• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download
LIVE

Gujarat Elections 2022 LIVE : ಗುಜರಾತ್‌ನಲ್ಲಿ ಸಂಜೆ 5 ಗಂಟೆ ವೇಳೆಗೆ ಶೇ.58.38ರಷ್ಟು ಮತದಾನ

|
Google Oneindia Kannada News

ಅಹಮದಾಬಾದ್, ಡಿಸೆಂಬರ್ 5; ಗುಜರಾತ್ ರಾಜ್ಯದ 182 ವಿಧಾನಸಭಾ ಕ್ಷೇತ್ರಗಳ ಪೈಕಿ 93 ಕ್ಷೇತ್ರಗಳಲ್ಲಿ 2ನೇ ಹಂತದ ಮತದಾನ ನಡೆಯುತ್ತಿದೆ. 89 ಕ್ಷೇತ್ರಗಳಿಗೆ ಡಿಸೆಂಬರ್ 1ರಂದು ಮತದಾನ ಮುಕ್ತಾಯಗೊಂಡಿದೆ.

ಸೋಮವಾರ ಬೆಳಗ್ಗೆ 8 ರಿಂದ ಸಂಜೆ 5 ಗಂಟೆಯ ತನಕ ಮತದಾನ ನಡೆಯಲಿದೆ. ಗುಜರಾತ್‌ನ 182 ಮತ್ತು ಹಿಮಾಚಲ ಪ್ರದೇಶದ 68 ವಿಧಾನಸಭಾ ಕ್ಷೇತ್ರಗಳ ಮತ ಎಣಿಕೆ ಡಿಸೆಂಬರ್ 8ರಂದು ನಡೆಯಲಿದೆ.

Gujarat Assembly Election 2022: 2ನೇ ಹಂತದ ಮತದಾನ- ದಿನಾಂಕ, ವೇಳೆ, ಕ್ಷೇತ್ರಗಳ ಪಟ್ಟಿGujarat Assembly Election 2022: 2ನೇ ಹಂತದ ಮತದಾನ- ದಿನಾಂಕ, ವೇಳೆ, ಕ್ಷೇತ್ರಗಳ ಪಟ್ಟಿ

ಅಹಮದಾಬಾದ್, ಗಾಂಧಿನಗರ ಸೇರಿದಂತೆ ಪ್ರತಿಷ್ಠಿತ ಪ್ರದೇಶಗಳಲ್ಲಿ ಸೋಮವಾರ ಮತದಾನ ನಡೆಯಲಿದೆ. 14 ಜಿಲ್ಲೆಗಳ 93 ಕ್ಷೇತ್ರಗಳಿಗೆ ಮತದಾನ ನಡೆಯುತ್ತಿದೆ. ಮತದಾನ ಪೂರ್ಣಗೊಂಡ ಬಳಿಕ ವಿವಿಧ ವಾಹಿನಿಗಳು ನಡೆಸುವ ಮತದಾನೋತ್ತರ ಸಮೀಕ್ಷೆ ಫಲಿತಾಂಶ ಪ್ರಕಟವಾಗಲಿದೆ.

Gujarat Assembly Election

2ನೇ ಮತ್ತು ಅಂತಿಮ ಹಂತದಲ್ಲಿ ಒಟ್ಟು 2,51,58,730 ಮತದಾರರು ಮತದಾನ ಮಾಡಲಿದ್ದಾರೆ. ಇವರಲ್ಲಿ 1,29,26,501 ಪುರುಷರು, 1,22,31,335 ಮಹಿಳೆಯರು ಮತ್ತು 894 ತೃತೀಯಲಿಂಗಿಗಳು ಸೇರಿದ್ದಾರೆ.

ಗುಜರಾತ್ ವಿಧಾನಸಭೆ ಚುನಾವಣೆಯ ಮತದಾನದ ಸುದ್ದಿ, ವಿವರ, ಚಿತ್ರ ಮುಂತಾದ ಮಾಹಿತಿ ಈ ಪುಟದಲ್ಲಿ ಲಭ್ಯವಿದೆ...

Newest First Oldest First
5:09 PM, 5 Dec
ಗುಜರಾತ್ ಬಿಜೆಪಿ ಮುಖ್ಯಸ್ಥ ಸಿಆರ್ ಪಾಟೀಲ್ ಮತದಾನ ಮುಗಿದ ನಂತರ ಪತ್ರಿಕಾಗೋಷ್ಠಿ ನಡೆಸಲಿದ್ದಾರೆ.
4:50 PM, 5 Dec
ಗುಜರಾತ್ ಚುನಾವಣೆ 2022 ಎಕ್ಸಿಟ್ ಪೋಲ್ ಫಲಿತಾಂಶ ದಿನಾಂಕ, ಸಮಯ
ಎಕ್ಸಿಟ್ ಪೋಲ್ ಫಲಿತಾಂಶಗಳು ಸಂಜೆ 6:30 ರ ನಂತರ ಹೊರಬೀಳುವ ಸಾಧ್ಯತೆಯಿದೆ.
4:43 PM, 5 Dec
ಎರಡನೇ ಹಂತದ ಮತದಾನದಲ್ಲಿ ಮಾಜಿ ಕ್ರಿಕೆಟಿಗರಾದ ಇರ್ಫಾನ್ ಪಠಾಣ್ ಮತ್ತು ಯೂಸುಫ್ ಪಠಾಣ್ ಕೂಡ ಮತದಾನ ಮಾಡಿದರು. ಮತದಾನದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಇರ್ಫಾನ್ ಪಠಾಣ್, ಮತದಾನ ಮಾಡುವುದು ನಮ್ಮ ಹಕ್ಕು ಮತ್ತು ಜವಾಬ್ದಾರಿಯಾಗಿದೆ. ಇಲ್ಲಿಯವರೆಗೆ ಕೇವಲ ಶೇ.60ರಷ್ಟು ಮತದಾನವಾಗಿದೆ ಎಂದು ತಿಳಿದು ಬಂದಿದ್ದು, ಜನರು ಬಂದು ಮತದಾನ ಮಾಡಿ ಎಂದರು.
4:01 PM, 5 Dec
ಗುಜರಾತ್ ವಿಧಾನಸಭಾ ಚುನಾವಣೆಯ ಎರಡನೇ ಮತ್ತು ಅಂತಿಮ ಹಂತದ ಮತದಾನದಲ್ಲಿ ಮಧ್ಯಾಹ್ನ 3 ಗಂಟೆಯವರೆಗೆ 50.51% ಮತದಾನವಾಗಿದೆ.
3:38 PM, 5 Dec
ಪ್ರಧಾನಿ ಮೋದಿ ಮತ್ತು ಅಮಿತ್ ಶಾ ಅವರ 'ರೋಡ್‌ಶೋ' ಚುನಾವಣಾ ಮಾರ್ಗಸೂಚಿಗಳ ಉಲ್ಲಂಘನೆಯಾಗಿದೆ ಎಂದು ಕಾಂಗ್ರೆಸ್ ದೂರಿದೆ.
2:56 PM, 5 Dec
ಮತದಾನದ ದಿನದಂದು, ಪ್ರಧಾನಿ ಮೋದಿ ಮತ ಚಲಾಯಿಸಲು ಹೋದಾಗ ಎರಡೂವರೆ ಗಂಟೆಗಳ ರೋಡ್‌ಶೋ ನಡೆಸಿದರು. ಇದರ ವಿರುದ್ಧ ಚುನಾವಣಾ ಆಯೋಗಕ್ಕೆ ಮೇಲ್ಮನವಿ ಸಲ್ಲಿಸಲಾಗುವುದು. ಈ ಚುನಾವಣಾ ಆಯೋಗವು ಸ್ವಇಚ್ಛೆಯಿಂದ ಒತ್ತಡಕ್ಕೆ ಒಳಗಾದಂತೆ ತೋರುತ್ತಿದೆ ಎಂದು ಗುಜರಾತ್ ಚುನಾವಣೆ ಕುರಿತು ಕಾಂಗ್ರೆಸ್ ವಕ್ತಾರ ಪವನ್ ಖೇರಾ ಹೇಳಿದ್ದಾರೆ.
2:51 PM, 5 Dec
ಗುಜರಾತ್‌ನಲ್ಲಿ ಎರಡನೇ ಹಂತದ ವಿಧಾನಸಭಾ ಚುನಾವಣೆಗೆ ಮತದಾನ ನಡೆಯುತ್ತಿದೆ. ಈ ನಡುವೆ ದೆಹಲಿ ಮುಖ್ಯಮಂತ್ರಿ ಮತ್ತು ಆಮ್ ಆದ್ಮಿ ಪಕ್ಷದ ನಾಯಕ ಅರವಿಂದ್ ಕೇಜ್ರಿವಾಲ್ ಅವರು ಮತದಾರರಿಗೆ ಮನವಿ ಮಾಡಿದ್ದಾರೆ. ಮತ ಚಲಾಯಿಸುತ್ತಿರುವ ಗುಜರಾತ್‌ ಮತದಾರರಿಗೆ "ಏನಾದರೂ ವಿಭಿನ್ನವಾಗಿ ಮಾಡಿ'' ಎಂದು ಒತ್ತಾಯಿಸಿ ಟ್ವೀಟ್ ಮಾಡಿದ್ದಾರೆ.
2:37 PM, 5 Dec
ವಿಕಲಚೇತನ ಮತದಾರರು ಖೇಡಾದ ನಾಡಿಯಾಡ್‌ನಲ್ಲಿ ಎರಡನೇ ಹಂತದ ಗುಜರಾತ್ ಅಸೆಂಬ್ಲಿ ಮತದಾನಕ್ಕೆ ಮತ ಚಲಾಯಿಸಿದ್ದಾರೆ "ನಾನು 20 ವರ್ಷಗಳ ಹಿಂದೆ ಅಪಘಾತದಲ್ಲಿ ನನ್ನ ಎರಡೂ ಕೈಗಳನ್ನು ಕಳೆದುಕೊಂಡೆ ಆದರೆ, ನನ್ನ ಮತ ಚಲಾಯಿಸುವುದನ್ನು ಎಂದಿಗೂ ತಡೆಯಲಿಲ್ಲ. ನಾನು ಈಗ ಮತ ಚಲಾಯಿಸಲು ನನ್ನ ಪಾದಗಳನ್ನು ಬಳಸುತ್ತೇನೆ," ಎಂದು ಅಂಕಿತ್ ಸೋನಿ ಹೇಳಿದರು.
2:22 PM, 5 Dec
ಗುಜರಾತ್‌ನಲ್ಲಿ ಎರಡನೇ ಹಂತದ ವಿಧಾನಸಭಾ ಚುನಾವಣೆಗೆ ಮತದಾನ ನಡೆಯುತ್ತಿದೆ. ಈ ನಡುವೆ ದೆಹಲಿ ಮುಖ್ಯಮಂತ್ರಿ ಮತ್ತು ಆಮ್ ಆದ್ಮಿ ಪಕ್ಷದ ನಾಯಕ ಅರವಿಂದ್ ಕೇಜ್ರಿವಾಲ್ ಮತದಾರರಿಗೆ ಮನವಿ ಮಾಡಿದ್ದಾರೆ. ಇಂದು ಮತ ಚಲಾಯಿಸುತ್ತಿರುವ ಗುಜರಾತ್‌ ಮತದಾರರಿಗೆ "ಏನಾದರೂ ವಿಭಿನ್ನವಾಗಿ ಮಾಡಿ'' ಎಂದು ಒತ್ತಾಯಿಸಿ ಟ್ವೀಟ್ ಮಾಡಿದ್ದಾರೆ.
2:12 PM, 5 Dec
ಆನಂದ್‌ನ ಅಂಕಲಾವ್ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಕೇಶವಪುರ ಮತಗಟ್ಟೆಯಲ್ಲಿ ಮತದಾನದ ವೇಳೆ ಬಿಜೆಪಿ ಮತ್ತು ಕಾಂಗ್ರೆಸ್ ಕಾರ್ಯಕರ್ತರ ನಡುವೆ ಮಾರಾಮಾರಿ ನಡೆದಿದ್ದು, ಪೊಲೀಸರು ಪರಿಸ್ಥಿತಿಯನ್ನು ಹತೋಟಿಗೆ ತಂದಿದ್ದಾರೆ.
2:09 PM, 5 Dec
ಉತ್ತರ ಪ್ರದೇಶದ ಮೈನ್‌ಪುರಿ ಸಂಸದೀಯ ಕ್ಷೇತ್ರಕ್ಕೆ ನಡೆದ ಉಪಚುನಾವಣೆಯಲ್ಲಿ ಮಧ್ಯಾಹ್ನ 1 ಗಂಟೆಯವರೆಗೆ ಶೇ.31.64ರಷ್ಟು ಮತದಾನವಾಗಿದೆ.
2:06 PM, 5 Dec
ಮಧ್ಯಾಹ್ನ 1 ಗಂಟೆ ವೇಳೆಗೆ ಬಿಹಾರದ ಕುರ್ಹಾನಿಯಲ್ಲಿ ಶೇ.37% ಮತದಾನ, ಒಡಿಶಾದ ಪದಮ್‌ಪುರ ಶೇ.46.96%, ರಾಜಸ್ಥಾನದ ಸರ್ದಾಶಹರ್ ಶೇ.36.68, ಉತ್ತರಪ್ರದೇಶದ ರಾಂಪುರದಲ್ಲಿ ಶೇ.19.01%, ಖತೌಲಿಯಲ್ಲಿ ಶೇ.33.20% ಮತ್ತು ಛತ್ತೀಸ್‌ಗಢ್ ಭಾನುಪ್ರತಾಪುರ್ ದಲ್ಲಿ ಶೇ.50.83ರಷ್ಟು ಮತದಾನ ನಡೆದಿದೆ.
1:54 PM, 5 Dec
ಗುಜರಾತ್ ವಿಧಾನಸಭಾ ಚುನಾವಣೆಯೆಲ್ಲಿ ಮಧ್ಯಾಹ್ನ 1 ಗಂಟೆ ವೇಳೆಗೆ ಶೇ.34.74ರಷ್ಟು ಮತದಾನ ನಡೆದಿದೆ.
1:47 PM, 5 Dec
ಅಹ್ಮದ್ ಪಟೇಲ್ ಅವರನ್ನು ಬದಲಿಸಲು ಯಾರಿಂದಲೂ ಸಾಧ್ಯವಿಲ್ಲ ಮತ್ತು ಅವರ ಅನುಪಸ್ಥಿತಿಯನ್ನು ನಾವು ಯಾವಾಗಲೂ ಅನುಭವಿಸುತ್ತೇವೆ ಎಂದು ಸೋನಿಯಾ ಗಾಂಧಿ ಹೇಳಿದ್ದರು. ಈ ಸಮೀಕ್ಷೆಗಳಲ್ಲಿ, ನಾವು ಅವರ ಅನುಪಸ್ಥಿತಿಯನ್ನು ಅನುಭವಿಸಿದ್ದೇವೆ. ಆದರೆ ಅಹ್ಮದ್ ಪಟೇಲ್ ಅವರನ್ನು ಸೋಲಿಸಲು ಬಿಜೆಪಿ ಮಾಡಿದ ತಂತ್ರಗಳನ್ನು ಜನರು ನೋಡಿದ್ದಾರೆ, ಅದನ್ನು ಮರೆತಿಲ್ಲ. ಗೌರವಾರ್ಥವಾಗಿ ಬಿಜೆಪಿ ವಿರುದ್ಧ ಮತ ಹಾಕುತ್ತೇವೆ, ಎಂದು ಶಕ್ತಿಸಿಂಹ ಗೋಹಿಲ್ ಹೇಳಿದರು.
1:40 PM, 5 Dec
ಮುಸ್ಲಿಂ ಮಹಿಳೆಯರನ್ನು ಚುನಾವಣೆಗೆ ಸ್ಪರ್ಧಿಸಲು ಆಯ್ಕೆ ಮಾಡುವವರು ಇಸ್ಲಾಂ ಧರ್ಮದ ವಿರುದ್ಧ ಇದ್ದಾರೆ ಎಂದು ಅಹಮದಾಬಾದ್‌ನ ಜಾಮಾ ಮಸೀದಿಯ ಮುಖ್ಯ ಧರ್ಮಗುರು ಹೇಳಿದ್ದಾರೆ.
1:12 PM, 5 Dec
ಮೈನ್‌ಪುರಿ ಉಪಚುನಾವಣೆಯಲ್ಲಿ ಎಸ್‌ಪಿ ಗೆಲ್ಲುತ್ತದೆ ಎಂದು ನನಗೆ ಸಂಪೂರ್ಣ ನಂಬಿಕೆ ಇದೆ. ಬಿಜೆಪಿ ಚುನಾವಣೆಯಲ್ಲಿ ಅನ್ಯಾಯವಾಗಿ ಹೋರಾಡುತ್ತಿದೆ ಎಂದು ಜನರು ಅರಿತುಕೊಂಡಿದ್ದಾರೆ. ಹಾಗಾಗಿ ಚುನಾವಣಾ ಫಲಿತಾಂಶಗಳು ಹೊರಬಂದ ನಂತರ ಅವರಿಗೆ ಉತ್ತರ ಸಿಗುತ್ತದೆ ಎಂದು ಎಸ್‌ಪಿ ಅಭ್ಯರ್ಥಿ ಡಿಂಪಲ್ ಯಾದವ್ ಹೇಳಿದ್ದಾರೆ.
1:07 PM, 5 Dec
ಭಾರತದ ಮಾಜಿ ಕ್ರಿಕೆಟಿಗ ನಯನ್ ಮೊಂಗಿಯಾ ವಡೋದರಾದ ಮತಗಟ್ಟೆಯಲ್ಲಿ ಎರಡನೇ ಹಂತದ ಗುಜರಾತ್ ವಿಧಾನಸಭೆ ಮತದಾನಕ್ಕೆ ಮತ ಚಲಾಯಿಸಿದರು
12:57 PM, 5 Dec
ಮತಗಟ್ಟೆಗಳಿಗೆ ತೆರಳಿ ಮತ ಚಲಾಯಿಸುವಂತೆ ನಾನು ಜನರಲ್ಲಿ ಮನವಿ ಮಾಡುತ್ತೇನೆ. ನಿಮಗೆ ಬೇಕಾದವರನ್ನು ಆಯ್ಕೆ ಮಾಡಿ ಆದರೆ ನೀವು ಮತ ಚಲಾಯಿಸಿದರೆ ಮಾತ್ರ ರಾಜಕೀಯ ನಾಯಕರಿಂದ ಉತ್ತರವನ್ನು ಕೇಳಲು ಸಾಧ್ಯವಾಗುತ್ತದೆ. ಎಎಪಿ ಮೊದಲ ಹಂತದಲ್ಲಿ 89 ಸ್ಥಾನಗಳಲ್ಲಿ 51 ಪ್ಲಸ್ ಮತ್ತು ಎರಡನೇ ಹಂತದಲ್ಲಿ 52 ಪ್ಲಸ್ ಸ್ಥಾನಗಳನ್ನು ಗೆಲ್ಲುತ್ತದೆ ಎಂದು ನಾನು ನಿರೀಕ್ಷಿಸುತ್ತೇನೆ ಎಂದು ಇಸುದನ್ ಗಧ್ವಿ ಹೇಳುತ್ತಾರೆ.
12:45 PM, 5 Dec
ಪ್ರಧಾನಿ ನರೇಂದ್ರ ಮೋದಿಯವರ ತಾಯಿ ಹೀರಾಬೆನ್ ಮೋದಿ ಎರಡನೇ ಹಂತದ ಗುಜರಾತ್ ವಿಧಾನಸಭಾ ಚುನಾವಣೆಗೆ ಗಾಂಧಿನಗರದ ರೇಸನ್ ಪ್ರಾಥಮಿಕ ಶಾಲೆಯಲ್ಲಿ ಮತ ಚಲಾಯಿಸಿದರು
12:43 PM, 5 Dec
ಎಎಪಿಯ ಮುಖ್ಯಮಂತ್ರಿ ಅಭ್ಯರ್ಥಿ ಇಸುದನ್ ಗಧ್ವಿ ಗುಜರಾತ್‌ನ ಅಹಮದಾಬಾದ್‌ನ ಮತಗಟ್ಟೆಯಲ್ಲಿ ಮತ ಚಲಾಯಿಸಿದರು.
12:36 PM, 5 Dec
ಗುಜರಾತಿನಲ್ಲಿ ಬಿಜೆಪಿಗೆ ಭಾರಿ ಸೋಲುಂಟಾಗುತ್ತದೆ ಎಂದು ನಾನು ಭಾವಿಸುತ್ತೇನೆ. ಮೈನ್‌ಪುರಿ ಉಪಚುನಾವಣೆಯಲ್ಲಿ ಎಸ್‌ಪಿ ಉತ್ತಮ ಸಂಖ್ಯೆಯ ಮತಗಳನ್ನು ಪಡೆಯುತ್ತದೆ ಎಂದು ನಾನು ನಂಬುತ್ತೇನೆ, ಜನರು ನಮಗೆ ಮತ ಹಾಕುತ್ತಾರೆ. ಬಿಜೆಪಿ ಕೇಂದ್ರೀಯ ಸಂಸ್ಥೆಗಳಿಗೆ ಮುಕ್ತವಾಗಿ ಕಾರ್ಯನಿರ್ವಹಿಸಲು ಅವಕಾಶ ನೀಡಬೇಕು, ಬಿಜೆಪಿ ಅವರನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಎಸ್‌ಪಿ ಮುಖ್ಯಸ್ಥ ಅಖಿಲೇಶ್ ಯಾದವ್ ಹೇಳಿದರು.
12:16 PM, 5 Dec
ಮತ ಹಾಕಿದ ಮೋದಿ ಸಹೋದರ:
ಪ್ರಧಾನಿ ನರೇಂದ್ರ ಮೋದಿ ಸಹೋದರ ಸೋಮಭಾಯಿ ಮೋದಿ ಅವರು ಗುಜರಾತ್ ವಿಧಾನಸಭೆಯ ಎರಡನೇ ಹಂತದ ಚುನಾವಣೆಗೆ ರಾನಿಪ್‌ನ ನಿಶಾನ್ ಪಬ್ಲಿಕ್ ಶಾಲೆಯಲ್ಲಿ ಮತ ಚಲಾಯಿಸಿದರು.
12:14 PM, 5 Dec
ಹಿಂದಿನ ರಾಜಮನೆತನದ ರಾಜಮಾತೆ ಶುಭಾಂಗಿನಿರಾಜೆ ಗಾಯಕ್ವಾಡ್ ವಡೋದರದ ಮತಗಟ್ಟೆಯಲ್ಲಿ ಮತ ಚಲಾಯಿಸಿದರು. "ಮತದಾನ ನಮ್ಮ ಹಕ್ಕು, ನಾನು ಪ್ರತಿಯೊಬ್ಬರೂ ತಮ್ಮ ಹಕ್ಕು ಚಲಾಯಿಸಲು ಮನವಿ ಮಾಡುತ್ತೇನೆ. ಜವಾಬ್ದಾರಿ ಇಲ್ಲದೆ ಯಾವುದೇ ಹಕ್ಕು ಇಲ್ಲ," ಎಂದರು.
11:52 AM, 5 Dec
ಗುಜರಾತ್ ವಿಧಾನಸಭಾ ಚುನಾವಣೆಯೆಲ್ಲಿ ಬೆಳಗ್ಗೆ 11 ಗಂಟೆ ವೇಳೆಗೆ ಶೇ.19.17ರಷ್ಟು ಮತದಾನ ನಡೆದಿದೆ.
11:30 AM, 5 Dec
ಸೋಮವಾರ ಉಪಚುನಾವಣೆ ನಡೆಯುತ್ತಿರುವ ಒಡಿಶಾದ ಪದಂಪುರ ವಿಧಾನಸಭಾ ಕ್ಷೇತ್ರದಲ್ಲಿ ಮೊದಲ ಎರಡು ಗಂಟೆಗಳಲ್ಲಿ ಶೇಕಡಾ 8ರಷ್ಟು ಮತದಾನವಾಗಿದೆ ಎಂದು ಚುನಾವಣಾ ಆಯೋಗದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಬೆಳಗ್ಗೆ 7 ಗಂಟೆಗೆ ಮತದಾನ ಪ್ರಕ್ರಿಯೆ ಆರಂಭವಾಗುವ ಮುನ್ನವೇ ಹಲವು ಮತಗಟ್ಟೆಗಳ ಮುಂದೆ ಉದ್ದನೆಯ ಸರತಿ ಸಾಲುಗಳು ಕಂಡು ಬಂದವು.
11:21 AM, 5 Dec
ಮತ ಚಲಾಯಿಸಿದ ನಂತರ ಕೇಂದ್ರ ಗೃಹ ಸಚಿವ ಅಮಿತ್ ಶಾ, "ಪ್ರತಿಯೊಬ್ಬರಿಗೂ ಮತದಾನ ಮಾಡಲು ನಾನು ಮನವಿ ಮಾಡುತ್ತೇನೆ, ವಿಶೇಷವಾಗಿ ಮೊದಲ ಬಾರಿಗೆ ಮತದಾರರು - ಯುವತಿಯರು ಮತ್ತು ಹುಡುಗರು ಮತದಾನ ಮಾಡಬೇಕು," ಎಂದರು.
11:19 AM, 5 Dec
ರಾಜಸ್ಥಾನದ ಸರ್ದಾಶಹರ್ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಮತದಾನ ನಡೆಯುತ್ತಿದೆ.
11:13 AM, 5 Dec
ಕೇಂದ್ರ ಗೃಹ ಸಚಿವ ಅಮಿತ್ ಶಾ, ಹಾಗೂ ಅವರ ಪುತ್ರ ಮತ್ತು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಸೇರಿದಂತೆ ಕುಟುಂಬದ ಸದಸ್ಯರೊಂದಿಗೆ ಅಹಮದಾಬಾದ್‌ನ ನಾರಣಪುರದಲ್ಲಿರುವ ಎಎಂಸಿ ಉಪ ವಲಯ ಕಚೇರಿಯಲ್ಲಿ ಮತ ಚಲಾಯಿಸಿದರು.
11:06 AM, 5 Dec
ಮತದಾನ ಆರಂಭವಾದ ದಿನದಿಂದ ಆಡಳಿತ ಯಾರ ಆದೇಶದ ಮೇರೆಗೆ ಕೆಲಸ ಮಾಡುತ್ತಿದೆಯೋ ಗೊತ್ತಿಲ್ಲ. ಬೆಳಗ್ಗೆಯಿಂದ ನಿರಂತರವಾಗಿ ದೂರುಗಳು ಬರುತ್ತಿವೆ. ಮತದಾನ ಮಾಡಲು ಪೊಲೀಸರು ಅವಕಾಶ ನೀಡುತ್ತಿಲ್ಲ ಎಂದು ಎಸ್‌ಪಿ ಮುಖ್ಯಸ್ಥ ಅಖಿಲೇಶ್ ಯಾದವ್ ಹೇಳಿದರು.
11:05 AM, 5 Dec
ಗುಜರಾತ್ ಚುನಾವಣೆ 2022ರ ಎರಡನೇ ಹಂತಕ್ಕೆ ಮತ ಚಲಾಯಿಸಿದ ನಂತರ ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಅವರ ಕುಟುಂಬ ಅಹಮದಾಬಾದ್‌ನ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿದರು.
READ MORE

English summary
Gujarat Assembly Election 2022 Phase 2 Voting Live Updates in Kannada : Polling will take place on December 5 across 93 Assembly constituencies.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X