ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗುತ್ತಿಗೆ ಆಧಾರದಲ್ಲಿರುವ ನಿವೃತ್ತ ಕೇಂದ್ರ ಸರ್ಕಾರಿ ನೌಕರರ ವೇತನ: ಕರಡು ಮಾರ್ಗದರ್ಶಿ

|
Google Oneindia Kannada News

ನವದೆಹಲಿ, ಆಗಸ್ಟ್ 17: ಗುತ್ತಿಗೆ ಆಧಾರದಲ್ಲಿ ಅಥವಾ ಸಲಹೆಗಾರರಾಗಿ ನೇಮಕವಾಗಿರುವ ಕೇಂದ್ರ ಸರ್ಕಾರದ ನಿವೃತ್ತ ಉದ್ಯೋಗಿಗಳ ವೇತನದ ನಿಯಂತ್ರಣಕ್ಕಾಗಿ ಹಣಕಾಸು ಸಚಿವಾಲಯವು ಕರಡು ಮಾರ್ಗದರ್ಶಿಯನ್ನು ಸಿದ್ಧಪಡಿಸಿದೆ.

ವೆಚ್ಚ ಇಲಾಖೆಯು ಕರಡು ಮಾರ್ಗದರ್ಶಿಯೊಂದಿಗೆ ಕಚೇರಿ ಸೂಚನೆಯನ್ನು ಜಾರಿ ಮಾಡಿದ್ದು, ಗುತ್ತಿಗೆ ಆಧಾರದಲ್ಲಿ ನೇಮಕಗೊಂಡ ನಿವೃತ್ತ ಕೇಂದ್ರ ಸರ್ಕಾರಿ ನೌಕರರ ವೇತನವನ್ನು ಏಕರೂಪತೆ ತರುವ ಮೂಲಕ ನಿಯಂತ್ರಿಸುವ ಅಗತ್ಯವಿದೆ ಎಂದು ಹೇಳಿದೆ. ಈ ಸಂಬಂಧ ತಮ್ಮ ಅಭಿಪ್ರಾಯಗಳನ್ನು ಹತ್ತು ದಿನಗಳ ಒಳಗೆ ತಿಳಿಸುವಂತೆ ಎಲ್ಲ ಇಲಾಖೆ ಮತ್ತು ಸಚಿವಾಲಯಗಳಿಗೆ ಸೂಚಿಸಿದೆ.

ಸರ್ಕಾರಿ ನೌಕರರಿಗೆ ಶುಭಸುದ್ದಿ: ನೈಟ್ ಡ್ಯೂಟಿಗೆ ಹೆಚ್ಚಿನ ಭತ್ಯೆಸರ್ಕಾರಿ ನೌಕರರಿಗೆ ಶುಭಸುದ್ದಿ: ನೈಟ್ ಡ್ಯೂಟಿಗೆ ಹೆಚ್ಚಿನ ಭತ್ಯೆ

ನಾಮನಿರ್ದೇಶನದ ಆಧಾರದಲ್ಲಿ ಕೇಂದ್ರ ಸರ್ಕಾರಿ ನೌಕರರ ಗುತ್ತಿಗೆ ನೇಮಕಾತಿಯಲ್ಲಿ ನಿವೃತ್ತಿ ಸಮಯದಲ್ಲಿ ಕೊನೆಯದಾಗಿ ಪಡೆದುಕೊಂಡ ವೇತನದ ನಂತರ ಪಿಂಚಣಿ ಮೊತ್ತವನ್ನು ಕಡಿತಗೊಳಿಸಿದ ಬಳಿಕ ಸಂಭಾವನೆಯನ್ನು ನಿಗದಿಗೊಳಿಸಲಾಗುತ್ತದೆ. ಮುಕ್ತ ಮಾರುಕಟ್ಟೆ ನೇಮಕಾತಿಗಳಲ್ಲಿ ಸಂಭಾವನೆಯನ್ನು ಗುತ್ತಿಗೆಯ ನಿಯಮ ಮತ್ತು ಷರತ್ತುಗಳಿಗೆ ಅನುಗುಣವಾಗಿ ಯಾವುದೇ ಪಿಂಚಣಿ ಕಡಿತವಿಲ್ಲದೆ ನೀಡಲಾಗುತ್ತದೆ. ಮುಂದೆ ಓದಿ.

ಮಾರ್ಗದರ್ಶಿ ಸೂತ್ರದ ಅಗತ್ಯ

ಮಾರ್ಗದರ್ಶಿ ಸೂತ್ರದ ಅಗತ್ಯ

ನಿವೃತ್ತಿ ಬಳಿಕ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿರುವ ನೌಕರರ ವೇತನ ವಿಚಾರದಲ್ಲಿ ಗೊಂದಲಗಳಿವೆ. ಹೀಗಾಗಿ ಸಲಹೆಗಾರರ ಹುದ್ದೆ ಸೇರಿದಂತೆ ಗುತ್ತಿಗೆ ಆಧಾರದಲ್ಲಿ ನೇಮಕಗೊಂಡ ಕೇಂದ್ರ ಸರ್ಕಾರಿ ನೌಕರರ ಸಂಬಳದ ಕುರಿತು ಸೂಕ್ತ ಮಾರ್ಗದರ್ಶಿ ಸೂತ್ರದ ಅಗತ್ಯವಿದೆ. ಅದಕ್ಕೆ ಸೂಕ್ತ ನಿಯಂತ್ರಣಗಳನ್ನು ರೂಪಿಸಲಾಗುತ್ತಿದೆ. ನಾಮನಿರ್ದೇಶನದ ಆಧಾರದಲ್ಲಿ ಹೀಗೆ ಗುತ್ತಿಗೆ ಕೆಲಸಕ್ಕೆ ನೇಮಕ ಮಾಡಿಕೊಳ್ಳುವುದು ಸಾಮಾನ್ಯ ಅಭ್ಯಾಸದಂತೆ ಆಗಬಾರದು. ಇದು ತೀರಾ ಕನಿಷ್ಠ ಪ್ರಮಾಣದಲ್ಲಿ ಅಗತ್ಯಗಳಿಗೆ ಅನುಗುಣವಾಗಿ ಮಾತ್ರವೇ ಇರಬೇಕು ಎಂದು ಇಲಾಖೆ ಹೇಳಿದೆ.

ವೇತನ ಏರಿಕೆ ಇಲ್ಲ

ವೇತನ ಏರಿಕೆ ಇಲ್ಲ

ನಾಮನಿರ್ದೇಶನದ ಆಧಾರದಲ್ಲಿ ನೇಮಕವಾದವರಿಗೆ ಗುತ್ತಿಗೆ ಕೆಲಸದಲ್ಲಿ ಯಾವುದೇ ವೇತನ ಏರಿಕೆ, ಡಿಎ, ಗೃಹ ಭತ್ಯೆಯಂತಹ ಭತ್ಯೆಗೆ ಅವಕಾಶ ಇರುವುದಿಲ್ಲ. ಇಲ್ಲಿ ತಿಂಗಳ ಸಂಬಳ ಏಕಸ್ವರೂಪದ್ದಾಗಿರುತ್ತದೆ. ಮುಕ್ತ ಮಾರುಕಟ್ಟೆ ಆಧಾರದಲ್ಲಿ ನೇಮಕವಾಗಿದ್ದರೆ, ಗುತ್ತಿಗೆಯಲ್ಲಿನ ನಿಯಮಗಳಿಗೆ ಅನುಸಾರವಾಗಿ ವೇತನ ನಿಯಂತ್ರಣಕ್ಕೆ ಒಳಪಡಲಿದೆ. ಆಗ ಪಿಂಚಣಿಯನ್ನು ಕಡಿತಗೊಳಿಸಬೇಕಿಲ್ಲ.

ದೇಶದ ವಿತ್ತೀಯ ಕೊರತೆ ಬಜೆಟ್ ಅಂದಾಜಿನ ಶೇ. 83.2ಕ್ಕೆ ತಲುಪಿದೆದೇಶದ ವಿತ್ತೀಯ ಕೊರತೆ ಬಜೆಟ್ ಅಂದಾಜಿನ ಶೇ. 83.2ಕ್ಕೆ ತಲುಪಿದೆ

ನಿಯಮಗಳಿಗೆ ಅನುಗುಣವಾಗಿರಬೇಕು

ನಿಯಮಗಳಿಗೆ ಅನುಗುಣವಾಗಿರಬೇಕು

ನೇಮಕದ ನಿಮಯಗಳು ಮತ್ತು ವಯಸ್ಸಿನ ಮಿತಿ ಕೂಡ ಗುತ್ತಿಗೆಯಲ್ಲಿನ ನಿಯಮಾವಳಿಗಳಿಗೆ ಅನುಗುಣವಾಗಿ ಮಾಡಬಹುದಾಗಿದೆ. ನೇಮಕಗೊಂಡ ನೌಕರರ ನಿವೃತ್ತಿ ದಾಟಿದ ಐದು ವರ್ಷಗಳಾಚೆಗೆ ಸಾಮಾನ್ಯವಾಗಿ ಇರುವಂತಿಲ್ಲ ಎಂದು ಕರಡು ಮಾರ್ಗದರ್ಶಿಯಲ್ಲಿ ಹೇಳಲಾಗಿದೆ.

ಆರನೇ ವೇತನ ಆಯೋಗದ ಶಿಫಾರಸು

ಆರನೇ ವೇತನ ಆಯೋಗದ ಶಿಫಾರಸು

ಆರ್‌ಬಿಐ ಹೊರತುಪಡಿಸಿ ಉಳಿದ ನಿಯಂತ್ರಣ ಸಂಸ್ಥೆಗಳಿಗೆ ನಿವೃತ್ತ ಕೇಂದ್ರ ಸರ್ಕಾರಿ ನೌಕರರನ್ನು ಸದಸ್ಯರನ್ನಾಗಿ ಮಾಡುವಾಗ ಮಾರ್ಗದರ್ಶಿ ಸೂತ್ರಗಳು ಇರಬೇಕು ಎಂದು ಆರನೇ ವೇತನ ಆಯೋಗ ಶಿಫಾರಸು ಮಾಡಿತ್ತು. ಅದಕ್ಕೆ ಪೂರಕವಾಗಿ ಈ ಕರಡು ಸಿದ್ಧಡಿಸಲಾಗಿದೆ. ಮರು ನೇಮಕಾತಿಗೆ ನಿವೃತ್ತಿಯ 60 ವರ್ಷದಿಂದ ಐದು ವರ್ಷಗಳ ಅವಧಿಯನ್ನು ಪರಿಗಣಿಸುವಂತೆ ಪ್ರಸ್ತಾಪಿಸಲಾಗಿದೆ.

ಆರಂಭದಲ್ಲಿ ನಿವೃತ್ತ ನೌಕರರ ನೇಮಕವನ್ನು ಒಂದು ವರ್ಷಕ್ಕೆ ಪರಿಗಣಿಸಲಾಗುತ್ತದೆ. ಬಳಿಕ ಅದನ್ನು ಎರಡು ವರ್ಷಗಳಿಗೆ ವಿಸ್ತರಿಸಬಹುದು. ಅವರ ಕಾರ್ಯಕ್ಷಮತೆ ಆಧಾರದಲ್ಲಿ ಮತ್ತೆ ವಿಸ್ತರಿಸಬಹುದು. ಈ ಗುತ್ತಿಗೆ ಸಮಯದಲ್ಲಿ ಯಾವುದೇ ವೇತನ ಹೆಚ್ಚಳ ಅಥವಾ ತುಟ್ಟಿ ಭತ್ಯೆ ನೀಡಲು ಅವಕಾಶವಿಲ್ಲ.

English summary
Govt drafts guidelines for salary regulation of retired central govt employees working on contract basis.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X