• search

ಜಿಎಸ್ಟಿ ದರ ಕಡಿತ : ಯಾವ್ಯಾವ ಉತ್ಪನ್ನಗಳು ಸೋವಿಯಾಗಿವೆ

By Prasad
Subscribe to Oneindia Kannada
For Quick Alerts
ALLOW NOTIFICATIONS
For Daily Alerts

  ನವದೆಹಲಿ, ಜುಲೈ 21 : ಬೆಲೆ ಏರಿಕೆಯಿಂದ ಬಸವಳಿಸಿದ್ದ ಶ್ರೀಸಾಮಾನ್ಯರು ನಿರಾಳರಾಗುವಂತೆ ಹಲವಾರು ಉತ್ಪನ್ನಗಳ ತೆರಿಗೆಯನ್ನು ಜಿಎಸ್ಟಿ ಕೌನ್ಸಿಲ್ ಇಳಿಸಿದೆ.

  ಕೆಲವಾರು ಉತ್ಪನ್ನಗಳನ್ನು ಸಂಪೂರ್ಣವಾಗಿ ತೆರಿಗೆ ಮುಕ್ತ ಮಾಡಲಾಗಿದ್ದರೆ, ಗರಿಷ್ಠ ತೆರಿಗೆಯಿಂದ ಗ್ರಾಹಕರಿಗೆ ಬರೆ ಹಾಕುತ್ತಿದ್ದ ಹಲವಾರು ಉತ್ಪನ್ನಗಳ ತೆರಿಗೆಯನ್ನು ಇಳಿಸಿ ಕೇಂದ್ರ ಸರಕಾರ ಜನರಿಗೆ ಭರ್ಜರಿ ಬಳುವಳಿಯನ್ನು ನೀಡಿದೆ.

  ಸ್ಯಾನಿಟರಿ ನ್ಯಾಪ್‌ಕಿನ್ ಇನ್ನು ತೆರಿಗೆಮುಕ್ತ

  ಪಿಯೂಶ್ ಗೋಯಲ್ ಅವರ ಅಧ್ಯಕ್ಷತೆಯಲ್ಲಿ ಶನಿವಾರ ಕರೆಯಲಾಗಿದ್ದ 28ನೇ ಸರಕು ಮತ್ತು ಸೇವಾ ತೆರಿಗೆ ಕೌನ್ಸಿಲ್ ಸಭೆಯಲ್ಲಿ, ಪಾರದರ್ಶಕತೆ ಮತ್ತು ಪ್ರಾಮಾಣಿಕತೆಯನ್ನು ಹೇಗೆ ತರಲಾಗಿದೆ, ಈ ತೆರಿಗೆ ಇಳಿಕೆ ಹೇಗೆ 125 ಕೋಟಿ ಜನರಿಗೆ ಅನುಕೂಲವಾಗಲಿದೆ ಎಂದು ವಿವರಿಸಲಾಯಿತು.

  ಒಟ್ಟು 88 ಸರಕು ಮತ್ತು ಸೇವೆ ತೆರಿಗೆ ಇಳಿಸಲು ಜಿಎಸ್ಟಿ ಕೌನ್ಸಿಲ್ ಅನುಮೋದನೆ ನೀಡಿತು. ಬಡ ಜನರು, ಗೃಹ ಉಪಯೋಗಿ ಸಾಮಗ್ರಿ, ಮಹಿಳೆಯರು, ರೈತರು ಮತ್ತು ಹಿರಿಯ ನಾಗರಿಕರನ್ನು ಗಮನದಲ್ಲಿಟ್ಟುಕೊಂಡು ಈ ದರಗಳನ್ನು ಇಳಿಸಲಾಗಿದೆ ಎಂದು ಪಿಯೂಶ್ ಗೋಯಲ್ ವಿವರಿಸಿದರು.

  ಜಿಎಸ್ಟಿ ವ್ಯಾಪ್ತಿಗೆ ಬಂದರೂ ಇಂಧನ ಬೆಲೆ ತಗ್ಗಲ್ಲ?

  ಇಷ್ಟು ಮಾತ್ರವಲ್ಲ 5 ಕೋಟಿ ರುಪಾಯಿಗಿಂತ ಕಡಿಮೆ ವಹಿವಾಟು ಇರುವ ವ್ಯಾಪಾರಿಗಳು ಇನ್ನು ಮುಂದೆ ತ್ರೈಮಾಸಿಕ ರಿಟರ್ನ್ ಫೈಲ್ ಮಾಡುವುದನ್ನು ಸರಳೀಕರಣ ಮಾಡಲಾಗಿದೆ. ಜಿಎಸ್ಟಿ ಅಡಿಯಲ್ಲಿ ನೋಂದಾಯಿಸಿಕೊಳ್ಳಬೇಕಾಗಿರುವ ತೆರಿಗೆದಾರರಿಗೆ ನೋಂದಾಯಿಸಿಕೊಳ್ಳಲು ಆಗಸ್ಟ್ 31ರವರೆಗೆ ಸಮಯ ನೀಡಲಾಗಿದೆ.

  ಜಿಎಸ್ಟಿಯಿಂದ ಮುಕ್ತವಾದ ಉತ್ಪನ್ನಗಳು

  ಜಿಎಸ್ಟಿಯಿಂದ ಮುಕ್ತವಾದ ಉತ್ಪನ್ನಗಳು

  * ಸ್ಯಾನಿಟರಿ ಪ್ಯಾಡ್
  * ಚಿನ್ನ, ಬೆಳ್ಳಿ ಇಲ್ಲದಿರುವಂಥ ರಾಖಿ
  * ಮಾರ್ಬಲ್, ಕಲ್ಲು ಮತ್ತು ಕಟ್ಟಿಗೆಯ ದೇವರ ಮೂರ್ತಿಗಳು
  * ಪೊರಕೆಯಲ್ಲಿ ಬಳಸಲಾದ ಕಚ್ಚಾ ಸಾಮಗ್ರಿಗಳು
  * ಫಾರ್ಟಿಫೈಯ್ಡ್ ಹಾಲು
  * ಸಾಲ್ ಎಲೆಗಳು
  * ಕಾಯರ್ ಕಾಂಪೋಸ್ಟ್

  ಶೇ.28ರಿಂದ ಶೇ.18ಕ್ಕೆ ಇಳಿದ ಉತ್ಪನ್ನಗಳು

  ಶೇ.28ರಿಂದ ಶೇ.18ಕ್ಕೆ ಇಳಿದ ಉತ್ಪನ್ನಗಳು

  * ವಾಷಿಂಗ್ ಮಷೀನ್
  * ರೆಫ್ರಿಜರೇಟರ್, ಫ್ರೀಜರ್
  * 68 ಇಂಚ್ ವರೆಗಿನ ಟಿವಿಗಳು
  * ವಿಡಿಯೋ ಗೇಮ್ಸ್
  * ವ್ಯಾಕ್ಯೂಮ್ ಕ್ಲೀನರ್
  * ಟ್ರೇಲರ್ಸ್ ಮತ್ತು ಸೆಮಿ ಟ್ರೇಲರ್ಸ್
  * ಮಿಕ್ಸರ್ ಗ್ರೈಂಡರ್
  * ಶೇವರ್ಸ್ ಮತ್ತು ಹೇರ್ ಡೈಯರ್ಸ್
  * ವಾಟರ್ ಕೂಲರ್
  * ಲೀಥಿಯಮ್ ಅಯಾನ್ ಬ್ಯಾಟರಿ
  * ಸ್ಟೋರೇಜ್ ವಾಟರ್ ಹೀಟರ್
  * ಎಲೆಕ್ಟ್ರಿಕ್ ಇಸ್ತ್ರಿ ಪೆಟ್ಟಿಗೆ
  * ಪೇಂಟ್

  ಶೇ.18ರಿಂದ ಶೇ.12ಕ್ಕೆ ಇಳಿದ ಉತ್ಪನ್ನಗಳು

  ಶೇ.18ರಿಂದ ಶೇ.12ಕ್ಕೆ ಇಳಿದ ಉತ್ಪನ್ನಗಳು

  * ಹ್ಯಾಂಡ್ ಬ್ಯಾಗ್ ಮತ್ತು ಆಭರಣ ಪೆಟ್ಟಿಗೆ
  * ಪೇಂಟಿಂಗ್, ಫೋಟೋ ಮತ್ತು ಕನ್ನಡಿಗೆ ಬಳಸುವ ಕಟ್ಟಿಗೆ ಫ್ರೇಮ್
  * ಕಲೆಗಾರಿಕೆ ಇರುವ ಕಲ್ಲು
  * ಅಲಂಕಾರಿಕ ಕನ್ನಡಿ ಫ್ರೇಮ್
  * ಕ್ರಿಸ್ಟಲ್ ಇಲ್ಲದಿರುವ ಗಾಜಿನ ಮೂರ್ತಿ
  * ಗಾಜಿನ ಭರಣಿ, ಹೂಕುಂಡ ಇತ್ಯಾದಿ
  * ಕಲೆಗಾರಿಕೆ ಇರುವ ಕಬ್ಬಿಣ
  * ಕಲೆಗಾರಿಕೆ ಇರುವ ಅಲ್ಯುಮಿನಿಯಮ್
  * ಕುಸುರಿಗಾರಿಕೆ ಇರುವ ದೀಪ (ಪಂಚಲೋಹ)
  * ಗಂಜೀಫಾ ಕಾರ್ಡ್
  * ಬಾಂಬೂ ಫ್ಲೋರಿಂಗ್
  * ಜಿಪ್ ಮತ್ತು ಸ್ಲೈಡ್ ಫಾಸ್ಟನರ್

  ಶೇ.5ಕ್ಕೆ ಇಳಿದಿರುವ ಉತ್ಪನ್ನಗಳು

  ಶೇ.5ಕ್ಕೆ ಇಳಿದಿರುವ ಉತ್ಪನ್ನಗಳು

  * ಎಥೆನಾಲ್
  * ಸಾಲಿಡ್ ಬಯೋ ಫ್ಯುಯೆಲ್ ಪೆಲೆಟ್ಸ್
  * ಚೆನಿಲ್ ಫ್ಯಾಬ್ರಿಕ್
  * ಕೈಮಗ್ಗದ ಜಮಖಾನ
  * ಫಾಸ್ಫಾರಿಕ್ ಆಸಿಡ್
  * ಸಾವಿರ ರು.ಗಿಂತ ಜಾಸ್ತಿಯಿರದ ಹೆಣೆದ ಟೋಪಿ
  * ಕೈಮಗ್ಗದ ಕಾರ್ಪೆಟ್, ಹ್ಯಾಂಡ್ ಮೇಡ್ ಟೆಕ್ಸ್ ಟೈಲ್ ಫ್ಲೋರ್ ಕವರಿಂಗ್
  * ಕೈಯಿಂದ ತಯಾರಿಸಿದ ಲೇಸ್
  * ತೋರಣ

  ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

  English summary
  In a relief for common man, the GST Council on Saturday has slashed tax for many products which were pinching the pockets of common people.

  Oneindia ಬ್ರೇಕಿಂಗ್ ನ್ಯೂಸ್,
  ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more