ಇಸ್ರೋದಿಂದ ಸ್ಚದೇಶಿ ನಿರ್ಮಿತ ಕ್ರಯೋಜೆನಿಕ್ ಇಂಜಿನ್ ಪರೀಕ್ಷೆ ಯಶಸ್ವಿ
ಜಿಎಸ್ಎಲ್ವಿ ಮಾರ್ಕ್ 3 ರಾಕೆಟ್ನಲ್ಲಿ ಬಳಸಲು ಅಭಿವೃದ್ಧಿಪಡಿಸುತ್ತಿರುವ ಸ್ವದೇಶಿ ನಿರ್ಮಿತ ಕ್ರಯೋಜೆನಿಕ್ ಇಂಜಿನ್ನ ಪರೀಕ್ಷೆ ಯಶಸ್ವಿಯಾಗಿ ನಡೆಸಿದೆ.
ಚೆನ್ನೈ ಫೆಬ್ರವರಿ 19: ಜಿಎಸ್ಎಲ್ವಿ ಮಾರ್ಕ್ 3 ರಾಕೆಟ್ನಲ್ಲಿ ಬಳಸಲು ಅಭಿವೃದ್ಧಿಪಡಿಸುತ್ತಿರುವ ಸ್ವದೇಶಿ ನಿರ್ಮಿತ ಕ್ರಯೋಜೆನಿಕ್ ಇಂಜಿನ್ನ ಪರೀಕ್ಷೆ ಯಶಸ್ವಿಯಾಗಿ ನಡೆಸಿದೆ. 4 ಟನ್ ತೂಕದ ಉಪಗ್ರಹಗಳನ್ನು ಹೊತ್ತೊಯ್ಯುವ ಸಾಮರ್ಥ್ಯದ ಜಿಎಸ್ಎಲ್ವಿ ಮಾರ್ಕ್ 3 ರಾಕೆಟ್ ಅನ್ನು ಅಭಿವೃದ್ಧಿ ಪಡಿಸುತ್ತಿದೆ.
ಏಕಕಾಲದಲ್ಲಿ 104 ಉಪಗ್ರಹಗಳನ್ನು ಉಡಾವಣೆ ಮಾಡುವ ಮೂಲಕ ಇತಿಹಾಸ ನಿರ್ಮಿಸಿದ ಬೆನ್ನಲ್ಲೇ ಇಸ್ರೋ ಈ ಸಾಧನೆ ಮಾಡಿದೆ.

ತಮಿಳುನಾಡಿನ ಮಹೇಂದ್ರಗಿರಿಯಲ್ಲಿರುವ ಇಸ್ರೋ ಸಂಶೋಧನಾ ಕೇಂದ್ರದಲ್ಲಿ ಕ್ರಯೋಜೆನಿಕ್ ಇಂಜಿನ್ ಅನ್ನು 10 ನಿಮಿಷಗಳ ಕಾಲ ಪರೀಕ್ಷೆಗೆ ಒಳಪಡಿಸಲಾಯಿತು. ಜಿಎಸ್ಎಲ್ವಿ ಮಾರ್ಕ್ 3 ರಾಕೆಟ್ 50 ಮೀಟರ್ ಎತ್ತರವಿದ್ದು, 414 ಟನ್ ತೂಕವಿರಲಿದೆ.
ದ್ರವೀಕೃತ ಜಲಜನಕ ಮತ್ತು ಆಮ್ಲಜನಕವನ್ನು ಇಂಧನವಾಗಿ ಬಳಸುವ ಕ್ರಯೋಜನಿಕ್ ಇಂಜಿನ್ ನಿರ್ಮಾಣಕ್ಕಾಗಿ ಇಸ್ರೋ ಎರಡು ದಶಕಗಳ ಹೋರಾಟ ನಡೆಸಿ, ಯಶಸ್ವಿಯಾಗಿದೆ. ಈ ತಂತ್ರಜ್ಞಾನದ ನೆರವಿಗಾಗಿ ಇತರೆ ದೇಶಗಳಿಗೆ ಈ ಮುಂಚೆ ಬೇಡಿಕೊಳ್ಳಲಾಗುತ್ತಿತ್ತು. ರಷ್ಯಾ, ಅಮೆರಿಕ, ಫ್ರಾನ್ಸ್, ಚೀನಾ, ಜಪಾನ್ ನಂತರ ಭಾರತ ಈಗ ತನ್ನದೇ ಆದ ಕ್ರಯೋಜನಿಕ್ ಇಂಜಿನ್ ಹೊಂದಲಿದೆ.












Click it and Unblock the Notifications