ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Gujarat Election Results 2022 : ಮತ್ತೆ ಗುಜರಾತ್‌ ಅಧಿಕಾರ ಹಿಡಿಯುವ ಹಂಬಲದಲ್ಲಿ ಬಿಜೆಪಿ

|
Google Oneindia Kannada News

ಅಹಮದಾಬಾದ್‌, ಡಿಸೆಂಬರ್ 8: ಪಿಎಂ ಮೋದಿ ಪ್ರಭಾವದ ಮೇಲೆ ಅಧಿಕಾರ ನಡೆಸುತ್ತಿರುವ ಭಾರತೀಯ ಜನತಾ ಪಕ್ಷವು (ಬಿಜೆಪಿ) ಈ ಬಾರಿ ಗುಜರಾತ್‌ನಲ್ಲಿ ಅಧಿಕಾರವನ್ನು ಉಳಿಸಿಕೊಳ್ಳುವ ವಿಶ್ವಾಸದಲ್ಲಿದೆ. ಆಮ್ ಆದ್ಮಿ ಪಕ್ಷ (ಎಎಪಿ) ಪ್ರಬಲ ಮೊದಲ ಬಾರಿ ಅಧಿಕಾರ ಬಯಸುತ್ತಿದೆ. ಬಿರುಸಿನ ಪ್ರಚಾರಕ್ಕೆ ಗೈರು ಹಾಜರಾಗಿದ್ದ ಕಾಂಗ್ರೆಸ್ ಬದಲಾವಣೆಯ ತೀರ್ಪನ್ನು ಬಯಸುತ್ತಿದೆ.

ಗುಜರಾತ್ ವಿಧಾನಸಭಾ ಚುನಾವಣೆಗೆ ಮತದಾನ 5ರಂದು ಮುಗಿದಿದ್ದು ಮತ ಎಣಿಕೆ 8 ಗಂಟೆಗೆ ಆರಂಭವಾಗಲಿದೆ. ಗುಜರಾತ್‌ನಲ್ಲಿ ಡಿಸೆಂಬರ್ 1 ಮತ್ತು 5 ರಂದು ಎರಡು ಹಂತಗಳಲ್ಲಿ ವಿಧಾನಸಭಾ ಚುನಾವಣೆಗಳು ನಡೆದಿದ್ದವು. ಗುಜರಾತ್ ಚುನಾವಣೆಯ ಎರಡನೇ ಹಂತದ ಅಂತ್ಯದ ವೇಳೆಗೆ ಸರಿಸುಮಾರು ಮತದಾನದ ಪ್ರಮಾಣವು ಶೇಕಡಾ 59.11 ರಷ್ಟು ದಾಖಲಾಗಿದೆ. ಮೊದಲ ಹಂತದ ಮತದಾನದ ವೇಳೆ ಗುಜರಾತ್‌ನಲ್ಲಿ ಒಟ್ಟಾರೆ ಶೇ.63.14ರಷ್ಟು ಮತದಾನವಾಗಿತ್ತು.

Gujarat, HP Election Results 2022 Live: ಬೆಳಿಗ್ಗೆ 8 ಗಂಟೆಯಿಂದ ಮತ ಎಣಿಕೆ ಆರಂಭGujarat, HP Election Results 2022 Live: ಬೆಳಿಗ್ಗೆ 8 ಗಂಟೆಯಿಂದ ಮತ ಎಣಿಕೆ ಆರಂಭ

ಸಮೀಕ್ಷೆಯ ಫಲಿತಾಂಶದ ದಿನಗಳು, ಎಕ್ಸಿಟ್ ಪೋಲ್‌ಗಳು ಗುಜರಾತ್‌ನಲ್ಲಿ ಅಧಿಕಾರದಲ್ಲಿರುವ ಭಾರತೀಯ ಜನತಾ ಪಕ್ಷ (ಬಿಜೆಪಿ) ಗೆ ಸ್ಪಷ್ಟವಾದ ಜಯವನ್ನು ಸೂಚಿಸಿವೆ. ಗುಜರಾತ್‌ನಲ್ಲಿ 27 ವರ್ಷಗಳಿಂದ ಬಿಜೆಪಿ ಅಧಿಕಾರದಲ್ಲಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಪ್ರಧಾನಿಯಾಗುವ ಮೊದಲು ಹೆಚ್ಚು ಕಾಲ ಮುಖ್ಯಮಂತ್ರಿ ಸ್ಥಾನದಲ್ಲಿದ್ದರು.

ಕಳೆದ 2017ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಆಡಳಿತಾರೂಢ ಬಿಜೆಪಿಗೆ ಕಠಿಣ ಸ್ಫರ್ಧೆವನ್ನು ನೀಡಿತು. ಆದಾಗ್ಯೂ, ಆಮ್‌ ಆದ್ಮಿ ಪಾರ್ಟಿ ಮತ ಪಡೆಯುವ ಮೂಲಕ ಕಾಂಗ್ರೆಸ್‌ಗೆ ಪ್ರಬಲ ಹೊಡೆತ ನೀಡಬಹುದು. ಗುಜರಾತ್ ವಿಧಾನಸಭೆ ಚುನಾವಣೆಯ ಮತ ಎಣಿಕೆ ಬೆಳಗ್ಗೆ 8 ಗಂಟೆಗೆ ಆರಂಭವಾಗಲಿದೆ. ಎಲ್ಲ ಮತ ಎಣಿಕೆ 37 ಕೇಂದ್ರಗಳಲ್ಲಿ ಸುಸಜ್ಜಿತ ವ್ಯವಸ್ಥೆ ಮಾಡಲಾಗಿದೆ.

Gujarat Election Results 2022: ಫಲಿತಾಂಶ ಎಲ್ಲಿ, ಯಾವಾಗ ನೋಡಬಹುದು ತಿಳಿಯಿರಿGujarat Election Results 2022: ಫಲಿತಾಂಶ ಎಲ್ಲಿ, ಯಾವಾಗ ನೋಡಬಹುದು ತಿಳಿಯಿರಿ

182 ಮತ ಎಣಿಕೆ ವೀಕ್ಷಕರು, 182 ಚುನಾವಣಾಧಿಕಾರಿಗಳು ಮತ್ತು 494 ಸಹಾಯಕ ಚುನಾವಣಾಧಿಕಾರಿಗಳು ಮತ ಎಣಿಕೆ ಕಾರ್ಯಕ್ಕೆ ಕರ್ತವ್ಯ ನಿರ್ವಹಿಸಲಿದ್ದಾರೆ ಎಂದು ಗುಜರಾತ್ ಮುಖ್ಯ ಚುನಾವಣಾಧಿಕಾರಿ ಪಿ.ಭಾರತಿ ತಿಳಿಸಿದ್ದಾರೆ. ಮತ ಎಣಿಕೆಗೆ ಹೆಚ್ಚುವರಿಯಾಗಿ 78 ಸಹಾಯಕ ಚುನಾವಣಾಧಿಕಾರಿಗಳು ಇರುತ್ತಾರೆ. ಜತೆಗೆ 71 ಹೆಚ್ಚುವರಿ ಸಹಾಯಕ ಚುನಾವಣಾಧಿಕಾರಿಗಳಿಗೆ ವಿದ್ಯುನ್ಮಾನವಾಗಿ ರವಾನೆಯಾಗುವ ಅಂಚೆ ಮತಪತ್ರ ವ್ಯವಸ್ಥೆಗೆ ಜವಾಬ್ದಾರಿ ವಹಿಸಲಾಗಿದೆ.

8:30 ರಿಂದ ಇವಿಎಂಗಳಿಂದ ಮತ ಎಣಿಕೆ

8:30 ರಿಂದ ಇವಿಎಂಗಳಿಂದ ಮತ ಎಣಿಕೆ

ಬೆಳಿಗ್ಗೆ 8 ಗಂಟೆಗೆ ಮೊದಲ ಅಂಚೆ ಮತಪತ್ರಗಳ ಎಣಿಕೆ ಮಾಡಲಾಗುವುದು ಮತ್ತು 8:30 ರಿಂದ ವಿದ್ಯುನ್ಮಾನ ಮತಯಂತ್ರದ (ಇವಿಎಂ) ಮತಗಳ ಎಣಿಕೆಯೊಂದಿಗೆ ಅಂಚೆ ಮತಪತ್ರಗಳ ಎಣಿಕೆ ಕೂಡ ಪ್ರಾರಂಭವಾಗುತ್ತದೆ. ಎಲ್ಲ ಮತ ಎಣಿಕೆ ಸಿಬ್ಬಂದಿಯನ್ನು ನೇಮಿಸಲಾಗಿದೆ ಎಂದು ಸಿಇಒ ಪಿ.ಭಾರತಿ ತಿಳಿಸಿದ್ದು, ಎರಡನೇ ರ್ಯಾಂಡಮೈಸೇಶನ್ ಕೂಡ ಬುಧವಾರ ಪೂರ್ಣಗೊಳ್ಳಲಿದ್ದು, ಗುರುವಾರ ಬೆಳಗ್ಗೆ 5 ಗಂಟೆಗೆ ಮತ ಎಣಿಕೆಗೂ ಮುನ್ನ ಮೂರನೇ ಪರಿಶೀಲನಾ ಪ್ರಕ್ರಿಯೆ ನಡೆಯಲಿದೆ.

ಎಣಿಕೆ ಪ್ರಕ್ರಿಯೆ ವಿಡಿಯೋ ಚಿತ್ರೀಕರಣ

ಎಣಿಕೆ ಪ್ರಕ್ರಿಯೆ ವಿಡಿಯೋ ಚಿತ್ರೀಕರಣ

ಪ್ರತಿ ಮತಗಟ್ಟೆ ಕೇಂದ್ರದ ಟೇಬಲ್‌ಗೆ ಮೈಕ್ರೊ ಅಬ್ಸರ್ವರ್, ಎಣಿಕೆ ಮೇಲ್ವಿಚಾರಕರು ಮತ್ತು ಮತ ಎಣಿಕೆ ಸಹಾಯಕರನ್ನು ನಿಯೋಜಿಸಲಾಗಿದೆ. ಇಡೀ ಎಣಿಕೆ ಪ್ರಕ್ರಿಯೆಯನ್ನು ವಿಡಿಯೋ ಚಿತ್ರೀಕರಿಸಲಾಗುತ್ತದೆ. ಇವಿಎಂಗಳನ್ನು ಸ್ಟ್ರಾಂಗ್‌ರೂಮ್‌ನಿಂದ ಹೊರತೆಗೆದು ಮತ ಎಣಿಕೆ ಹಾಲ್‌ನಲ್ಲಿ ಚುನಾವಣಾಧಿಕಾರಿ/ ಸಹಾಯಕ ಚುನಾವಣಾಧಿಕಾರಿ, ಅಭ್ಯರ್ಥಿ ಎಣಿಕೆ ಏಜೆಂಟ್‌ಗಳು ಮತ್ತು ಭಾರತೀಯ ಚುನಾವಣಾ ಆಯೋಗ ನೇಮಿಸಿದ ವೀಕ್ಷಕರ ಸಮ್ಮುಖದಲ್ಲಿ ಸ್ಥಾಪಿಸಲಾಗುತ್ತದೆ.

ಮತಗಟ್ಟೆಗಳ ಬಳಿ ಸಿಎಪಿಎಫ್ ಬಿಗಿ ಭದ್ರತೆ

ಮತಗಟ್ಟೆಗಳ ಬಳಿ ಸಿಎಪಿಎಫ್ ಬಿಗಿ ಭದ್ರತೆ

ಮತ ಎಣಿಕೆ ಸಿದ್ಧತೆಗಳನ್ನು ಪರಿಶೀಲಿಸಿದ ಸಿಇಒ ಪಿ.ಭಾರತಿ ಮಾತನಾಡಿ, ರಾಜ್ಯದ 33 ಜಿಲ್ಲೆಗಳ 37 ಮತ ಎಣಿಕೆ ಕೇಂದ್ರಗಳಲ್ಲಿ ಎಲ್ಲ ಅಗತ್ಯ ಸಿದ್ಧತೆಗಳನ್ನು ಪೂರ್ಣಗೊಳಿಸಲಾಗಿದೆ. ಮತ ಎಣಿಕೆ ಕೇಂದ್ರದ ಆವರಣದ ಹೊರಗೆ ಸ್ಥಳೀಯ ಪೊಲೀಸರನ್ನು ನಿಯೋಜಿಸಲಾಗುವುದು. ಎಣಿಕೆ ಸ್ಥಳದಲ್ಲಿ ರಾಜ್ಯ ಮೀಸಲು ಪೊಲೀಸ್ ಪಡೆ (ಎಸ್‌ಆರ್‌ಪಿಎಫ್) ಮತ್ತು ಎಣಿಕೆ ಕೇಂದ್ರದ ಗೇಟ್‌ಗಳ ಹೊರಗೆ ಕೇಂದ್ರ ಸಶಸ್ತ್ರ ಪೊಲೀಸ್ ಪಡೆ (ಸಿಎಪಿಎಫ್) ಬಿಗಿ ಉಪಸ್ಥಿತಿ ಇರುತ್ತದೆ.

ಈ ಬಾರಿ ಬಿಜೆಪಿ ಪೂರಕ ವಾತಾವರಣ

ಈ ಬಾರಿ ಬಿಜೆಪಿ ಪೂರಕ ವಾತಾವರಣ

ಕರ್ತವ್ಯದಲ್ಲಿರುವ ಅಧಿಕಾರಿಗಳು ಮತ್ತು ವಿಶೇಷವಾಗಿ ಅಧಿಕೃತ ರಾಜಕೀಯ ಪ್ರತಿನಿಧಿಗಳನ್ನು ಹೊರತುಪಡಿಸಿ ಯಾವುದೇ ವ್ಯಕ್ತಿ ಅಥವಾ ವಾಹನವನ್ನು ಸಂಕೀರ್ಣಕ್ಕೆ ಪ್ರವೇಶಿಸಲು ಅನುಮತಿಸಲಾಗುವುದಿಲ್ಲ. ಗಮನಾರ್ಹವೆಂದರೆ, 2017 ರಲ್ಲಿ ಪಾಟಿದಾರ್ ಸಮುದಾಯದ ಪ್ರತಿಭಟನೆಯೊಂದಿಗೆ ಬಿಜೆಪಿ ಕೂಡ ಒತ್ತಡದಲ್ಲಿ ಸಿಲುಕಿತ್ತು. ಆದರೆ ಈ ಬಾರಿ ಪರಿಸ್ಥಿತಿಯು ಬಿಜೆಪಿಯ ಪರವಾಗಿದೆ ಮತ್ತು ಹಿಂದಿನ ಚುನಾವಣೆಗಳಿಗೆ ಹೋಲಿಸಿದರೆ ಪಕ್ಷವು ಹೆಚ್ಚಿನ ಸ್ಥಾನಗಳನ್ನು ಗಳಿಸಬಹುದು ಎನ್ನಲಾಗಿದೆ.

English summary
Bharatiya Janata Party (BJP), which is ruling under the influence of PM Modi, is confident of retaining power in Gujarat this time. Aam Aadmi Party (AAP) is seeking power for the first time. Absent from the frenzied campaign, the Congress is seeking a change of heart.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X