• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

"ಭವಿಷ್ಯ ನೋಡಿ ಅದ್ಭುತವಾದದ್ದನ್ನು ಮಾಡಿ": ಗುಜರಾತ್ ಮತದಾರರಿಗೆ ಕೇಜ್ರಿವಾಲ್ ಮನವಿ

|
Google Oneindia Kannada News

ಅಹಮದಾಬಾದ್ ಡಿಸೆಂಬರ್ 5: ಇಂದು ಗುಜರಾತ್‌ನಲ್ಲಿ ಎರಡನೇ ಹಂತದ ವಿಧಾನಸಭಾ ಚುನಾವಣೆಗೆ ಮತದಾನ ನಡೆಯುತ್ತಿದೆ. ಈ ನಡುವೆ ದೆಹಲಿ ಮುಖ್ಯಮಂತ್ರಿ ಮತ್ತು ಆಮ್ ಆದ್ಮಿ ಪಕ್ಷದ ನಾಯಕ ಅರವಿಂದ್ ಕೇಜ್ರಿವಾಲ್ ಅವರು ಮತದಾರರಿಗೆ ಮನವಿ ಮಾಡಿದ್ದಾರೆ. ಇಂದು ಮತ ಚಲಾಯಿಸುತ್ತಿರುವ ಗುಜರಾತ್‌ ಮತದಾರರಿಗೆ "ಏನಾದರೂ ವಿಭಿನ್ನವಾಗಿ ಮಾಡಿ'' ಎಂದು ಒತ್ತಾಯಿಸಿ ಟ್ವೀಟ್ ಮಾಡಿದ್ದಾರೆ.

ಈ ಬಾರಿ ಗುಜರಾತ್‌ಗೆ ಕಾಲಿಡಲು ಎಎಪಿ ತೀವ್ರ ಪ್ರಯತ್ನ ನಡೆಸುತ್ತಿದೆ. ಬಿಜೆಪಿ ಭದ್ರಕೋಟೆಯಲ್ಲಿ ಎಎಪಿ ಪಕ್ಷವು ವ್ಯಾಪಕ ಪ್ರಚಾರವನ್ನು ಮಾಡಿದೆ. ಕೇಜ್ರಿವಾಲ್ ನೇತೃತ್ವದಲ್ಲಿ ಆಮ್‌ ಆದ್ಮಿ ಪಕ್ಷ ಹಲವಾರು ಭರವಸೆಗಳನ್ನು ಗುಜರಾತ್‌ ಮತದಾರರಿಗೆ ನೀಡಿದೆ.

ಟಾಟಾ ಮತ್ತು ಏರ್‌ಬಸ್‌ ಒಪ್ಪಂದ: ಗುಜರಾತ್‌ಗೆ 22,000 ಕೋಟಿ ಯೋಜನೆ ಟಾಟಾ ಮತ್ತು ಏರ್‌ಬಸ್‌ ಒಪ್ಪಂದ: ಗುಜರಾತ್‌ಗೆ 22,000 ಕೋಟಿ ಯೋಜನೆ

"ಗುಜರಾತ್‌ನಲ್ಲಿ 93 ಸ್ಥಾನಗಳಲ್ಲಿ ಎರಡನೇ ಹಂತದ ಮತದಾನ ಇಂದು ನಡೆಯುತ್ತಿದೆ. ಎಲ್ಲಾ ಮತದಾರರಿಗೆ ನನ್ನ ಮನವಿ ಏನೆಂದರೆ ಈ ಚುನಾವಣೆ ಗುಜರಾತ್‌ನ ಹೊಸ ಭರವಸೆ ಮತ್ತು ಆಕಾಂಕ್ಷೆಗಳಿಂದ ಕೂಡಿದೆ. ಇದು ದಶಕಗಳ ನಂತರ ಬಂದಿರುವ ಉತ್ತಮ ಅವಕಾಶ. ಭವಿಷ್ಯವನ್ನು ನೋಡಿ ಗುಜರಾತ್‌ನ ಪ್ರಗತಿಗಾಗಿ ಮತ ಚಲಾಯಿಸಿ. ಈ ಬಾರಿ ವಿಭಿನ್ನವಾದ ಮತ್ತು ಅದ್ಭುತವಾದದ್ದನ್ನು ಮಾಡಿ" ಎಂದು ಕೇಜ್ರಿವಾಲ್ ಟ್ವೀಟ್ ಮಾಡಿದ್ದಾರೆ.

ಕೇಂದ್ರ ಮತ್ತು ಉತ್ತರ ಗುಜರಾತ್‌ನ ಪ್ರಮುಖ ಸ್ಥಾನಗಳನ್ನು ಒಳಗೊಂಡಿರುವ ರಾಜ್ಯ ಚುನಾವಣೆಯಲ್ಲಿ ಎರಡನೇ ಹಂತದ ಚುನಾವಣೆಯಲ್ಲಿ ಸುಮಾರು 833 ಅಭ್ಯರ್ಥಿಗಳು ಸ್ಪರ್ಧಿಸುತ್ತಿದ್ದಾರೆ.

ಎಎಪಿ ಈ ಬಾರಿ ಎಲ್ಲಾ 93 ಸ್ಥಾನಗಳಲ್ಲಿ ಸ್ಪರ್ಧಿಸುತ್ತಿದೆ. ಕಳೆದ ಬಾರಿ ಉತ್ತಮ ಪ್ರದರ್ಶನ ನೀಡಿದ ಕಾಂಗ್ರೆಸ್, ಬಿಜೆಪಿಯಿಂದ ಅಧಿಕಾರವನ್ನು ಕಸಿದುಕೊಳ್ಳಲು ವಿಫಲವಾಯಿತು. ಈಗ 90 ಸ್ಥಾನಗಳಲ್ಲಿ ಸ್ಪರ್ಧಿಸುತ್ತಿದೆ. ಅದರ ಮಿತ್ರ ಪಕ್ಷವಾದ ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷ (ಎನ್‌ಸಿಪಿ) ಎರಡು ಸ್ಥಾನಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ.

ಎರಡನೇ ಹಂತದ ಪ್ರಮುಖ ಸ್ಥಾನಗಳಲ್ಲಿ ಅಹಮದಾಬಾದ್‌ನ ಘಟ್ಲೋಡಿಯಾ ಎಂದು ಹೇಳಬಹುದು. ಏಕೆಂದರೆ ಇದು ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಸ್ಪರ್ಧಿಸುತ್ತಿರುವ ಕ್ಷೇತ್ರವಾಗಿದೆ. ಅಹಮದಾಬಾದ್‌ನ ವಿರಾಮಗಮ್ ನಲ್ಲಿ ಪಾಟಿದಾರ್ ನಾಯಕ ಹಾರ್ದಿಕ್ ಪಟೇಲ್ ಬಿಜೆಪಿ ಟಿಕೆಟ್‌ನಲ್ಲಿ ಸ್ಪರ್ಧಿಸುತ್ತಿದ್ದಾರೆ. ಗಾಂಧಿನಗರ ದಕ್ಷಿಣದಿಂದ ಅಲ್ಪೇಶ್ ಠಾಕೂರ್ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ.

Do something different: Kejriwal appeals to Gujarat voters

ದಲಿತ ನಾಯಕ ಜಿಗ್ನೇಶ್ ಮೇವಾನಿ ಬನಸ್ಕಾಂತ ಜಿಲ್ಲೆಯ ವಡ್ಗಾಮ್ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ ಮತ್ತು ಗುಜರಾತ್ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸುಖರಾಮ್ ರಥ್ವಾ ಅವರು ಛೋಟಾ ಉದೇಪುರ್ ಜಿಲ್ಲೆಯ ಜೆಟ್‌ಪುರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದಾರೆ.

ಅರವಿಂದ ಕೇಜ್ರಿವಾಲ್
Know all about
ಅರವಿಂದ ಕೇಜ್ರಿವಾಲ್

English summary
With the second phase of polling underway in Gujarat today, Chief Minister Arvind Kejriwal has appealed to voters to "do something different".
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X