ಅಜ್ಜನ ನಿಧನದಿಂದ ಬೇಸತ್ತ ಮೊಮ್ಮಗಳು ಬೆಂಕಿಗೆ ಆಹುತಿ

By: ಮಂಗಳೂರು ಪ್ರತಿನಿಧಿ
Subscribe to Oneindia Kannada

ಕಾಸರಗೋಡು, ಡಿಸೆಂಬರ್, 08: ಹಿರಿಯರನ್ನು ಕಂಡರೆ ಮೂಗು ಮುರಿಯುವ ಮೊಮ್ಮಕ್ಕಳ ನಡುವೆ ಇಲ್ಲೊಬ್ಬ ಮೊಮ್ಮಗಳು ಅಜ್ಜನ ನಿಧನದಿಂದ ಬೇಸತ್ತು ಸೀಮೆ ಎಣ್ಣೆ ಸುರಿದು ಬೆಂಕಿ ಹಚ್ಚಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಕಾಸರಗೋಡಿನ ಪಡನ್ನ ಬಳಿ ಡಿಸೆಂಬರ್ 07ರ ಸೋಮವಾರ ನಡೆದಿದೆ .

ತಾತನ ಅಗಲಿಕೆ ನೋವನ್ನು ತಾಳಲಾರದೆ ರೇಷ್ಮಾ (22) ಮೃತಪಟ್ಟ ಯುವತಿ. ಈಕೆ ಕಂಪ್ಯೂಟರ್ ತರಬೇತಿ ಪಡೆಯುತ್ತಿದ್ದು, ಅಜ್ಜನನ್ನು ತನ್ನ ಜೀವಕ್ಕಿಂತ ಹೆಚ್ಚು ಪ್ರೀತಿಸುತ್ತಿದ್ದು, ತಾತ ಸತ್ತ ದಿನವೇ ಆಕೆಯೂ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.[ಅರಿಶಿಣದ ಮೈ ಆರುವ ಮುನ್ನ ಮಹಿಳೆ ಜೀವನವೇ ಬಾಡಿತು]

Grandchild commits suicide in Kasargod, Kerala

ರೇಷ್ಮಾಳ ಅಜ್ಜ ಪಿ .ಕೆ ಕಣ್ಣನ್(75) ತೀವ್ರ ಎದೆ ನೋವಿನಿಂದ ನರಳುತ್ತಿದ್ದ ಕಾರಣ ಭಾನುವಾರ ರಾತ್ರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಸೋಮವಾರ ಬೆಳಿಗ್ಗೆ ಚೆರ್ವತ್ತೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದ್ದರು.[ಹೆತ್ತವರ ಪ್ರೀತಿ ಕಳೆದುಕೊಂಡು ನಲುಗುತ್ತಿರುವ ಮಕ್ಕಳು]

ತಾತನ ನಿಧನದ ಸುದ್ದಿಯನ್ನು ಕೇಳಿದ ರೇಷ್ಮಾ ಮನನೊಂದಿದ್ದು ಶೌಚಾಲಯ ದೊಳಗೆ ಸೀಮೆ ಎಣ್ಣೆ ಸುರಿದು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ. ಕೂಡಲೇ ಆಸ್ಪತ್ರೆಗೆ ತಲುಪಿಸಿದರೂ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾಳೆ. ಈ ಪ್ರಕರಣವನ್ನು ಚಂದೇರ ಠಾಣಾ ಪೊಲೀಸರು ದಾಖಲಿಸಿಕೊಂಡಿದ್ದು, ಪರಿಯಾರಂ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ .

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Grandchild Reshma (22) has commited suicide on Monday, December 08th at Padanna, Kasargod, Kerala. She loves very much to her grand father. But Grandfather is died with chest pain on Monday.
Please Wait while comments are loading...