ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗುಜರಾತ್ ಚುನಾವಣೆ: ಬಿಜೆಪಿಗೆ ದೊಡ್ಡ ತಲೆನೋವಾಗಿದ್ದ ಮಂಜಲ್‌ಪುರ ಕ್ಷೇತ್ರ

|
Google Oneindia Kannada News

ಅಹಮದಾಬಾದ್ ನವೆಂಬರ್ 17: ಮಂಜಲ್‌ಪುರ ಕ್ಷೇತ್ರದ ಬಗ್ಗೆ ಬಿಜೆಪಿಯಲ್ಲಿ ಬಹಳ ದಿನಗಳಿಂದ ಗೊಂದಲವಿದೆ. ಆದರೆ, ಅಂತಿಮವಾಗಿ ಕೇಸರಿ ಪಾಳಯ ಯಾವುದೇ ರಿಸ್ಕ್ ತೆಗೆದುಕೊಳ್ಳದೆ ಹಳೆಯ ಹಾಗೂ ಅನುಭವಿ ಅಭ್ಯರ್ಥಿ ಯೋಗೇಶ್ ಪಟೇಲ್ ಅವರನ್ನು ಈ ಸ್ಥಾನಕ್ಕೆ ಆಯ್ಕೆ ಮಾಡಿದೆ. ಮಂಜಲಪುರ ಕ್ಷೇತ್ರಕ್ಕೆ ಇಂದು ನಾಮಪತ್ರ ಸಲ್ಲಿಸುವುದಾಗಿ ಯೋಗೀಶ್ ಪಟೇಲ್ ಹೇಳಿದ್ದಾರೆ.

ಯೋಗೇಶ್ ಪಟೇಲ್ ಅವರ ಹೆಸರು ಘೋಷಣೆಯನ್ನು ಅವರ ಬೆಂಬಲಿಗರು ಉತ್ಸಾಹದಿಂದ ಸ್ವಾಗತಿಸಿದ್ದಾರೆ. ಯೋಗೇಶ್ ಪಟೇಲ್ ಹೆಸರು ಘೋಷಣೆಯಾಗುತ್ತಿದ್ದಂತೆ ಅವರ ಬೆಂಬಲಿಗರು ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಿಸಿದ್ದಾರೆ.

ಯೋಗೇಶ್ ಗೌಡ ಹತ್ಯೆ; ಸಿಬಿಐ ತನಿಖೆ ಪ್ರಶ್ನಿಸಿದ್ದ ಅರ್ಜಿ ವಜಾ ಯೋಗೇಶ್ ಗೌಡ ಹತ್ಯೆ; ಸಿಬಿಐ ತನಿಖೆ ಪ್ರಶ್ನಿಸಿದ್ದ ಅರ್ಜಿ ವಜಾ

ವರದಿಯ ಪ್ರಕಾರ, ಮಂಜಲ್‌ಪುರ ಕ್ಷೇತ್ರದ ಶಾಸಕ ಯೋಗೇಶ್ ಪಟೇಲ್ ಏಳನೇ ಬಾರಿಗೆ ಚುನಾವಣಾ ಸಮರಕ್ಕೆ ಪ್ರವೇಶಿಸಲು ಪ್ರಯತ್ನಿಸುತ್ತಿದ್ದಾರೆ. ಈ ಸ್ಥಾನಕ್ಕೆ ಇನ್ನೂ ಹಲವು ನಾಯಕರ ಹೆಸರು ಚರ್ಚೆಯಾಗಿದೆ. ಮತ್ತೊಂದೆಡೆ, ಮಂಜಲ್‌ಪುರ ಕ್ಷೇತ್ರದಲ್ಲಿ ಆನಂದಿಬೆನ್‌ ಪುತ್ರಿ ಅನಾರ್‌ ಪಟೇಲ್‌ ಹೆಸರು ಚರ್ಚೆಗೆ ಗ್ರಾಸವಾಗಿತ್ತು. ಆದರೆ, ಕೊನೆಗೆ ಯೋಗೇಶ್ ಪಟೇಲ್ ಅವರ ಹೆಸರನ್ನು ಅಂತಿಮಗೊಳಿಸಲಾಗಿದೆ ಎಂಬ ಮಾಹಿತಿ ತಡರಾತ್ರಿ ಸಿಕ್ಕಿದೆ.

Gujarat Election: Candidate for Manjalpur Constituency, which is a big headache for BJP, is final

ಮಂಜಲ್‌ಪುರ ಸ್ಥಾನಕ್ಕೆ ನಾಮಪತ್ರ ಸಲ್ಲಿಕೆ ಹಿಂದಿನ ದಿನದವರೆಗೂ ಯಾವುದೇ ಹೆಸರನ್ನು ನಿರ್ಧರಿಸಲು ಸಾಧ್ಯವಾಗಿರಲಿಲ್ಲ. ಆದರೆ ತಡರಾತ್ರಿ ಈ ಸಮಸ್ಯೆ ಬಗೆಹರಿದಿದೆ. ಈಗ ಯೋಗೇಶ್ ಪಟೇಲ್ ಮಾತ್ರ ಮಂಜಲ್‌ಪುರ ಕ್ಷೇತ್ರದಿಂದ ಬಿಜೆಪಿಯನ್ನು ಪ್ರತಿನಿಧಿಸಲಿದ್ದಾರೆ.

Gujarat Election: Candidate for Manjalpur Constituency, which is a big headache for BJP, is final

ನಾನು ಬಹುಮತದಿಂದ ಗೆಲ್ಲುವ ವಿಶ್ವಾಸವಿದ್ದು, ಇಂದು ನನ್ನ ಬೆಂಬಲಿಗರೊಂದಿಗೆ ತೆರಳಿ ನಾಮಪತ್ರ ಭರ್ತಿ ಮಾಡುತ್ತೇನೆ ಎಂದು ಯೋಗೇಶ್ ಪಟೇಲ್ ಹೇಳಿದರು. ಟಿಕೆಟ್ ಸಿಗುವುದು ಖಚಿತ, ಗೆಲ್ಲುವುದರಲ್ಲಿ ಯಾವುದೇ ಅನುಮಾನವಿಲ್ಲ' ಎಂದೂ ಅವರು ಹೇಳಿಕೊಂಡಿದ್ದಾರೆ. ಯೋಗೇಶ್ ಪಟೇಲ್ ವಡೋದರದ ಮಂಜಲ್‌ಪುರ ಕ್ಷೇತ್ರದ ಬಿಜೆಪಿ ಶಾಸಕ. ಅವರು 2017 ರಲ್ಲಿ ಕಾಂಗ್ರೆಸ್‌ನ ಚಿರಾಗ್ ಹಂಸಕುಮಾರ್ ಜವೇರಿ (ಚಿರಾಗ್ ಜವೇರಿ) ಅವರನ್ನು 56,362 ಮತಗಳಿಂದ ಸೋಲಿಸಿದರು. 2017 ರಲ್ಲಿ ಯೋಗೇಶ್ ಪಟೇಲ್ 1,05,036 ಮತಗಳನ್ನು ಪಡೆದರೆ, ಚಿರಾಗ್ ಜವೇರಿ 48,674 ಮತಗಳನ್ನು ಪಡೆದರು.

English summary
Gujarat Assembly Elections 2022: Candidate for Manjalpur Constituency, a big headache for BJP, finalized
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X