ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗುಡ್ ನ್ಯೂಸ್! ಗ್ರಾಚ್ಯುಟಿ ಮಿತಿ 20 ಲಕ್ಷ, ತಾಯ್ತನದ ರಜಾ 26 ವಾರ

By ವಿಕಾಸ್ ನಂಜಪ್ಪ
|
Google Oneindia Kannada News

ಉದ್ಯೋಗಿಗಳ ಗ್ರಾಚ್ಯುಟಿ ಮೊತ್ತದ ಮೇಲಿದ್ದ ಮಿತಿಯನ್ನು ಸರಕಾರ 10 ಲಕ್ಷದಿಂದ 20 ಲಕ್ಷ ರುಪಾಯಿಗೆ ಏರಿಕೆ ಮಾಡಿದೆ. ದ ಪೇಮಂಟ್ ಆಫ್ ಗ್ರಾಚ್ಯುಟಿ ಆಕ್ಟ್ (ತಿದ್ದುಪಡಿ) ಮಸೂದೆ 2017 ಅನ್ನು ಕಾರ್ಮಿಕ ಸಚಿವ ಸಂತೋಷ್ ಕುಮಾರ್ ಗಂಗ್ವರ್ ಸದನದಲ್ಲಿ ಮಂಡಿಸಿದರು.

ವಿರೋಧ ಪಕ್ಷಗಳು ಈ ವೇಳೆ ಘೋಷಣೆ ಕೂಗಿದವು. ಪ್ರತಿಯಾಗಿ ಬಿಜೆಪಿಯವರೂ ಘೋಷಣೆ ಹಾಕಿದರು. ಪೇಮಂಟ್ ಆಫ್ ಗ್ರಾಚ್ಯುಟಿ ಆಕ್ಟ್ 1972ರ ಅನ್ವಯ ಕಾರ್ಖಾನೆ, ಗಣಿಗಾರಿಕೆ, ಪ್ಲಾಂಟೇಷನ್, ಬಂದರು, ರೈಲ್ವೆ ಕಂಪನಿ, ಮಳಿಗೆ ಅಥವಾ ಇನ್ಯಾವುದೇ ಸಂಸ್ಥೆಗಳಿಗೆ ಇದು ಅನ್ವಯ ಆಗುತ್ತದೆ.

ಅಂಥಲ್ಲಿ ಐದು ವರ್ಷ ನಿರಂತರವಾಗಿ ಕಾರ್ಯ ನಿರ್ವಹಿಸುತ್ತಿದ್ದು, ಅಲ್ಲಿ ಹತ್ತು ಅಥವಾ ಅದಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಉದ್ಯೋಗಿಗಳಿದ್ದರೆ ಗ್ರಾಚ್ಯುಟಿ ನೀಡಬೇಕು. ಅಂದಹಾಗೆ ಈ ಗ್ರಾಚ್ಯುಟಿ ಮೊತ್ತವನ್ನು ಹೇಗೆ ಲೆಕ್ಕ ಹಾಕಲಾಗುತ್ತದೆ?

ಉದ್ಯೋಗಿಗಳ ತೆರಿಗೆರಹಿತ ಗ್ರಾಚ್ಯುಟಿ ಮಿತಿ 20 ಲಕ್ಷಕ್ಕೆ ಏರಿಕೆಉದ್ಯೋಗಿಗಳ ತೆರಿಗೆರಹಿತ ಗ್ರಾಚ್ಯುಟಿ ಮಿತಿ 20 ಲಕ್ಷಕ್ಕೆ ಏರಿಕೆ

ಅದಕ್ಕೊಂದು ಸೂತ್ರವಿದೆ. ಆ ಉದ್ಯೋಗಿ ಒಟ್ಟಾರೆಯಾಗಿ ಅಲ್ಲಿ ಎಷ್ಟು ವರ್ಷ ಕಾರ್ಯ ನಿರ್ವಹಿಸಿದರು ಎಂಬುದನ್ನು ಲೆಕ್ಕ ಹಾಕಲಾಗುತ್ತದೆ. ವರ್ಷಕ್ಕೆ ಹದಿನೈದು ದಿನದಂತೆ ಸಂಬಳ ಲೆಕ್ಕ ಹಾಕಿ, ಅವರು ಎಷ್ಟು ವರ್ಷ ಕೆಲಸ ನಿರ್ವಹಿಸಿರುತ್ತಾರೋ ಅಷ್ಟು ವರ್ಷವನ್ನು ಗುಣಿಸಲಾಗುತ್ತದೆ. ಬಂದ ಮೊತ್ತವೇ ಗ್ರಾಚ್ಯುಟಿ.

2010ರಲ್ಲಿ 10 ಲಕ್ಷ ಮಿತಿ

2010ರಲ್ಲಿ 10 ಲಕ್ಷ ಮಿತಿ

2010ರಲ್ಲಿ ಗ್ರಾಚ್ಯುಟಿ ಮೊತ್ತಕ್ಕೆ ಗರಿಷ್ಠ 10 ಲಕ್ಷ ಎಂದು ಮಿತಿ ಹಾಕಲಾಯಿತು. ಆ ನಂತರ ಏರುತ್ತಿರುವ ಹಣದುಬ್ಬರ, ವೇತನ ಮತ್ತಿತರ ಅಂಶಗಳನ್ನು ಗಣನೆಗೆ ತೆಗೆದುಕೊಂಡು ಖಾಸಗಿ ಹಾಗೂ ಸರಕಾರಿ ವಲಯಗಳಲ್ಲೇ ಗ್ರಾಚ್ಯುಟಿ ಮಿತಿಯಲ್ಲೇ ಏರಿಕೆ ಮಾಡಲಾಗುತ್ತಿದೆ.

ವೇತನ ಆಯೋಗದ ಶಿಫಾರಸು

ವೇತನ ಆಯೋಗದ ಶಿಫಾರಸು

ಆದರೆ, ಕಾಯ್ದೆಗೆ ತಿದ್ದುಪಡಿ ತರುವ ಬದಲು ಅಧಿಸೂಚನೆ ಹೊರಡಿಸಿದರೆ, ಆಯಾ ಸಮಯಕ್ಕೆ ತಕ್ಕಂತೆ ಆ ಮಿತಿಯನ್ನು ಮುಂದಿನ ವೇತನ ಆಯೋಗಗಳು ಶಿಫಾರಸು ಮಾಡಬಹುದು ಎಂದು ಕೂಡ ಹೇಳಲಾಗಿದೆ.

ಈ ವರೆಗೆ ಹನ್ನೆರಡು ವಾರ

ಈ ವರೆಗೆ ಹನ್ನೆರಡು ವಾರ

ತಾಯ್ತನ ರಜಾ ವಿಚಾರಕ್ಕೆ ಸಂಬಂಧಿಸಿದಂತೆ ಹೇಳುವುದಾದರೆ, ಈ ವರೆಗೆ ಹನ್ನೆರಡು ವಾರದವರೆಗೆ ಮಾತ್ರ ವೇತನಸಹಿತ ರಜಾ ಪಡೆಯಲು ಅವಕಾಶ ಇದೆ. ಆದರೆ ಇದರಲ್ಲೂ ಬದಲಾವಣೆ ಆಗಲಿದೆ.

ತಾಯ್ತನ ರಜಾ ಇಪ್ಪತ್ತಾರು ವಾರ

ತಾಯ್ತನ ರಜಾ ಇಪ್ಪತ್ತಾರು ವಾರ

ತಾಯ್ತನದ ವೇತನಸಹಿತ ರಜೆಯನ್ನು ಹೆಚ್ಚಿಸುವ ಪ್ರಸ್ತಾವವನ್ನು ಕೂಡ ಸರಕಾರ ಮುಂದಿಟ್ಟಿದೆ. ಮಾತೃತ್ವ ಅನುಕೂಲ (ತಿದ್ದುಪಡಿ) ಕಾಯ್ದೆ, 2017ರ ಮೂಲಕ ತಾಯ್ತನದ ವೇತನ ಸಹಿತ ರಜಾ 26 ವಾರಕ್ಕೆ ಹೆಚ್ಚಿಸುವ ಉದ್ದೇಶವಿದೆ. ಈ ವರೆಗೆ ಹನ್ನೆರಡು ವಾರದವರೆಗೆ ಇದ್ದ ಮಾತೃತ್ವ ರಜಾವನ್ನು ಇಪ್ಪತ್ತಾರು ವಾರಗಳಿಗೆ ವಿಸ್ತರಿಸುವುದನ್ನು ಸೇರಿಸಲಾಗಿದೆ ಎಂದು ಹೇಳಿಕೆಯಲ್ಲಿದೆ.

English summary
Following the 7th Pay Commission, the government has now increased the ceiling of gratuity amount for employees from Rs 10 lakh to 20 lakh. Enhancing the maximum maternity leave period to 26 weeks.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X