Get Updates
Get notified of breaking news, exclusive insights, and must-see stories!

ಕೇಂದ್ರದ ಉಚಿತ ಕೋಚಿಂಗ್ ಯೋಜನೆಗೆ ಜಾತಿ ಕಂಟಕ? ಜನರಲ್ ಮತ್ತು EWS ವಿದ್ಯಾರ್ಥಿಗಳ ಕಡೆಗಣನೆಗೆ ಆಕ್ರೋಶ

ನವದೆಹಲಿ: ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧತೆ ನಡೆಸುತ್ತಿರುವ ಬಡ ವಿದ್ಯಾರ್ಥಿಗಳಿಗೆ ನೆರವಾಗುವ ಉದ್ದೇಶದಿಂದ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಮಹತ್ವಾಕಾಂಕ್ಷೆಯ 'ಉಚಿತ ಕೋಚಿಂಗ್ ಯೋಜನೆ' ಈಗ ವಿವಾದದ ಕೇಂದ್ರಬಿಂದುವಾಗಿದೆ. ಪ್ರಖ್ಯಾತ ಶಿಕ್ಷಣ-ತಂತ್ರಜ್ಞಾನ (Ed-tec) ಸಂಸ್ಥೆಗಳು 'ಫಿಸಿಕ್ಸ್ ವಾಲಾ' (Physics Wallah) ಜೊತೆಗೂಡಿ ಜಾರಿಗೊಳಿಸುತ್ತಿರುವ ಈ ಯೋಜನೆಯಲ್ಲಿ ಸಾಮಾನ್ಯ ವರ್ಗ ಮತ್ತು ಆರ್ಥಿಕವಾಗಿ ಹಿಂದುಳಿದ ವರ್ಗದ (EWS) ವಿದ್ಯಾರ್ಥಿಗಳನ್ನು ಸಂಪೂರ್ಣವಾಗಿ ಹೊರಗಿಟ್ಟಿರುವುದು ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.

ಯೋಜನೆಯ ಸ್ವರೂಪವೇನು?

ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯವು 'ಫಿಸಿಕ್ಸ್ ವಾಲಾ ಫೌಂಡೇಶನ್' ಜೊತೆ ಒಪ್ಪಂದ (MoU) ಮಾಡಿಕೊಂಡಿದ್ದು, ಇದರ ಅನ್ವಯ ಪ್ರತಿ ವರ್ಷ 5,000 ವಿದ್ಯಾರ್ಥಿಗಳಿಗೆ ಸಂಪೂರ್ಣ ಉಚಿತ ಆನ್‌ಲೈನ್ ತರಬೇತಿ ನೀಡಲಾಗುತ್ತದೆ. ಯುಪಿಎಸ್‌ಸಿ (UPSC), ಎಸ್‌ಎಸ್‌ಸಿ (SSC) ಮತ್ತು ಬ್ಯಾಂಕಿಂಗ್ ಪರೀಕ್ಷೆಗಳಿಗೆ ತಯಾರಿ ನಡೆಸುವ ಪರಿಶಿಷ್ಟ ಜಾತಿ ಮತ್ತು ಇತರೆ ಹಿಂದುಳಿದ ವರ್ಗದ ಅಭ್ಯರ್ಥಿಗಳು ಮಾತ್ರ ಈ ಯೋಜನೆಗೆ ಅರ್ಹರು. ಮೆರಿಟ್ ಆಧಾರದ ಮೇಲೆ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿ ಲೈವ್ ಕ್ಲಾಸ್, ಸ್ಟಡಿ ಮೆಟೀರಿಯಲ್ ಮತ್ತು ಮಾರ್ಗದರ್ಶನ ನೀಡಲಾಗುತ್ತದೆ.

Govt Free Coaching Row

ವಿವಾದಕ್ಕೆ ಕಾರಣವೇನು?

ಫೆಬ್ರವರಿ 3 ರಂದು ಲೋಕಸಭೆಯಲ್ಲಿ ಸಚಿವ ರಾಮದಾಸ್ ಅಠವಳೆ ಅವರು ನೀಡಿದ ಲಿಖಿತ ಉತ್ತರದಲ್ಲಿ, "ಈ ಯೋಜನೆಯು ಕೇವಲ ಎಸ್‌ಸಿ ಮತ್ತು ಒಬಿಸಿ ವಿದ್ಯಾರ್ಥಿಗಳಿಗೆ ಮೀಸಲಾಗಿದ್ದು, ಸಾಮಾನ್ಯ ಅಥವಾ ಇಡಬ್ಲ್ಯೂಎಸ್‌ ವರ್ಗದವರಿಗೆ ಅನ್ವಯಿಸುವುದಿಲ್ಲ" ಎಂದು ಸ್ಪಷ್ಟಪಡಿಸಿದ್ದಾರೆ. ಆರ್ಥಿಕವಾಗಿ ಸಂಕಷ್ಟದಲ್ಲಿರುವ ಸಾಮಾನ್ಯ ವರ್ಗದ ವಿದ್ಯಾರ್ಥಿಗಳಿಗೂ ಇದರ ಲಾಭ ಸಿಗಬೇಕಿತ್ತು ಎಂಬುದು ಸಾರ್ವಜನಿಕರ ವಾದ.

ಸೋಷಿಯಲ್ ಮೀಡಿಯಾದಲ್ಲಿ ಭುಗಿಲೆದ್ದ ಆಕ್ರೋಶ: ಸರ್ಕಾರದ ಈ ನಡೆಯನ್ನು ಕಟುವಾಗಿ ಟೀಕಿಸಿರುವ ನೆಟ್ಟಿಗರು ಇನ್‌ಸ್ಟಾಗ್ರಾಮ್ ಮತ್ತು ಎಕ್ಸ್ (ಟ್ವಿಟರ್) ಖಾತೆಗಳಲ್ಲಿ ತಮ್ಮ ಅಸಮಾಧಾನ ಹೊರಹಾಕಿದ್ದಾರೆ.

ಇದನ್ನೂ ಓದಿ: ಚೆನ್ನಾಗಿ ಓದಿದ್ರೂ ಪರೀಕ್ಷೆಯಲ್ಲಿ ಗೊಂದಲವೇಕೆ ? CBSE ವಿದ್ಯಾರ್ಥಿಗಳಿಗೆ ಸವಾಲಾಗಿರುವ ಹೊಸ ಮಾದರಿ ಪ್ರಶ್ನೆಗಳು

ಒಬ್ಬ ಬಳಕೆದಾರರು, "ಆಕ್ಸಿಜನ್ ಬೇಕಾ? ಮೊದಲು ಜಾತಿ ಹೇಳಿ," ಎಂದು ವ್ಯಂಗ್ಯವಾಗಿ ಕಾಮೆಂಟ್ ಮಾಡುವ ಮೂಲಕ ಅಗತ್ಯ ಸೇವೆಗಳಿಗೂ ಜಾತಿ ಲೇಪನ ಮಾಡಲಾಗುತ್ತಿದೆ ಎಂದು ಕಿಡಿಕಾರಿದ್ದಾರೆ.

ಮತ್ತೊಬ್ಬರು, "ಸಹಾಯ ಪಡೆಯುವಾಗ ಮಾತ್ರ ಜನರಲ್ ಕೆಟಗರಿಯ ಅಲಖ್ ಪಾಂಡೆ (ಫಿಸಿಕ್ಸ್ ವಾಲಾ ಸ್ಥಾಪಕ) ಬೇಕಾದರು. ಆದರೆ ಯೋಜನೆ ಲಾಭ ನೀಡುವಾಗ ಆ ವರ್ಗದವರನ್ನು ಮರೆಯಲಾಯಿತು," ಎಂದು ಸರ್ಕಾರದ ದ್ವಂದ್ವ ನೀತಿಯನ್ನು ಪ್ರಶ್ನಿಸಿದ್ದಾರೆ. ಇನ್ನೂ ಕೆಲವರು "ನೋಟಾ (NOTA) ಆಯ್ಕೆಯೇ ಉತ್ತಮ," ಎಂದು ರಾಜಕೀಯ ಪಕ್ಷಗಳ ಓಲೈಕೆ ರಾಜಕಾರಣದ ವಿರುದ್ಧ ಬೇಸರ ವ್ಯಕ್ತಪಡಿಸಿದ್ದಾರೆ.

ಆದರೆ, ಸರ್ಕಾರದ ಪರವಾಗಿಯೂ ಕೆಲವರು ಧ್ವನಿ ಎತ್ತಿದ್ದಾರೆ. "ಬಿಜೆಪಿ ಕೇವಲ ಜನರಲ್ ವರ್ಗದ ಮತಗಳಿಂದ ಗೆಲ್ಲುವುದಿಲ್ಲ, ಹಿಂದುಳಿದ ವರ್ಗಗಳ ಅಭಿವೃದ್ಧಿಯೂ ಅವರ ಜವಾಬ್ದಾರಿ," ಎಂದು ಕೆಲವರು ಸಮರ್ಥಿಸಿಕೊಂಡಿದ್ದಾರೆ.

ಎಸ್‌ಟಿ (ST) ಸಮುದಾಯಕ್ಕೂ ಇಲ್ಲ ಅವಕಾಶ: ಈ ಯೋಜನೆಯಲ್ಲಿ ಪರಿಶಿಷ್ಟ ಪಂಗಡದ (ST) ವಿದ್ಯಾರ್ಥಿಗಳನ್ನೂ ಸೇರಿಸಲಾಗಿಲ್ಲ. ಬುಡಕಟ್ಟು ವ್ಯವಹಾರಗಳ ಸಚಿವಾಲಯವು ಯಾವುದೇ ಸಂಸ್ಥೆಯೊಂದಿಗೆ ಇಂತಹ ಒಪ್ಪಂದ ಮಾಡಿಕೊಳ್ಳದ ಕಾರಣ ಎಸ್‌ಟಿ ವಿದ್ಯಾರ್ಥಿಗಳು ಈ ಲಾಭದಿಂದ ವಂಚಿತರಾಗಿದ್ದಾರೆ ಎಂದು ಸರ್ಕಾರ ಸ್ಪಷ್ಟಪಡಿಸಿದೆ.

ಚರ್ಚೆ ಕಾವೇರಲು ಯುಜಿಸಿ ವಿವಾದ ಕಾರಣ

ಇತ್ತೀಚೆಗೆ ಯುಜಿಸಿ (UGC) ಹೊರಡಿಸಿದ್ದ ಜಾತಿ ತಾರತಮ್ಯ ವಿರೋಧಿ ಮಾರ್ಗಸೂಚಿಗಳು ವಿವಾದ ಸೃಷ್ಟಿಸಿದ್ದವು. ಇದೀಗ ಸುಪ್ರೀಂ ಕೋರ್ಟ್ ಆ ಮಾರ್ಗಸೂಚಿಗಳಿಗೆ ಮಾರ್ಚ್ 19, 2026ರ ವರೆಗೆ ತಡೆ ನೀಡಿದೆ. ಈ ಬೆನ್ನಲ್ಲೇ ಉಚಿತ ಕೋಚಿಂಗ್‌ನಲ್ಲಿ ತಾರತಮ್ಯ ಮಾಡಲಾಗುತ್ತಿದೆ ಎಂಬ ಆರೋಪ ಕೇಳಿಬಂದಿರುವುದು ಚರ್ಚೆಯನ್ನು ಮತ್ತಷ್ಟು ಕಾವೇರಿಸಿದೆ.

ಶಿಕ್ಷಣದಲ್ಲಿ ಸಮಾನತೆ ಇರಬೇಕು, ಬಡತನಕ್ಕೆ ಜಾತಿ ಇಲ್ಲ. ಹಾಗಾಗಿ ಅರ್ಹ ಬಡ ವಿದ್ಯಾರ್ಥಿಗಳೆಲ್ಲರಿಗೂ ಈ ಯೋಜನೆ ವಿಸ್ತರಿಸಬೇಕು ಎಂಬುದು ಸಾರ್ವಜನಿಕರ ಆಗ್ರಹವಾಗಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+