ಗುಜರಾತ್ : ಜಿಗ್ನೇಶ್ ಮೆವಾನಿ ಸ್ವತಂತ್ರ ಸ್ಪರ್ಧೆ, ಕಾಂಗ್ರೆಸ್ ಬೆಂಬಲ

Posted By:
Subscribe to Oneindia Kannada

ಅಹಮಹಾಬಾದ್, ನವೆಂಬರ್ 27: ದಲಿತ ಮುಖಂಡ ಜಿಗ್ನೇಶ್ ಮೆವಾನಿ ಅವರು ಗುಜರಾತ್ ವಿಧಾನಸಭೆ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿಯುವುದಾಗಿ ಸೋಮವಾರದಂದು ಘೋಷಿಸಿದ್ದಾರೆ.

ಕಾಂಗ್ರೆಸ್ ನಿಂದ ಬಾಹ್ಯ ಬೆಂಬಲ ಪಡೆಯಲಿರುವ ಜಿಗ್ನೇಶ್ ಅವರು ವಡಗಮ್ ಮೀಸಲು ಕ್ಷೇತ್ರ(ಎಸ್ ಸಿ) ದಿಂದ ಸ್ಪರ್ಧಿಸುತ್ತಿದ್ದಾರೆ.

ಬಿಜೆಪಿ ಗೆಲುವಿನ ಮೇಲೆ ಸಾವಿರಾರು ಕೋಟಿ ರು ಬೆಟ್ಟಿಂಗ್!

ಬನಸ್ಕಂದ ಜಿಲ್ಲೆಯ ವಡಗಮ್ ಕ್ಷೇತ್ರದ ಹಾಲಿ ಕಾಂಗ್ರೆಸ್ ಶಾಸಕ ಮನಿಭಾಯಿ ವಘೇಲಾ ಅವರನ್ನು ಈ ಬಾರಿ ಸ್ಪರ್ಧಿಸದಂತೆ ಕಾಂಗ್ರೆಸ್ ಈಗಾಗಲೇ ಸೂಚಿಸಿದ್ದು, ಮೆವಾನಿ ಜತೆ ಮಾಡಿಕೊಂಡ ಒಪ್ಪಂದದಂತೆ ಕಾಂಗ್ರೆಸ್ ಬೆಂಬಲ ನೀಡಲು ಮುಂದಾಗಿದೆ.

 Jignesh Mevani to contest as Independent with Congress’ support

ಬನಸ್ಕಂದ ಜಿಲ್ಲೆಯ ವಡಗಮ್ ಕ್ಷೇತ್ರದ ಹಾಲಿ ಕಾಂಗ್ರೆಸ್ ಶಾಸಕ ಮನಿಭಾಯಿ ವಘೇಲಾ ಅವರನ್ನು ಈ ಬಾರಿ ಸ್ಪರ್ಧಿಸದಂತೆ ಕಾಂಗ್ರೆಸ್ ಈಗಾಗಲೇ ಸೂಚಿಸಿದ್ದು, ಮೆವಾನಿ ಜತೆ ಮಾಡಿಕೊಂಡ ಒಪ್ಪಂದದಂತೆ ಕಾಂಗ್ರೆಸ್ ಬೆಂಬಲ ನೀಡಲು ಮುಂದಾಗಿದೆ.

ಎನ್‌ಆರ್‌ಐ ಪಟೇಲರಿಂದ ಬಿಜೆಪಿಗೆ ಬೆಂಬಲ

ಬಿಜೆಪಿ ನಮ್ಮ ಶತ್ರು, ಆ ಪಕ್ಷದೊಡನೆ ನೇರವಾಗಿ ಯುದ್ಧ ಮಾಡಬೇಕಿದೆ. ಹೀಗಾಗಿ ನಿಮ್ಮ ಅಭ್ಯರ್ಥಿಗಳನು ಕಣಕ್ಕಿಳಿಸಬೇಡಿ ಎಂದು ಸಣ್ಣ ಪುಟ್ಟ ಪಕ್ಷಗಳಿಗೆ ಸಾಮಾಜಿಕ ಜಾಲ ತಾಣಗಳ ಮೂಲಕ ಜಿಗ್ನೇಶ್ ಮನವಿ ಮಾಡಿಕೊಂಡಿದ್ದಾರೆ. ಸರ್ವಾಧಿಕಾರಿಗಳಂತೆ ಮೆರೆಯುತ್ತಿರುವ ಬಿಜೆಪಿಯ ಸೊಕ್ಕು ಅಡಗಿಸಲು ನನ್ನ ಹೋರಾಟ ಸದಾ ಜಾರಿಯಲ್ಲಿರುತ್ತದೆ ಎಂದು ಜಿಗ್ನೇಶ್ ಹೇಳಿದ್ದಾರೆ.

ಬಿಜೆಪಿಯ ವಿಜಯ್ ಚಕ್ರವರ್ತಿ ವಿರುದ್ಧ ಜಿಗ್ನೇಶ್ ಕಣಕ್ಕಿಳಿಯಲಿರುವ ಜಿಗ್ನೇಶ್ ಅವರು ಕಾಂಗ್ರೆಸ್ ಮುಂದಿಟ್ಟಿದ್ದ ಬೇಡಿಕೆಗಳಲ್ಲಿ ಶೇ90ರಷ್ಟಕ್ಕೆ ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು ಸಮ್ಮತಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

ಗುಜರಾತ್ ನಲ್ಲಿ ಬಿಜೆಪಿಯಿಂದ 'ಮನ್ ಕೀ ಬಾತ್, ಚಾಯ್ ಕೆ ಸಾಥ್'

ಗುಜರಾತ್ ವಿಧಾನಸಭೆಯ 89 ಕ್ಷೇತ್ರಗಳಿಗೆ ಡಿಸೆಂಬರ್ 9ರಂದು ಮೊದಲ ಹಂತದ ಮತದಾನ ನಡೆಯಲಿದೆ. ಎರಡನೇ ಹಂತದ ಮತದಾನ 93 ಕ್ಷೇತ್ರಗಳಿಗೆ ಡಿಸೆಂಬರ್ 14ರಂದು ನಡೆಯಲಿದೆ. 182 ವಿಧಾನಸಭಾ ಕ್ಷೇತ್ರಗಳ ಗುಜರಾತ್ ವಿಧಾಸಭೆಗೆ ಡಿಸೆಂಬರ್ 18ರಂದು ಮತಎಣಿಕೆ ನಡೆಯಲಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Dalit leader Jignesh Mevani on Monday announced his decision to contest the Gujarat polls from the Vadagam (SC) seat of Banaskantha district as an Independent candidate with outside support of the Congress.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ