Get Updates
Get notified of breaking news, exclusive insights, and must-see stories!

Gujarat: ಅಕ್ರಮ ದರ್ಗಾ ತೆರವಿಗೆ ನೋಟಿಸ್ ಜಾರಿಯಿಂದ ಘರ್ಷಣೆ: ಓರ್ವ ಸಾವು, 3 ಪೊಲೀಸರಿಗೆ ಗಾಯ!

ದರ್ಗಾವನ್ನು ಕೆಡವಲು ನಾಗರಿಕ ಮಂಡಳಿಯ ಅಧಿಕಾರಿಗಳ ತಂಡವು ನೋಟಿಸ್ ನೀಡಿದ ಪರಿಣಾಮ ಸಂಭವಿಸಿದ ಗಲಾಟೆಯಲ್ಲಿ ಓರ್ವ ವ್ಯಕ್ತಿ ಸಾವನ್ನಪ್ಪಿದ್ದು, ಮೂವರು ಪೊಲೀಸರು ಗಾಯಗೊಂಡ ಘಟನೆ ಗುಜರಾತಿನ ಜುನಾಗಢ್ ಜಿಲ್ಲೆಯಲ್ಲಿ ಶುಕ್ರವಾರ ನಡೆದಿದೆ.

ಅಕ್ರಮ ಒತ್ತುವರಿಯನ್ನು ತೆರವುಗೊಳಿಸಲಾಗುವುದು ಎಂದು ನಾಗರಿಕ ಮಂಡಳಿಯ ಅಧಿಕಾರಿಗಳ ತಂಡ ನೋಟಿಸ್‌ ನೀಡಿತ್ತು. ಇದರಿಂದ ಶುಕ್ರವಾರ ಸಂಜೆ ದರ್ಗಾದ ಸುತ್ತಲೂ ಕನಿಷ್ಠ 200-300 ಜನರು ಜಮಾಯಿಸಿದ್ದರು. ಈ ವೇಳೆ ಜನರ ಗುಂಪು ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿದೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅವರು ಪೊಲೀಸ್ ಅಧಿಕಾರಿಗಳ ಮೇಲೆ ಕಲ್ಲು ತೂರಾಟ ನಡೆಸುತ್ತಿರುವುದು ವೀಡಿಯೊದಲ್ಲಿ ಸ್ಪಷ್ಟವಾಗಿ ಕಾಣಿಸುತ್ತದೆ.

ಮಾತ್ರವಲ್ಲದೆ ಉದ್ರಿಕ್ತ ಗುಂಪು ಪೊಲೀಸ್ ಪೋಸ್ಟ್ ಅನ್ನು ಧ್ವಂಸಗೊಳಿಸಿದೆ ಮತ್ತು ಪೊಲೀಸ್ ವಾಹನಗಳಿಗೆ ಬೆಂಕಿ ಹಚ್ಚಿದೆ. ದಾಳಿಯಲ್ಲಿ ಉಪ ಪೊಲೀಸ್ ವರಿಷ್ಠಾಧಿಕಾರಿ ಸೇರಿದಂತೆ ಮೂವರು ಪೊಲೀಸರು ಗಾಯಗೊಂಡಿದ್ದಾರೆ. ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಇದುವರೆಗೆ ಪೊಲೀಸರು 174 ಜನರನ್ನು ಬಂಧಿಸಿದ್ದಾರೆ.

Gujarat: Clash due to issuance of notice for eviction of illegal dargah: 1 dead, 3 policemen injured

ಜನಸಮೂಹ ಪೊಲೀಸರ ಮೇಲೆ ಕಲ್ಲು ತೂರಾಟವನ್ನು ಪ್ರಾರಂಭಿಸಿದಾಗ, ಪೊಲೀಸ್ ಅಧಿಕಾರಿಗಳು ಉದ್ರಿಕ್ತ ಗುಂಪಿನ ಮೇಲೆ ಅಶ್ರುವಾಯು ಶೆಲ್‌ಗಳನ್ನು ಹಾರಿಸುವ ಮೂಲಕ ಪ್ರತೀಕಾರ ತೀರಿಸಿದರು.

ಗಲಾಟೆಗೆ ಕಾರಣವೇನು?

ಧಾರ್ಮಿಕ ರಚನೆಯಾದ ದರ್ಗಾವನ್ನು "ಕಾನೂನುಬಾಹಿರವಾಗಿ" ನಿರ್ಮಿಸಲಾಗಿದೆ ಎಂದು ಜುನಾಗಢ್ ಮುನ್ಸಿಪಲ್ ಕಾರ್ಪೊರೇಶನ್‌ನ ಪದಚ್ಯುತಿ ನೋಟೀಸ್‌ನಲ್ಲಿ ತಿಳಿಸಲಾಗಿತ್ತು. ಇದರಿಂದಾಗಿ ಗಲಾಟೆ ಶುರುವಾಗಿದೆ. ದರ್ಗಾವನ್ನು ಕಾನೂನಾತ್ಮಕವಾಗಿ ನಿರ್ಮಿಸಲಾಗಿದೆ ಎಂಬುದಕ್ಕೆ ಸಾಕ್ಷ್ಯಾಧಾರಗಳನ್ನು ಸಲ್ಲಿಸಲು ಐದು ದಿನಗಳ ಗಡುವು ನೀಡಲಾಗಿತ್ತು. ಇಲ್ಲದಿದ್ದರೆ ಅದನ್ನು ಕೆಡವಲಾಗುವುದು ಎಂದು ಹೇಳಲಾಗಿತ್ತು. ಅದರ ವೆಚ್ಚವನ್ನು ಆಡಳಿತ ಮಂಡಳಿಯೇ ಭರಿಸುತ್ತದೆ ಎಂದು ಹೇಳಲಾಗಿದೆ.

"ನಾವು 174 ಜನರನ್ನು ವಶಕ್ಕೆ ಪಡೆದಿದ್ದೇವೆ. ನಮ್ಮ ತಂಡಗಳು ಇಡೀ ರಾತ್ರಿ ಗಸ್ತು ಕರ್ತವ್ಯದಲ್ಲಿದ್ದವು. ಜನಸಮೂಹವು ಕಲ್ಲು ತೂರಾಟವನ್ನು ಪ್ರಾರಂಭಿಸಿದಾಗ, ನಾವು ಅಶ್ರುವಾಯು ಶೆಲ್‌ಗಳನ್ನು ಹಾರಿಸಬೇಕಾಯಿತು. ಘಟನೆಯಲ್ಲಿ ಓರ್ವ ವ್ಯಕ್ತಿ ಸಾವನ್ನಪ್ಪಿದ್ದಾನೆ. ಸಿಸಿಟಿವಿ ದೃಶ್ಯಗಳ ಆಧಾರದ ಮೇಲೆ ಶಂಕಿತರನ್ನು ಬಂಧಿಸಲಾಗಿದೆ. ಈಗ ದರ್ಗಾವನ್ನು ಯಾವಾಗ ಕೆಡವಬೇಕು ಎಂಬುದನ್ನು ಮಹಾನಗರ ಪಾಲಿಕೆ ನಿರ್ಧರಿಸಲಿದೆ,'' ಎಂದು ಪೊಲೀಸರು ತಿಳಿಸಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+