ಪಿಂಚಣಿದಾರರಿಗೆ ಶುಭ ಸುದ್ದಿ ನೀಡುವ ಸುಳಿವು ಕೊಟ್ಟ ನಿರ್ಮಲಾ

ನವದೆಹಲಿ, ಜೂನ್ 26: ಪಿಂಚಣಿ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ (PFRDA)ವು ಪಿಂಚಣಿ ಮೊತ್ತ ಮತ್ತು ವಯಸ್ಸಿನ ಮಿತಿಯನ್ನು ಹೆಚ್ಚಿಸಲು ಪ್ರಸ್ತಾವನೆಯನ್ನು ಸರ್ಕಾರದ ಮುಂದಿಟ್ಟಿದೆ. ಅಟಲ್ ಪಿಂಚಣಿ ಯೋಜನೆಯಡಿಯಲ್ಲಿ ಬದಲಾವಣೆ ಮಾಡಲು ಸರ್ಕಾರ ಚಿಂತನೆ ನಡೆಸಿದೆ ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಸಂಸತ್ತಿನಲ್ಲಿ ಲಿಖಿತ ಉತ್ತರ ನೀಡಿದ್ದಾರೆ.

ಅಟಲ್ ಪಿಂಚಣಿ ಯೋಜನೆಯಡಿಯಲ್ಲಿ ಸರ್ಕಾರದಿಂದ 60 ವರ್ಷ ವಯಸ್ಸಿನ ಜನರಿಗೆ 1000, 2000, 3000, 4000 ಮತ್ತು 5000 ರೂಪಾಯಿ ಕನಿಷ್ಠ ತಿಂಗಳ ಪಿಂಚಣಿ ನೀಡಲಾಗುತ್ತಿದೆ.

ತಿಂಗಳಿಗೆ ಕೇವಲ 42 ರು ಪಾವತಿ ಮಾಡಿ ನೋಂದಣಿಸಿಕೊಂಡರೆ 18 ವರ್ಷದಿಂದ 40 ವರ್ಷ ವಯಸ್ಸಿನವರು ಈ ಯೋಜನೆಯಿಂದ 1000 ರೂಪಾಯಿ ಪಿಂಚಣಿ ಪಡೆಯಬಹುದು.

Govt considering hike in pension age limit under Atal Pension Yojana

ಈ ಯೋಜನೆಯಲ್ಲಿ ನೋಂದಾಯಿಸಿದ ವ್ಯಕ್ತಿಯೂ ಅವಧಿಗೂ ಮುನ್ನ(60 ವರ್ಷ ಗರಿಷ್ಠ) ಮೃತಪಟ್ಟರೆ, ಅಂಥ ವ್ಯಕ್ತಿಯು ಯಾರನ್ನು ನಾಮಿನಿ ಮಾಡಿರುತ್ತಾರೋ ಅವರಿಗೆ ಉಳಿದ ತಿಂಗಳುಗಳಿಗೆ ಹಣ ಸಿಗಲಿದೆ. ಒಂದೇ ಬಾರಿಗೆ ಕೂಡಾ ಹಣವನ್ನು ಕ್ಲೇಮ್ ಮಾಡಬಹುದು. ಸುಮಾರು 8.5 ಲಕ್ಷ ರು ತನಕ ಕ್ಲೇಮ್ ಮಾದಬಹುದಾಗಿದೆ.

ರಾಷ್ಟ್ರೀಯ ಪಿಂಚಣಿ ಯೋಜನೆಯ ವಯೋಮಿತಿಯನ್ನು 60ರಿಂದ 65ಕ್ಕೇರಿಸಲು ಪಿಂಚಣಿ ನಿಯಂತ್ರಣ ಮಂಡಳಿ ಈಗಾಗಲೆ ಅನುಮೋದನೆ ನೀಡಿ ವರ್ಷಗಳು ಕಳೆದಿವೆ. ಆದರೆ, ಅಧಿಸೂಚನೆ ಹೊರಡಿಸಿಲ್ಲ.

ಹಾಲಿ ಯೋಜನೆಯ ನಿಯಮಗಳ ಪ್ರಕಾರ ಗರಿಷ್ಠ ವಯೋಮಿತಿ 60 ವರ್ಷ ಹಾಗೂ ಗರಿಷ್ಠ ಪಿಂಚಣಿ ಮೊತ್ತ 1000 ರು ನಿಂದ 5000ರು ತನಕ ಪ್ರತಿ ತಿಂಗಳಿನಂತೆ ನೀಡಲಾಗಿದೆ. ಈ ಮೊತ್ತವನ್ನು ಹೆಚ್ಚಿಸಲು ಬೇಡಿಕೆ ಬಂದಿದೆ. ಈ ಬಗ್ಗೆ ಕೇಂದ್ರ ಬಜೆಟ್ ನಲ್ಲಿ ಘೋಷಣೆ ನಿರೀಕ್ಷಿಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+