VIP Security: ವಿಐಪಿ ಭದ್ರತೆಯಲ್ಲಿ ಮಹತ್ವದ ಬದಲಾವಣೆ ಮಾಡಿದ ಕೇಂದ್ರ ಸರ್ಕಾರ!
ದೇಶದಲ್ಲಿ ವಿಐಪಿ ಭದ್ರತೆ ವಿಚಾರ ಆಗಾಗ ಬಹುದೊಡ್ಡ ಮಟ್ಟದ ಚರ್ಚೆ ಗ್ರಾಸವಾಗುತ್ತದೆ. ಯಾಕಂದ್ರೆ ಒಂದು ಕಡೆ ವಿಐಪಿ ಭದ್ರತೆ ಪರವಾಗಿ ಮಾತನಾಡುವವರು ಇದ್ದರೆ, ಇನ್ನೊಂದು ಕಡೆ ವಿಐಪಿ ಭದ್ರತೆ ಬಗ್ಗೆ ಕೊಂಕು ಮಾತನಾಡುವ ಜನರು ಕೂಡ ಇದ್ದಾರೆ. ಹೀಗಿದ್ದಾಗಲೇ ವಿಐಪಿ ಭದ್ರತೆ ಎಂಬುದು ಅತ್ಯಗತ್ಯ ಅಂತಾರೆ ಅಧಿಕಾರಿಗಳು. ಯಾಕಂದ್ರೆ ಪ್ರಮುಖ ವ್ಯಕ್ತಿಗಳಿಗೆ ಭದ್ರತೆ ನೀಡುವುದು ದೇಶದ ಭವಿಷ್ಯಕ್ಕೂ ಒಳ್ಳೆಯದು ಎಂಬ ಅಭಿಪ್ರಾಯ ಇದೆ. ಹೀಗಿದ್ದಾಗ ದಿಢೀರ್ ವಿಐಪಿ ಭದ್ರತೆ ವಿಚಾರದಲ್ಲಿ ಕೇಂದ್ರ ಸರ್ಕಾರ ಮಹತ್ವದ ಬದಲಾವಣೆ ಮಾಡಿದೆ.
ಭಾರತದ ಅತ್ಯಂತ ಪ್ರಮುಖ ವ್ಯಕ್ತಿಗಳಿಗೆ 'ವಿಐಪಿ' ಭದ್ರತೆ ವ್ಯವಸ್ಥೆಯನ್ನ ಕಲ್ಪಿಸಲಾಗುತ್ತದೆ. ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ಅವರು ಸೇರಿದಂತೆ ದೇಶದಲ್ಲಿ ಕೆಲವೇ ಕೆಲವು ಗಣ್ಯ ವ್ಯಕ್ತಿಗಳಿಗೆ ಸದ್ಯದ ಮಟ್ಟಿಗೆ ವಿಐಪಿ ಭದ್ರತೆಯ ವ್ಯವಸ್ಥೆಯನ್ನ ಕಲ್ಪಿಸಿದೆ ಕೇಂದ್ರ ಸರ್ಕಾರ. ಅಂದಹಾಗೆ ದೇಶದಲ್ಲಿ ಇದೀಗ ಒಟ್ಟು 9 ಜನರಿಗೆ ವಿಐಪಿ ಭದ್ರತೆ ವ್ಯವಸ್ಥೆ ನೀಡಲಾಗುತ್ತಿದೆ. ಹಾಗಾದ್ರೆ ಭಾರತದಲ್ಲಿ ಯಾರಿಗೆಲ್ಲಾ ವಿಐಪಿ ಭದ್ರತೆ ಇದೆ? ಇದೀಗ ಆಗುತ್ತಿರುವ ಬದಲಾವಣೆ ಏನು? ಮುಂದೆ ಓದಿ.

ವಿಐಪಿ ಭದ್ರತೆ ಇರುವ 9 ವ್ಯಕ್ತಿಗಳು
ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ಅವರು, ಬಿಎಸ್‌ಪಿ ಮುಖ್ಯಸ್ಥೆ ಮಾಯಾವತಿ, ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಬಿಜೆಪಿ ಹಿರಿಯ ನಾಯಕ & ಮಾಜಿ ಉಪ ಪ್ರಧಾನಿ ಎಲ್.ಕೆ. ಅಡ್ವಾಣಿ, ಕೇಂದ್ರ ಸಚಿವ ಸರ್ಬಾನಂದ ಸೋನೋವಾಲ್, ಛತ್ತೀಸ್‌ಗಢದ ರಮಣ್ ಸಿಂಗ್, ಜಮ್ಮು & ಕಾಶ್ಮೀರ ಮಾಜಿ ಸಿಎಂ ಗುಲಾಂ ನಬಿ ಆಜಾದ್, ನ್ಯಾಷನಲ್ ಕಾನ್ಫರೆನ್ಸ್ ಅಂದ್ರೆ ಎನ್‌ಸಿ ಮುಖ್ಯಸ್ಥ ಫಾರೂಕ್ ಅಬ್ದುಲ್ಲಾ ಸೇರಿದಂತೆ ಆಂಧ್ರ ಪ್ರದೇಶ ಸಿಎಂ ಎನ್. ಚಂದ್ರಬಾಬು ನಾಯ್ಡು ಅವರಿಗೆ ವಿಐಪಿ ಭದ್ರತೆ ನೀಡಲಾಗುತ್ತಿದೆ. ಇದೀಗ ವಿಐಪಿ ಭದ್ರತೆಯಲ್ಲಿ ಬದಲಾವಣೆ ಮಾಡಲಾಗಿದೆ.
ಭದ್ರತೆಯ ಜವಾಬ್ದಾರಿ ವರ್ಗಾವಣೆ!
ಕೇಂದ್ರ ಗೃಹ ಇಲಾಖೆಯ ನಿರ್ಧಾರದಂತೆ ಎನ್‌ಎಸ್‌ಜಿ ಕಮಾಂಡೋಸ್ ಅಂದ್ರೆ ರಾಷ್ಟ್ರೀಯ ಭದ್ರತಾ ಗಾರ್ಡ್ ಕಮಾಂಡೋಸ್ ಬದಲಾಗಿ, ಕೇಂದ್ರೀಯ ಮೀಸಲು ಪೊಲೀಸ್ ಪಡೆ ಅರ್ಥಾತ್ ಸಿಆರ್‌ಪಿಎಫ್ ಇನ್ನು ಮುಂದೆ ವಿಐಪಿ ಭದ್ರತೆಯ ಹೊಣೆ ತೆಗೆದುಕೊಳ್ಳಲಿದೆ. ಈ ಮೂಲಕ, ಹೊಸ ಬದಲಾವಣೆ ಜಾರಿಗೆ ತರಲು ಈಗ ಕೇಂದ್ರದ ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರ ಮುಂದಾಗಿದೆ. ಒಂದು ತಿಂಗಳಲ್ಲಿ ಎನ್‌ಎಸ್‌ಜಿ ಕಮಾಂಡೋಸ್ ತಮ್ಮ ಭದ್ರತೆ ಹೊಣೆಯನ್ನು ಸಿಆರ್‌ಪಿಎಫ್‌ಗೆ ಸಂಪೂರ್ಣವಾಗಿ ವಹಿಸುವ ಸಾಧ್ಯತೆ ಇದೆ.












Click it and Unblock the Notifications