧಾನಸಭೆಯಲ್ಲಿ ಧ್ವನಿ ಎತ್ತಬಹುದು ಎಂದು ವಡ್ಗಾಮ್ ಕ್ಷೇತ್ರದಿಂದ ಜಯಗಳಿಸಿದ ಜಿಗ್ನೇಶ್ ಮೇವಾನಿ ಸಂತಸ ವ್ಯಕ್ತಪಡಿಸಿದರು.












Click it and Unblock the Notifications