Gujarat Election Results 2022: 135 ಜನರನ್ನು ಬಲಿ ಪಡೆದ ಕ್ಷೇತ್ರದಲ್ಲಿ ಬಿಜೆಪಿಗೆ ಜಯ

ಅಹಮದಾಬಾದ್, ಡಿ. 08: ಗುಜರಾತ್‌ನ ಮೊರ್ಬಿ ಸೇತುವೆ ದುರಂತ ಜನರ ಮನಸ್ಸಿನಿಂದ ಇನ್ನೂ ಮರೆಯಾಗಿಲ್ಲ. ಆ ದುರಂತದಲ್ಲಿ 135 ಮಂದಿ ಅಮಾಯಕರು ಬಲಿಯಾಗಿದ್ದು. ಈಗ ಅದೇ ಕ್ಷೇತ್ರದಲ್ಲಿ ಮತ್ತೆ ಬಿಜೆಪಿ ಗೆಲುವು ದಾಖಲಿಸಿದೆ.

ಕಳಪೆ ಕಾಮಗಾರಿಯಿಮದಾಗಿ ಮೊರ್ಬಿಯ ತೂಗು ಸೇತುವೆ ಕುಸಿದು ಅಕ್ಟೋಬರ್ 30 ರಂದು ಭೀಕರ ದುರಂತ ಸಂಭವಿಸಿತ್ತು. ಈ ಸೇತುವೆ ಕುಸಿತದಲ್ಲಿ ಮಕ್ಕಳು, ಮಹಿಳೆಯರು ಸೇರಿ 135 ಮಂದಿ ಪ್ರಾಣ ಕಳೆದುಕೊಂಡಿದ್ದರು. ಇದರಲ್ಲಿ ಸ್ಥಳೀಯ ಆಡಳಿತವು ದುರಸ್ತಿ ಮತ್ತು ನಿರ್ವಹಣೆಗಾಗಿ ಖಾಸಗಿ ಕಂಪನಿಯನ್ನು ನೇಮಿಸಿಕೊಳ್ಳುವಾಗ ನಿಯಮಗಳನ್ನು ಉಲ್ಲಂಘಿಸಿದೆ ಎಂದು ಆರೋಪಿಸಲಾಗಿದೆ.

ಸೇತುವೆ ದುರಂತದ ನಂತರ ಗಮನ ಸೆಳೆದಿರುವ ಕ್ಷೇತ್ರದಲ್ಲಿ ಐದು ಬಾರಿ ಶಾಸಕರಾಗಿರುವ ಬಿಜೆಪಿಯ ಕಾಂತಿಭಾಯ್ ಅಮೃತಿಯಾ ಗೆಲುವು ಸಾಧಿಸಿದ್ದಾರೆ. ತಮ್ಮ ಪ್ರತಿಸ್ಪರ್ಧಿ ಕಾಂಗ್ರೆಸ್ಸಿನ ಜಯಂತಿಲಾಲ್ ಪಟೇಲ್ ಅವರಿಗಿಂತ 62,000 ಮತಗಳ ಅಂತರದಿಂದ ಗೆದ್ದಿದ್ದಾರೆ. ಇವರು 1995 ರಿಂದ 2012 ರವರೆಗೆ ಐದು ಬಾರಿ ಈ ವಿಧಾನಸಭಾ ಕ್ಷೇತ್ರದಲ್ಲಿ ಗೆದ್ದಿದ್ದಾರೆ.

Gujarat Election Results 2022: BJPs Kantibhai Amrutiya won Morbi

ಸೇತುವೆ ದುರಂತಕ್ಕೆ ಕಾರಣವಾದ ಲೋಪಗಳ ಬಗ್ಗೆ ಬಿಜೆಪಿಯನ್ನು ಗುರಿಯಾಗಿಸಿಕೊಂಡು ವಾಗ್ದಾಳಿ ಮಾಡುತ್ತಿದ್ದ ಆಮ್ ಆದ್ಮಿ ಪಕ್ಷದ (ಎಎಪಿ) ಅಭ್ಯರ್ಥಿ ಪಂಕಜ್ ರಂಸಾರಿಯಾ ಮೂರನೇ ಸ್ಥಾನದಲ್ಲಿದ್ದಾರೆ. ಇವರು ಕಾಂತಿಭಾಯ್ ಅಮೃತಿಯಾ ಸಂಬಂಧಿಯೂ ಹೌದು.

ಬಿಜೆಪಿಯ ಕಾಂತಿಭಾಯ್ ಅಮೃತಿಯಾ ಮೊರ್ಬಿ ಸೇತುವೆ ದುರಂತದ ರಕ್ಷಣಾ ಕಾರ್ಯಾಚರಣೆಯಲ್ಲಿ ಜನರಿಗೆ ಸಹಾಯ ಮಾಡಲು ನದಿಗೆ ಹಾರಿದ್ದರು. ಅದರ ವಿಡಿಯೋಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದವು. ಈ ಕೆಲಸಕ್ಕೆ ಮೆಚ್ಚಿ ಅನೇಕರು ಅವರನ್ನು "ಮೊರ್ಬಿ ಹೀರೋ" ಎಂದು ಕರೆದಿದ್ದರು.

ಬ್ರಿಟಿಷರ್ ಕಾಲದ ಮೊರ್ಬಿ ತೂಗು ಸೇತುವೆಯನ್ನು ನವೀಕರಣಕ್ಕಾಗಿ ಗಡಿಯಾರ ತಯಾರಕ ಎಂದು ಕರೆಯಲ್ಪಡುವ ಒರೆವಾ ಕಂಪನಿಗೆ ಗುತ್ತಿಗೆ ನೀಡಲಾಗಿತ್ತು. ಏಳು ತಿಂಗಳ ನಿರ್ವಹಣೆಯ ನಂತರ ದುರ್ಘಟನೆ ನಡೆದಿತ್ತು. ಪ್ರಕರಣದಲ್ಲಿ ಇನ್ನೂ ಒರೆವಾ ಕಂಪನಿ ಮಾಲೀಕರನ್ನು ಬಂಧಿಸಿಲ್ಲ.

Gujarat Election Results 2022: BJPs Kantibhai Amrutiya won Morbi

ಮೊರ್ಬಿಯಲ್ಲಿ ಪಾಟಿದಾರರ ಪ್ರಾಬಲ್ಯವಿದೆ. ಹಾಲಿ ಸರ್ಕಾರದಲ್ಲಿ ಸಚಿವರೂ ಆಗಿರುವ ಮಾಜಿ ಕಾಂಗ್ರೆಸ್ ನಾಯಕ ಬ್ರಿಜೇಶ್ ಮಿಶ್ರಾ ಅವರನ್ನು ಕೈಬಿಟ್ಟ ಬಿಜೆಪಿ, ಕಾಂತಿಭಾಯ್ ಅಮೃತಿಯಾಗೆ ಟಿಕೆಟ್ ನೀಡಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+