ಎಐ ಆಧಾರಿತ ಪಿಂಚಣಿ ವೆಬ್ ಪೋರ್ಟಲ್ ಶೀಘ್ರವೇ ಬಿಡುಗಡೆ?
ಬೆಂಗಳೂರು ಜೂ.16: ದೇಶದ ಪಿಂಚಣಿದಾರರ ಅನುಕೂಲಕ್ಕಾಗಿ ಪಿಂಚಣಿ ಮತ್ತು ಪಿಂಚಣಿದಾರರ ಕಲ್ಯಾಣ ಇಲಾಖೆಯು ಕೃತಕ ಬುದ್ಧಿಮತ್ತೆ (ಎಐ) ಸಹಿತ ವೆಬ್ ಪೋರ್ಟಲ್ ಅನ್ನು ಆದಷ್ಟು ಶೀಘ್ರವೇ ಆರಂಭಿಸಲಿದೆ ಎಂದು ಕೇಂದ್ರ ಸಚಿವ ಜೀತೆಂದ್ರ ಸಿಂಗ್ ತಿಳಿಸಿದ್ದಾರೆ.
ಪಿಂಚಣಿ ಪಾವತಿ ಮತ್ತು ಟ್ರ್ಯಾಕಿಂಗ್ ಪೋರ್ಟಲ್ ಆಗಿರುವ 'ಭವಿಷ್ಯ' ಪೋರ್ಟಲ್ ನ ಫಲಾನುಭವಿಗಳ ಜತೆಗೆ ಸಂವಾದ ನಡೆಸಿದ ನಂತರ ಮಾತನಾಡಿದ ಅವರು, ಕೇಂದ್ರ ಸರ್ಕಾರದ ಜೀವನ್ ಸುಲಭ ಘೋಷ ವ್ಯಾಕ್ಯದಡಿ ಕೃತಕ ಬುದ್ಧಿಮತ್ತೆವುಳ್ಳ ವೆಬ್ ಪೋರ್ಟಲ್ ಅನ್ನು ಆರಂಭಿಸಲಿದ್ದೇವೆ. ಇದು ಪಿಂಚಣಿದಾರರಿಗೆ ಪಿಂಚಣಿ ಕುರಿತು ಸ್ವಯಂಚಾಲಿತ ಸಂದೇಶ ಕಳುಹಿಸಲು ಸಹಾಯವಾಗಲಿದೆ ಎಂದರು.
ಈ ಉದ್ದೇಶಿತ ನೂತನ ಪಿಂಚಣಿ ಪೋರ್ಟಲ್ ನಲ್ಲಿ ದೇಶಾದ್ಯಂತ ಇರುವ ಪಿಂಚಣಿದಾರರನ್ನು ಹಾಗೂ ಮತ್ತವರ ಸಂಘಗಳನ್ನು ನೋಂದಾವಣೆ ಮಾಡಿಕೊಂಡು ಪರರಸ್ಪರ ಪಿಂಚಣಿದಾರರ ಸಕ್ರಿಯರಾಗಿರುವಂತೆ ನೋಡಿಕೊಳ್ಳಲಿದ್ದೇವೆ. ಇದರಿಂದ ಸಮಸ್ಯೆ, ಸಲಹೆ ಸ್ವೀಕರಿಸಲು ಸಾಧ್ಯವಾಗುತ್ತದೆ ಎಂದು ಭವಿಷ್ಯ ಯೋಜನೆಗಳ ಕುರಿತು ಅವರು ವಿವರಿಸಿದರು.

'ಭವಿಷ್' ಕುರಿತು ಶ್ಲಾಘನೆ ವ್ಯಕ್ತ:
ಪಿಂಚಣಿದಾರರಿಗೆ ಸಮರ್ಪಕ ಸೇವೆ ನೀಡಲೆಂದು ಆರಂಭಿಸಿದ ಪಿಂಚಣಿ ಪಾವತಿ ಮತ್ತು ಟ್ರ್ಯಾಕಿಂಗ್ ಪೋರ್ಟಲ್ ಆದ 'ಭವಿಷ್ಯ' ಆನ್ ಲೈನ್ ವೇದಿಕೆಯ ಕಾರ್ಯಕ್ಕೆ ವ್ಯಾಪಕ ಸ್ಪಂದನೆ ವ್ಯಕ್ತವಾಗಿದೆ. ನಿವೃತ್ತ ಅರೆ ಸೈನಿಕ ಸಿಬ್ಬಂದಿ, ನಿವೃತ್ತಿ ಹೊಂದಲಿರುವ ನಾಗರಿಕರು ಸೇರಿದಂತೆ ಅನೇಕರು ಈ ಆನ್ ಲೈನ್ ವೇದಿಕೆಯಿಂದ ತ್ವರಿತ ಪಿಂಚಣಿ ಸೇವೆ ಮತ್ತು ತಡೆರಹಿತ, ಸಮಸ್ಯೆಗಳಿಲ್ಲದೇ ಸೇವೆ ನೀಡುತ್ತಿರುವ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಪಾರದರ್ಶಕ ಸೇವೆಗೆ ಆದ್ಯತೆ ಆಗಲಿ:
ಪಿಂಚಣಿ ಪಾವತಿ ಸೇರಿದಂತೆ ವಿವಿಧ ವಿಚಾರದಲ್ಲಿ ಉಂಟಾಗುತ್ತಿರುವ ಬ್ಯಾಂಕಿಂಗ್ ಸಮಸ್ಯೆಗಳನ್ನು ಇಲಾಖೆ ಅಧಿಕಾರಿಗಳು ಸಚಿವರ ಗಮನಕ್ಕೆ ತಂದರು. ಈ ಸಮಸ್ಯೆ ನನ್ನ ಗಮನಕ್ಕೂ ಬಂದಿದ್ದು, ಎಐ ಆಧಾರಿತ ಪೋರ್ಟಲ್ ಆರಂಭಿದ ಮೇಲೆ ಈ ತಾಂತ್ರಿಕ ಕೆಲ ಸಮಸ್ಯೆಗಳು ಸ್ವಯಂ ಪರಿಹಾರವಾಗಲಿವೆ. ಏನೇ ಸಮಸ್ಯೆಗಳಿದ್ದು ಡಿಜಿಟಲೀಕರಣದಂತ ಇಂದಿನ ವ್ಯವಸ್ಥೆಯಲ್ಲಿ ಜನರಿಗೆ ಪಾರದರ್ಶಕ ಸೇವೆ ನೀಡುವುದು ನಮ್ಮ ಕರ್ತವ್ಯವಾಗಬೇಕು. ನಿವೃತ್ತಿ ಪೂರ್ವ ನಡೆಸಲಾಗುವ ಕಾರ್ಯಾಗಾರದಲ್ಲಿ ನೀಡುವ ಅಭಿಪ್ರಾಯ, ಸಲಹೆಗಳನ್ನು ಪರಿಗಣಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಇಲಾಖೆಯ ಕಾರ್ಯದರ್ಶಿ ವಿ. ಶ್ರೀನಿವಾಸ್ ಮಾತನಾಡಿ, ಡಿಜಿಲಾಕರ್ ನಲ್ಲಿರುವ ಪಿಂಚಣಿ ಪಾವತಿ ಆದೇಶ ಫಲಾನುಭವಿ ಪಿಂಚಣಿದಾರರಿಗೆ ಕಳುಹಿಸುವಲ್ಲಿ ವಿಳಂಬವಾಗುತ್ತಿದೆ. ಇದು ಸೇವೆಯ ದಕ್ಷತೆಗೆ ಅಡ್ಡಿ ಆಗುತ್ತಿದ್ದು, ಪಾವತಿಯ ಆದೇಶದ ಆನ್ ರವಾನೆಗಿಂತ ಪ್ರತಿ ರವಾನಿಸುವುದು ಅವಶ್ಯಕವಾಗಿದೆ. ನಿಗದಿತ ಗುಡವಿನಲ್ಲಿ ದತ್ತಾಂಶ ಸಂಗ್ರಹ, ಮಾಹಿತಿ ಮತ್ತಿತರ ಪಿಂಚಣಿ ಪ್ರಕ್ರಿಯೆ ಪೂರ್ಣ ಗೊಳಿಸಲಾಗುತ್ತಿದೆ. ಈ ಹಂತದಲ್ಲಿ ಪಿಂಚಣಿದಾರರಿಗೆ ಪಿಂಚಣಿ ಪ್ರಕ್ರಿಯೆಯ ಪ್ರಗತಿ ಬಗ್ಗೆ ಸಂದೇಶ ರವಾನೆಯಾಗುವಂತೆ ನೋಡಿಕೊಳ್ಳಲಾಗಿದೆ. ಇದು ಪಿಂಚಣಿದಾರನ ನಿವೃತ್ತಿ ಮೊದಲು ಒಂದು ತಿಂಗಳಲ್ಲೇ ನಡೆಯುವುದರಿಂದ ನಿವೃತ್ತಿ ನಂತರ ಆತ ಕಚೇರಿಗೆ ಅಲೆದಾಡುವುದು ತಪ್ಪಲಿದೆ ಎಂದು ಅವರು ತಿಳಿಸಿದರು.












Click it and Unblock the Notifications