ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾಂಗ್ರೆಸ್ ಮುಂದೆ 'ಮೀಸಲಾತಿ' ಬೇಡಿಕೆ ಇಟ್ಟ ಹಾರ್ದಿಕ್ ಪಟೇಲ್

By Mahesh
|
Google Oneindia Kannada News

ಅಹಮದಾಬಾದ್, ಅಕ್ಟೋಬರ್ 25: ಗುಜರಾತ್‌ ವಿಧಾನಸಭೆ ಚುನಾವಣೆಯಲ್ಲಿ ಮಹತ್ವದ ಪಾತ್ರ ವಹಿಸಲಿರುವ ಪಾಟೀದಾರ್ ಸಮುದಾಯದ ನಾಯಕ ಹಾರ್ದಿಕ್ ಪಟೇಲ್ ಅವರು ತಮ್ಮ ಬೇಡಿಕೆ ಪಟ್ಟಿಯನ್ನು ಕಾಂಗ್ರೆಸ್ ಮುಂದಿಟ್ಟಿದ್ದಾರೆ.

ಗುಜರಾತ್ ವಿಧಾನಸಭಾ ಚುನಾವಣೆ ದಿನಾಂಕ ಪ್ರಕಟಗುಜರಾತ್ ವಿಧಾನಸಭಾ ಚುನಾವಣೆ ದಿನಾಂಕ ಪ್ರಕಟ

ಗುಜರಾತ್‌ ನಲ್ಲಿ ಪಕ್ಷದ ಉಸ್ತುವಾರಿ ಅಶೋಕ್‌ ಗೆಹ್ಲೋಟ್‌ ಅವರೊಂದಿಗೆ ಮಾತುಕತೆ ನಡೆಸಿದ ಸಂದರ್ಭದಲ್ಲಿ ಹಾರ್ದಿಕ್‌ ಅವರು ಬೇಡಿಕೆಗಳನ್ನು ಇಟ್ಟಿದ್ದಾರೆ. 'ಹಾರ್ದಿಕ್‌ ಪಟೇಲ್‌ ಹಾಗೂ ಅವರ ಸಹವರ್ತಿಗಳೊಂದಿಗೆ ನಡೆಸಿದ ಮಾತುಕತೆ ಉತ್ತಮವಾಗಿತ್ತು' ಎಂದು ಗೆಹ್ಲೋಟ್‌ ಸೋಮವಾರ ರಾತ್ರಿ ಟ್ವೀಟ್‌ ಮಾಡಿದ್ದರು.

Gujarat Assembly polls: Hardik Patel places set of demands before Congress

ಪಟೇಲ್‌ ಮೀಸಲಾತಿ ಹೋರಾಟಗಾರರ ಮುಖಂಡ ಹಾರ್ದಿಕ್‌ ಪಟೇಲ್‌ ಅವರು ಹಲವು ಷರತ್ತುಗಳನ್ನು ಮುಂದಿಟ್ಟಿದ್ದು, ಇದರಲ್ಲಿ ತಮ್ಮ ಸಮುದಾಯಕ್ಕೆ ಮೀಸಲಾತಿ ನೀಡಬೇಕು ಎಂಬುದು ಪ್ರಮುಖವಾಗಿದೆ.

ಗುಜರಾತ್ ಚುನಾವಣೆ : ಸಮೀಕ್ಷೆಯಲ್ಲಿ ಜನರು ಹೇಳಿದ್ದೇನು? ಗುಜರಾತ್ ಚುನಾವಣೆ : ಸಮೀಕ್ಷೆಯಲ್ಲಿ ಜನರು ಹೇಳಿದ್ದೇನು?

* ಸರ್ಕಾರಿ ಕೆಲಸಗಳಲ್ಲಿ ಮತ್ತು ಶಿಕ್ಷಣ ಸಂಸ್ಥೆಗಳಲ್ಲಿ ಪಟೇಲ್‌ ಸಮುದಾಯದವರಿಗೆ ಮೀಸಲಾತಿ ನೀಡುವ ಭರವಸೆಯನ್ನು ನೀಡಬೇಕು.

* ಪಟೇಲರ ಪ್ರಾಬಲ್ಯವಿರುವ ಕ್ಷೇತ್ರಗಳಲ್ಲಿ ಸಮುದಾಯಕ್ಕೆ ಸೇರಿದ ಅಭ್ಯರ್ಥಿಗಳಿಗೆ ಹೆಚ್ಚು ಟಿಕೆಟ್‌ ನೀಡಬೇಕು.

ರಾಹುಲ್ ಗಾಂಧಿ - ಹಾರ್ದಿಕ್ ಭೇಟಿ, ಕುತೂಹಲಕ್ಕೆ ತೆರೆರಾಹುಲ್ ಗಾಂಧಿ - ಹಾರ್ದಿಕ್ ಭೇಟಿ, ಕುತೂಹಲಕ್ಕೆ ತೆರೆ

* ಪಟೇಲ್‌ ಸಮುದಾಯಕ್ಕೆ ನೀಡಲಾಗುವ ಮೀಸಲಾತಿಯನ್ನು ನ್ಯಾಯಾಂಗ ಪರಿಶೀಲನಾ ಪ್ರಕ್ರಿಯೆಯಿಂದ ಹೊರಗಿಡುವುದಕ್ಕಾಗಿ ಮೀಸಲಾತಿಯ ನಿಯಮಗಳಿಗೆ ಸಾಂವಿಧಾನಿಕ ರಕ್ಷಣೆಯನ್ನೂ ನೀಡಬೇಕು

ರಾಜಕೀಯವಾಗಿ ಪ್ರಭಾವಿಯಾಗಿರುವ ಪಟೇಲ್‌ ಸಮುದಾಯ ಈವರೆಗೆ ಬಿಜೆಪಿಯನ್ನು ಬೆಂಬಲಿಸುತ್ತಿತ್ತು. ಈಗ ಕಾಂಗ್ರೆಸ್‌ ಪಕ್ಷದಲ್ಲಿ ಹೆಚ್ಚಿನ ಪ್ರಾತಿನಿಧ್ಯ ಕೊಡಬೇಕು ಎಂದು ಹಾರ್ದಿಕ್‌ ಅವರು ಕೋರಿದ್ದಾರೆ.(ಪಿಟಿಐ)

English summary
Hardik Patel, has placed several demands before the Congress Tuesday as a condition for supporting the party in the Gujarat assembly polls. sought the maximum number of tickets for Patidar candidates in the election
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X