Gujarat Results 2022 Winners List : 156 ಸ್ಥಾನದ ಪಡೆದು ಬಿಜೆಪಿಗೆ ಐತಿಹಾಸಿಕ ಜಯ
ಬೆಂಗಳೂರು, ಡಿಸೆಂಬರ್ 08: ಗುಜರಾತ್ ವಿಧಾನಸಭಾ ಚುನಾವಣೆ 2022ರಲ್ಲಿ ಬಿಜೆಪಿ ಪಕ್ಷ ಸತತ ಏಳನೇ ಬಾರಿಗೆ ಐತಿಹಾಸಿಕ ಜಯ ಸಾಧಿಸಿದೆ. ರಾಜ್ಯದ ಒಟ್ಟು 182ಕ್ಷೇತ್ರಗಳಲ್ಲಿ ಪೈಕಿ ಬಿಜೆಪಿಯು ಒಟ್ಟು 156ಕ್ಷೇತ್ರವನ್ನು ಬಾಚಿಕೊಂಡು ವಿಜೃಂಭಿಸಿದೆ.
ಗುಜರಾತಿನಲ್ಲಿ ಆರಂಭದಿಂದಲೂ ಮುನ್ನಡೆ ಕಾಯ್ದುಕೊಂಡಿದ್ದ ಬಿಜೆಪಿ ನಿರೀಕ್ಷಿತ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದೆ. ಯಾವ ಎದುರಾಳಿ ಪಕ್ಷ ಪೈಪೋಟಿಗೆ ಸಿಲುಕದೆ ಸರಾಗವಾಗಿ ಜಯ ಭೇಟಿ ಭಾರಿಸಿದೆ. ಗುಜರಾತಿನ ಜನರು ಸಸತವಾಗಿ ಬಿಜೆಪಿ ಏಳನೇ ಭಾರಿ ಬಿಜೆಪಿಯ ಐತಿಹಾಸಿಕ ಕಾರಣರಾಗಿದ್ದಾರೆ.

ಈ ಕುರಿತು ಭಾರತೀಯ ಚುನಾವಣೆ ಆಯೋಗ ಮಾಹಿತಿ ನೀಡಿದ್ದು, ಗುಜರಾತಿನಲ್ಲಿ ಕಾಂಗ್ರೆಸ್ ಭಾರಿ ಹಿನ್ನಡೆ ಅನುಭವಿಸಿದೆ. ಕೇವಲ 17 ಸ್ಥಾನ ಹೊಂದುವ ಮೂಲಕ ನೆಲಕಚ್ಚಿದೆ. ಉಳಿದಂತೆ ಗುರುವಾರಷ್ಟೇ ರಾಷ್ಟ್ರೀಯ ಪಕ್ಷವೆಂದು ಘೋಷಿಸಿಕೊಂಡ ಆಮ್ ಆದ್ಮಿ ಪಕ್ಷ (ಎಎಪಿ) 05 ಕ್ಷೇತ್ರಗಳಲ್ಲಿ ಗೆಲುವಿನ ನಗೆ ಬೀರಿದೆ. 03ವಿಧಾನಸಭಾ ಕ್ಷೇತ್ರಗಳು ಪಕ್ಷೇತರ ಅಭ್ಯರ್ಥಿಗಳ ಪಾಲಾದರೆ 01 ಕ್ಷೇತ್ರದಲ್ಲಿ ಸಮಾಜವಾದಿ ಪಾರ್ಟಿ ಗೆದ್ದಿದೆ.
ಚುನಾವಣೆ ಮತೆಣಿಕೆ ಪ್ರಕ್ರಿಯೆ ಆರಂಭವಾದ ಬಳಿಕ ನಿರಂತರವಾಗಿ ಮುನ್ನಡೆ ಕಾಯ್ದುಕೊಂಡಿದ್ದನ್ನು ಕಂಡು ಬಿಜೆಪಿ ನಾಯಕರು ಹರ್ಷ ವ್ಯಕ್ತಪಡಿಸಿದರು. ಸಂಜೆಯಾಗುತ್ತಿದ್ದಂತೆ ರಾಷ್ಟ್ರ ರಾಜಧಾನಿ ದೆಹಲಿಯ ಪಕ್ಷದ ಕಚೇರಿಯಲ್ಲಿ ಮುಖಂಡರು, ಕಾರ್ಯಕರ್ತರ ಸಂಭ್ರಮಾಚರಣೆ ಕಂಡು ಬಂತು. ಪ್ರಧಾನಿ ನರೇಂದ್ರ ಮೋದಿ ಪರ ಘೋಷಣೆಗಳು ಮೊಳಗಿದವು. ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ.ನಡ್ಡಾ ಸೇರಿದಂತೆ ಮುಖಂಡರು ಬೃಹತ್ ಹಾರದ ಮುಖೇನ ಪ್ರಧಾನಿಗಳನ್ನು ಅಭಿನಂದಿಸಿದರು.












Click it and Unblock the Notifications